ಬೋಲ್ಡ್‌ ರಚಿತಾ, ಡ್ಯಾನ್ಸರ್‌ ಉಪ್ಪಿ

Team Udayavani, May 31, 2019, 6:00 AM IST

‘ಉಪೇಂದ್ರ ಅವರ ಡ್ಯಾನ್ಸ್‌ ನೋಡಿದ ಮೇಲೆ ಇನ್ನು ನಾನು ಕೂಡಾ ಸ್ವಲ್ಪ ಡ್ಯಾನ್ಸ್‌ ಕಡೆ ಗಮನಕೊಡ­ಬೇಕೆನಿ­ಸುತ್ತಿದೆ …’

– ಹೀಗೆ ಹೇಳಿ ಉಪೇಂದ್ರ ಮುಖ ನೋಡಿ ನಕ್ಕರು ನಟ ಕಿಚ್ಚ ಸುದೀಪ್‌. ಮಾತು ಮುಂದುವರೆಯಿತು. ‘ಉಪೇಂದ್ರ ನನ್ನಂತೆ ಒಳ್ಳೆಯ ಡ್ಯಾನ್ಸರ್‌. ಆದರೆ, ‘ಐ ಲವ್‌ ಯು’ ಹಾಡಿನಲ್ಲಿ ಅವರು ಕುಣಿದ ರೀತಿ ನನಗೆ ಕಾಂಪಿಟೇಶನ್‌ ಕೊಡುವಂತಿದೆ’ ಎನ್ನುತ್ತಾ ನಕ್ಕರು ಸುದೀಪ್‌. ಈ ಮಾತಿಗೆ ಕಾರಣವಾಗಿದ್ದು, ‘ಐ ಲವ್‌ ಯು’ ಚಿತ್ರದ ಟ್ರೇಲರ್‌ ಬಿಡುಗಡೆ. ಉಪೇಂದ್ರ ನಾಯಕರಾಗಿರುವ ಆರ್‌.ಚಂದ್ರು ನಿರ್ದೇಶನದ ‘ಐ ಲವ್‌ ಯು’ ಚಿತ್ರದ ಟ್ರೇಲರ್‌ ಬಿಡುಗಡೆಗೆ ಕಿಚ್ಚ ಸುದೀಪ್‌ ಅತಿಥಿಯಾಗಿ ಬಂದಿದ್ದರು. ಟ್ರೇಲರ್‌ ನೋಡಿ ಖುಷಿಯಾದ ಸುದೀಪ್‌, ಆರ್‌.ಚಂದ್ರು ಅವರ ಮೇಕಿಂಗ್‌, ಟ್ರೇಲರ್‌ನಲ್ಲಿ ಅಡಕವಾಗಿರುವ ಕಥಾಹಂದರ, ಉಪೇಂದ್ರ ಡ್ಯಾನ್ಸ್‌ ಬಗ್ಗೆ ಮಾತನಾಡಿ ಚಿತ್ರಕ್ಕೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಸುದೀಪ್‌, ಉಪೇಂದ್ರ ಅವರಲ್ಲಿ ಒಂದು ಮನವಿ ಕೂಡಾ ಇಟ್ಟರು. ಅದು ನಿರ್ದೇಶನ. ಉಪೇಂದ್ರ ಒಳ್ಳೆಯ ನಿರ್ದೇಶಕ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರು ಮಾಡಿರುವ ಒಂದೊಂದು ಸಿನಿಮಾಗಳು ಭಿನ್ನ ಕಾನ್ಸೆಪ್ಟ್ ಮೂಲಕ ಸುದ್ದಿ ಮಾಡಿದೆ. ಆದರೆ, ಉಪೇಂದ್ರ ನಿರ್ದೇಶನಕ್ಕೆ ಆಗಾಗ ಗ್ಯಾಪ್‌ ಕೊಟ್ಟು ನಟನೆಯತ್ತ ಬಿಝಿಯಾಗುತ್ತಿರುತ್ತಾರೆ. ಈ ಬಾರಿಯೂ ಅದೇ ಆಗಿದೆ. ‘ಉಪ್ಪಿ-2’ ಸಿನಿಮಾ ನಂತರ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ನಿರ್ದೇಶನ ಯಾವಾಗ ಎಂಬ ಪ್ರಶ್ನೆ ಎದುರಾದಾಗೆಲ್ಲ, ‘ಮಾಡ್ತೀನಿ, ಮಾಡ್ತೀನಿ’ ಎಂಬ ಉತ್ತರ ಉಪೇಂದ್ರ ಅವರಿಂದ ಬರುತ್ತದೆ. ಈ ಮಾತು ಸುದೀಪ್‌ ಅವರ ಕಿವಿಗೂ ಬಿದ್ದಿದೆ. ಅದೇ ಕಾರಣದಿಂದ ಸುದೀಪ್‌, ಉಪೇಂದ್ರ ಅವರಲ್ಲಿ ಮತ್ತೆ ನಿರ್ದೇ­ಶನಕ್ಕೆ ಮರಳುವಂತೆ ಮನವಿ ಮಾಡಿ ದರು. ‘ಕೆಲವರು ರಾಜಕೀಯಕ್ಕೆ ಬರ್ತೀನಿ, ಬರ್ತೀನಿ ಅಂದಂತೆ, ನೀವು ನಿರ್ದೇಶನ ಮಾಡ್ತೀನಿ, ಮಾಡ್ತೀನಿ ಅಂತಿದ್ದೀರಿ, ಬೇಗ ನಿರ್ದೇಶನ ಮಾಡಿ. ಚಿತ್ರರಂಗದ ಕೆಲವು ನಿರ್ದೇಶಕರು ಯಾವತ್ತೂ ಮಲಗಬಾರದು. ಆ ತರಹದ ನಿರ್ದೇಶಕರಲ್ಲಿ ನೀವು ಒಬ್ಬರು.

ಇವತ್ತಿನ ಅನೇಕ ನಿರ್ದೇಶಕರಿಗೆ ನೀವು ಸ್ಫೂರ್ತಿ. ಹಾಗಾಗಿ, ನೀವು ಮತ್ತೆ ನಿರ್ದೇಶನ ಮಾಡಿ, ನೀವೇ ನಟಿಸಬೇಕು’ ಎಂದರು ಸುದೀಪ್‌. ಸುದೀಪ್‌ ಮಾತಿಗೆ ತಲೆದೂಗಿದ ಉಪೇಂದ್ರ ಕೂಡಾ ಕಿಚ್ಚನ ಸಿನಿಮಾ ಪ್ರೀತಿ, ಅವತ್ತಿನ ಜೋಶ್‌ ಅನ್ನು ಇವತ್ತಿಗೂ ಉಳಿಸಿಕೊಂಡು, ಹೆಚ್ಚಿಸುತ್ತಾ ಹೋದ ಬಗ್ಗೆ ಮಾತನಾಡಿದರು.

ಅಂದಹಾಗೆ, ‘ಐ ಲವ್‌ ಯು’ ಟ್ರೇಲರ್‌ ನೋಡಿದವರಿಗೆ ‘ಏನ್‌ ರಚಿತಾ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಲ್ಲ’ ಎಂಬ ಪ್ರಶ್ನೆ ಬಾರದೇ ಇರದು. ಆ ಮಟ್ಟಿಗೆ ರಚಿತಾ ಸಖತ್‌ ಬೋಲ್ಡ್ ಆಗಿ ನಟಿಸಿದ್ದಾರೆ. ಇದಕ್ಕೆ ಕಾರಣ ಕಥೆಯಂತೆ. ನಿರ್ದೇಶಕ ಆರ್‌.ಚಂದ್ರು ಅವರು ಹೇಳಿದ ಕಥೆ ಕೇಳಿ ಫಿದಾ ಆದ ರಚಿತಾ, ಚಿತ್ರದ ಬೋಲ್ಡ್ ಹಾಡೊಂದರಲ್ಲಿ ನಟಿಸಲು ಒಪ್ಪಿಕೊಂಡರಂತೆ. ‘ಕೆಲವೊಮ್ಮೆ ನಾವು ಕಲಾವಿದರಾಗಿ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ಚಂದ್ರು ಅವರು ಹೇಳಿದ ಕಥೆ ಅಷ್ಟೊಂದು ಚೆನ್ನಾಗಿತ್ತು. ನಾನು ಎಷ್ಟು ಎಕ್ಸೈಟ್ ಆಗಿದ್ದೆ ಎಂದರೆ, ಉಪೇಂದ್ರ ಅವರಿಗೆ ಫೋನ್‌ ಮಾಡಿ, ‘ಆ ಸೀನ್‌ ಕೇಳಿದ್ರಾ, ಈ ಸೀನ್‌ ಕೇಳಿದ್ರಾ’ ಎಂದು ಕೇಳುತ್ತಿದ್ದೆ. ಉಪೇಂದ್ರ ಅವರು ಕೂಡಾ ಅಷ್ಟೇ ಎಕ್ಸೈಟ್ ಆಗಿದ್ದರು. ನಾನಂತೂ ಈ ಸಿನಿಮಾ ಮೇಲೆ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ’ ಎಂದರು ರಚಿತಾ. ಚಿತ್ರದಲ್ಲಿ ರಚಿತಾ ಧಾರ್ಮಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ. ನಾಯಕ ಉಪೇಂದ್ರ ಅವರು ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ‘ಇದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಂದ್ರು ನಿರ್ದೇಶಕರಿಗೆ ತುಂಬಾ ಬೆಳೆದಿದ್ದಾರೆಂಬುದು ಈ ಸಿನಿಮಾ ಮೂಲಕ ಗೊತ್ತಾಯಿತು. ಅದ್ಧೂರಿಯಾಗಿ ಮೂಡಿಬಂದಿದೆ’ ಎಂದರು.

ನಿರ್ಮಾಪಕ ಕಂ ನಿರ್ದೇಶಕ ಆರ್‌.ಚಂದ್ರು ಅವರಿಗೆ ಇದು ಹೊಸ ಶೈಲಿಯ ಸಿನಿಮಾ. ತಮ್ಮ ಟಿಪಿಕಲ್ ಶೈಲಿಯನ್ನು ಬಿಟ್ಟು ಔಟ್ ಅಂಡ್‌ ಔಟ್ ಕಮರ್ಷಿಯಲ್ ಸಿನಿಮಾ ಮಾಡಿರುವ ಚಂದ್ರು, ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ತುಂಬಾ ಇಷ್ಟವಾಗುತ್ತದೆ ಎನ್ನಲು ಮರೆಯಲಿಲ್ಲ. ಚಿತ್ರ ಜೂನ್‌ 14 ರಂದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 1000 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಜೂನ್‌ 8 ರಂದು ವಿಶಾಖಪಟ್ಟಣಂ ನಲ್ಲಿ ‘ಐ ಲವ್‌ ಯು’ ಚಿತ್ರದ ತೆಲುಗು ಅವತರಣಿಕೆಯ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನಡೆಯಲಿದೆ.

ರವಿಪ್ರಕಾಶ್‌ ರೈ


ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ

  • ಕುಂದಗೋಳ: ವೇತನ ಪಾವತಿ ವಿಳಂಬ ಖಂಡಿಸಿ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ಗುತ್ತಿಗೆದಾರರು ಗುರುವಾರ ತಮ್ಮ ಸೇವೆ ಸ್ಥಗಿತಗೊಳಿಸಿ...

  • ಮಂಗಳೂರು: ನಗರದ ಹೊರವಲಯದಲ್ಲಿರುವ  ತೊಕ್ಕೊಟ್ಟಿನ ಕಾಪಿಕಾಡ್ ಬಳಿ  ರೈಲು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ...

  • ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಧರ್ಮಸಮನ್ವಯ ಖ್ಯಾತಿಗೆ ಪಾತ್ರವಾದ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನ ಸಕಲ ಕಲೆ-ಕಲಾವಿದರನ್ನು...

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

  • ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಡಿ.16 ರಂದು ದಾವಣಗೆರೆಗೆ ಆಗಮಿಸುವರು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. ನಳೀನ್‌...