ನಿಜಕ್ಕೂ ಹರಿದ ಮದ್ಯದ ಹೊಳೆ

ಹಿಸ್ಟರಿ ಕಥೆ

Team Udayavani, Jul 4, 2019, 5:00 AM IST

ಮದ್ಯದ ಹೊಳೆ ಹರಿಯಬೇಕು ಎನ್ನುವ ಕಲ್ಪನೆ ಬಹುತೇಕ ಪಾನಪ್ರಿಯರದು. ಅಮೆರಿಕದ ಬಾಸ್ಟನ್‌ ನಗರದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿತ್ತು. 1919ರ ಜನವರಿ 15ರಂದು ಅಂಥದ್ದೊಂದು ಘಟನೆಗೆ ನಗರ ಸಾಕ್ಷಿಯಾಗಿತ್ತು. ಹೇಳಬೇಕೆಂದರೆ ಅಂದು ಮದ್ಯದ ಹೊಳೆಯಲ್ಲ ಸುನಾಮಿಯೇ ಎದ್ದಿತ್ತು. ಮದ್ಯ ತಯಾರಿಕಾ ಘಟಕದಲ್ಲಿ 90 ಅಡಿ ಎತ್ತರದ ಬೃಹತ್‌ ಉಕ್ಕಿನ ಟ್ಯಾಂಕ್‌ ಒಂದಿತ್ತು. ಅದರಲ್ಲಿ 25 ಲಕ್ಷ ಗ್ಯಾಲನ್‌ಗಳಷ್ಟು ಪ್ರಮಾಣದ ರಮ್‌ ತಯಾರಿಕೆಗೆ ಬಳಸುವ ದ್ರವವನ್ನು ತುಂಬಿಸಿದ್ದರು. ತಾಪಮಾನದಲ್ಲಿನ ವ್ಯತ್ಯಯ ಮತ್ತು ರಾಸಾಯನಿಕ ರಿಯಾಕ್ಷನ್‌ನಿಂದಾಗಿ ಟ್ಯಾಂಕ್‌ ಒಡೆದು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿತ್ತು. ಟ್ಯಾಂಕನ್ನು ನೆಲಮಟ್ಟದಿಂದ 50 ಅಡಿ ಎತ್ತರದಲ್ಲಿ ನಿಲ್ಲಿಸಲಾಗಿತ್ತು. ಟ್ಯಾಂಕ್‌ ಒಡೆದಾಗ ಅಷ್ಟೂ ಪ್ರಮಾಣದ ಮದ್ಯದ ದ್ರವ ರಸ್ತೆಗೆ ನುಗ್ಗಿತ್ತು. ಸುಮಾರು 15 ಅಡಿಗಳಷ್ಟು ಎತ್ತರದ ಅಲೆ ಎದ್ದಿದ್ದವು. ರಸ್ತೆಯಿಂದ ಮನೆಗಳಿಗೆ, ಅಂಗಡಿಗಳಿಗೆ ನುಗ್ಗಿ ರಾದ್ಧಾಂತವೇ ಸೃಷ್ಟಿಯಾಗಿತ್ತು. ವಾಹನಗಳು, ಕುದುರೆ ಗಾಡಿಗಳು ಆ ಮದ್ಯದ ಹೊಳೆಯಲ್ಲಿ ಮಿಂದೆದ್ದವು. ಪ್ರಾಣಹಾನಿಗೂ ಇದು ಕಾರಣವಾಗಿತ್ತು ಎಂದರೆ ಘಟನೆಯ ಗಂಭೀರತೆಯ ಅರಿವಾಗುತ್ತದೆ. ಸುತ್ತಮುತ್ತಲ ಪ್ರದೇಶವನ್ನು ಸ್ವತ್ಛ ಮಾಡಲು ವಾರಗಟ್ಟಲೆ ಬೇಕಾಯಿತು. ಘಟನೆ ನಡೆದ ದಶಕಗಳ ನಂತರವೂ ವಾಸನೆ ಉಳಿದೇ ಇತ್ತು ಎಂದು ಸ್ಥಳೀಯರು ನೆನಪಿಸಿಕೊಂಡಿದ್ದರು.

ಹವನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ