Udayavni Special

ಡೆಮೋ ಪೀಸ್ ನಿಂದ ಮಾಸ್ಟರ್ ಪೀಸ್ ವರೆಗೆ

Team Udayavani, Feb 14, 2020, 5:30 AM IST

demo

“ನಾನಿಲ್ಲಿಗೆ ನಿರ್ದೇಶಕಿ ಆಗಬೇಕು ಅಂತ ಬಂದೆ. ಆದರೆ, ನಿರ್ಮಾಪಕಿಯಾದೆ…’
– ಇದು “ಸ್ಪರ್ಶ’ ರೇಖಾ ಮಾತು. ಹೌದು, ರೇಖಾ “ಡೆಮೊ ಪೀಸ್‌’ ಮೂಲಕ ನಿರ್ದೇಶಕಿ ಆಗಿರೋದು ಗೊತ್ತೇ ಇದೆ. ಆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಹೇಳಲೆಂದೇ ತಮ್ಮ ತಂಡದ ಜೊತೆ ಆಗಮಿಸಿದ್ದರು ರೇಖಾ. ಮೊದಲು ಮಾತು ಶುರು ಮಾಡಿದ ಅವರು ಹೇಳಿದ್ದಿಷ್ಟು.

“ನನ್ನ ಮೊದಲ ನಿರ್ಮಾಣದ ಚಿತ್ರವಿದು. ಕೆಲವರನ್ನು ಹೊರತುಪಡಿಸಿದರೆ, ಇಲ್ಲಿರೋದು ಹೊಸಬರು. ನಿರ್ಮಾಣಕ್ಕೆ ಬಂದಿದ್ದು ಆಕಸ್ಮಿಕ. ನಾನು ಕಥೆ ಕೇಳಿದಾಗ ಈ ಸಿನಿಮಾ ಮಾಡಬೇಕು ಎನಿಸಿತು. ಅಂದುಕೊಂಡಿದ್ದಕ್ಕಿಂತ ಬಜೆಟ್‌ ಹೆಚ್ಚಾಯ್ತು. ಹಾಗಾಗಿ ನಿರ್ದೇಶಕರೂ ನಿರ್ಮಾಣಕ್ಕೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ಗೆಲ್ಲುವ ನಂಬಿಕೆ ಇದೆ. ಈಗಾಗಲೇ ಸ್ಯಾಟ್‌ಲೆçಟ್‌ ಹಕ್ಕು ಮಾರಾಟವಾಗಿದೆ. ಎಲ್ಲರೂ ಕಷ್ಟಪಟ್ಟು, ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಡಲ್ಲ ಎಂಬ ವಿಶ್ವಾಸವಿದೆ’ ಎಂಬುದು ರೇಖಾ ಮಾತು.

ನಿರ್ದೇಶಕ ವಿವೇಕ್‌ ಅವರಿಗೆ ಇದು ಮೊದಲ ಚಿತ್ರ. ಸಿನಿಮಾ ಕುರಿತು ಹೇಳಿಕೊಂಡ ವಿವೇಕ್‌, “ಇಲ್ಲಿ ಡೆಮೊ ಪೀಸ್‌ ಯಾಕೆ ಅಂದರೆ, ಏನೇ ಪ್ರಯೋಗ ಮಾಡುವ ಮುನ್ನ ಡೆಮೊ ಪೀಸ್‌ ಮೇಲೆಯೇ ಪ್ರಯೋಗ ಆಗುತ್ತೆ. ಅದು ಸಕ್ಸಸ್‌ ಆದರೆ ಮಾತ್ರ ಮಾಸ್ಟರ್‌ ಪೀಸ್‌. ಇಲ್ಲೊಂದು ಕಥೆ ಅದೇ ರೀತಿ ಸಾಗುತ್ತೆ. ಕಥೆಗೆ ಅನುಗುಣವಾಗಿ ಶೀರ್ಷಿಕೆ ಇದೆ. ಚಿತ್ರದಲ್ಲಿ ನಾಯಕ ಕಾಲೇಜ್‌ ಹುಡುಗ.

ಅವನಿಗೆ ದುಡ್ಡು ಮಾಡಬೇಕು, ದುಡ್ಡು ಇದ್ದರೆ ಎಲ್ಲವೂ ಸಿಗುತ್ತೆ ಅಂದುಕೊಂಡು ಮೋಜು-ಮಸ್ತಿಗೆ ಇಳಿಯುತ್ತಾನೆ. ಇಲ್ಲಿ ಅಪ್ಪ, ಅಮ್ಮನ ಸಂಬಂಧಗಳೂ ಇದೆ. ಪ್ರತಿ ಸ್ಟೂಡೆಂಟ್ಸ್‌ ಈ ಚಿತ್ರ ನೋಡಿದರೆ, ಅವರವರ ಅಪ್ಪ, ಅಮ್ಮ ಖಂಡಿತ ನೆನಪಾಗುತ್ತಾರೆ’ ಎಂದರು ವಿವೇಕ್‌.

ನಾಯಕ ಭರತ್‌ ಬೋಪಣ್ಣ ಅವರಿಗೆ ಇದು ಮೊದಲ ಸಿನಿಮಾ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಭರತ್‌ ಬೋಪಣ್ಣ, “ಚಿತ್ರದಲ್ಲಿ ಹರ್ಷ ಎಂಬ ಪಾತ್ರ ಮಾಡಿದ್ದಾರಂತೆ. ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರ ಮಾಡಲಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಇದೊಂದು ಪಕ್ಕಾ ಮನ­ರಂಜನೆಯ ಚಿತ್ರ’ ಎಂಬುದು ಭರತ್‌ ಹೇಳಿಕೆ.

ನಾಯಕಿ ಸೋನಾಲ್‌ ಮೊಂತೆರೋ ಅವರಿಗೆ ರೇಖಾ ಅವರು ಮಾಡಿದ ಒನ್‌ ಕಾಲ್‌ ಅಷ್ಟೇ ಸಾಕಾ­ಯ್ತಂತೆ. ಕಥೆ, ಪಾತ್ರ ಏನನ್ನೂ ಕೇಳದೆ, ಸಿನಿಮಾ ಮಾಡುವುದಾಗಿ ಒಪ್ಪಿದರಂತೆ. ಅವರಿಲ್ಲಿ ತುಂಬಾ ಜೋರು ಹುಡುಗಿಯ ಪಾತ್ರ ಮಾಡಿ­ದ್ದಾರಂತೆ.

ಇನ್ನು, ಚಕ್ರವರ್ತಿ ಚಂದ್ರ­ಚೂಡ್‌ ಕೂಡ ಇಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರಂತೆ. “ಇದು ಯಾವುದೇ ಬಿಲ್ಡಪ್‌ ಇರದ ಚಿತ್ರ. ಮುಗ್ಧರೆಲ್ಲರೂ ಸೇರಿ ಪ್ರೀತಿಯಿಂದ ಮಾಡಿರುವ “ಡೆಮೊ ಪೀಸ್‌’ ಇದು. ರೇಖಾ ಮೇಡಮ್‌ ನಟಿಯಾಗಿ ಹಣ ಹಾಕಿ ಸಿನಿಮಾ ಮಾಡಿದ್ದು ಹೆಮ್ಮೆ. ನಾನಿಲ್ಲಿ ಯುವಕ­ರನ್ನು ಹಾದಿ ತಪ್ಪಿಸುವ ಪಾತ್ರ ಮಾಡಿದರೆ, ನಾಯಕ ಭರತ್‌, ನನ್ನ ಹಾದಿಯನ್ನೇ ತಪ್ಪಿಸುವ ಪಾತ್ರ ಮಾಡಿದ್ದಾನೆ. ಒಳ್ಳೆಯ ತಂಡ, ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು ಚಕ್ರವರ್ತಿ ಚಂದ್ರಚೂಡ್‌.

ಅರ್ಜುನ್‌ ರಾಮ್‌ ಸಂಗೀತವಿದ್ದು, ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ರಾಜೇಶ್‌ ಕೃಷ್ಣ, ಸಂಚಿತ್‌ ಹೆಗ್ಡೆ , ಚಂದನ್‌ಶೆಟ್ಟಿ ಹಾಡಿದ್ದು ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂಬುದು ಅವರ ಮಾತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

suchitra-tdy-9

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

suchitra-tdy-07

ಡೈರೆಕ್ಟರ್ ಸ್ಪೆಷಲ್‌! : ನಿರ್ದೇಶಕರ ಹೊಸ ಯೋಚನೆಗಳೇನು ಗೊತ್ತಾ?

suchitra-tdy-6

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ