ಕಿಶೋರಿ ಅಮೋಣ್ಕರ್‌: ಕಣ್ಮರೆಯಾದ ಅಪರಂಜಿ


Team Udayavani, Apr 8, 2017, 4:58 PM IST

26.jpg

ನೀಳಕಾಯ, ಗೌಳಶಾರೀರ, ಎತ್ತರದ ನಿಲುವು, ಚಶ್ಮಾಧರಿಸಿದರೆ ಪ್ರಾಧ್ಯಾಪಕತ್ವದ ಕಳೆ. ತನ್ಮಯತೆಯಲ್ಲಿ ರಾಗ ಸಿಂಚನ, ಮಂದ್ರದಿಂದ ತಾರಕದವರೆಗೆ ನಿರಾಯಾಸದ ಧ್ವನಿ ಪಯಣ. ಆರೋಹಣದಲ್ಲೂ ಅವರೋಹಣದಲ್ಲೂ ಸಿದ್ಧಿಸಿದ ಗಮಕ.

ಜೈಪುರ ಘರಾನದ ಅನ್ವೇಷಕಿ, ಶಾಸ್ತ್ರೀಯ – ಲಘುಶಾಸ್ತ್ರೀಯ ಗಾಯನದಲ್ಲಿ ಪ್ರಾವೀಣ್ಯತೆ. ಕಿಶೋರಿ ಅಮೋಣ್ಕರ್‌.ಪ್ರಾರಂಭಿಕ ಶಿಕ್ಷಣ ತಾಯಿಯಿಂದಲೇ. ಜೈಪುರ ಸಂಪ್ರದಾಯ ಸಂಗೀತ ಗಾಯಕಿ. ಮೊಗುಬಾಯಿ ಕರ್ಡಿಕರ್‌ ಈ ಮಹಾನ್‌ ಕಲಾವಿದೆಯ ತಾಯಿ. ಈಕೆಯಿಂದಲೇ ಮೊದಲ ಪಾಠ ಕಲಿತ ಕಿಶೋರಿ ಅವರು ಕ್ರಮೇಣ ತನ್ನದೇ ಆದ ಸಂಗೀತ ಲಯವನ್ನು ಕಂಡುಕೊಂಡು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಧಿಕೃತವಾಗಿ ಪ್ರತಿನಿಧಿಸುವ ದೇಶದ ಅಪ್ರತಿಮ ಗಾಯಕಿ ಎನಿಸಿಕೊಂಡರು. ಆರಂಭದ ದಿನಗಳಲ್ಲಿ ಕಾರ್ಯಕ್ರಮಗಳಿಗೆ ತಾಯಿಯೊಂದಿಗೆ ಪ್ರಯಾಣ ಮಾಡುತ್ತಿದ್ದು ಕಿಶೋರಿ,  ಅಮ್ಮನ ಹಾಡಿಗೆ ಶೃತಿ ನುಡಿಸುತ್ತಿದ್ದುದು ವಿಶೇಷ. 1932 ರ ಏಪ್ರಿಲ್‌ 10 ರಂದು ಜನಿಸಿದ ಕಿಶೋರಿ, ತನ್ನ 8 ನೇ ವಯಸ್ಸಿನಲ್ಲಿ ಅಂಜನಿಭಾಯಿ ಮಾಲ್ಪೆಪಕರ್‌ ಅವರಿಂದ ಆಗ್ರಾ ಘರಾನದ ಶಿಕ್ಷಣ, ಅನ್ವರ್‌ ಹುಸೇನ್‌ ಖಾನ್‌ ಹಾಗೂ ಶರಶ್ಚಂದ್ರ ಅರೋಲ್ಕರ್‌ ಅವರಿಂದ ಗ್ವಾಲಿಯರ್‌ ಘರಾನ ಮತ್ತು ಬಾಲಕೃಷ್ಣ ಬುವಾ ಪರ್‌ವತ್‌ಕರ್‌ ಅವರಿಂದ ಪರಿಣಿತಿ ಹೊಂದಿದ ನಂತರ ಗಾಯನಲೋಕದಲ್ಲಿ ಪ್ರಸಿದ್ಧರಾದರು.

ನೈಪುಣ್ಯತೆ – ಪ್ರಾವೀಣ್ಯತೆ 
ಅಮೋಣ್ಕರ್‌ ಅವರ ಕಾರ್ಯಶ್ರದ್ಧೆ ಸಂಪೂರ್ಣವಾಗಿ ಶಾಸ್ತ್ರೀಯ ಹಾಡುಗಾರಿಕೆಯಲಿ. ಆಂತೆಯೇ ಅವರು ಜೈಪುರ ಘರಾನದ ಗಾಯನದಲ್ಲಿ ಬೇರೆ ಬೇರೆ ಘರಾನ‌ಗಳ ತಿರುಳನ್ನು ಅಳವಡಿಸುತ್ತಿದ್ದುದು ವಿಶೇಷ. ಈ ಒಂದು ಪ್ರಯೋಗಕ್ಕೆ ಹಲವಡೆ ಪ್ರಶಂಸೆಗಳು ಮತ್ತೂಂದೆಡೆ ವಿಮರ್ಶೆಗಳು, ಟೀಕೆಗಳು ಬಂದವಾದರೂ, ಆಕೆಯ ರಾಗ ಭಾವುಕತೆಯ ತಲ್ಲೀನತೆಯ ಅಭಿವ್ಯಕ್ತಿಯಲ್ಲಿ. ನಾದ ಸಿಂಚನದಲ್ಲಿ ಮೃದು ಮಧುರಾಲಾಪದ ರಾಗಬಾಂಧವ್ಯದಲ್ಲಿ,  ಲಯ ಪ್ರಯಾಣದಲ್ಲಿ ಕೇಳುಗರು ಗಂಧರ್ವಗಾನದ ನಾದ ಸುಖವನ್ನ ಅನುಭಸುತ್ತಿದ್ದರು ಎಂಬುದು ನಿಜವೆ; ಹೀಗಾಗಿ ಯಾವ ಪ್ರತಿಕ್ರಿಯೆಯೂ, ಟೀಕೆಯೂ ಈ ಕಲಾವಿದೆಯನ್ನು ಬಾಧಿಸಲಿಲ್ಲ. 

ಅಮೋಣ್ಕರ್‌ ಅವರೇ ಹೇಳಿರುವಂತೆ, ಘರಾನ ಎನ್ನುವುದೇನಿಲ್ಲ. ಏನಿದ್ದರೂ ಸಮಗ್ರ ಸಂಗೀತವಷ್ಟೆ ; ಇದು ಹೇಗೆಂದರೆ ಸಂಗೀತವನ್ನು ವಿಭಜಿಸಿದಂತೆ.  ಕಲೆಯ ಕಲಿಯುವಿಕೆಯಲ್ಲಿ ಮಿತಿ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಬೋಧಿಸಕೊಡದು. ಆದರೆ ಸಂಗೀತದ ವ್ಯಾಕರಣವನ್ನು ತಿಳಿದಿರಬೇಕು. ಗಾನಸರಸ್ವತಿ, “ಪದ್ಮಭೂಷಣ ಪ್ರಶಸ್ತಿ, ಸಂಗೀತ ಸಾಮ್ರಾಜ್ಞೆ ತಮ್ಮ ಪಾಲಿಗೆ ದಕ್ಕಿದ್ದ ಸಮಸ್ತ ಜಾnನವನ್ನು ಶಿಷ್ಯರಿಗೆ ಮನಸಾರೆ ಧಾರೆಯೆರೆದ ಮಹಾನುಭಾವರು. ರೋಚಕ ಹಾಗೂ ನಂಬಲಸಾಧ್ಯವಾದ ಸಂಗತಿ ಎಂದರೆ ಹೋದವಾರವಷ್ಟೇ,  ನಮ್ಮ ನಾಡಿನ ಪ್ರಸಿದ್ಧಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಅವರು ಈ ಮಹಾನ್‌ ಕಲಾವಿದೆಯನ್ನು ಸಂದರ್ಶಿಸಿದ್ದರು.  ಮತ್ತು ಅದೇ ಕೊನೆಯ ಸಂದರ್ಶನ ಸಹ ಆಗಿಹೋಗಿದೆ.

 ವಿಶೇಷತೆ 
ತಮ್ಮ ಸಂಗೀತ ಕಛೇರಿ ನಡೆಯುತ್ತಿರುವ ಸಂದರ್ಭದಲ್ಲಿ ಯಾರಾದರೂ ಸಭೆಯಿಂದ ಹೊರನಡೆದರೆ ಬಹುವಾಗಿ ನೊಂದು ಕೊಳ್ಳುತ್ತಿದ್ದರು ಅಮೋಣRರ್‌.  ಏಕೆಂದರೆ ಸಭಿಕರು ಎದ್ದುಹೋದರೆಂದರೆ ತನ್ನ ಹಾಡುಗಾರಿಕೆ ಅವರಿಗೆ ಹಿಡಿಸಲಿಲ್ಲವೇನೋ ಎಂಬ ಸೂಕ್ಷ್ಮ ಭಾವನೆ ಅವರದು. ಇಂತಹ ಸಂದರ್ಭಗಳಲ್ಲಿ ಶ್ರೀಮತಿ ಕಿಶೋರಿ ಅವರು ಸಂಭಾವನೆಯನ್ನೂ ಸಹ ಪಡೆಯದಿದ್ದ ಘಟನೆಗಳು ಸಹ ನಡೆದಿವೆ. ಶ್ರೋತೃಗಳಿಗೆ  ಏಕಾಗ್ರತೆ ಇರಬೇಕಾದುದು ಸಹಜ ಎಂದು ಈ ಮಹಾನ್‌ ಕಲಾವಿದೆ ಬಯಸುವುದರಲ್ಲಿ ತಪ್ಪು ಕಾಣಲಾಗದು.

ಹಿಂದೂಸ್ತಾನಿ ಸಂಗೀತದ ವಿಶೇಷತೆ ಎಂದರೆ ಮನೋಧರ್ಮ ಕೇಂದ್ರೀಕೃತ. ಕಲಾವಿದನಿಗೆ ಸಂಗೀತಕ್ಕೆ ಹೇಳಿ ಮಾಡಿಸಿದ ವಾತಾವರಣ ಅದಕ್ಕೆ ತಕ್ಕಂತೆ ರಸಿಕ ಸಮುದಾಯದ ಪ್ರತಿಕ್ರಿಯೆ.  ಅಮೋಣRರ್‌ ಅವರು ಸಂಗೀತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದವರು. ಅದದೇ ಪುನರಾವರ್ತನೆಯ ತಂತ್ರದ ಪಾಠದಾಚೆಗೂ ನಾವು ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಹೇಳಿದವರು ಆಕೆ. 
ಹೀಗೆ ಕೇಳುತ್ತಾ ಕಲಿಯುತ್ತ ತನ್ನದೇ ಆದ ಶಿಷ್ಟ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂಬುದು ಈ ಕಲಾವಿದೆಯ ಸ್ಪಷ್ಟ ನಿಲುವು. ಈ ವಿಷಯ ಪ್ರಸ್ತಾಪವಾದಾಗ ಅಮೋಣRರ್‌ ಅವರು ತಮ್ಮ ತಾಯಿಯ ಪಾಠಕ್ರಮವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.     ರವೀಂದ್ರ ಅಮೋಣRರ್‌ ಎಂಬ ಒಬ್ಬ ಶಾಲಾ ಅಧ್ಯಾಪಕರನ್ನು ಕೈಡಿದ ಕಿಶೋರಿ ಅವರಿಗೆ ಇಬ್ಬರು ಗಂಡು ಮಕ್ಕಳು. 1992 ರಲ್ಲಿ ಪತಿಯನ್ನು ಕಳೆದುಕೊಂಡ ಕಿಶೋರಿ ಅವರು ದಿಢೀರ್‌ ಜೊತೆಯಾದ ಸಂಕಟ ಹಾಗೂ ಒಂಟಿತನದಿಂದ ಸ್ವಲ್ಪವೂ ಧೃತಿಗೆಡದೆ ಸಂಗೀತ ಪ್ರಯಾಣವನ್ನು ಮುಂದುವರಿಸಿ ಸಾಧನೆಯ ಉತ್ತುಂಗ ಶಿಖರವೇರಿದರು.

 ಎಂ.ಆರ್‌.ಸತ್ಯನಾರಾಯಣ

ಟಾಪ್ ನ್ಯೂಸ್

1-fsdf

ಎಸ್ಸೆಸ್ಸೆಲ್ಸಿ ವೇಳಾ ಪಟ್ಟಿ ಪ್ರಕಟ : ಮಾರ್ಚ್ 28 ರಿಂದ ಪರೀಕ್ಷೆ ಆರಂಭ

chikkamagalore news

ಕಾಫಿ ನಾಡಿನ ಕ್ರಿಕೆಟ್‌ ಪ್ರತಿಭೆಗೆ ಅಮೆರಿಕ ತಂಡದಲ್ಲಿ ಮನ್ನಣೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

covid-1

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

araga

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ: ಶೀಘ್ರ ಕ್ರಮವೆಂದ ಗೃಹ ಸಚಿವರು

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

1-erewrwr

ಬಾದಾಮಿಯಲ್ಲಿ ಅಭಿಮಾನಿ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

udayavani youtube

ಕೈ ಕಾಲಿಗೆ ಸರಪಳಿ ಬಿಗಿದು ಕಡಲಲ್ಲಿ ಈಜಿ ದಾಖಲೆ ಬರೆದ ಗಂಗಾಧರ್ ಕಡೆಕಾರ್

udayavani youtube

ಹುಟ್ಟಿದ ನಂತ್ರ ಹೋರಾಟ ಮನೋಭಾವ ಬೇಕು

ಹೊಸ ಸೇರ್ಪಡೆ

1-fsdf

ಎಸ್ಸೆಸ್ಸೆಲ್ಸಿ ವೇಳಾ ಪಟ್ಟಿ ಪ್ರಕಟ : ಮಾರ್ಚ್ 28 ರಿಂದ ಪರೀಕ್ಷೆ ಆರಂಭ

ಹೆಣ್ಣು ಸಮಾಜದ ಕಣ್ಣು :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಡಾ.ಸವಿತಾ ಕಾಮತ್ ಹೇಳಿಕೆ

ಹೆಣ್ಣು ಸಮಾಜದ ಕಣ್ಣು :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಡಾ.ಸವಿತಾ ಕಾಮತ್ ಹೇಳಿಕೆ

ರಬಕವಿ-ಬನಹಟ್ಟಿ ನಗರಸಭೆಯ 5.60 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ರಬಕವಿ-ಬನಹಟ್ಟಿ ನಗರಸಭೆಯ 5.60 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿಯನ್ನು ದುರುಪಯೋಗ ಮಾಡದಿರಿ : ಫವಾಜ್ ಪಿ.ಎ

ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿಯನ್ನು ದುರುಪಯೋಗ ಮಾಡದಿರಿ : ಫವಾಜ್ ಪಿ.ಎ

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ: ಕಿರಣಕುಮಾರ ವಡಗೇರಿ

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ: ಕಿರಣಕುಮಾರ ವಡಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.