ಐಫೋನ್‌ ಡಿಂಗನ ಸಾಹಸ ಕಥೆಗಳು

ಹೊಸಬರ ಚಿತ್ರ ರಿಲೀಸ್‌ಗೆ ರೆಡಿ

Team Udayavani, Jan 10, 2020, 5:56 AM IST

23

“ಐಫೋನ್‌ನಲ್ಲಿ ಸಿನಿಮಾ ಮಾಡಿದ್ದೀವಿ ಅಂದಾಗ, ನಮ್ಮನ್ನು ಯಾರೂ ಸೀರಿಯಸ್‌ ಆಗಿ ನೋಡ್ಲಿಲ್ಲ. ಐಫೋನ್‌ನಲ್ಲಿ ಸಿನಿಮಾ ಮಾಡಿದ್ದಾರಂತೆ ಅಂತ ಮಾತಾಡಿಕೊಂಡವರೇ ಹೆಚ್ಚು. ಯಾವಾಗ ಮೇಕಿಂಗ್‌, ಸಾಂಗ್‌ ತೋರಿಸಿದೆವೋ, ಆಗ ಎಲ್ಲರೂ ನೋಡಿ, ಖುಷಿಪಟ್ಟರು…’

– ಹೀಗೆ ಹೇಳುತ್ತಾ ಹೋದರು ನಿರ್ದೇಶಕ ಕಮ್‌ ನಟ ಅಭಿಷೇಕ್‌ ಜೈನ್‌. ಅವರು ಹೇಳಿದ್ದು ತಮ್ಮ ನಿರ್ದೇಶನದ “ಡಿಂಗ’ ಬಗ್ಗೆ. ಹೌದು “ಡಿಂಗ’ ಚಿತ್ರ ಇದೀಗ ಮುಗಿದು, ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ “ಡಿಂಗ’ನ ಹಾಡುಗಳನ್ನು ಹೊರತರಲಾಯಿತು. ಅಂದು ಅರ್ಜುನ್‌ ಜನ್ಯಾ ಹಾಗೂ ನಾಗೇಂದ್ರ ಪ್ರಸಾದ್‌ ಹಾಡುಗಳ ಬಿಡುಗಡೆಗೆ ಚಾಲನೆ ಕೊಟ್ಟರು.

ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ ಅಭಿಷೇಕ್‌ ಜೈನ್‌, “ಬಜೆಟ್‌ ಇಲ್ಲ ಅಂತ ನಾವು ಐಫೋನ್‌ನಲ್ಲಿ ಚಿತ್ರೀಕರಿಸಿಲ್ಲ. ಇದೊಂದು ಸಾಹಸವಾಗಿತ್ತು. ಸಾಕಷ್ಟು ಸವಾಲುಗಳಿದ್ದವು. ನಿರ್ಮಾಪಕರನ್ನು ಭೇಟಿ ಮಾಡಿ ಕಥೆ ಹೇಳಿದಾಗ, ಅವರು ಐಫೋನ್‌ನಲ್ಲಿ ಮಾಡಿ ಎನ್ನಲಿಲ್ಲ. ಬಜೆಟ್‌ ಕೂಡ ಕಮ್ಮಿ ಅಂತಾನೂ ಐಫೋನ್‌ ಮೊರೆ ಹೋಗಲಿಲ್ಲ. ನನಗೆ ಏನಾದರೊಂದು ಹೊಸದು ಮಾಡಬೇಕು ಎಂಬ ತುಡಿತವಿತ್ತು. ನಮಗೆ ಫೇಮು, ನೇಮು ಇಲ್ಲ. ಕ್ರಿಯೇಟಿವ್‌ ಆಗಿ ಮಾಡಿ ಗುರುತಿಸಿಕೊಳ್ಳುವ ಆಸೆ ಇತ್ತು. ಯುಎಸ್‌ನಲ್ಲಿ ಫೋನಾಗ್ರಫಿ ಚಾಲ್ತಿಯಲ್ಲಿದೆ. ಐಫೋನ್‌ಗೆ ಲೆನ್ಸ್‌ ಅಟ್ಯಾಚ್‌ ಮಾಡಿ ಚಿತ್ರೀಕರಿಸುವ ಕ್ರಮಕ್ಕೆ ಫೋನಾಗ್ರಫಿ ಎನ್ನುತ್ತಾರೆ. ಇಂಡಿಯಾದಲ್ಲಿ ನಾವು ಮೊದಲ ಸಲ ಕನ್ನಡ ಸಿನಿಮಾ ಮಾಡಿದ್ದೇವೆ ಎಂಬುದು ಹೆಮ್ಮೆ. ಇಲ್ಲಿ ಪ್ರತಿ ಹಂತ ಕೂಡ ಚಾಲೆಂಜ್‌ ಆಗಿತ್ತು. ಮೊಬೈಲ್‌ ಫೋನ್‌ನಲ್ಲಿ ಕಡಿಮೆ ಬಜೆಟ್‌ನಲ್ಲಿ ಮಾಡಬಹುದು ಎಂಬುದೆಲ್ಲ ಸುಳ್ಳು. ಇಲ್ಲಿ ಒಂದೊಂದು ಲೆನ್ಸ್‌ಗೆ ಲಕ್ಷಗಟ್ಟಲೆ ಬೇಕು. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಚಿತ್ರೀಕರಿಸಲಾಗುತ್ತಿತ್ತು. ಮಾಮೂಲಿ ಚಿತ್ರಕ್ಕಿಂತ ಲೈಟ್ಸ್‌ ಜಾಸ್ತಿ ಬೇಕು. ಇದೊಂದು ಪ್ರಯೋಗವಷ್ಟೇ. ಐಫೋನ್‌ನಲ್ಲಿ ಮಾಡಿದ್ದೇವೆ ಅಂದಾಗ, ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಚಿತ್ರದ ಹಾಡು, ಮೇಕಿಂಗ್‌ ನೋಡಿದವರು ಕೊಂಡಾಡಿದರು. ಈ ರೀತಿಯ ಸಾಹಸಕ್ಕೆ ಹಣ ಹಾಕಲು ಮುಂದೆ ಬಂದ ನಮ್ಮ 11 ಜನ ನಿರ್ಮಾಪಕರ ಧೈರ್ಯ ಮೆಚ್ಚಬೇಕು’ ಎಂದರು ನಿರ್ದೇಶಕರು.

ನಾಯಕ ಆರವ್‌ ಗೌಡ ಅವರಿಗೆ ಇಂಥದ್ದೊಂದು ಚಿತ್ರ ಮಾಡಿರುವುದು ಖುಷಿ ಕೊಟ್ಟಿದೆಯಂತೆ. ಇದೊಂದು ಸಾಹಸ ಎನ್ನಬಹುದು. ಐಫೋನ್‌ನಲ್ಲಿ ಇಡೀ ಚಿತ್ರ ಕಟ್ಟಿಕೊಟ್ಟಿರುವುದು ವಿಶೇಷತೆಗಳಲ್ಲೊಂದು. ಹಾಸ್ಯದ ಮೂಲಕ ಒಂದು ಗಂಭೀರವಾದ ವಿಷಯ ಕೂಡ ಇಲ್ಲಿದೆ. ನಾಯಕ ಇಲ್ಲಿ ಕ್ಯಾನ್ಸರ್‌ ಪೀಡಿತ. ಅವನು ಸಾಯುವ ಮುನ್ನ ತಾನು ಪ್ರೀತಿಯಿಂದ ಸಾಕಿರುವ ಶ್ವಾನವೊಂದನ್ನು, ತನ್ನಷ್ಟೇ ಅದನ್ನೂ ಪ್ರೀತಿಸುವ ವ್ಯಕ್ತಿಯೊಬ್ಬನಿಗೆ ಕೊಡಬೇಕು ಎಂಬುದು ಅವನ ಕೊನೆಯ ಆಸೆ. ಕೇವಲ ಆ ಶ್ವಾನವನ್ನು ಇಷ್ಟಪಟ್ಟರೆ ಸಾಲದು. ಅದಕ್ಕೂ ಹಾಗು ಶ್ವಾನ ಪಡೆಯುವ ವ್ಯಕ್ತಿಯ ಜಾತಕ ಸೇರಿದಂತೆ ಇನ್ನಿತರೆ ವಿಷಯಗಳು ಹೊಂದಿಕೆಯಾಗಬೇಕು. ಅದೆಲ್ಲಾ ಓಕೆ ಎನಿಸಿದರೆ ಆ ಶ್ವಾನ ಕೊಡಬೇಕೆಂಬ ನಿರ್ಧಾರ ಅವನದು. ಹೀಗೆ ಅವನು, ಅಂತಹ ವ್ಯಕ್ತಿಯ ಹುಡುಕಾಟಕ್ಕೆ ಹೊರಡುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ನನಗೆ ಸಾಥ್‌ ನೀಡಿ, ಪ್ರೋತ್ಸಾಹಿಸಿದ ಎಲ್ಲರಿಗೂ ಥ್ಯಾಂಕ್ಸ್‌’ ಎಂದರು ಆರವ್‌ಗೌಡ.

ನಾಯಕಿ ಅನೂಷಾ ತಮ್ಮ ಪಾತ್ರ ಕುರಿತು ಹೇಳಿ­ಕೊಂಡರು. ಸಂಗೀತ ನಿರ್ದೇಶಕ ಶುದೊœàರಾಯ್‌ ಅವರು ತಮ್ಮ ಕೆಲಸದ ಬಗ್ಗೆ ವಿವರಿಸಿ­ದರು. ಅರ್ಜುನ್‌ ಜನ್ಯಾ ಹಾಡಿದ್ದು, ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದರ ಕುರಿತು ಹೇಳಿದರು. ಕಾಂತ ಕನ್ನಲ್ಲಿ, ಗಣೇಶ್‌ರಾವ್‌, ಮೋಹನ್‌ ಕಮಾರ್‌, ಪ್ರದೀಪ್‌ ಕುಮಾರ್‌, ಸುರೇಶ್‌ಬಾಬು, ಶಿವಕುಮಾರ್‌ ಇತರರು ಇದ್ದರು. ಜಯಂತ್‌ ಮಂಜು­ನಾಥ್‌ ಛಾಯಾ­ಗ್ರಹಣವಿದೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಶ್ರೀಮಾಯಕಾರ ಪೊ›ಡಕ್ಷನ್ಸ್‌ ಮೂಲಕ ಚಿತ್ರ ನಿರ್ಮಿಸ­ಲಾಗಿದೆ.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.