Udayavni Special

ಕಣ್‌ ತೆರೆದು ನೋಡಿ


Team Udayavani, Jun 13, 2019, 5:00 AM IST

t-4

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ
ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ
ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಸಂಬಳ ಕೇಳದ ಪೌರ ಕಾರ್ಮಿಕರು
ನಮ್ಮ ಸುತ್ತಮುತ್ತಲ ಪರಿಸರವನ್ನು ಚೆಂದಗಾಣಿಸುವಲ್ಲಿ, ಶುಚಿಯಾಗಿರಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು. ಬೆಳಿಗ್ಗೆ ಎಷ್ಟೇ ಚಳಿ ಇದ್ದರೂ, ಕತ್ತಲಿದ್ದರೂ ತ್ಯಾಜ್ಯವನ್ನು ಸಾಗಿಸುವಲ್ಲಿ ಅವರು ನಿರತರಾಗಿರುತ್ತಾರೆ. ಇವರನ್ನು ಹೊರತು ಪಡಿಸಿ ನಮ್ಮ ನೆರೆಹೊರೆಯನ್ನು ಸ್ವತ್ಛವಾಗಿಡುವ ಕೆಲಸದಲ್ಲಿ ನಿರತವಾಗಿರುವ ಹಲವು ಜೀವಿಗಳು ನಮ್ಮ ನಡುವೆ ಇವೆ. ಕಾಗೆ, ರಣಹದ್ದು, ನಾಯಿ, ನರಿಗಳು ಅವುಗಳಲ್ಲಿ ಕೆಲವು. ರಸ್ತೆ ಬದಿ ಸತ್ತು ಬಿದ್ದ ಇಲಿ ಕೆಲ ದಿವಸಗಳ ಬಳಿಕ ಆ ಜಾಗದಲ್ಲಿ ಇಲ್ಲದೇ ಇರುವುದನ್ನು ನೀವು ಗಮನಿಸಿರಬಹುದು. ಇಲ್ಲವೇ ಅದನ್ನು ಇತರೆ ಪ್ರಾಣಿ ಪಕ್ಷಿಗಳು ಸತ್ತ ಪ್ರಾಣಿಯನ್ನು ಭಕ್ಷಿಸುವುದನ್ನು ಗಮನಿಸಿರಬಹುದು. ಬೃಹತ್‌ ಗಾತ್ರದ ಪ್ರಾಣಿಗಳು ಮರಣ ಹೊಂದಿದಾಗ ರಣಹದ್ದುಗಳು ಅದರ ಸುತ್ತ ನೆರೆಯುವುದನ್ನು ನೋಡಿರಬಹುದು. ಈ ಪ್ರಾಣಿ ಪಕ್ಷಿಗಳನ್ನು ಸ್ಕ್ಯಾವೆಂಜರ್ ಎನ್ನುತ್ತಾರೆ. ಅವು ಇಲ್ಲದೇ ಇದ್ದ ಪಕ್ಷದಲ್ಲಿ ಯಾವ ಪರಿಸ್ಥಿತಿ ಒದಗುತ್ತಿತ್ತು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸತ್ತ ಪ್ರಾಣಿಯ ದೇಹ ಕೊಳೆತು ಗಬ್ಬು ನಾತ ಬೀರುತ್ತಿತ್ತು. ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ಜೀವಿಗಳು ಸಹಕಾರಿ. ಅದನ್ನು ತಪ್ಪಿಸಲು ಹೊರಟೆ ಏನಾಗುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಇಲ್ಲಿದೆ. 90ರ ದಶಕದಲ್ಲಿ ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡು ಬಂದಿತ್ತು. ಅದ0ಕ್ಕೆ ಕಾರಣವೇನೆಂದು ತನಿಖೆ ನಡೆಸಿದಾಗ ಹಳ್ಳಿಗಳಲ್ಲಿ ಜನರು ಅವುಗಳನ್ನು ವಿಷ ಹಾಕಿ ಸಾಯಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಇದರ ಅಡ್ಡ ಪರಿಣಾಮ ಏನಾಯ್ತು ಅಂದರೆ ಸತ್ತ ಪ್ರಾಣಿಗಳನ್ನು ತಿನ್ನಲು ನಾಯಿಗಳು ಮುಗಿಬಿದ್ದವು. ರಣಹದ್ದುಗಳಿದ್ದಾಗ ಅವು ತಿಂದುಳಿಸಿದ್ದನ್ನು ನಾಯಿಗಳು ಮುಕ್ಕುತ್ತಿದ್ದವು. ಆದರೆ ಈಗ ರಣಹದ್ದು ಇಲ್ಲದೇ ಇದ್ದುದರಿಂದ ನಾಯಿಗಳೇ ಪಾರಮ್ಯ ಮೆರೆದವು. ಇದರಿಂದಾಗಿ ಅವುಗಳ ಸಂಖ್ಯೆ ಹೆಚ್ಚಿ ಅವುಗಳ ಕಾಟದಿಂದ ರೇಬಿಸ್‌ ಕಾಯಿಲೆ ಹೆಚ್ಚಳವಾಗಿತ್ತು. ಸೃಷ್ಟಿಯ ನಿಯಮ ಮೀರಿ ಹೊರಟರೆ ಏನಾಗುತ್ತದೆ ಎನ್ನುವುದಕ್ಕೆ ಇದೊಳ್ಳೆ ನಿದರ್ಶನ. ಆದ್ದರಿಂದ ನಾವು ಪೌರ ಕಾರ್ಮಿಕರಿಗೆ ಋಣಿಯಾಗಿರುವಷ್ಟೇ, ಈ ಸ್ಕ್ಯಾವೆಂಜರ್ ಗಳಿಗೂ ಕೃತಜ್ಞರಾಗಿರಬೇಕು.

ಸಹಬಾಳ್ವೆಯ ಪಾಠ ಹೇಳುವ ಚಿಟ್ಟೆಗಳು
ಮನೆ ಮುಂದಿನ ಉದ್ಯಾನಗಳಲ್ಲಿ, ಕಾಡಿನಲ್ಲಿ, ಹಸಿರು ತುಂಬಿರುವಲ್ಲಿ, ಚಿಟ್ಟೆಗಳು ಹಾರಾಡುವುದನ್ನು ನೋಡಿರುತ್ತೀರಾ… ಅದೇ ಚಿಟ್ಟೆ ಚಳಿಗಾಲದಲ್ಲಿ ಗಿಡಮರಗಳು, ಮನೆಯ ತಾರಸಿ, ರಸ್ತೆಗಳೆಲ್ಲಾ ಹಿಮವನ್ನು ಹೊದ್ದಾಗ ಚಿಟ್ಟೆಗಳು ಹುಟ್ಟಿಕೊಳ್ಳುವುದಿಲ್ಲವಾ? ಎಂದು ಪ್ರಶ್ನಿಸಿಕೊಂಡಿದ್ದೀರಾ? ಚಿಟ್ಟೆ ತಾನು ರೆಕ್ಕೆ ಪಡೆದು ಹಾರುವ ಮುನ್ನ ನಾಲ್ಕು ಹಂತಗಳನ್ನು ಅದು ದಾಟಬೇಕಾಗುತ್ತದೆ. ಮೊಟ್ಟೆ, ಕ್ಯಾಟರ್‌ಪಿಲ್ಲರ್‌, ಪ್ಯೂಪಾ ಮತ್ತು ವಯಸ್ಕ ಚಿಟ್ಟೆ- ಕ್ರಮವಾಗಿ ಇವೇ ಆ ನಾಲ್ಕು ಹಂತಗಳು. ಪ್ಯೂಪಾ ಹಂತವನ್ನು ದಾಟಿದ ಮೇಲೆಯೆ ಅವಕ್ಕೆ ರೆಕ್ಕೆ ಮೂಡುವುದು. ಶೀತಲ ವಾತಾವರಣದಲ್ಲಿ ಚಿಟ್ಟೆಗಳು ರೆಕ್ಕೆ ಮೂಡದ ಹಂತವನ್ನು ತಮ್ಮದಾಗಿಸಿಕೊಂಡಿರುತ್ತವೆ. ಒಂದು ಚಿಟ್ಟೆಯ ಪ್ರಭೇದ ಮೊಟ್ಟೆಯಾಗಿದ್ದರೆ, ಇನ್ನೊಂದು ಕ್ಯಾಟರ್‌ಪಿಲ್ಲರ್‌, ಮತ್ತೂಂದು ಪ್ಯೂಪಾ… ಏಕೆಂದರೆ ಕೆಲ ಪ್ರಭೇದಗಳು ಒಂದೇ ಗಿಡವನ್ನು ಆಹಾರಕ್ಕಾಗಿ ಅವಲಂಬಿಸಿರುತ್ತದೆ. ಚಲಿಗಾಲದಲ್ಲಿ ಆ ಗಿಡಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿರುತ್ತವೆ. ಹೀಗಾಗಿ ಅದನ್ನು ಅವಲಂಬಿಸಿದ ಎಲ್ಲಾ ಪ್ರಭೇದಗಳಿಗೂ ಆಹಾರ ಸಿಕ್ಕದೇ ಹೋಗಬಹುದು. ಹೀಗಾಗಿ ಅವುಗಳು ಚಳಿಗಾಲ ಕಳೆಯುವವರೆಗೂ ವಯಸ್ಕ ಹಂತವನ್ನು ತಲುಪದೆ, ರಕ್ಕೆ ಬಲಿಯದ ಹಂತಗಳಲ್ಲಿಯೇ ಕಾಲ ತಳ್ಳಿ ಬಿಡುತ್ತವೆ. ಎಲ್ಲೋ ಕೆಲ ಪ್ರಭೇದಗಳಷ್ಟೆ ಚಿಟ್ಟೆಗಳಾಗುತ್ತವೆ. ಲಭ್ಯವಿರುವ ಆಹಾರ ಅವುಗಳಿಗೆ ಸಾಕಾಗುತ್ತದೆ. ತಮ್ಮ ಸಹೋದರರಿಗೆ ಆಹಾರದ ಅಭಾವ ಕಾಡದೇ ಇರಲಿ ಎಂಬ ಕಾರಣಕ್ಕೆ ಇಂಥದ್ದೊಂದು ವ್ಯವಸ್ಥೆ ರೂಪಿಸಿಕೊಂಡಿರುವ ಚಿಟ್ಟೆಗಳಿಂದ ಮನುಷ್ಯ ಸಹಬಾಳ್ವೆಯ ಪಾಠ ಕಲಿಯಬಹುದು.

ಹರ್ಷವರ್ಧನ್‌ ಸುಳ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishmaya

ಪ್ರಪಂಚ ಪರ್ಯಟನೆ; ಅಚ್ಚರಿಯ ಜಗತ್ತು ಇದು…

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಮನೆಯಲ್ಲೇ ಇದ್ದು ಕೋವಿಡ್ ನಿಯಂತ್ರಿಸಿ

ಮನೆಯಲ್ಲೇ ಇದ್ದು ಕೋವಿಡ್ ನಿಯಂತ್ರಿಸಿ

ದಕ್ಷಿಣ ಕನ್ನಡದಲ್ಲಿ ಸಂಭಾವ್ಯ ನೆರೆ-ಭೂ ಕುಸಿತ; ಅಪಾಯದಲ್ಲಿ 102 ಅತೀ ಸೂಕ್ಷ್ಮ ಗ್ರಾಮಗಳು

ದಕ್ಷಿಣ ಕನ್ನಡದಲ್ಲಿ ಸಂಭಾವ್ಯ ನೆರೆ-ಭೂ ಕುಸಿತ; ಅಪಾಯದಲ್ಲಿ 102 ಅತೀ ಸೂಕ್ಷ್ಮ ಗ್ರಾಮಗಳು

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.