ನಮ್ಮೊಳಗಿನ ಆರು ಪರಮವೈರಿಗಳು ಇವರು

Team Udayavani, Dec 22, 2018, 7:50 AM IST

ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ. ಈ ಆರುಭಾವಗಳೇ ನಮ್ಮ ಸ್ವಭಾವವನ್ನೂ ವ್ಯಕ್ತಿಣ್ತೀವನ್ನೂ ನಿರ್ಧರಿಸುತ್ತವೆ.

ಧರ್ಮಗಳು ಪ್ರತಿಯೊಬ್ಬರಿಗೂ ಜೀವನಪ್ರೀತಿಯನ್ನು ಕಲಿಸುವ ಪಾಠಶಾಲೆಗಳು. ಸಂಸ್ಕಾರವನ್ನು ಹೇಳುವ ಧರ್ಮವು ನೆಮ್ಮದಿಯ ಜೀವನ ಯಾವುದು? ಎಲ್ಲಿಂದ ನೆಮ್ಮದಿ ದೊರೆಯುತ್ತದೆ? ನೆಮ್ಮದಿಯನ್ನು ಕೆಡಿಸುವ ಸಂಗತಿಗಳಾವುವು? ಅವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಹೇಳುತ್ತದೆ. ಸಂಸ್ಕಾರಕ್ಕೂ ಮನಶಾÏಂತಿಗೂ ಅವಿನಾಭಾವ ಸಂಬಂಧವಿದೆ. ಸಂಸ್ಕಾರವಿದ್ದಾಗ ಮನಶ್ಯಾಂತಿ ಇರುತ್ತದೆ; ಮನಶ್ಯಾಂತಿ ಇದ್ದಾಗ ಸಂಸ್ಕಾರ ಬೆಳೆಯುತ್ತದೆ. ಜೀವನದ ಹಾದಿಯನ್ನೇ ತಪ್ಪಿಸುವ ಪರಮವೈರಿಗಳು ನಮ್ಮೊಳಗೇ ಜೀವಂತವಾಗಿ ಇದ್ದಾವೆ. ಇವು ಜೀವಂತವಾಗಿರುವ ತನಕವೂ ಧರ್ಮದ ಉನ್ನತಿ ಸಾಧ್ಯವಿಲ್ಲ.

ನಮ್ಮೊಳಗಿನ ಪರಮವೈರಿಗಳಾರು?

ನಮ್ಮನ್ನಾಳುವ ವೈರಿಗಳು ದೇವಲೋಕದಿಂದಲೋ, ಪಾತಾಳದಿಂದಲೋ ಬಂದವುಗಳಲ್ಲ. ಅವು ನಮ್ಮೊಳಗೇ ಇದ್ದುಕೊಂಡು ನಮ್ಮನ್ನು ನಿಯಂತ್ರಿಸುವ ಭಾವಗಳಾಗಿವೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮಾತ್ಸರ್ಯ. ಈ ಆರು ವೈರಿಗಳೇ ನಮ್ಮ ಪರಮವೈರಿಗಳು. ಇವನ್ನು ಅರಿಷಡ್‌ ವರ್ಗಗಳು ಎಂದೇ ಗುರುತಿಸಲಾಗಿದೆ. ಮನಸ್ಸಿನ ಶಾಂತಿಯನ್ನು ಕೆಡಿಸುವ ಮನಸ್ಸಿನ ಭಾವನೆಗಳನ್ನೇ ಆರು ರೂಪಗಳಲ್ಲಿ ಗುರುತಿಸಿ ಅರಿಷಡ್‌ ವರ್ಗಗಳೆಂದು ಹೇಳಲಾಗಿದೆ.

ಸಂಸ್ಕೃತದಲ್ಲಿ ಒಂದು ಮಾತಿದೆ. “ಕಾಮಾತುರಾಣಾಂ ನರುಚಿಂ ನ ವೇದಾ, ನ ಲಜ್ಜಾ’ ಅಂದರೆ ಕಾಮಾಸಕ್ತಿಯುಳ್ಳವನಿಗೆ ವೇದಗಳು ಅರ್ಥವಾಗುವುದಿಲ್ಲ. ಅಂದರೆ, ಹಿತನುಡಿಯೋ ನೈತಿಕತೆಯೋ ಅವನಿಗೆ ಅರಿವಾಗುವುದೇ ಇಲ್ಲ ಮತ್ತು ಯಾವುದೇ ಹೀನ ಕಾರ್ಯಕ್ಕೂ ಹೇಸದ, ಲಜ್ಜೆ, ಅಂದರೆ ಮರ್ಯಾದೆಯ ಛಾಯೆಯೂ ಇಲ್ಲದವನಾಗಿರುತ್ತಾನೆ. ಇದರಿಂದ ಅಧರ್ಮದ ಕಾರ್ಯಗಳು ಯಥೇತ್ಛವಾಗಿ ನಡೆಯುತ್ತವೆ. ಇನ್ನು ಕ್ರೋಧಭಾವದಿಂದಾಗುವ ಅನಾಹುತಗಳು ಅನಂತ. ಅವು ಲೆಕ್ಕಕ್ಕೆ ಸಿಗಲಾರದಷ್ಟಿವೆ. ಆದರೆ, ಇಡೀ ಪ್ರಪಂಚವನ್ನು ನಾಶ ಮಾಡುವ ಶಕ್ತಿ ಈ ಕೋಪ ಅಥವಾ ಕ್ರೋಧ ಬುದ್ಧಿಗಿದೆ. ಏಕೆಂದರೆ,  ಕ್ರೋಧಕ್ಕೊಳಗಾದವನು ಯಾವ ನೀತಿಯ ಮಾತಿಗೂ ಮಣಿಯಲಾರ. ಇನ್ನು ಮದಕ್ಕೆ ಬೇರೆ ಮದ್ದಿಲ್ಲ.

ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಮಾತಿದೆ. ಮದವು ಸ್ವಾರ್ಥವನ್ನು ಹುಟ್ಟಿಸುವುದರ ಜೊತೆಗೆ ಸಮಾಜದ ಶಾಂತಿಯನ್ನೂ ಕೆಡಿಸುತ್ತದೆ. ಮೋಹವು ಮನುಷ್ಯನನ್ನು ಕುರುಡರನ್ನಾಗಿಸಿಬಿಡುತ್ತದೆ. ಮೋಹದಿಂದಾಗಿ ಸರಿತಪ್ಪುಗಳು ತಿಳಿಯುವುದೇ ಇಲ್ಲ. ಮೋಹಕ್ಕೆ ಒಳಗಾದವನು ಅದೇ ಗುಂಗಿನಲ್ಲಿರುತ್ತಾನೆ ಮತ್ತು ಹೊರಜಗತ್ತಿಗೆ ಬಾಧಕವಾಗುವ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಲೋಭವು ಗಳಿಸಿದ ಕೀರ್ತಿಯನ್ನೂ ಉಳಿಸುವುದಿಲ್ಲ; ಧರ್ಮವನ್ನೂ ಉಳಿಸುವುದಿಲ್ಲ. ಮತ್ಸರವು ನಮ್ಮೊಳಗೇ ಇದ್ದುಕೊಂಡು ನಮ್ಮನ್ನೇ ಸುಡುವ ಬೆಂಕಿಯಿದ್ದಂತೆ. ಮತ್ಸರವಿದ್ದವನು ಏನನ್ನೂ ಸಾಧಿಸಲಾರ. ಪ್ರತಿ ಮನುಷ್ಯನಲ್ಲಿಯೂ ಅವನದೇ ಆದ ಶಕ್ತಿಯುಕ್ತಿಗಳಿರುತ್ತವೆ. ಅವನ್ನರಿತುಕೊಂಡು ಅಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೇ ಹೊರತೂ ಬೇರೆಯವರನ್ನು ನೋಡಿ ಕರುಬುವುದರಿಂದ ಏನೂ ಪ್ರಯೋಜನವಿಲ್ಲ. ಅವನತಿಯೇ ಮತ್ಸರಕ್ಕೆ ಸಿಗುವ ಪ್ರತಿಫ‌ಲ.

ಅರಿ ಎಂದರೆ ಶತ್ರು ಎಂದರ್ಥ. ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ. ಈ ಆರುಭಾವಗಳೇ ನಮ್ಮ ಸ್ವಭಾವವನ್ನೂ ವ್ಯಕ್ತಿಣ್ತೀವನ್ನೂ ನಿರ್ಧರಿಸುತ್ತವೆ. ಹಾಗಾಗಿ, ಅವನು ಕೋಪಿಷ್ಟ, ಇವನು ಅಹಂಕಾರಿ, ಆತ ಜಿಪುಣ, ಈತ ಹೊಟ್ಟೆಕಿಚ್ಚಿನ(ಮತ್ಸರದ) ಮನುಷ್ಯ ಎಂದೆಲ್ಲಾ  ಗುರುತಿಸುತ್ತೇವೆ. ಈ ಆರು ಶತ್ರುಗಳೂ ನಮ್ಮೊಳಗಿನವುಗಳೇ ಆದರೂ ಅವುಗಳಿಂದಾಗುವ ಪರಿಣಾಮ ಮಾತ್ರ ವಿಶ್ವಕುಟುಂಬದ ಶಾಂತಿಯನ್ನು ಕೆಡಿಸುವಂಥದ್ದು. ಹಾಗಾಗಿ, ಇವನ್ನು ನಮ್ಮಿಂದ ದೂರವಿಡಲು ಮೊದಲು ಮನಸ್ಸನ್ನು ನಿಯಂತ್ರಿಸಬೇಕು. ಅದಕ್ಕೆ ಮನಸ್ಸಿನ ಏಕಾಗ್ರತೆ ಅತ್ಯವಶ್ಯಕ. ಈ ಏಕಾಗ್ರತೆಗಾಗಿಯೇ ಧ್ಯಾನ, ಭಜನೆ, ಕೀರ್ತನಾದಿಗಳಿವೆ ಮತ್ತು ದೇವಾಲಯದಂಥ ಧನಾತ್ಮಕ ತರಂಗಗಳುಳ್ಳ ಸ್ಥಳಗಳು ಹುಟ್ಟಿಕೊಂಡಿವೆ. ಈ ಮೂಲಕ ಚಿತ್ತಶಾಂತಿಯನ್ನು ಪಡೆದರೆ ಈ ಆರುಭಾವಗಳು ಪ್ರಕಟವಾಗದಂಥ ಸಂಯಮ ನಮ್ಮಲ್ಲಿ ವೃದ್ಧಿಯಾಗುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • 1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ...

ಹೊಸ ಸೇರ್ಪಡೆ