ಕುಸ್ತಿ-ಮಸ್ತಿಯ ದೀಪ

ಪ್ರೇರಣೆ ಇಲ್ಲದೆ ಜಗತ್ತು ನಡೆಯದು...

Team Udayavani, Jul 19, 2019, 5:40 AM IST

“ಪೈಲ್ವಾನ್‌ ಪಾರ್ಟ್‌ -2 ಮಾಡಿದರೆ ನಾನು ಕೋಚ್‌ ಆಗಿರುತ್ತೇನೆ ಅಥವಾ ಹೊರಗೆ ನಿಂತು ಕಮಾನ್‌ ಎಂದು ಚಿಯರ್‌ ಮಾಡುವ ಪಾತ್ರ ಮಾಡುತ್ತೇನೆ …’

– ಹೀಗೆ ಹೇಳಿ ಸುದೀಪ್‌ ಪಕ್ಕದಲ್ಲಿದ್ದ ನಿರ್ದೇಶಕ ಕೃಷ್ಣ ಅವರ ಮುಖ ನೋಡಿದರು. ಸುದೀಪ್‌ ಹೀಗೆ ಹೇಳಲು ಕಾರಣ “ಪೈಲ್ವಾನ್‌’ ಚಿತ್ರ ಮತ್ತು ಅದಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿ. ಜಿಮ್‌ನಿಂದ ದೂರವೇ ಉಳಿದಿದ್ದ ಸುದೀಪ್‌, ಈ ಸಿನಿಮಾಕ್ಕಾಗಿ ವರ್ಕೌಟ್‌ ಮಾಡಿ ತೂಕ ಇಳಿಸುವ ಜೊತೆಗೆ ಸಖತ್‌ ಫಿಟ್‌ ಆದರು. ಅಷ್ಟೇ ಅಲ್ಲ, ಚಿತ್ರದ ಕುಸ್ತಿ, ಬಾಕ್ಸಿಂಗ್‌ ಚಿತ್ರೀಕರಣ ವೇಳೆ ಸಾಕಷ್ಟು ನೋವು ಕೂಡಾ ಅನುಭವಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿಯೆ ಸುದೀಪ್‌ ನಗುತ್ತಲೇ, “ಇದೊಂದು ಬಾರಿ ಕುಸ್ತಿ ಮೂಲವಾಗಿರುವ ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ. ಮುಂದೆ ಕುಸ್ತಿ ಹಿನ್ನೆಲೆಯಲ್ಲಿ ನಟಿಸುವುದಿಲ್ಲ’ ಎನ್ನುತ್ತಲೇ “ಪೈಲ್ವಾನ್‌’ ಸಿನಿಮಾದ ಬಗ್ಗೆ ಹೇಳುತ್ತಾ ಹೋದರು. ಸುದೀಪ್‌ ಅವರಿಗೆ “ಪೈಲ್ವಾನ್‌’ ತುಂಬಾ ಸ್ಪೆಷಲ್‌ ಸಿನಿಮಾ. ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಹೆಚ್ಚು ಶ್ರಮ ಬೇಡಿದ ಸಿನಿಮಾ. ಜೊತೆಗೆ ಸುದೀಪ್‌ ಅವರ ಲೈಫ್ಸ್ಟೈಲ್‌ ಬದಲಿಸಿದ ಸಿನಿಮಾ.

“ಆರಂಭದಲ್ಲಿ ಕೃಷ್ಣ ಬಂದು ಈ ತರಹದ ಒಂದು ಸಿನಿಮಾ ಮಾಡುವ ಎಂದಾಗ ನಾನು, “ಇಲ್ಲ ಮಾಡಲ್ಲ. ಸಾಧ್ಯವಿಲ್ಲ’ ಎಂದಿದ್ದೆ. ಏಕೆಂದರೆ ಇದು ಸುಖಾಸುಮ್ಮನೆ ಮಾಡಿಬಿಡುವ ಸಿನಿಮಾವಲ್ಲ. ಹೆಚ್ಚು ಶ್ರಮಬೇಕು, ಪ್ರೊಫೆಶನಲ್‌ ಆಗಿರಬೇಕು. ಪಾತ್ರ ಒಪ್ಪಿಕೊಂಡ ನಂತರ ಅದಕ್ಕೆ ನ್ಯಾಯ ಒದಗಿಸಬೇಕು. ಇವೆಲ್ಲವೂ ನನ್ನಿಂದ ಸಾಧ್ಯವೇ ಎಂದು ಯೋಚಿಸಿ ಆರಂಭದಲ್ಲಿ ಬೇಡ ಅಂದಿದ್ದೆ. ಆ ನಂತರ ಕೃಷ್ಣ ಹಾಗೂ ತಂಡದ ಜೊತೆ ಚರ್ಚಿಸಿದ ನಂತರ ಮಾಡಲು ಒಪ್ಪಿಕೊಂಡೆ. ಅಲ್ಲಿಂದ ಹೊಸ ಲೈಫ್ಸ್ಟೈಲ್‌ ಶುರುವಾಯಿತು. ಬೆಳಗ್ಗೆ ಬೇಗ ಎದ್ದೇಳ್ಳೋದು, ಜಿಮ್‌ಗೆ ಹೋಗೋದು, ಏನನ್ನು ಇಷ್ಟಪಟ್ಟು ತಿನ್ನುತ್ತಿದ್ದೆನೋ ಅದನ್ನು ಬಿಡಬೇಕಾದ ಅನಿವಾರ್ಯತೆ …. ಈ ತರಹದ ಶ್ರಮದೊಂದಿಗೆ “ಪೈಲ್ವಾನ್‌’ ತಯಾರಿ ಶುರುವಾಯಿತು’ ಎಂದು “ಪೈಲ್ವಾನ್‌’ ಅನುಭವ ಬಿಚ್ಚಿಡುತ್ತಾ ಹೋದರು. “ಪೈಲ್ವಾನ್‌’ ಚಿತ್ರಕ್ಕಾಗಿ ಪ್ರೊಫೆಶನಲ್‌ ಕುಸ್ತಿ ಹಾಗೂ ಬಾಕ್ಸಿಂಗ್‌ ಪಟುಗಳಿಂದ ಸುದೀಪ್‌ ತರಬೇತಿ ಪಡೆದಿದ್ದಾರೆ. ಕೆಲವು ದೃಶ್ಯಗಳಲ್ಲಿ ನಿರ್ದೇಶಕರು ಡ್ನೂಪ್‌ ಬಳಸುವ ಎಂದರೂ ಸುದೀಪ್‌ ಒಪ್ಪದೇ, ರಿಸ್ಕಿ ದೃಶ್ಯಗಳಲ್ಲೂ ಅವರೇ ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ. ಈ ಬಗ್ಗೆ ಮಾತನಾಡುವ ಸುದೀಪ್‌, “ಕೃಷ್ಣ ಒಂದೆರಡು ಶಾಟ್‌ಗಳನ್ನು ಡ್ನೂಪ್‌ ಮಾಡಲು ಮುಂದಾಗಿದ್ದರು. ಆದರೆ, ನಾನು ಯಾವ ಕಾರಣಕ್ಕೂ ಬೇಡ ಎಂದೆ. ಒಂದಾ ಈ ತರಹದ ಸಿನಿಮಾಗಳನ್ನು ಒಪ್ಪಿಕೊಳ್ಳಬಾರದು, ಒಪ್ಪಿಕೊಂಡರೆ ಅದಕ್ಕೆ ನ್ಯಾಯ ಒದಗಿಸಬೇಕು’ ಎನ್ನುವುದು ಸುದೀಪ್‌ ಮಾತು.

ಒಳಗೊಳಗೆ ಮುಜುಗರ
ಹೇಳಿಕೇಳಿ “ಪೈಲ್ವಾನ್‌’ ಕುಸ್ತಿ ಹಿನ್ನೆಲೆಯ ಸಿನಿಮಾ. ಪಾತ್ರಕ್ಕಾಗಿ ಅಂಗಿ ಬಿಚ್ಚಿ, ಕುಸ್ತಿಪಟುವಾಗಿ ನಿಲ್ಲಬೇಕಾದ ಅನಿವಾರ್ಯತೆ ಸುದೀಪ್‌ ಅವರದು. ಇಷ್ಟು ವರ್ಷದ ತಮ್ಮ ಸಿನಿ ಕೆರಿಯರ್‌ನಲ್ಲಿ ಸುದೀಪ್‌ ಮೈ ತುಂಬಾ ಬಟ್ಟೆ ಹಾಕಿಕೊಂಡು ಸ್ಟೈಲಿಶ್‌ ಆಗಿ ಕಾಣಿಸಿಕೊಂಡವರು. ಆದರೆ, “ಪೈಲ್ವಾನ್‌’ನಲ್ಲಿ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಬೇಕೆಂದಾಗ ಆರಂಭದಲ್ಲಿ ತುಂಬಾ ಮುಜುಗರವಾಯಿತಂತೆ.

“ನಾನು ಈ ತರಹ ಯಾವತ್ತೂ ಕಾಣಿಸಿಕೊಂಡವನಲ್ಲ. ಒಳ್ಳೆಯ ಬಟ್ಟೆಹಾಕಿಕೊಂಡೇ ಇದ್ದವನು. ಆದರೆ, ಏಕಾಏಕಿ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಬೇಕೆಂದಾಗ ಮುಜುಗರವಾಗಿದ್ದು ಸುಳ್ಳಲ್ಲ. ಶಾಟ್‌ ರೆಡಿ ಎಂದಾಗ ವ್ಯಾನಿಟಿ ವ್ಯಾನ್‌ನಿಂದ ಇಳಿಯುವಾಗ ಒಂಥರಾ ಆಗುತ್ತಿತ್ತು. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಯಾರು ಏನಾದರೂ ಅಂದುಕೊಳ್ಳಲಿ ಎನ್ನುತ್ತಾ ಸೆಟ್‌ಗೆ ಹೋದೆ. ಆ ನಂತರ ಅದೇ ಒಂದು ಹೊಸ ಅನುಭವ ಕೊಟ್ಟಿತು’ ಎಂದರು ಸುದೀಪ್‌.

ಇನ್ನು, ಸುದೀಪ್‌ ಅವರಿಗೆ ಈ ಸಿನಿಮಾ ಮಾಡುವಾಗ ಆರಂಭದಲ್ಲಿ ಸಾಕಷ್ಟು ಮೂಡ್‌ಸ್ವಿಂಗ್‌ ಆಗುತ್ತಿತ್ತಂತೆ. ಸಣ್ಣ ಸಣ್ಣ ವಿಚಾರಗಳಿಗೂ ಇರಿಟೇಟ್‌ ಆಗುತ್ತಿದ್ದರಂತೆ. ಅದಕ್ಕೆ ಕಾರಣ, ಏಕಾಏಕಿ ಬದಲಾದ ಅವರ ಲೈಫ್ ಸ್ಟೈಲ್‌. ಆದರೆ, ಈಗ ಅದು ಹೊಸ ಲೈಫ್ಸ್ಟೈಲ್‌ ಅನ್ನು ಕೊಟ್ಟ ಖುಷಿಯೂ ಅವರಿಗಿದೆ. ಇನ್ನು ಚಿತ್ರದಲ್ಲಿ ನಟಿಸಿದ ಸುನೀಲ್‌ ಶೆಟ್ಟಿ, ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಅವರ ಸಹಕಾರವನ್ನು ಸುದೀಪ್‌ ನೆನೆಯುತ್ತಾರೆ. ಜೊತೆಗೆ ನಿರ್ದೇಶಕ ಕೃಷ್ಣ ಆವರ ಪ್ಲ್ರಾನಿಂಗ್‌, ದೊಡ್ಡ ಆಲೋಚನೆಗಳನ್ನು ಕೊಂಡಾಡಿದರು.

ಸಿನಿಮಾದ ವಕೌìಟ್‌ ಬಗ್ಗೆ ಮಾತನಾಡುವ ಸುದೀಪ್‌, “ನಾನು ಈ ಸಿನಿಮಾಕ್ಕಾಗಿ ಸಾಕಷ್ಟು ವಕೌìಟ್‌ ಮಾಡಿದ್ದೇನೆ ನಿಜ. ಆದರೆ, ನಾನೇ ಏನೇ ವಕೌìಟ್‌ ಮಾಡಲಿ ಅಥವಾ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಂಡರೂ ಮೂಲಕಥೆಯೇ ನಿಮಗೆ ಕನ್ವಿನ್ಸ್‌ ಆಗದಿದ್ದರೆ ಬೇರೆಲ್ಲವೂ ವ್ಯರ್ಥವಾಗುತ್ತದೆ. ಯಾವುದೇ ಸಿನಿಮಾವಾದರೂ ಕಥೆ ಜನರನ್ನು ಕನ್ವಿನ್ಸ್‌ ಮಾಡಬೇಕು. ಆಗ ಮಿಕ್ಕಿದ್ದೆಲ್ಲವೂ ಚೆನ್ನಾಗಿ ಕಾಣುತ್ತದೆ’ ಎನ್ನುವುದು ಸುದೀಪ್‌ ಮಾತು.

ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಈ ಸಿನಿಮಾ ಆರಂಭವಾದ ಬಗ್ಗೆ, ಸುದೀಪ್‌ ನೀಡಿದ ಸಹಕಾರದ ಬಗ್ಗೆ ಮಾತನಾಡಿದರು. ಇಷ್ಟೊಂದು ದೊಡ್ಡ ಮಟ್ಟದ ಸಿನಿಮಾವನ್ನು ಮಾಡುತ್ತೇವೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಇವತ್ತು ಅದು ಸಾಧ್ಯವಾಗಿದ್ದು, ಸುದೀಪ್‌ ಅವರಿಂದ. ಅವರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂಬುದು ಸ್ವಪ್ನ ಹಾಗೂ ಕೃಷ್ಣ ಅವರ ಮಾತು. ಚಿತ್ರದ ಆಡಿಯೋ ರೈಟ್ಸ್‌ ಅನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕೆಆರ್‌ಜಿ ಸ್ಟುಡಿಯೋ, ಹಿಂದಿಯಲ್ಲಿ ಝಿ ಸ್ಟುಡಿಯೋಸ್‌ ಹಾಗೂ ತೆಲುಗಿನಲ್ಲಿ ವರಾಹಿ ಫಿಲಂಸ್‌ ಬಿಡುಗಡೆ ಮಾಡುತ್ತಿದೆ. ಈ ಮೂವರು ಕೂಡಾ “ಪೈಲ್ವಾನ್‌’ ಬಗ್ಗೆ ಖುಷಿ ಹಂಚಿಕೊಂಡರು. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಆಗಸ್ಟ್‌ 29ಕ್ಕೆ ಬಿಡುಗಡೆಯಾಗಲಿದೆ. ಜುಲೈ 27 ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.

ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಟ ಕಂ ನಿರ್ದೇಶಕ ದಿ. ಶಂಕರನಾಗ್‌ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವ ಯುವ ಟೆಕ್ಕಿಗಳ ಗುಂಪೊಂದು ವಾರಾಂತ್ಯದಲ್ಲಿ ಮತ್ತು ಬಿಡುವು ಸಿಕ್ಕಾಗ ಒಂದಷ್ಟು ಸಿನಿಮಾ...

  • ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ....

  • ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್‌ ಪ್ಯಾಟ್ರನ್‌ನಲ್ಲಿದ್ದವು....

  • ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು "ಜಿಗ್ರಿ ದೋಸ್ತ್'....

  • ಇದು ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ಕುರಿತಾದ ಕಥೆ... - ಹೀಗೆ ಹೇಳಿ ಹಾಗೊಂದು ಸಣ್ಣ ನಗೆ ಬೀರಿದರು ನಿರ್ದೇಶಕ ನಾಗಚಂದ್ರ. ಅವರು ಹೇಳಿದ್ದು, "ಜನ್‌ಧನ್‌'...

ಹೊಸ ಸೇರ್ಪಡೆ