ಭಗೀರಥ ರೈತರು…! ಬೆವರು ಬಸಿದು ಬೆಳೆಗೆ ನೀರು ಹರಿಸಿದರು


Team Udayavani, Feb 18, 2017, 3:49 PM IST

2003.jpg

 ನಮ್ಮ ಅಗತ್ಯತೆಗಳ ಈಡೇರಿಕೆ, ಅಭಿವೃದ್ಧಿ ಕಾರ್ಯಗಳನ್ನು ಸರಕಾರವಷ್ಟೇ ಮಾಡಬೇಕಾ? ಅದು ಸರಕಾರದ ಕರ್ತವ್ಯ, ಜವಾಬ್ದಾರಿ ಎನ್ನುವ ಮನಸ್ಥಿತಿಯ ನಮ್ಮಲ್ಲಿ ಪ್ರಬಲವಾಗಿ ಬೇರೂರಿದೆ. ಆದರೆ ಸರಕಾರದ ಹೊರತಾಗಿ ನಮ್ಮ ತುರ್ತು ಅಗತ್ಯಗಳನ್ನು ತುರ್ತಾಗಿ ಹಿಡೇರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಬಳ್ಳಾರಿ ಜಿಲ್ಲೆಯ ಕೆಲವು ರೈತರು ಮಾಡಿದ್ದಾರೆ!. “ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ನಮ್ಮ ಹೋರಾಟ, ಮನವಿ, ಬೇಡಿಕೆ.. ಎಲ್ಲವೂ ವಿಫ‌ಲವಾದಾಗ ಗೆಲ್ಲೋದು ಮಾತ್ರ ನಮ್ಮ ಮನೋಬಲ ಎನ್ನುವುದಕ್ಕೀದು ತಾಜಾ ಉದಾಹರಣೆ.

ಇವರೆಲ್ಲಾ ಏನೋ ಮಾಡ್ತಾ ಇದ್ದಾರಲ್ಲಾ? ಇಲ್ಲ ಬಿಡಿ ಇವ್ರು ಉದ್ಯೋಗ ಖಾತ್ರಿಗಳು. ಏನೋ ಮಾಡಿಕೊಳ್ಳುತ್ತಿದ್ದಾರೆ ಅಂದು ಕೊಳ್ಳುವ ಹೊತ್ತಿಗೆ ” ಅಯ್ಯೋ ಸಾರ್‌, ಅವರೆಲ್ಲಾ ತಮ್ಮ ಕೆಲಸ ತಾವೇ ಮಾಡಿಕೊಳ್ತಾ ಇದ್ದಾರೆ. 

ರೈತರೇ ಸ್ವಯಂ ಪ್ರೇರಿತರಾಗಿ ಅಣೆಕಟ್ಟು ಸ್ವತ್ಛ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ  ಇದೇ ಕೆಲಸದಲ್ಲಿದ್ದಾರೆ ಅಂದರು ಜೊತೆಯಲ್ಲಿದ್ದ ಕಂಪ್ಲಿಯ ಕಟ್ಟೆ ಅಯ್ಯಪ್ಪ.

ನೋಡಿದರೆ ಅಲ್ಲಿ ರೈತರ ದೊಡ್ಡ ಸೈನ್ಯವೇ ಇದೆ. ದುರ್ಗಮ, ಕಠಿಣ ಜಾಗಗಳಲ್ಲೂ ಸಹ ಎದೆಗುಂದದೇ, ಉತ್ಸಾಹದಿಂದ ಕೆಲಸ ಮಾಡುವ ಪರಿಯನ್ನು ನೋಡಿ ಬೆರಗಾಯಿತು. “ಯಾಕೆ ಈ ಸಾಹಸ? ಎನ್ನುವ ರೀತಿಯಲ್ಲಿ ಕಟ್ಟೆ ಅಯ್ಯಪ್ಪನವರತ್ತ ನೋಡಿದೆ. ಅದಕ್ಕವರು ” ರೈತರು ತ‌ಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಈ ಸರ್ಕಸ್‌” ಎಂದರು. 

ಹೌದು, ವರ್ಷ ಪೂರ್ತಿ ಸಂತೃಪ್ತ ನೀರು ಕಾಣುತ್ತಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಅದರಲ್ಲೂ ಕಮಲಾಪುರ, ಕಂಪ್ಲಿ ಭಾಗದ ರೈತರಿಗೀಗ ಅಕ್ಷರಶಃ ಜಲಕ್ಷಾಮ. ಹನಿ, ಹನಿ ನೀರಿಗೂ ತಾತ್ವಾರ. ತೋಟ, ಗದ್ದೆಯಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಬೆವರು ಬಸಿಯುತ್ತಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಿಗಡಾಯಿಸುತ್ತಲೇ ಇದೆ. ಕೃಷಿಗೆ ಬೆನ್ನೆಲುಬು ಆಗಿದ್ದ ಕಾಲುವೆ ನೀರಾವರಿ ರೈತರಲ್ಲಿ ಭರವಸೆ ಉಳಿಸುತ್ತಿಲ್ಲ. ಹೀಗಾಗಿ ಕಾಲುವೆಯಲ್ಲಿ ಬರುವ ಅಲ್ಪ-ಸ್ವಲ್ಪ ನೀರು ವೃಥಾ ಪೋಲಾಗದಂತೆ, ಅಡತಡೆ ಇಲ್ಲದೇ ನೇರವಾಗಿ ಮಾಗಣಿಗಳಿಗೆ ತರುವ ಚಿಂತನೆಗಳು, ಆ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ.  ಅಂತಹ ಪ್ರಯತ್ನವೇ ಅಣೆಕಟ್ಟು ಸ್ವತ್ಛತೆ. 

ಈ ಭಾಗದ ರೈತರಿಗೆ ತುಂಗಭದ್ರ ಅಣೆಕಟ್ಟು ಜೀವನಾಡಿ. ಇದರ ಅಚ್ಚುಕಟ್ಟು ಪ್ರದೇಶಗಳಲ್ಲಿ ಬರುವ ಮಾಗಾಣಿ ಪ್ರದೇಶವೆಲ್ಲಾ ತುಂಗಭದ್ರೆಯ ಕೃಪೆಗೆ ಪಾತ್ರವಾಗಿದೆ. ವರ್ಷಪೂರ್ತಿ ಈ ನೀರಿನಿಂದಲೇ ಬೆಳೆ ತೆಗೆಯುವ ರೈತರ ಅದೃಷ್ಟ ಕಳೆದ ಎರಡು ವರ್ಷದಿಂದ ನೆಟ್ಟಗಿಲ್ಲ. ಅನಿಶ್ಚಿತ ಮಳೆಯಿಂದ ಡ್ಯಾಂನ ಒಡಲು ಭರ್ತಿಯಾಗುತ್ತಿಲ್ಲ. ಈ ಕಾರಣಕ್ಕೆ ಈ ವರ್ಷ ಬೇಸಿಗೆ ಬೆಳೆಗೆ ನೀರು ಬಿಡಲ್ಲ ಎಂದು ರೈತರಿಗೆ ಈಗಾಗಲೇ ಸಂದೇಶ ರವಾನಿಸಿ ಆಗಿದ್ದಾಗಿದೆ. ಆದರೆ ದುರಾದೃಷ್ಟವಶಾತ್‌ ಇನ್ನು ಬೇಸಿಗೆ ದಿನಗಳು ಈಗಷ್ಟೇ ಶುರುವಾಗಿದೆ. ಅದಾಗಲೇ ತುಂಗಭದ್ರ ಹೊಳೆ ಬತ್ತಿ ಹೋಗಿದೆ!. ಇದರಿಂದ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿರುವ ತೆಂಗು, ಬಾಳೆ, ಕಬ್ಬು ಬೆಳೆಗಳಿಗೆ ನೀರಿನ ಅಭಾವ ಸೃಷ್ಠಿಯಾಗಿದೆ. ಒಂದೆಡೆ ಕಾಲುವೆಯಲ್ಲಿ ಬೇಡಿಕೆಯಷ್ಟು ನೀರಿಲ್ಲ. ಮತ್ತೂಂದೆಡೆ ವಿದ್ಯುತ್‌ ಅಭಾವ. ಇದರಿಂದ ಬೋರ್‌ವೆಲ್‌ ಇದ್ದರೂ ಉಪಯೋಗ ಅಷ್ಟಕಷ್ಟೆ ಎನ್ನುವಂತಾಗಿದೆ.  ಈ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಜಲಸಸ್ಯಗಳ ಸಂಹಾರಕ್ಕೆ ಪಣತೊಟ್ಟಿದ್ದು.
                                                
ಜಲಸಸ್ಯಗಳ ಸಂಹಾರ ಸಂಕಲ್ಪ!
  ಮಳೆ ಸಮೃದ್ಧಿ. ಆದರೆ ಕೃಷಿಗೆ ನೀರಿನ ಕೊರತೆ ಇಲ್ಲ. ಅದರಲ್ಲೂ ಒಂದೆರೆಡು ಬಾರಿ ಹೊಳೆ ಮೈದುಂಬಿ ಹರಿದರೆ ಹೊಳೆ, ಕಾಲುವೆಗಳು  ನೈಸರ್ಗಿಕವಾಗಿಯೇ ಸ್ವತ್ಛವಾಗುತ್ತವೆ. ಆದರೆ ಕಳೆದು ಎರಡು ವರ್ಷಗಳಿಂದ ಮಳೆಯ ಅಭಾವ ಕಾರಣಕ್ಕೆ ಹೊಳೆ, ಕಾಲುವೆಗಳಲ್ಲಿ ನೀರಿನ ಹರಿವು ಅಷ್ಟಕಷ್ಟೇ. ಇದು ಸಹಜವಾಗಿ ಅಂತರಗಂಗೆ ಮುಂತಾದ ಜಲಸಸ್ಯಗಳು ಸೊಂಪಾಗಿ ಬೆಳೆಯಲು ಕಾರಣವಾಗಿದೆ. ಇಂತಹ ಜಲಸಸ್ಯಗಳು ನೀರಿನ ಸರಾಗ ಹರಿವನ್ನು ತಡೆಯುತ್ತದೆ. ಹೀಗಾಗಿ ಜಲಸಸ್ಯಗಳು ರೈತರಿಗೆ ಜಲದ ಅಭಾವ ತಂದೊಡ್ಡಿದವು. ಕಾಲುವೆಯಲ್ಲಿ ಬಳ್ಳಿ, ಗಿಡಗಂಟೆ, ಹೂಳು ತೆಗೆಯಿಸಿ ಸ್ವತ್ಛ ಮಾಡುವಂತೆ ರೈತರು ನೀರಾವರಿ ಇಲಾಖೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರು. ಆದರೆ ಹಣದ ಅಭಾವ ಮತ್ತು ಕಾಲುವೆ ನವೀಕರಣ ಯೋಜನೆಯ  ಕಾರಣವೊಡ್ಡಿ ಇವರ ಮನವಿಯನ್ನು ಇಲಾಖೆ ಮುಂದೂಡುತ್ತಲೇ ಇತ್ತು. 

ಈ ವಿಷಯವನ್ನು ನಿರಾವರಿ ಇಲಾಖೆ ಗಂಭೀರವಾಗಿ ಪರಿಗಣಿಸದ ಕಾರಣ ಕಾಲುವೆಯನ್ನು ಕಸಮುಕ್ತ ಮಾಡಲು ಇವರು ಗಂಭೀರರಾದರು. ಪದೇ ಪದೇ ಅವರಿಗೇನು ಸಲಾಂ ಹೊಡೆಯುವುದು ಎಂದು ತಾವೇ ಕಾಲುವೆಯನ್ನು ಸ್ವತ್ಛ ಮಾಡುವ ಸಂಕಲ್ಪ ತೊಟ್ಟರು. ಇದಕ್ಕಾಗಿ 500 ರಿಂದ 2000 ರೂ.ವರೆಗೆ ವಂತಿಗೆ ಹಾಕಿ ಸುಮಾರು 8-10 ಲಕ್ಷಗಳನ್ನು ಸಂಗ್ರಹಿಸಿದರು. 

ಹನಿ ನೀರಿಗಾಗಿ ಬೆವರಿನ ಹೊಳೆ..!
   ನೀರು ಬಳಕುತ್ತಾ, ಓಡುತ್ತಾ ಬರುತ್ತಿದ್ದ ಕಾಲುವೆಗಳಲ್ಲೀಗ ಅಳುತ್ತಾ ಬರುತ್ತಿರುವ ನೀರು ಬೆಳೆಗಳ ಬುಡಕ್ಕೆ ತಲುಪುವುದೇ ಕಷ್ಟಸಾಧ್ಯವಾಗಿತ್ತು. ಮೊದಲೇ ಅಲ್ಪ ನೀರಿನ ಹರಿವು. 
ಆ ಹರಿವಿಗೆ ಕಾಲುವೆಯಲ್ಲಿನ ಬಳ್ಳಿ, ಗಿಡಗಳು ತಡೆಗೋಡೆಯಾಗಿ ಕೆಲಸ ಮಾಡುತ್ತಿದ್ದವು. ಕಾಲುವೆ ಸ್ವತ್ಛಗೊಳಿಸಲು ಕಂಪ್ಲಿ, ಹಂಪಿ, ಕಮಲಾಪುರ, ಬುಕ್ಕಸಾಗರ, ಕಡ್ಡಿರಾಂಪುರ, ಮಲಪನಗುಡಿ, ವೆಂಕಟಾಪುರ.. ಹೀಗೆ ಹತ್ತಾರು ಗ್ರಾಮದ ನೂರಾರು ರೈತರು ನೀರಾವರಿ ಕಾಲುವೆಯಲ್ಲಿ ಬೆಳೆದ ಜಲಸಸ್ಯ, ತ್ಯಾಜ್ಯದ ಮೇಲೆ ಯುದ್ಧ ಸಾರಿದರು. ಸೂರ್ಯೋದಯ ಆಗುವಷ್ಟರಲ್ಲಿ ಕಾರ್ಯೋನ್ಮುಖವಾಗುತ್ತಿದ್ದ ಇವರು ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಕಾಲುವೆ ಇಳಿಸಂಜೆಯವರೆಗೆ ಕೆಲಸ ಮಾಡಿದರು. ರೈತರು ತಮ್ಮೊಂದಿಗೆ ಕೂಲಿ ಕಾರ್ಮಿಕರು, ಮಿಷನರಿಗಳು, ಹರಿಗೋಲು ಇತ್ಯಾದಿಗಳನ್ನೂ ಬಳಸಿದರು. ಸತತ 15 ದಿನಗಳು ಶ್ರಮ ಹಾಕಿದ್ದರಿಂದ ಕಾಲುವೆಯಲ್ಲಿ ನೀರಿನ ಹರಿವಿಗಿಂತ ಇವರ ಬೆವರು ಹರಿವು ಹೆಚ್ಚಾಗಿತ್ತು!. ಇದರಿಂದ ಕಾಲುವೆಗಳು ಜಲಸಸ್ಯಗಳಿಂದ ಮುಕ್ತವಾಗಿ ನೀರು ಸರಾಗವಾಗಿ ಹರಿಯುವಂತೆ ಆಗಿತು. ಕೆಲವೇ ದಿನಗಳಲ್ಲಿ ಕಂಪ್ಲಿ ವಿಜಯ ನಗರ ಆಣೆಕಟ್ಟು, ಕಂಪ್ಲಿ ವಿಜಯ ನಗರ ಕಾಲುವೆ ಅಂದರೆ ತುಂಗಭದ್ರಾ ನದಿಯಿಂದ ವಿಜಯನಗರ ಮುಖ್ಯ ಕಾಲುವೆಯ ಕೋಟೆ, ಹೆಡ್‌ಸೂÉಸ್‌ ಮುಖ್ಯಭಾಗ ನ ಹಿಂದಿನ ಭಾಗ, ಬೆಳಗೋಡ್‌ ಹಾಳ್‌ ವ್ಯಾಪ್ತಿಯ  ಸುಮಾರು 09 ಕಿ.ಮೀ ಆಣೆಕಟ್ಟು, ಕಮಲಾಪುರ ಭಾಗದ ರಾಯ ಕಾಲುವೆಯಲ್ಲಿ ರೈತರು ಗಿಡಗಂಟೆಗಳನ್ನು ಬೇರು ಸಮೇತ ಕಿತ್ತು ಹಾಕುವುದರ ಜೊತೆಗೆ ಅಲ್ಲಿನ ಹೂಳು ತೆಗೆದಿದ್ದಾರೆ!. ಅಷ್ಟೇ ಇಲ್ಲದೆ ಈಗ ತೆಳುವಾಗಿ ನೀರನ್ನು ಒಂದೆಡೆ ಶೇಖರಿಸಿ, ತಮ್ಮ ಹೊಲಗಳಿಗೆ ಹರಿಸಲು ರಿಂಗ್‌ಬಾಂಡ್‌ ಉಸುಗಿನ ಚೀಲ ಗಳನ್ನೂ ಸಹ ಹಾಕುತ್ತಿದ್ದಾರೆ!. 

ಬೆಳೆಗೆ ತ್ರಾಣ ಬಂತು..!
     ರೈತರ ಈ ಸತ್ಕಾರ್ಯದಿಂದ ನೀರಿನ ಅಭಾವದಿಂದ ನಿತ್ರಾಣವಾಗಿದ್ದ ಬೆಳೆಗಳಿಗೀಗ ರೈತರ ಈ ಕೆಲಸದಿಂದ ತ್ರಾಣ ಬಂದಂತಾಗಿದೆ. ನೀರಿಲ್ಲದೇ ಸೊರಗುತ್ತಿದ್ದ ಕಂಪ್ಲಿ ಭಾಗದ ಬೆಳೆಗಳಲ್ಲೀಗ ಜೀವಕಳೆ ಬಂದಿದೆ. ಕಂಪ್ಲಿ ಮತ್ತು ಕೋಟೆ ವ್ಯಾಪ್ತಿಯ ಸುಮಾರು 800 ಎಕರೆಯಲ್ಲಿ ಮಾಗಾಣಿ, ಕಮಲಾಪುರ ಮತ್ತು ಬುಕ್ಕಸಾಗರ ಭಾಗದ ಸುಮಾರು 150-200 ಎಕರೆ ಹೀಗೆ ಸುಮಾರು ಸಾವಿರ ಎಕರೆ ಕೃಷಿಗೆ ಮರುಜನ್ಮ ಬಂದಿದೆ. ನೀರಿನ ಅಭಾವದಿಂದ ಮಕಾಡೆ ಮಲಗಬೇಕಿದ್ದ ಮಾಗಣಿಯ ಬೆಳೆಗಳೆಲ್ಲಾ ಎದ್ದು ನಿಂತು ನಳನಳಿಸುತ್ತಿವೆ. ಆ ಮೂಲಕ ರೈತರಿಗೆ ಅಭಯ ಹಸ್ತ ನೀಡುತ್ತಿದೆ. “ಇದು ನಮ್ಮ ತಾತ್ಕಾಲಿಕ ಹಾಗೂ ತುರ್ತು ಕ್ರಮ. ನಮ್ಮ ಬೆಳೆಗಳು ನೀರಿಲ್ಲದೇ ಒಣಗುವುದನ್ನು ನಾವು ಮುಂದೂಡಿದ್ದೇವೆ. ಆಗ್ಗಾಗ್ಗೆ ನೀರಿನ ಅಭಾವದ ಕಾರಣಕ್ಕೆ ಮಾರ್ಚ್‌ ಏಪ್ರೀಲ್‌ ತಿಂಗಳಲ್ಲಿ ಈ ರೀತಿ ಸಣ್ಣ ಪ್ರಮಾಣದಲ್ಲಿ ಕಾಲುವೆಗಳನ್ನು ಕ್ಲೀನ್‌ ಮಾಡುವ ಕೆಲಸ ಮಾಡುತ್ತಿದ್ದೆವು. ಆದರೆ ಈ ವರ್ಷ ಡಿಸೆಂಬರ್‌ ತಿಂಗಳಲ್ಲೇ ನೀರಿನ ಬವಣೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಸಂಶಯವಿಲ್ಲ ‘ ಎನ್ನುತ್ತಾರೆ ಕಡ್ಡಿರಾಂಪುರದ ಬಸಯ್ಯಸ್ವಾಮಿ.

” ಮಳೆಯರಾಯ ಒಮ್ಮೊಮ್ಮೆ ಟೈಂ ತಪ್ಪಿ ಬರುವುದು ಉಂಟು. ಬೇಸಿಗೆಯಲ್ಲೂ ಒಂದೆರೆಡು ದೊಡ್ಡ ಮಳೆಗಳು ಆದ ನಿದರ್ಶನಗಳು ಇವೆ. ಅದೃಷ್ಟ ನಮ್ಮ ಪಾಲಿಗೆ ಇದ್ದರೆ ಮುಂದಿನ ದಿನಗಳಲ್ಲಿ ಮಳೆರಾಯ ಕೃಪೆ ತೋರಬಹುದು. ಹೀಗಾಗಿ ಇಂದು ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಈ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ರೈತ ಶ್ರೀನಿವಾಸ್‌. 

ಇದು ತುಂಗಭದ್ರಾ ಅಣೆಕಟ್ಟಿನ ರೈತರ ಈ ಕತೆಯಾದರೆ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮಸ್ಥರದ್ದು ಮತ್ತೂಂದು ಕಥೆ. ಬೆಳೆಗಳಿಗೆ ನೀರಿಲ್ಲ ಅನ್ನೋ ಕೊರಗು ಆ ರೈತರದ್ದಾದರೆ, ಸಾಕು ಪ್ರಾಣಿಗಳ ದಾಹ ಇಂಗಿಸಲು ನೀರಿಲ್ಲ ಎನ್ನುವ ಕೊರಗು ಇಲ್ಲಿನವರದ್ದು. ಇಲ್ಲಿಯೂ ಸಹ ಸ್ಥಳೀಯ ಆಡಳಿತ ತಾಂತ್ರಿಕ ಕಾರಣಗಳಿಂದ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ವಿಫ‌ಲವಾದಾಗ ಗ್ರಾಮಸ್ಥರೇ ಮೂಕ ಪ್ರಾಣಿಗಳ ದಾಹ ಇಂಗಿಸಿ, ಮಾನವೀಯತೆ ಮೆರೆದಿರುವುದು ವಿಶೇಷ.

ಮೂಕ ಪ್ರಾಣಿಗಳ ದಾಹ ತಣಿಸಿದ ಕಕ್ಕುಪ್ಪಿ ಜನರು..!
ಬರದ ಹಿನ್ನಲೆಯಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಜಲಕ್ಷಾಮ ಕಾಣಿಸಿಕೊಂಡಿದೆ. ಕೆರೆ-ಕುಂಟೆಗಳು, ಬಾವಿ, ಹಳ್ಳ-ಕೊಳ್ಳಗಳು, ಗುಂಡಿಗಳು.. ಹೀಗೆ ಜಲಮೂಲಗಳು ಬರಿದಾಗುತ್ತಿರುವುದರಿಂದ ಕಾಡು ಪ್ರಾಣಿಗಳಿಗೆ ನೀರಿನ ಅಭಾವ ಉಲ್ಬಣಿಸುತ್ತಿದೆ. ಇದಕ್ಕೆ ಈ ಗ್ರಾಮವೂ ಹೊರತಲ್ಲ. ಈ ಗ್ರಾಮದ ಗುಡೇಕೊಟೆ ರಸ್ತೆಯಲ್ಲಿ ಕೂಗಳತೆ ದೂರದಲ್ಲಿ ನೀರಿನ ಗುಂಡಿ ಇದ್ದು, ಇದಕ್ಕೆ ಸ್ಥಳೀಯರು ಬನ್ನಿಕಟ್ಟೆ ಎನ್ನುತ್ತಾರೆ. ಇದು ಸುಮಾರು 150ಕ್ಕೆ150 ಮೀಟರ್‌ ಸುತ್ತಳತೆ ಇದೆ. ಮಳೆಗಾಲದಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಹಳ್ಳದ ಮೂಲಕ ನೀರು ಬಂದು ಶೇಖರಣೆಯಾಗುವಂತಹ ನೈಸರ್ಗಿಕ ವ್ಯವಸ್ಥೆ ಇದೆ. ಹೀಗೆ ಶೇಖರಣೆಯಾದ ನೀರು ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳ, ಅಷ್ಟೇಕೆ ಕಕ್ಕುಪ್ಪಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಕರಡಿ, ಚಿರತೆ, ನರಿ.. ಮುಂತಾದ ಕಾಡು ಪ್ರಾಣಿಗಳಿಗೆ ಈ ಜಲಮೂಲವೇ ಏಕೈಕ ಆಧಾರ. ಆದರೆ ಈ ಬಾರಿ ಮಳೆ ಅಭಾವದಿಂದ ಈ ಗುಂಡಿ ಬತ್ತಿ ಹೋಗಿತು!. ಆಗಲೇ ಶುರುವಾಯಿತು ನೋಡಿ, ಪ್ರಾಣಿಗಳ ಮೂಕ ರೋದನ. ಸಾಕು ಪ್ರಾಣಿಗಳಿಗೆ ನೀರು ಪೂರೈಸಲು ಜನರು ಹರಸಾಹಸಪಟ್ಟರೆ, ಕಾಡು ಪ್ರಾಣಿಗಳು ನೀರು ಹುಡುಕಿಕೊಂಡು ಗ್ರಾಮ, ಹೊಲಗಳಿಗೆ ಬರಲಾರಂಭಿಸಿದವು. ಸ್ಥಳೀಯ ಆಡಳಿತಕ್ಕೆ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅವಲತ್ತುಕೊಂಡರು. ಆದರೆ ಕೆಲವು ಕಾನೂನು ತೊಡುಕಿನಿಂದ ಸಕಾಲದಲ್ಲಿ ಸೂಕ್ತ ಸ್ಪಂದನೆ ಸಿಗದ ಕಾರಣಕ್ಕೆ ಗ್ರಾಮಸ್ಥರೇ ಒಂದೆಡೆ ಸಭೆ ಸೇರಿದರು. 

ಹೇಗಿದ್ದರೂ ಕಟ್ಟೆ ಬರಿದಾಗಿದೆ. ಇದರ ಹೂಳೆತ್ತಲು ಸದಾವಕಾಶ ಸಿಕ್ಕಿದೆ ಎಂದು ನಿರ್ಣಯಿಸಿ, ಪಂಚಾಯಿತಿಗೆ ಹೂಳು ತೆಗೆಸುವಂತೆ ಒತ್ತಾಯಿಸಿದರು. 2 ಲಕ್ಷ ರೂ.ಗಳನ್ನು ಮೀಸಲಿಟ್ಟು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳು ತೆಗೆದರು. ಕಟ್ಟೆಯಲ್ಲಿ ಹೂಳು ಖಾಲಿಯಾಗಿದ್ದಲ್ಲದೇ, ಕಟ್ಟೆಯೂ ಭದ್ರವಾಗಿತ್ತು. ಕಟ್ಟೆಗೆ ಹೊಂದಿಕೊಂಡಂತೆ ಕೊಳವೆಬಾವಿ ಕೊರೆಯಿಸಿ, ನೀರಿನಿಂದ ಗುಂಡಿ ತುಂಬಿಸುವ ತೀರ್ಮಾನವಾಗಿತ್ತು. ಹಣಕ್ಕಾಗಿ ಪ್ರತಿ ಮನೆಯವರು ತಮ್ಮ ಶಕ್ತಾನುಸಾರ ದೇಣಿಗೆ ನೀಡುವ ಒಮ್ಮತ ಅಭಿಪ್ರಾಯಕ್ಕೆ ಬಂದರು. 50 ರೂ.ಗಳಿಂದ 10,00ರೂ. ವರೆಗೆ ಸುಮಾರು 80 ಸಾವಿರ ಹಣ ಸಂಗ್ರಹವಾಗಿತ್ತು.    ಕೊಳೆವೆ ಬಾಯಿ ಕೊರೆಯಿಸಿದರು. ಆದರೆ ದುರಾದೃಷ್ಟಕ್ಕೆ ನೀರು ಸಿಗಲಿಲ್ಲ. ಆದರೆ ಪ್ರಯತ್ನ ನಿಲ್ಲಿಸದೇ ಮತ್ತೂಂದು ಕೊಳಾಯಿ ಕೊರೆಯಿಸಿದರು. ಈ ಬಾರಿ ಬರೋಬ್ಬರಿ ಎರಡು ಇಂಚು ನೀರು ಸಿಕ್ಕಿತು!. ಇದೇ ನೀರೇ ಇಂದು ದಿನನಿತ್ಯ ಸಾವಿರಾರು ಪ್ರಾಣಿಗಳ ದಾಹ ತೀರಿಸುವ ಅಕ್ಷಯ ಬಟ್ಟಲಿನಂತಿದೆ. ಕಕ್ಕುಪ್ಪಿ ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ಉದಾರತೆಯಿಂದ ಪ್ರಾಣಿಗಳು ನೀರಿನ ಉಪದ್ರವದಿಂದ ಪಾರಾಗಿವೆ. ತಾತ್ಕಾಲಿಕವಾಗಿ ಬೋರ್‌ವೆಲ್‌ಗೆ ಕರೆಂಟ್‌ ವ್ಯವಸ್ಥೆ ಮಾಡಿದ್ದು, ಜನರು ಸರದಿ ಪ್ರಕಾರ ನಿರ್ವಹಣೆ ಮಾಡುವ ಹೊಣೆಗಾರಿಕೆ ನಿಭಾಯಿಸುತ್ತಾರೆ.

ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

4-udupi

Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

ಹೊಸ ಸೇರ್ಪಡೆ

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

4-udupi

Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

3-

Throat Cancer: ತಂಬಾಕು ಮುಕ್ತ ಜೀವನ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.