ಸುತ್ತೂರು ಸೇರಿ, ಮುತ್ತುಗಳಾಗಿ…

Team Udayavani, May 7, 2019, 8:03 PM IST

ಸುತ್ತೂರಿನ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಅಂಗಳ, ಪ್ರತಿವರ್ಷವೂ ಸಾವಿರಾರು ಬಡ ಮಕ್ಕಳನ್ನು ಸಲಹುತ್ತದೆ. 1962ರಲ್ಲಿ ನೂರಾರು ಮಕ್ಕಳೊಂದಿಗೆ ಶುರುವಾದ ಉಚಿತ ವಸತಿಯುತ ಪ್ರೌಢಶಾಲೆಯಲ್ಲಿ ಇಂದು, ರಾಜ್ಯ ಮತ್ತು ಹೊರ ರಾಜ್ಯಗಳ ನಾಲ್ಕು ಸಾವಿರ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರು ಅನಾಥ, ಬಡ, ರೈತರ ಮಕ್ಕಳಿಗೆ ವಸತಿಯುತ ಉಚಿತ ಶಿಕ್ಷಣ ನೀಡಿ, ಸತøಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಒಟ್ಟು 4 ಸಾವಿರ ಮಕ್ಕಳು 1 ರಿಂದ 10ನೇ ತರಗತಿವರೆಗೆ ಕಲಿಯುತ್ತಿದ್ದು, ಈ ಪೈಕಿ 2 ಸಾವಿರ ಗಂಡು ಮಕ್ಕಳು ಹಾಗೂ 1 ಸಾವಿರ ಹೆಣ್ಣು ಮಕ್ಕಳು ವಸತಿ ವ್ಯವಸ್ಥೆ ಪಡೆದಿದ್ದಾರೆ. ವಸತಿ ಶಾಲೆಗಳೆಂದರೆ ಸಾಮಾನ್ಯವಾಗಿ 5 ತರಗತಿ ನಂತರ ಮಕ್ಕಳು ದಾಖಲಾಗುತ್ತಾರೆ. ಸುತ್ತೂರು ಶಾಲೆಯಲ್ಲಿ 1ನೇ ತರಗತಿಯಿಂದಲೇ ವಸತಿ ಶಾಲೆಗೆ ದಾಖಲಾತಿ ಇರುವುದು ವಿಶೇಷ. ‘ಇಲ್ಲಿ ಕಲಿತವರು ಸೇನೆ, ವೈದ್ಯಕೀಯ, ರಾಜಕೀಯ, ವ್ಯಾಪಾರ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು, ಪ್ರತಿವರ್ಷದ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುವರು’ ಎನ್ನುತ್ತಾರೆ ಸಂಸ್ಥೆಯ ಸಂಯೋಜನಾಧಿಕಾರಿ ತ್ರಿಪುರಾಂತಕ.

ಏಕೆ ಇಲ್ಲಿ ಓದಬೇಕು?

– ಶಿಸ್ತು, ಸಂಸ್ಕಾರಕ್ಕೆ ಆದ್ಯತೆ
– ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್
– 24 ಗಂಟೆಯೂ ನೀರು ಮತ್ತು ವಿದ್ಯುತ್‌ ಸೌಲಭ್ಯ
– ಮಕ್ಕಳ ಸ್ನಾನಕ್ಕೆ ಬೀಸಿನೀರಿನ ವ್ಯವಸ್ಥೆ
– ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಆಯಾ ಇದ್ದಾರೆ.
– ಬೃಹತ್‌ ಗ್ರಂಥಭಂಡಾರ, ಕಂಪ್ಯೂಟರ್‌ ಲ್ಯಾಬ್‌
– ಗಿರೀಶ್‌ ಹುಣಸೂರು

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ