ಡ್ಯಾನ್ಸ್‌ಗಾಗಿ ಸಿನಿಮಾ ಒಪ್ಪಿಕೊಂಡ ರಾಧಿಕಾ


Team Udayavani, Aug 4, 2017, 9:31 AM IST

04-SUCHI-6.jpg

ಕೆಲವು ವರ್ಷಗಳ ಹಿಂದೆ “ಕಾಂಟ್ರ್ಯಾಕ್ಟ್’ ಎಂಬ ಸಿನಿಮಾವೊಂದು ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಆದರೆ, ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಆ ಸಿನಿಮಾ ನಿಂತುಹೋಗಿತ್ತು. ಈಗ “ಕಾಂಟ್ರ್ಯಾಕ್ಟ್’ ಚಿತ್ರ ಮತ್ತೆ ಆರಂಭವಾಗಿದೆ. 

ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಅರ್ಜುನ್‌ ಸರ್ಜಾ, ಜೆಡಿ ಚಕ್ರವರ್ತಿ, ರಾಧಿಕಾ ಕುಮಾರಸ್ವಾಮಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸಮೀರ್‌ ಎನ್ನುವವರು ಈ ಚಿತ್ರದ  ನಿರ್ದೇಶಕರು.

ಅಷ್ಟಕ್ಕೂ “ಕಾಂಟ್ರ್ಯಾಕ್ಟ್’ನಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಸಮೀರ್‌ ಹೇಳುವಂತೆ ಇದೊಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ನಲ್ಲಿ ಸಾಗುವ ಈ ಸಿನಿಮಾ ತುಂಬಾ ಸ್ಟೈಲಿಶ್‌ ಆಗಿರುತ್ತದೆಯಂತೆ. ಸಸ್ಪೆನ್ಸ್‌, ಥ್ರಿಲ್ಲರ್‌ ಎಂದಮೇಲೆ ನೀವು ಕಥೆ ಏನು ಎಂದು ಕೇಳಬಾರದು. ಏಕೆಂದರೆ ನಿರ್ದೇಶಕರು ಹೇಳಲು ರೆಡಿಯಿಲ್ಲ. ಇದೊಂದು ಫ್ಯಾಮಿಲಿ ಡ್ರಾಮಾ ಎಂದಷ್ಟೇ ಹೇಳುತ್ತಾರೆ.

ಚಿತ್ರದಲ್ಲಿ ಅರ್ಜುನ್‌ ಸರ್ಜಾ, ಅಂಬಾನಿ ರೀತಿಯ ದೊಡ್ಡ ಬಿಝಿನೆಸ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದು, ಅವರ ಎಂಟ್ರಿ ಕೂಡಾ ಸಖತ್‌ ಗ್ರ್ಯಾಂಡ್‌ ಆಗಿದೆ ಎನ್ನುವುದು ಸಮೀರ್‌ ಮಾತು. ಇನ್ನು, ಒಂದು ಗ್ಯಾಪ್‌ನ ನಂತರ ರಾಧಿಕಾ ಕುಮಾರಸ್ವಾಮಿ ತಮ್ಮ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಸಮೀರ್‌ಗಿದೆ. ಈ ಸಿನಿಮಾದ ಪಾತ್ರ ಅವರಿಗೆ ಹೊಂದಿಕೊಳ್ಳುತ್ತದೆ ಎಂಬ ಕಾರಣಕ್ಕೆ ಅವರನ್ನು ಕೇಳಿಕೊಂಡರಂತೆ. ಅದರಂತೆ ರಾಧಿಕಾ ಚಿತ್ರದಲ್ಲಿ ನಟಿಸಲು ಒಪ್ಪಿದ ಖುಷಿ ಹಂಚಿಕೊಳ್ಳುತ್ತಾರೆ.

ರಾಧಿಕಾ ಅವರು ಕೇರಳದಲ್ಲಿದ್ದಾಗ ನಿರ್ದೇಶಕ ಸಮೀರ್‌ ಫೋನ್‌ ಮಾಡಿ, ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡರಂತೆ. ನಂತರ ರಾಧಿಕಾ ಕಥೆ ಕೇಳಿದಾಗ ಇದು ಕಂಬ್ಯಾಕ್‌ಗೆ ಒಳ್ಳೆಯ ಪಾತ್ರ ಎಂದುಕೊಂಡು ಒಪ್ಪಿದ್ದಾಗಿ ಹೇಳುತ್ತಾರೆ. ಮುಖ್ಯವಾಗಿ ರಾಧಿಕಾ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಡ್ಯಾನ್ಸ್‌. ಈ ಪಾತ್ರದಲ್ಲಿ ಅವರಿಗೆ ಡ್ಯಾನ್ಸ್‌ಗೂ ಹೆಚ್ಚಿನ ಅವಕಾಶವಿದೆಯಂತೆ. ಮಾಡರ್ನ್ ಹಾಗೂ ಗೃಹಿಣಿ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಜೆಡಿ ಚಕ್ರವರ್ತಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಿಮ್ಮ ಕ್ಯಾರೆಕ್ಟರ್‌ ಏನು ಎಂದರೆ ಕ್ಯಾರೆಕ್ಟರ್‌ಲೆಸ್‌ ಪಾತ್ರ ಎನ್ನುತ್ತಾರೆ. ಅಂದಹಾಗೆ, ನಿರ್ದೇಶಕ ಸಮೀರ್‌, ಜೆಡಿ ಚಕ್ರವರ್ತಿಯವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಶಿಷ್ಯನ ಸಿನಿಮಾದಲ್ಲಿ ಜೆಡಿ ನಟಿಸುತ್ತಿದ್ದಾರೆ. ಹಾಗಂತ ಶಿಷ್ಯನಿಗೆ ಯಾವುದೇ ಸಲಹೆ ಕೊಡುತ್ತಿಲ್ಲವಂತೆ. ಏಕೆಂದರೆ, ಸಮೀರ್‌ಗೆ ತಾನು ಮಾಡುತ್ತಿರುವ ಸಿನಿಮಾ ಬಗ್ಗೆ ಸ್ಪಷ್ಟ ಕಲ್ಪನೆ ಇದೆಯಂತೆ. ಚಿತ್ರದಲ್ಲಿ ಅಮೀರ್‌ ಖಾನ್‌ ಸಹೋದರ ಫೈಜಲ್‌ ಖಾನ್‌ ಕೂಡಾ ನಟಿಸುತ್ತಿದ್ದಾರಂತೆ 

ರವಿಪ್ರಕಾಶ್‌ ರೈ
 

ಟಾಪ್ ನ್ಯೂಸ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.