ಸ್ಮಶಾನದೊಳಗೊಂದು ಲವ್‌ ಸ್ಟೋರಿ: ನ್ಯೂ ವರ್ಶನ್‌ನಲ್ಲಿ ಗುರು


Team Udayavani, Apr 28, 2017, 10:23 AM IST

28-SUCHI-6.jpg

ಸಿನಿಮಾದಿಂದ ಸಿನಿಮಾಕ್ಕೆ ನಾನು ಬದಲಾಗುತ್ತಾ ಹೋಗುತ್ತಿದ್ದೇನೆ …’ – ಹೀಗೆಂದರು ಗುರುಪ್ರಸಾದ್‌. ಅದಕ್ಕೆ ಸಾಕ್ಷಿ ಎಂಬಂತೆ
ಸುತ್ತಲಿನ ವಾತಾವರಣ ಹಾಗೂ ವ್ಯವಸ್ಥೆ ಇತ್ತು. ಸಾಮಾನ್ಯ ವಾಗಿ ಗುರುಪ್ರಸಾದ್‌ ಸಿನಿಮಾಗಳ ಮುಹೂರ್ತ ಸಿಂಪಲ್ಲಾಗಿ ಆಗುತ್ತಿತ್ತು. ಆದರೆ, ಈ ಬಾರಿ ಅವರ ಹೊಸ ಚಿತ್ರ “ಅದೇಮಾ’ ಮುಹೂರ್ತವನ್ನು ಅದ್ಧೂರಿಯಾಗಿ ಮಾಡಿ ದ್ದರು. ಕಂಠೀರವ ಸ್ಟುಡಿಯೋದ ಹೊಸ ಫ್ಲೋರ್‌ ಅನ್ನು ಮದುವೆ ಛತ್ರದಂತೆ ಸಿಂಗರಿಸಿದ್ದರು. ಹೊಸದಾಗಿ ಬಂದವರಿಗೆ ಯಾವುದೋ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ರಿಸೆಪ್ಷನ್‌ಗೆ ಬಂದಂತೆ ಭಾಸವಾಗು ವಂತಿತ್ತು. ಅಲ್ಲಿಗೆ ಗುರು ಅವರ “ಬದಲಾದ’ ಮಾತಿನಲ್ಲಿ ಸತ್ಯ ಕಾಣುತ್ತಿತ್ತು. ಗುರುಪ್ರಸಾದ್‌ “ಅದೇಮಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲಿ ಬಾರದಿರುವಂತಹ ಒಂದು ವಿಭಿನ್ನ ಕಥೆಯನ್ನು ಹೇಳಲಿದ್ದಾರಂತೆ.

ಅವರ ಈ ವಿಭಿನ್ನ ಕಥೆಗೆ ಅನೂಪ್‌ ಸಾ.ರಾ.ಗೋವಿಂದು ನಾಯಕ. “ಕಥೆ ತುಂಬಾ ಭಿನ್ನವಾಗಿದೆ. ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲೇ ಇಂತಹ ಸಿನಿಮಾ ಬಂದಿಲ್ಲ. ಈ ತರಹದ್ದೊಂದು ಕಥೆಯನ್ನು ಯಾರೂ ಟಚ್‌ ಮಾಡಿಲ್ಲ. ಆ ಪ್ರಯತ್ನವನ್ನು ನಾನೀಗ ಮಾಡುತ್ತಿದ್ದೇನೆ’ ಎಂದು ವಿಶ್ವಾಸದಿಂದ ಹೇಳಿಕೊಂಡರು ಗುರುಪ್ರಸಾದ್‌. ಒಂಭತ್ತು ವರ್ಷಗಳ ಹಿಂದೆ ಗುರುಪ್ರಸಾದ್‌ ಮಾಡಿಕೊಂಡಿರುವ ಕಥೆ ಇದಂತೆ. ಹಾಗಂತ ಕಥೆ ಒಂಭತ್ತು ವರ್ಷ ಹಳೆಯದಾಗಿಲ್ಲ. ಅದನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಮಾಡಿಕೊಂಡು ಬಂದಿದ್ದಾರಂತೆ. ಒಂಭತ್ತು ವರ್ಷಗಳ ಕಥೆ ಯಾಕೆ ಈಗ ಸಿನಿಮಾವಾಗುತ್ತಿದೆ ಎಂದರೆ, “ನಿರ್ಮಾಪಕರು ಧೈರ್ಯ
ಮಾಡಲಿಲ್ಲ’ ಎಂಬ ಉತ್ತರ ಗುರುವಿನಿಂದ ಬರುತ್ತದೆ. ಈ ಹಿಂದೆ ಈ ತರಹದ ಒಂದು ಲೈನ್‌ ಇದೆ, ಸಿನಿಮಾ ಮಾಡುವ ಎಂದು ಕೆಲವು ನಿರ್ಮಾಪಕರಿಗೆ ಹೇಳಿದಾಗ “ಇದು ವಕೌìಟ್‌ ಆಗುತ್ತಾ, ಜನ ಇದನ್ನು ಸ್ವೀಕರಿಸು ತ್ತಾರಾ’ ಎಂದು ಸಂದೇಹ ವ್ಯಕ್ತಪಡಿಸಿದರಂತೆ. ಹಾಗಾಗಿ, ಒಂಭತ್ತು ವರ್ಷ ಗುರು ತಲೆಯ ಲಾಕರ್‌ನಲ್ಲೇ ಇತ್ತು “ಅದೇಮಾ’. ಈಗ ನಿರ್ಮಾಪಕ ಶ್ರೀಧರ್‌ ರೆಡ್ಡಿ ಸಿನಿಮಾ ಮಾಡಲು
ಮುಂದೆ ಬಂದಿದ್ದಾಗಿ ಹೇಳಿಕೊಂಡರು ಗುರು. “ಅದೇಮಾ’ ಟೈಟಲ್‌ನ ಅರ್ಥವೇನು, ಆ ಟೈಟಲ್‌ ಏನು ಸೂಚಿಸುತ್ತದೆ ಎಂಬುದನ್ನು ಈಗಲೇ ಬಿಟ್ಟುಕೊಡಲು ಗುರುಪ್ರಸಾದ್‌ ರೆಡಿಯಿಲ್ಲ. ಮುಂದಿನ ದಿನಗಳಲ್ಲಿ “ಅದೇಮಾ’ ಅಂದ ರೇನು, ಅದರ ಹಿಂದಿನ ಅರ್ಥವೇನು ಎಂಬುದನ್ನು ಹೇಳುತ್ತಾರಂತೆ.

ಚಿತ್ರದ ಬಹುತೇಕ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುತ್ತದೆಯಂತೆ. ಹಾಗಾಗಿ, ಸ್ಮಶಾನಗಳಿಗಾಗಿ ಗುರುಪ್ರಸಾದ್‌ ಹುಡುಕಾಟ ನಡೆಸುತ್ತಿದ್ದಾರೆ. ಮೊದಲೇ ಹೇಳಿದಂತೆ ಗುರುಪ್ರಸಾದ್‌ ಈ ಸಿನಿಮಾ ಮೂಲಕ ಸಾಕಷ್ಟು ಬದಲಾಗುತ್ತಿದ್ದಾರೆ. “ನಾನು ಸಿನಿಮಾದಿಂದ ಸಿನಿಮಾಕ್ಕೆ ಬದಲಾಗುತ್ತಾ ಹೋಗುತ್ತೇನೆ. ಈ ಹಿಂದೆ ಒಂದು ಮನೆ ಅಥವಾ ಇನ್ಯಾವುದೋ ಒಂದು ಲೊಕೇಶನ್‌ನಲ್ಲಿ ಸಿನಿಮಾ
ಮುಗಿಸುತ್ತಿದ್ದ ನಾನು ಈ ಸಿನಿಮಾವನ್ನು ಸಂಪೂರ್ಣ ಔಟ್‌ಡೋರ್‌ನಲ್ಲಿ ಮಾಡುತ್ತಿ ದ್ದೇನೆ. ಈ ಹಿಂದೆ ನೋಡಿರದಂತಹ ಕರ್ನಾಟಕದ
ಲೊಕೇಶನ್‌ ಗಳಲ್ಲಿ ಚಿತ್ರೀಕರಣ ಮಾಡುತ್ತೇನೆ. ಜೊತೆಗೆ ತಾರಾಬಳಗವೂ ದೊಡ್ಡದಿರುತ್ತದೆ. ಈ ಹಿಂದೆ ಲಕ್ಷದಲ್ಲಿ ಸಿನಿಮಾ ಮುಗಿಸುತ್ತಿದ್ದ ನಾನು ಈಗ ಕೋಟಿಯಲ್ಲಿ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವ ಗುರು, ಕ್ಲೋಸಪ್‌ ಶಾಟ್‌ನಿಂದ ವೈಡ್‌ಗೆ
ಬಂದಿರುವುದಾಗಿ ಹೇಳಲು ಮರೆಯಲಿಲ್ಲ. ನಾಯಕಿ ಗಾಗಿ ಹುಡುಕಾಟ ನಡೆಸುತ್ತಿದ್ದು, ಆಡಿ ಷನ್‌ ಮೂಲಕ ಆಯ್ಕೆ ಮಾಡಲಾಗುತ್ತದೆಯಂತೆ.  ಇನ್ನು, ನಾಯಕ ಅನೂಪ್‌ ಅವರನ್ನು ಗುರು “ಡವ್‌’ ಸಿನಿಮಾ ಸಮಯದಿಂದಲೇ ಗಮನಿಸು
ತ್ತಿದ್ದರಂತೆ. ಆ ಚಿತ್ರದ ನಿರ್ದೇಶಕ ಸಂತುವಿನಲ್ಲೂ ಅನೂಪ್‌ ಬಗ್ಗೆ ವಿಚಾರಿಸಿದ್ದರಂತೆ ಗುರು. ಎಲ್ಲಾ ಕಡೆಯಿಂದ ಪಾಸಿಟಿವ್‌ ರಿಪೋರ್ಟ್‌. ಹಾಗಾಗಿ, “ಅದೇಮಾ’ಕ್ಕೆ ಅನೂಪ್‌ ಆಯ್ಕೆಯಾಗಿದ್ದಾಗಿ ಹೇಳುವ ಗುರು, ಈ ಸಿನಿಮಾ ಮೂಲಕ ಅನೂಪ್‌
ಅವರನ್ನು ಇನ್ನೊಂದು ರೇಂಜ್‌ಗೆ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಾರೆ. ಗುರುಪ್ರಸಾದ್‌ ನಿರ್ದೇಶನದಲ್ಲಿ ನಟಿಸುತ್ತಿರುವ ಅನೂಪ್‌ಗೆ ಒಳ್ಳೆಯ ಗರಡಿ ಸೇರಿದ ಖುಷಿ. ಯಾವುದೇ ಸಿನಿಮಾಕ್ಕೂ ಹೋಲಿಸಲಾಗದ ಲವ್‌ಸ್ಟೋರಿಯನ್ನು ಗುರು ಮಾಡಿಕೊಂಡಿರುವು ದಾಗಿ ಖುಷಿಯಿಂದ ಹೇಳಿದರು ಅನೂಪ್‌.

ನಿರ್ಮಾಪಕ ಶ್ರೀಧರ್‌ ರೆಡ್ಡಿ ಚೆನ್ನಾಗಿ ಸಿನಿಮಾ ಮಾಡಿ ಗೆಲ್ಲಿಸಿಕೊಟ್ಟರೆ ಮುಂದೆ ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ಚಿತ್ರರಂಗ ಬಿಟ್ಟು ಓಡುತ್ತೇನೆ ಎಂಬ ಎಚ್ಚರಿಕೆಯನ್ನು ಗುರುಗೆ ಮೊದಲೇ ಕೊಟ್ಟಿದ್ದಾರಂತೆ. ಮಗ ನಾಯಕನಾ ಗಿರುವ ಚಿತ್ರಕ್ಕೆ ಶುಭ ಕೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡಾ ಬಂದಿದ್ದರು. ಯಾವತ್ತಿಗೂ ನಿರ್ಮಾಪಕರ ಪರ
ವಾಗಿ ನಿಲ್ಲುವಂತೆ ತಮ್ಮ ಮಗನಿಗೆ ಕಿವಿಮಾತು ಹೇಳಿದರು. ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತವಿದೆ. 

ಟಾಪ್ ನ್ಯೂಸ್

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ದತಯಯಜಯಹಗ

ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕಕ್ಕೆ ಒತ್ತಾಯ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಚ್ಗೆಹಮನಬವಚ

ಮಳೆನೀರಿನ ಸದ್ಬ ಳಕೆಯಿಂದ ಜಲಕ್ಷಾಮ ದೂರ: ರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.