ಇಲ್ಲಿ ಕಾಸಿದೆ ತೆಗೆಯೋ ಜಾಣತನ ಬೇಕು…

Team Udayavani, Oct 26, 2018, 6:00 AM IST

villain-kannada-movie.jpg

“ನನಗೆ 30 ಕೋಟಿ ಶೇರ್‌ ಬಂದಿದೆ’ ಎಂದರು “ದಿ ವಿಲನ್‌’ ಚಿತ್ರದ ನಿರ್ಮಾಪಕ ಸಿ.ಆರ್‌. ಮನೋಹರ್‌. ಪಕ್ಕದಲ್ಲಿದ್ದ “ದಿ ವಿಲನ್‌’ನ ವಿತರಕರಲ್ಲೊಬ್ಬರಾದ ಜಾಕ್‌ ಮಂಜು, “ನಾನು ನಿರ್ಮಾಪಕರಿಗೆ ಕೊಟ್ಟ ದುಡ್ಡು ವಾಪಾಸ್‌ ಬಂದು, ನನ್ನ ಕಮಿಷನ್‌ ಕಟ್‌ ಮಾಡಿಯೂ ನಿರ್ಮಾಪಕರಿಗೆ ಹಣ ಕೊಡುತ್ತಿದ್ದೇನೆ’ ಎಂದರು. ಅದೇ ಮಾತನ್ನು ಶಿವಮೊಗ್ಗ-ಮಂಗಳೂರು ಭಾಗದ ವಿತರಕರು ಕೂಡಾ ಹೇಳಿದರು. ಇವರೆಲ್ಲರೂ ಮಾಧ್ಯಮ ಮುಂದೆ ಹೇಳಿದ್ದು “ದಿ ವಿಲನ್‌’ ಬಿಡುಗಡೆಯಾದ ಕೇವಲ ಐದನೇ ದಿನಕ್ಕೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 20 ಕೋಟಿ ಬಾಚಿಕೊಂಡಿದ್ದು ದೊಡ್ಡ ಸುದ್ದಿಯಾಯಿತು ಕೂಡಾ.

“ದಿ ವಿಲನ್‌’ ಚಿತ್ರ ಅಷ್ಟೊಂದು ಕಲೆಕ್ಷನ್‌ ಮಾಡಿತು ಎಂಬುದು ಇಲ್ಲಿ ವಿಷಯವಲ್ಲ,ಬದಲಾಗಿ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತಾರವಾಗುವ ಜೊತೆಗೆ ದೊಡ್ಡ ಮಟ್ಟದ ಕಲೆಕ್ಷನ್‌ ಬರುತ್ತಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ಬೆಳವಣಿಗೆಯಿಂದ ಕನ್ನಡ ಚಿತ್ರರಂಗದ ಅನೇಕರ ಮೊಗದಲ್ಲಿ ನಗುಮೂಡಿರುವ ಜೊತೆಗೆ ಆಶಾಭಾವನೆ ಎದ್ದು ಕಾಣುತ್ತಿರೋದು ಸುಳ್ಳಲ್ಲ. ಚಿತ್ರರಂಗದ ಲೆಕ್ಕಾಚಾರಗಳು ನಡೆಯುವುದೇ ಹಾಗೆ, ಒಂದು ಸಿನಿಮಾದ ಗೆಲುವು ಅನೇಕರಿಗೆ ಹೊಸ ಹುರುಪು ತರುತ್ತದೆ. ಹೊಸಬರ, ಹೊಸ ಜಾನರ್‌ನ ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆದರೆ, ಆ ತರಹದ ಸಿನಿಮಾ ಮಾಡಲು ಮತ್ತೂಂದಿಷ್ಟು ಮಂದಿ ಮುಂದೆ
ಬರುತ್ತಾರೆ. ಅದಕ್ಕೆ ಕಾರಣ ಈ ಹಿಂದಿನ ಸಿನಿಮಾವೊಂದರ ಯಶಸ್ಸು. ಅದು ಯಾವುದೇ ಚಿತ್ರರಂಗವಾಗಿರಬಹುದು, ಗೆಲುವು ಆಯಾ ಚಿತ್ರರಂಗಕ್ಕೆ ದೊಡ್ಡ ಚೈತನ್ಯವನ್ನು ಒದಗಿಸುತ್ತದೆ.

ಈಗ “ವಿಲನ್‌’ ಸಿನಿಮಾದ ಕಲೆಕ್ಷನ್‌ ಕೂಡಾ ಬಿಗ್‌ಬಜೆಟ್‌ ಸಿನಿಮಾ ಮಾಡುತ್ತಿರುವ ಅನೇಕ ನಿರ್ಮಾಪಕರ, ವಿತರಕರ ಉತ್ಸಾಹ ಹೆಚ್ಚಿಸಿರುವುದು ಸುಳ್ಳಲ್ಲ.

ಒಬ್ಬ ನಿರ್ಮಾಪಕ, ವಿತರಕ ಅಂತಿಮವಾಗಿ ನೋಡುವುದು ಸಿನಿಮಾ ಎಷ್ಟು ದುಡಿಯಿತು ಎಂಬುದನ್ನಷ್ಟೇ. ಕಲೆಕ್ಷನ್‌ ಎದುರು ಚಿತ್ರದ ಬಗೆಗಿನ ಮಿಶ್ರಪ್ರತಿಕ್ರಿಯೆಗಳು, ಟೀಕೆಗಳಾÂವುವು ಲೆಕ್ಕಕ್ಕೆ ಬರೋದಿಲ್ಲ ಎಂದು ನಂಬಿರುವ ವಿತರಕರು, ಸದ್ಯ “ವಿಲನ್‌’ ಕಲೆಕ್ಷನ್‌ನಿಂದ ಖುಷಿಯಾಗಿದ್ದಾರೆ.

ಕೆಲವು ವರ್ಷಗಳ ಹಿಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಒಂದು ಮಾತಿತ್ತು, ಅದೇನೆಂದರೆ ದೊಡ್ಡ ಬಜೆಟ್‌ನ ಸಿನಿಮಾಗಳು ಇಲ್ಲಿ ವಕೌìಟ್‌ ಆಗೋದಿಲ್ಲ ಎಂದು. ಆದರೆ, ಈಗ ಆ ಸನ್ನಿವೇಶವಿಲ್ಲ. ನಿಮ್ಮ ಸಿನಿಮಾ ಚೆನ್ನಾಗಿದ್ದರೆ,ದೊಡ್ಡ ತಾರಾಬಳಗವಿದ್ದರೆ ಜೊತೆಗೆ ಗಾಂಧಿನಗರ ಲೆಕ್ಕ ಹಾಕುವಂತಹ “ಹೈಪ್‌’ ಕ್ರಿಯೇಟ್‌ ಆಗಿದ್ದರೆ ಬಿಗ್‌ಬಜೆಟ್‌ ಸಿನಿಮಾಗಳು ಸುಲಭವಾಗಿ ಹಾಕಿರುವ ಹಣವನ್ನು ವಾಪಾಸ್‌ ಪಡೆಯುತ್ತಿವೆ. ಐತಿಹಾಸಿಕ ಚಿತ್ರವಾಗಿ ಮೂಡಿಬಂದ ದರ್ಶನ್‌ ಅವರ “ಸಂಗೊಳ್ಳಿ ರಾಯಣ್ಣ’ ದೊಡ್ಡ ಬಜೆಟ್‌ನ ಅದೂಟಛಿರಿ ಚಿತ್ರವಾಗಿ ಅಂದು ಎಲ್ಲರ ಗಮನಸೆಳೆದಿತ್ತು. ಅಷ್ಟೊಂದು ಬಜೆಟ್‌ ವಕೌìಟ್‌ ಆಗುತ್ತಾ ಎಂದು ಅನೇಕರು ಕೇಳಿದ್ದರು. ಆದರೆ, ಚಿತ್ರ ಹಿಟ್‌ಲಿಸ್ಟ್‌ ಸೇರಿ ಹಾಕಿದ ದೊಡ್ಡ ಮೊತ್ತದ ಜೊತೆಗೆ ಲಾಭವೂ ಬಂದಿತ್ತು. ಈಗ “ವಿಲನ್‌’ ಸರದಿ. ಸದ್ಯ ಕನ್ನಡ ಚಿತ್ರರಂಗದ ಕೆಲವೇ
ಕೆಲವು ಬಿಗ್‌ಬಜೆಟ್‌ ಸಿನಿಮಾಗಳ ಸಾಲಿನಲ್ಲಿದ್ದ “ವಿಲನ್‌’ ಮೊಗದಲ್ಲೂ ಈಗ ನಗುಮೂಡಿದೆ. ಸದ್ಯ ಕನ್ನಡ ಚಿತ್ರರಂಗದ
ಪರಿಸ್ಥಿತಿಯಲ್ಲಿ ನೂರು, ಐವತ್ತು ದಿನಗಳ ಸಂಭ್ರಮಕ್ಕಿಂತ ಸಿನಿಮಾ ಮೊದಲ ದಿನ, ಮೊದಲ ವಾರ ಎಷ್ಟು ಚಾಚಿಕೊಂಡಿತು,ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಎಂಬುದಷ್ಟೇ ಮುಖ್ಯವಾಗುತ್ತದೆ. ಈ ತರಹದ ದೊಡ್ಡ ಮಟ್ಟದ ಕಲೆಕ್ಷನ್‌ಗಳಲ್ಲಿ ಹೈಪ್‌ ಹಾಗೂ ದುಬಾರಿ ಟಿಕೆಟ್‌ ಬೆಲೆಗಳು ಕೂಡಾ ಸೇರಿರುತ್ತವೆ ಎಂಬುದನ್ನು ಅಲ್ಲಗಳೆಯುವುದಿಲ್ಲ. “ಬೇರೆ ಭಾಷೆಯ ಸ್ಟಾರ್‌ಗಳ ಸಿನಿಮಾಗಳಿಗೆ ಸಾವಿರಗಟ್ಟಲೇ ಕೊಟ್ಟು ನೋಡುವ ನಮ್ಮ ಪ್ರೇಕ್ಷಕರು ವರ್ಷಕ್ಕೊಂದು ಬಾರಿ ಕನ್ನಡ ಸಿನಿಮಾಕ್ಕೆ ಒಂದೈವತ್ತು, ನೂರು ರೂಪಾಯಿ ಹೆಚ್ಚು ಕೊಟ್ಟು ನೋಡಿದರೆ ತಪ್ಪಾ’ ಎಂದು ಪ್ರಶ್ನಿಸುತ್ತಲೇ ಕಲೆಕ್ಷನ್‌ ಲೆಕ್ಕ ಮುಂದಿಡುತ್ತಾರೆ ವಿತರಕರು.

ಇಲ್ಲಿ ಹೆಚ್ಚಿನ ಟಿಕೆಟ್‌ ಬೆಲೆ, ಸಿನಿಮಾದ ಹೈಪ್‌ ಎಲ್ಲವನ್ನು ಬದಿಗಿಟ್ಟು ನೋಡುವುದಾದರೆ ಕನ್ನಡ ಚಿತ್ರರಂಗದಲ್ಲಿ ಕಾಸಿದೆ. ಅದನ್ನು ನಿಮಗೆ ಹೊರತೆಗೆಯುವ ಜಾಣ್ಮೆ ನಿಮಗೆ ಗೊತ್ತಿರಬೇಕಷ್ಟೇ. ನೀವು ಒಳ್ಳೆಯ, ಬಿಗ್‌ಬಜೆಟ್‌ ಸಿನಿಮಾ ಮಾಡಿದರೂ ಪ್ರೇಕ್ಷಕ ನಿಮ್ಮ ಕೈ ಹಿಡಿಯುತ್ತಾನೆ ಎಂಬುದು ಆಗಾಗ ಹಲವು ಸಿನಿಮಾಗಳ ಮೂಲಕ ಸಾಬೀತಾಗುತ್ತಲೇ ಇದೆ. ಕನ್ನಡ ಚಿತ್ರರಂಗದ ಪ್ರಮುಖ ವಿತರಕರಲ್ಲೊಬ್ಬರಾದ ಜಯಣ್ಣ ಹೇಳುವಂತೆ, ಯಾವುದೇ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆದರೆ ಅದರ ಲಾಭ ಕನ್ನಡ ಚಿತ್ರರಂಗಕ್ಕೆ ಲಾಭವಾಗುತ್ತದೆ. ಪಕ್ಕಾ ಪ್ಲ್ರಾನ್‌ ಮಾಡಿ ಸಿನಿಮಾ ಬಿಡುಗಡೆ ಮಾಡಿದರೆ ಹಾಕಿದ ಕಾಸು ತೆಗೆಯುವಲ್ಲಿ ಕನ್ನಡ ಚಿತ್ರರಂಗ ಮೋಸ ಮಾಡಿಲ್ಲ. 30-40 ಕೋಟಿ ಬಜೆಟ್‌ ಸಿನಿಮಾ ಮಾಡಿದರೂ ವಾಪಾಸ್‌ ಹಣ ಬರುತ್ತದೆ ಎಂಬ ನಂಬಿಕೆ ಸದ್ಯ ಕನ್ನಡ ಚಿತ್ರರಂಗದ ಮೇಲಿದೆ. ಇದೇ ಮಾತನ್ನು ನಿರ್ಮಾಪಕ ಕಂ ವಿತರಕ ಜಾಕ್‌ ಮಂಜು ಹೇಳುತ್ತಾರೆ. “ಯಾವುದೇ ಹೀರೋನಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆದಾಗ ಚಿತ್ರರಂಗಕ್ಕೊಂದು ಚೈತನ್ಯ ಬರುತ್ತದೆ. ಮತ್ತಷ್ಟು ನಿರ್ಮಾಪಕರು ದೊಡ್ಡ ಸಿನಿಮಾಗಳನ್ನು ಮಾಡಲು ಮುಂದೆ ಬರುತ್ತಾರೆ’ ಎನ್ನುವುದು ಅವರ ಮಾತು.

ಸದ್ಯ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಷ್ಟು ಬಿಗ್‌ ಬಜೆಟ್‌ನ ಚಿತ್ರಗಳು ಬಿಡುಗಡೆಗೆ ಹಾಗೂ ಸೆಟ್ಟೇರಲು ತಯಾರಾಗಿವೆ. ಈ ಚಿತ್ರಗಳನ್ನು ಕೂಡಾ ಕನ್ನಡ ಪ್ರೇಕ್ಷಕ ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತಾನೆ ಎಂಬ ವಿಶ್ವಾಸ ಚಿತ್ರತಂಡ ಹಾಗೂ ಅಭಿಮಾನಿಗಳದ್ದು.

– ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.