ದ್ರೋಣಾಚಾರ್ಯ

Team Udayavani, Aug 17, 2017, 6:45 AM IST

Dronacharya.jpg

ದುರ್ಯೋಧನನು ಮತ್ತೆ ದ್ರೋಣರನ್ನು ಅವರು ಪಾಂಡವರ ವಿಷಯದಲ್ಲಿ ಮೃದುವಾಗಿದ್ದಾರೆ ಎಂದು ಆಕ್ಷೇಪಿಸಿದ. ಗುರುಗಳು, “ದುರ್ಯೋಧನ, ನಿನಗಾಗಿ ಈ ವಯಸ್ಸಿನಲ್ಲಿ ನಾನು ಇಷ್ಟು ಶ್ರಮಪಡುತ್ತಿದ್ದೇನೆ. ಅರ್ಜುನನನ್ನು ರಣರಂಗದಲ್ಲಿ ಯಾರು ಜಯಿಸಬಲ್ಲರು? ನೀನೂ ಕ್ಷತ್ರಿಯನೇ. ಹೋಗಿ ನೀನೇ ಅರ್ಜುನನನ್ನು ಸೋಲಿಸು’ ಎಂದರು.
ಅಂದೂ ಭೀಕರ ಕಾಳಗವಾಯಿತು. ಸಾವಿರಾರು ಯೋಧರು ಸತ್ತರು. ಭೂಮಿಯು ಶವಗಳಿಂದ ತುಂಬಿಹೋಯಿತು.

ದ್ರೋಣಾಚಾರ್ಯರು ಮುಖಾಮುಖೀಯಾದರು. ಅವರ ಯುದ್ಧವು ಎಷ್ಟು ಅದ್ಭುತವಾಗಿತ್ತು ಎಂದರೆ ಸುತ್ತಲಿದ್ದ ಎರಡು ಸೈನ್ಯಗಳವರೂ ಕಾದಾಡುವುದನ್ನು ಮರೆದು ಅವರ ಯುದ್ಧವನ್ನೇ ಬೆರಗಿನಿಂದ ನೋಡುತ್ತ ನಿಂತುಬಿಟ್ಟರು. ರಣರಂಗದ ಬೇರೊಂದು ಭಾಗದಲ್ಲಿ ದುರ್ಯೋಧನ- ಸಾತ್ಯಕಿಯರು ಮುಕಾಮುಖೀಯಾಗಿ ಭೀಕರವಾಗಿ ಹೋರಾಡಿದರು.
ದ್ರೋಣರು ಇಂದ್ರನಂತೆ ಹೋರಾಡಲು ತೊಡಗಿದರು. ಪಾಂಡವರು ದಿಕ್ಕುಗೆಟ್ಟರು. ಕೃಷ್ಣನು “ಅರ್ಜುನಾ, ಇಂದು ದೇವತೆಗಳ ಸೈನ್ಯವೂ ದ್ರೋಣರನ್ನು ಸೋಲಿಸಬಾರದು. ಈಗಿರುವುದು ಒಂದೇ ದಾರಿ. ದ್ರೋಣರು ಅವರ ಮಗ ಅಶ್ವತ್ತಾಮ ಸತ್ತ ಎಂದು ಕೇಳಿದರೆ ಶಸ್ತ್ರಗಳನ್ನು ಕೆಳಗಿಡುತ್ತಾರೆ.’ ಎಂದನು. ಯುಧಿಷ್ಟಿರನಿಗೂ, ಅರ್ಜುನನಿಗೂ ಇದು ಒಪ್ಪಿಗೆಯಾಗಲಿಲ್ಲ. ಆದರೆ ಕಡೆಗೆ ಬೇರೆ ದಾರಿ ಕಾಣದೆ ಒಪ್ಪಿದರು. ಭೀಮನು ತನ್ನ ಗದೆಯಿಂದ ಅಶ್ವತ್ಥಾಮ ಎಂಬ ಆನೆಯನ್ನು ಕೊಂದನು. ಆನಂತರ ದ್ರೋಣರನ್ನು ಸಮೀಪಿಸಿ, “ಅಶ್ವತ್ಥಾಮ ಸತ್ತುಹೋದ’ ಎಂದು ಗಟ್ಟಿಯಾಗಿ ಹೇಳಿದ.

ಇದನ್ನು ಕೇಳಿ ದ್ರೋಣರು ದುಃದಿಂದ ಕುಸಿಯುವುದರಲ್ಲಿದ್ದರು. ಆನಂತರ ಅಶ್ವತ್ಥಾಮನು ಎಂತಹ ಪರಾಕ್ರಮಿ ಎನ್ನುವುದನ್ನು ಜ್ಞಾಪಿಸಿಕೊಂಡರು. ಭೀಮನ ಮಾತನ್ನು ನಂಬದೆ ಯುದ್ಧವನ್ನು ಮುಂದುವರಿಸಿದರು. ಸಾವಿರಾರು ಮಂದಿ ಪಾಂಡವ ಸೈನ್ಯದ ಯೋಧರನ್ನು ಕೊಂದನು. ಆಗ ಕೃಷ್ಣನು “ಅಶ್ವತ್ಥಾಮನು ಸತ್ತನೆಂದು ನೀನು ಹೇಳಿದರೆ ದ್ರೋಣರು ನಂಬುತ್ತಾರೆ’ ಎಂದು ಯುಧಿಷ್ಟಿರನಿಗೆ ಹೇಳಿದ. ಯುಧಿಷ್ಟಿರನು “ಅಸ್ವತ್ಥಾಮೋ ಹತಃ ಕುಂಜರಃ’ ಎಂಬ ಮಾತನ್ನು ಅಸ್ಪಷ್ಟವಾಗಿ ಹೇಳಿದ. ದ್ರೋಣರು ರಥದಲ್ಲಿ ಶಸ್ತ್ರಗಳನ್ನು ಇಟ್ಟು ದುಃಖದಲ್ಲಿ ಮುಳುಗಿ ಕೂತರು. ಧೃಷ್ಟದ್ಯುಮ್ನನು ಆಗಲೇ ಅವರ ಮೇಲೆ ಬಾಣವ°ನು ಪ್ರಯೋಗಿಸಿದ. ದುಃಖ ಕವಿದಿದ್ದರೂ ಆಚಾರ್ಯರು ಅದ್ಭುತವಾಗಿ ಯುದ್ಧ ಮಾಡಿದರು.

ಶತ್ರುವಿನ ಕುದುರೆಗಳನ್ನು ಕೊಂದರು. ಪಾಂಡವ ವೀರರೆಲ್ಲ ಅವರ ಮೇಲೆ ಆಕ್ರಮಣ ಮಾಡಿದರು. ಆಗ ಭೀಮನು ದ್ರೋಣರಿಗೆ “ನಿಮ್ಮ ಒಬ್ಬನೇ ಮಗನು ಸತ್ತ ಮೇಲೆಯೂ ನೀವು ಯೋಧರನ್ನು ಕೊಲ್ಲುವುದೇಕೆ? ಯುಧಿಷ್ಟಿರ ಹೇಳಿದ ಮಾತನ್ನು ಕೇಳಲಿಲ್ಲವೇ?’ ಎಂದ. ದ್ರೋಣರು ಆಯುಧವನ್ನು ಕೆಳಗಿಟ್ಟು ಯೋಗದಲ್ಲಿ ನಿರತರಾದರು. ಧೃಷ್ಟದ್ಯುಮ್ನನು ಅವರ ರಥಕ್ಕೆ ಹಾರಿ ಅವರನ್ನು ಕೊಂದನು. ಕೌರವ ಸೈನಿಕರಿಗೆ ಸೂರ್ಯನು ಭೂಮಿಗೆ ಉರುಳಿದಂತಾಯಿತು.

– ಪ್ರೊ.ಎಲ್‌.ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.