Udayavni Special

ಹೊಸ ಮಾರ್ಗದಲ್ಲಿ ಚೇತನ್‌

ಆ ದಿನಗಳಿಂದ ಈ ದಿನಗಳಿಗೆ...

Team Udayavani, Aug 28, 2020, 3:28 PM IST

ಹೊಸ ಮಾರ್ಗದಲ್ಲಿ ಚೇತನ್‌

ಆ ದಿನಗಳು’ ಖ್ಯಾತಿಯ ನಟ ಚೇತನ್‌ ಅಭಿನಯದ ಹೊಸಚಿತ್ರ “ಮಾರ್ಗ’ದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಕ್ಲಾಪ್‌ ಮಾಡಿ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇದೀಗ “ಮಾರ್ಗ’ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್‌ ಎರಡನೇ ವಾರದಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಕ್ರೈಂ – ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಮಾರ್ಗ’ ಚಿತ್ರಕ್ಕೆ ನವ ನಿರ್ದೇಶಕ ಮೋಹನ್‌ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ಮೋಹನ್‌ “ಮಾರ್ಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಮುಹೂರ್ತದ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಮೋಹನ್‌, “ಸುಮಾರು 3-4 ತಿಂಗಳ ಹಿಂದೆ ಲಾಕ್‌ಡೌನ್‌ ವೇಳೆಯಲ್ಲಿ ಹುಟ್ಟಿದ ಕಥೆ ಇದು. ಚೇತನ್‌ ಕಥೆ ಕೇಳಿದ ಕೂಡಲೇ ಖುಷಿಯಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ಕ್ರೈಂ-ಥ್ರಿಲ್ಲರ್‌ ಸಬೆjಕ್ಟ್ ಸಿನಿಮಾ. ಅದರ ಜೊತೆ ಸೆಂಟಿಮೆಂಟ್‌, ಲವ್‌, ಆ್ಯಕ್ಷನ್‌ ಕೂಡ ಇರಲಿದೆ. ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಈ ಸಿನಿಮಾದಲ್ಲಿರುತ್ತದೆ. ಮೇಕಿಂಗ್‌, ಗ್ರಾμಕ್ಸ್‌, ಸೌಂಡ್ಸ್‌ ಹೀಗೆ ಟೆಕ್ನಿಕಲ್‌ ವರ್ಕ್‌ಗೆ ಇದರಲ್ಲಿ ತುಂಬಾ ಪ್ರಾಮುಖ್ಯತೆಯಿದೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ಲಾನ್‌ ಇದೆ’ ಎಂದರು.

ಇದೇ ವೇಳೆ ಮಾತನಾಡಿದ ನಾಯಕ ನಟ ಚೇತನ್‌, “ನವ ನಿರ್ದೇಶಕ ಮೋಹನ್‌ ನನಗೆ ಸುಮಾರು ಆರೇಳು ವರ್ಷಗಳಿಂದ ಪರಿಚಯ. ಅವರು ಹೇಳಿದ ಕಥೆ ಮತ್ತು ಅದರ ಪ್ರಸೆಂಟೇಷನ್‌ ಇಷ್ಟವಾಯ್ತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಆಕಾಶ್‌ ಅನ್ನೋದು ಇದರಲ್ಲಿ ನನ್ನ ಕ್ಯಾರೆಕ್ಟರ್‌ ಹೆಸರು. ಈ ಕ್ಯಾರೆಕ್ಟರ್‌ಗೆ ಬೇರೆ ಬೇರೆ ಶೇಡ್ಸ್‌ ಇದೆ. ಸಿನಿಮಾದ ಟೈಟಲ್‌ “ಮಾರ್ಗ’ ಅಂತಿದ್ದರೂ, ಇದು ರೋಡ್‌ ಕಾನ್ಸೆಪ್ಟ್ ಸಿನಿಮಾವಲ್ಲ. ಲೈಫ್ ಜರ್ನಿಯಲ್ಲಿ ಯಾರು, ಯಾವ ಮಾರ್ಗ ಹಿಡಿದರೆ ಏನೇನು ಆಗ್ತಾರೆ ಅನ್ನೋದೆ ಸಿನಿಮಾದ ಒನ್‌ಲೈನ್‌ ಸ್ಟೋರಿ’ ಎಂದು ಚಿತ್ರದ ಕಥೆಯ ಎಳೆಯನ್ನು ಬಿಟ್ಟುಕೊಟ್ಟರು.  ಇನ್ನು “ಮಾರ್ಗ’ ಚಿತ್ರದಲ್ಲಿ ಚೇತನ್‌ ಅವರಿಗೆ “ದಿಯಾ’  ಖುಷಿ ರವಿ ಮತ್ತು “ಏಕ್‌ ಲವ್‌ ಯಾ’ ಚಿತ್ರದ ಖ್ಯಾತಿಯ ರೀಷ್ಮಾ ನಾಣಯ್ಯ ನಾಯಕಿಯರಾಗಿ ಜೋಡಿಯಾಗುತ್ತಿದ್ದಾರೆ.  ಖುಷಿ ಆಶ್ರಮದಲ್ಲಿ ಬೆಳೆದ ಸಿಂಪಲ್‌ ಹುಡುಗಿಯಾಗಿ ಕಾಣಿಸಿಕೊಂಡರೆ, ರೀಷ್ಮಾ ಲವೆಬಲ್‌ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಚಿತ್ರದ ಇತರ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಎಲ್ಲವೂ ಅಂತಿಮವಾಗಲಿದೆ ಎಂದಿದೆ ಚಿತ್ರತಂಡ.

“ಮಂಗಳ ಮೂರುತಿ ಪ್ರೊಡಕ್ಷನ್ಸ್‌’ ಬ್ಯಾನರ್‌ ನಡಿಯಲ್ಲಿ ಮೈಸೂರು ಮೂಲದ ಉದ್ಯಮಿ ಗೌತಂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎಸ್‌.ಕೆ ರಾವ್‌ ಛಾಯಾಗ್ರಹಣವಿದೆ. ಚಿತ್ರದ 3 ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಇದೇ ಸೆ. 15 ರಿಂದ “ಮಾರ್ಗ’ ಚಿತ್ರದ ಮೊದಲ ಹಂತದ ಶೂಟಿಂಗ್‌ ಆರಂಭವಾಗಲಿದ್ದು, ಶೇಕಡಾ 90ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದರೆ, ಉಳಿದ ಭಾಗ ಚಿಕ್ಕಮಗಳೂರಿನಲ್ಲಿ ನಡೆಯಲಿದೆಯಂತೆ. ಸುಮಾರು 50 ದಿನಗಳ ಶೂಟಿಂಗ್‌ಗೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

– ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

TABLE TENNIS-OLY-2020-2021-TOKYO

ಟೋಕಿಯೊ: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್‌ ಕಮ್‌ಬ್ಯಾಕ್‌

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

2020 Summer Olympics

ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಶುಭಾರಂಭ

ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್‌ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫ‌ರ್‌

ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್‌ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫ‌ರ್‌

ಮುಚ್ಚಿಹೋದ ಕೆರೆಗೆ ಮರು ಜೀವ ನೀಡಿದ ಮನರೇಗಾ ಯೋಜನೆ

ಮುಚ್ಚಿಹೋದ ಕೆರೆಗೆ ಮರು ಜೀವ ನೀಡಿದ ಮನರೇಗಾ ಯೋಜನೆ

Olympics 2020: Shooting

ತಪ್ಪಿದ ಗುರಿ : ಶೂಟಿಂಗ್‌ನಲ್ಲಿ ಯಶಸ್ಸು ಕಾಣದ ಮನು, ಯಶಸ್ವಿನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಕ್ಟೇಲ್ ಅಲ್ಲ- ಇದು ಕಾಕ್ಟೇಲ್

ಮಾಕ್ಟೇಲ್ ಅಲ್ಲ- ಇದು ಕಾಕ್ಟೇಲ್

‘ಜೊತೆ ಜೊತೆಯಲಿ’ ಇದ್ದೀನಿ: ಮೇಘಾ ಶೆಟ್ಟಿ ಸ್ಪಷ್ಟನೆ

‘ಜೊತೆ ಜೊತೆಯಲಿ’ ಇದ್ದೀನಿ: ಮೇಘಾ ಶೆಟ್ಟಿ ಸ್ಪಷ್ಟನೆ

rewind

ತೇಜ್‌ ಮೊಗದಲ್ಲಿ ರಿವೈಂಡ್‌ ನಗು

upendra

ಉಪ್ಪಿ ಆ್ಯಕ್ಟೀವ್: ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ನಟನೆ

ವರ್ಕ್‌ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್‌ ನಲ್ಲಿ ಬಿಝಿ

ವರ್ಕ್‌ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್‌ ನಲ್ಲಿ ಬಿಝಿ

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

TABLE TENNIS-OLY-2020-2021-TOKYO

ಟೋಕಿಯೊ: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್‌ ಕಮ್‌ಬ್ಯಾಕ್‌

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

2020 Summer Olympics

ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಶುಭಾರಂಭ

ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್‌ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫ‌ರ್‌

ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್‌ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫ‌ರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.