ಬಾರೋ ಸಾಧಕರ ಕೇರಿಗೆ: ಕಡೆಯ ಕೋರಿಕೆ


Team Udayavani, Sep 29, 2020, 6:37 PM IST

Josh-tdy-2

ಕವಿಗಳು, ಲೇಖಕರು ಜಗತ್ತಿಗೆ ಹೆದರದಿದ್ದರೂ ತಂತಮ್ಮ ಹೆಂಡತಿಯರಿಗೆ ಹೆದರುತ್ತಾರೆ ಎಂಬ ಮಾತೊಂದಿದೆ. ಪ್ರತಿಯೊಬ್ಬ ಸಾಧಕನ ಬೆನ್ನ ಹಿಂದೆ ಒಬ್ಬಳು ಹೆಂಗಸಿರುತ್ತಾಳೆ ಎಂಬ ಗಾದೆ ಆ ಮಾತನ್ನು ತಿರುಚಿ, ಆದರೆ ಆಕೆ ಹೆಂಡತಿಯಲ್ಲ ಎಂಬ ಮಾತು ಹೇಳಿ ನಕ್ಕವರೂ ಇದ್ದಾರೆ.

ಸ್ಯಾಮುಯೆಲ್‌ ಬಟ್ಲರ್‌, ಹತ್ತೂಂಬತ್ತನೇ ಶತಮಾನದ ಪ್ರಸಿದ್ಧ ಇಂಗ್ಲಿಷ್‌ ಸಾಹಿತಿ. ಈತ ಹೋಮರನಕಾವ್ಯವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. “ದ ವೇ ಆಫ್ ಆಲ್‌ ಫ್ಲೆಶ್‌’ ಆತ್ಮಕಥಾನಕದ ರೂಪದಲ್ಲಿರುವ ಇವನ ಪ್ರಸಿದ್ಧಕಾದಂಬರಿ. ಬಟ್ಲರ್‌, ಹಾಸಿಗೆ ಹಿಡಿದಿದ್ದ ತನ್ನ ಪತ್ನಿಯ ಪಕ್ಕದಲ್ಲಿ ಕೂತಿದ್ದನಂತೆ. ಆಕೆಯ ಜೀವನ ಮುಗಿಯಿತು ಎಂಬುದು ಅವನಿಗೆ ಖಚಿತವಾಗಿತ್ತು. ಆಕೆಯಕೈಯನ್ನು ಹಿಡಿದು ನೇವರಿಸುತ್ತಕೇಳಿದ- ನೀನು ಜನ್ಮಾಂತರವನ್ನು ನಂಬ್ತೀಯಾ?. ಆಕೆ ಹೌದೆಂಬಂತೆ ತಲೆಯಾಡಿಸಿದಳು. ಎಲ್ರೂ ಹೇಳ್ತಾರೆ, ಸತ್ತವರ ಆತ್ಮಗಳು ಅವರ ಕುಟುಂಬದವರ ಸುತ್ತ ತಿರುಗಾಡ್ತವೆ ಅಂತ. ಬದುಕಿರುವ ತಮ್ಮ ಪ್ರೀತಿಪಾತ್ರರ ಜೊತೆ ಮಾತಾಡುವುದಕ್ಕೆ ಪ್ರಯತ್ನಪಡ್ತವೆ ಅಂತ ಎಂದ ಬಟ್ಲರ್‌. ಆಕೆ ಅದೂ ನಿಜ ಎಂಬಂತೆ ಕ್ಷೀಣವಾಗಿ ಹೂಂಗುಟ್ಟಿದಳು.

ಅಂಥ ಸಾಧ್ಯತೆಗಳು ಏನಾದರೂ ಇದ್ದರೆ ನೀನು ನನ್ನ ಜೊತೆ ಮಾತಾಡೋದಕ್ಕೆ ಪ್ರಯತ್ನ ಪಡ್ತೀಯಾ ಅನ್ನೋದು ನನಗೆ ಗೊತ್ತು. ಆ ಲೋಕದಲ್ಲಿ ಅದ್ಯಾವುದೋ ಒಂದು ಸಿದ್ಧಿಯಿಂದ ನಿನಗೆ ಭೂಲೋಕದ ಮೇಲಿರುವ ಜನರ ಹತ್ತಿರ ಮಾತಾಡುವುದಕ್ಕೆ ಸಾಧ್ಯವಾಯಿತು ಅಂತ ಇಟ್ಟುಕೋ… ಸಂದೇಶಕಳಿಸೋದಕ್ಕೆ ಸಾಧ್ಯವಾಯಿತು ಅಂತ ಇಟ್ಟುಕೋ. ಹಾಗೇನಾದರೂ ಆದರೆ… ಬಟ್ಲರ್‌ ಧ್ವನಿ ಕ್ಷಣಕಾಲ ನಿಂತಿತು. ಆದರೆ..?, ಆಕೆ ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದಳು. ಹಾಗೇನಾದರೂ ಆದರೆ ನೀನು ದಯವಿಟ್ಟು ನನ್ನನ್ನ ಸಂಪರ್ಕಿಸೋದಕ್ಕೆ ಮಾತ್ರ ಪ್ರಯತ್ನಿಸಬೇಡ!,ಕಡ್ಡಿ ಮುರಿದಂತೆ ಹೇಳಿಬಿಟ್ಟ ಬಟ್ಲರ್‌!

ಅವನ ದುರ್ದೈವ! ಆಕೆ ಸಾಯಲಿಲ್ಲ. ಬದುಕುಳಿದಳು. ಆರೋಗ್ಯವಂತಳಾದಳು. ಆತನ ಆ ಮಾತುಗಳನ್ನು ಮಾತ್ರ ಆಕೆ ಜೀವಮಾನದುದ್ದಕ್ಕೂ ಮರೆಯಲಿಲ್ಲವಂತೆ! ­

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.