ಸಂಮಾನ ಸಮಾರಂಭ 


Team Udayavani, Dec 10, 2017, 7:20 AM IST

samaramba.jpg

ಈ ತಿಂಗಳ ಕೊನೆಯಲ್ಲಿ ಕನ್ನಡ ಮೇಷ್ಟ್ರು ನಿವೃತ್ತಿ ಆಗ್ತಾ ಇ¨ªಾರೆ.ಶಾಲೆಯಿಂದ ಅವರಿಗೆ ಸನ್ಮಾನ ಇಟ್ಟುಕೊಂಡಿದ್ದೇವೆ. “ನಿಮ್ಮ ಕ್ಲಾಸಿನಿಂದ  ಮಕ್ಕಳು ಸ್ವಾಗತ ಭಾಷಣ ಮತ್ತು ಮೇಷ್ಟ್ರ ಬಗ್ಗೆ ಮಾತನಾಡಲಿ’ ಎಂದು ಹೆಡ್‌ ಮೇಡಂ, ನಮ್ಮ ಟೀಚರ್‌ಗೆ ಹೇಳಿದ್ದೇ ತಡ, ನಾಲ್ಕನೆಯ ತರಗತಿಯ ಮಕ್ಕಳಾದ ನಮಗೆಲ್ಲ ಸ್ವಲ್ಪ ಬೇಸರ ಮತ್ತು ಹೆಚ್ಚು ಸಂಭ್ರಮ! ಬಿಳಿ ಕೂದಲು, ಅರೆತೆರೆದ ಕಣ್ಣುಗಳಾದರೂ ಬೈಯದೇ ಪಾಠ ಮಾಡುತ್ತಿದ್ದ ಕನ್ನಡ ಮೇಷ್ಟ್ರು ರಿಟೈರ್‌ ಆಗ್ತಾರೆ ಅಂತ ಬೇಸರವಾದರೆ, ಅಂತೂ ಜೈಲಿನಂತಿದ್ದ ಶಾಲೆಯÇÉೊಂದು ಸಮಾರಂಭ ಎಂದು ಸಂಭ್ರಮ. ಜತೆಗೆ ಟೀಚರ್‌ ಮಾತನಾಡಲು ಯಾರನ್ನು ಆರಿಸುತ್ತಾರೋ ಎಂದು ಎಲ್ಲರಿಗೂ ಕುತೂಹಲ. 

ಸ್ವಾಗತ ಭಾಷಣಕ್ಕೆ ನಾನು ಮತ್ತು ಮೇಷ್ಟ್ರ ಬಗ್ಗೆ ಮಾತನಾಡಲು ನನ್ನ ವೈರಿ (!) ಹರಿಗೆ ಹೇಳಿದರು. ನನಗೆ ಮಾತ್ರವಲ್ಲ , ಇಡೀ ಹುಡುಗಿಯರ ಗುಂಪಿಗೇ ನಿಜವಾಗಿಯೂ ಬೇಸರವಾಗಿತ್ತು. ಪ್ರತೀ ಬಾರಿ ಮೊದಲ ಸ್ಥಾನಕ್ಕೆ ನಮ್ಮಿಬ್ಬರಿಗೆ ಜೋರು ಪೈಪೋಟಿ. ಹೀಗಿರುವಾಗ ಆತನಿಗೆ ಮೇಷ್ಟ್ರ ಬಗ್ಗೆ ಹೊಗಳುವ ಅವಕಾಶ ಸಿಕ್ಕು ನಾನು ಬರೀ ಸ್ವಾಗತ ಕೋರುವುದೆಂದರೆ? ನಾನು ಎಂದರೆ ಹುಡುಗಿಯರ ಪ್ರತಿನಿಧಿ, ಆತ ಹುಡುಗರ ಲೀಡರ್‌! ಹಾಗಾಗಿ, ಇದು ಇಡೀ ಹುಡುಗಿಯರಿಗೆ ಆದ ಅನ್ಯಾಯ ಎಂದು ನಮ್ಮ ಮನಸ್ಸಿನಲ್ಲಿತ್ತು. ಈ ಟೀಚರ್‌, ಹುಡುಗರಿಗೆ  ಪಾರ್ಷಿಯಾಲಿಟಿ ಮಾಡ್ತಾರೆ ಎಂದು ಒಳಗೊಳಗೇ ಗೊಣಗಾಟವೂ ನಡೆಯಿತು. ಸ್ವಲ್ಪ ಪ್ರೋತ್ಸಾಹ ಸಿಕ್ಕಿದ್ದರೆ ದೊಡ್ಡ ಹೋರಾಟವನ್ನೇ ನಡೆಸುತ್ತಿ¨ªೆವೇನೋ ಗೊತ್ತಿಲ್ಲ. ಅಂತೂ ಸ್ವಾಗತ ಭಾಷಣಕ್ಕೆ  ಭರ್ಜರಿ ತಯಾರಿ ನಡೆಯಿತು.

ದೊಡ್ಡ ದೊಡ್ಡ ಪುಸ್ತಕಗಳಿಂದ ಕಷ್ಟಕರ ಶಬ್ದಗಳನ್ನು ಹೆಕ್ಕಿ ತೆಗೆದು ನನ್ನ ಭಾಷಣ ತಯಾರಾಯಿತು. ಅದು ಹುಡುಗಿಯರ ಶಕ್ತಿ-ಸಾಮರ್ಥ್ಯದ ಪ್ರಶ್ನೆಯಾದ್ದರಿಂದ ಎಲ್ಲರೂ ಸಲಹೆ ಕೊಡುವವರೇ. ಕಂಡು ಕೇಳರಿಯದ ಶಬ್ದಗಳಾದ ಧೀಮಂತ, ಪ್ರಜ್ಞಾವಂತ, ವಿದ್ವಜ್ಜನ, ಸನಿ¾ತ್ರ- ಹೀಗೆ ಪದಪುಂಜಗಳನ್ನು ಸ್ವಾಗತ ಕೋರಬೇಕಾದ ಎಲ್ಲರ ಹೆಸರಿನ ಮುಂದೆ ಯದ್ವಾತದ್ವಾ ಸೇರಿಸಲಾಯಿತು (ತುರುಕಲಾಯಿತು). ಹೆಡ್‌ ಮೇಡಂ, ಶಿಕ್ಷಕರು, ಸಿಬ್ಬಂದಿ ಅಂತೂ ಸರಿಯೇ ವಾಚ್‌ಮನ್‌ಗೆ ಘನಗಂಭೀರ ವ್ಯಕ್ತಿತ್ವ ಮತ್ತು ಸಿಡುಕು ಮೋರೆ ಆಯಮ್ಮಳಿಗೆ ಹಸನ್ಮುಖೀ-ಲವಲವಿಕೆಯ ಹಿತೈಷಿ ಎಂದು ಸ್ವಾಗತ ಕೋರುವ ಭಾಷಣ ಸಿದ್ಧವಾಯಿತು. ನಾವಿನ್ನೂ ಚಿಕ್ಕವರಾದ್ದರಿಂದ ಬರೆದದ್ದನ್ನು ಏಳನೆಯ ತರಗತಿ ಸೀನಿಯರ್‌ಗೆ ತೋರಿಸಿ ಒಪ್ಪಿಗೆ ಪಡೆಯಬೇಕಿತ್ತು. ಪಾಪ, ಆಕೆ ಮು¨ªಾದ ಅಕ್ಷರದಲ್ಲಿ ಬರೆದಿದ್ದ ಈ ಸ್ವಾಗತ ಭಾಷಣ ಓದಿ ಇದು ಕನ್ನಡವೇ ಎಂದು ಎರಡು ಬಾರಿ ಕೇಳಿಬಿಟ್ಟಳು. ನಾವು ಇಂಥ ಪುಸ್ತಕದಿಂದ ಈ ಶಬ್ದ ಆರಿಸಿದ್ದೇವೆ ಎಂದು ದೊಡ್ಡ ಪಟ್ಟಿ ಕೊಟ್ಟರೂ ಆಕೆಗೆ ಸಂಶಯವೇ. ಕಡೆಗೆ ವಿಧಿಯಿಲ್ಲದೇ ಕೇವಲ ಭಾಷಣವಲ್ಲ, ಹುಡುಗರ ವಿರುದ್ಧ ಸಮರ ಸಾಧನ, ಆದ್ದರಿಂದ ಇಂಥಾ¨ªೆಲ್ಲ ಬಳಸಲೇಬೇಕು ಎಂದು ಗೋಗರೆದವು. ಎಷ್ಟಾದರೂ ಹುಡುಗಿಯಾಗಿ ಹುಡುಗಿಯರನ್ನು ಬಿಟ್ಟುಕೊಡಲು ಸಾಧ್ಯವೇ? ಆಕೆಗೂ ಉತ್ಸಾಹ ಮತ್ತು ರೋಷ ಉಕ್ಕೇರಿತು. ಮತ್ತೂಮ್ಮೆ ಓದಿ ಇನ್ನೂ ಉದ್ದ ಮಾಡಿ ಎಂಬ ಉಪಯುಕ್ತ ಸಲಹೆ ನೀಡಿದಳು. ಅದಾಗಲೇ ಇದ್ದ ಬದ್ದವರಿಗೆಲ್ಲ ಸ್ವಾಗತ ಬರೆದಾಗಿತ್ತು. ಸಾಕಷ್ಟು ಯೋಚಿಸಿ  ಕುರ್ಚಿ- ಶಾಮಿಯಾನಾ ಹಾಕುವವರಿಗೆ ದಕ್ಷ- ಕರ್ತವ್ಯನಿಷ್ಠರು, ಮೈಕಿನವರಿಗೆ ಸಹೃದಯಿ- ಸಜ್ಜನರು ಎಂಬ ವಿಶೇಷಣ ಸೇರಿಸಿ ಪುಟ ತುಂಬಿಸಿದೆವು. ಎರಡು ಪುಟಗಳ ಆ ಭಾಷಣದಲ್ಲಿ ಸ್ವಾಗತ ಎಂದರೆ ವೆಲ್‌ಕಮ್‌ ಎನ್ನುವುದನ್ನು ಬಿಟ್ಟು ನಮಗೆ ತಿಳಿದದ್ದು ಮತ್ತೇನೂ ಇಲ್ಲ. ಆದರೂ ನಮ್ಮದು ಅದ್ಭುತ ಸ್ವಾಗತ ಭಾಷಣ ಎಂಬುದರಲ್ಲಿ ಸಂಶಯವೇ ಇರಲಿಲ್ಲ!

ನಮ್ಮ ವೈರಿ ಗುಂಪಿನವರು ಎಂದಿನಂತೆ ಆಟವಾಡುತ್ತ ಹಾಯಾಗಿದ್ದರು. ಆದರೆ ನಮ್ಮ ಗುಂಪಿನ ಹುಡುಗಿಯೊಬ್ಬಳ ಮನೆ, ಹರಿಯ ಮನೆಯ ಹತ್ತಿರವಿತ್ತು. ಆಕೆ ಒಮ್ಮೆ ಹುಡುಗರೊಂದಿಗೆ ಆಟವಾಡುವಾಗ ಸೋತಳು. ಆ ಸಿಟ್ಟಿನಲ್ಲಿ, “ನೀವೆಲ್ಲ ನಮಗೆ ಯಾವಾಗಲೂ ಮೋಸ ಮಾಡ್ತೀರಲ್ಲ? ಈ ಸಲ ಸನ್ಮಾನ ನಡೀಲಿ ಗೊತ್ತಾಗುತ್ತೆ. ನಾವು ಎಂಥ ಸ್ವಾಗತ ಭಾಷಣ ಮಾಡ್ತೀವಿ ಗೊತ್ತಾ?’ ಎಂದು ಗುಟ್ಟು ರಟ್ಟು ಮಾಡಿದಳು. ಸರಿ ಈ ವಿಷಯ ಹುಡುಗ-ಹುಡುಗಿಯರ ನಡುವಿನ ಭೀಕರ ವಾಕ್ಸಮರಕ್ಕೆ ನಾಂದಿಯಾಯಿತು. ಹುಡುಗರ ಗುಂಪು ಎ¨ªೋಬಿ¨ªೋ ಕನ್ನಡ ಮೇಷ್ಟ್ರ ಬಗ್ಗೆ ಮಾಹಿತಿ ಸಂಗ್ರಹಿಸಲಾರಂಭಿಸಿತು. 

ಅಂತೂ ನೋಡನೋಡುತ್ತ ಸನ್ಮಾನ ಸಮಾರಂಭದ ದಿನ ಬಂದೇಬಿಟ್ಟಿತು. ಮೇಷ್ಟ್ರ ಮುಖ ಬಾಡಿತ್ತು. ಅಷ್ಟು ದಿನ ಕಲಿಸಿದ ಶಾಲೆ, ಸಹೋದ್ಯೋಗಿಗಳು, ಮಕ್ಕಳು ಎಲ್ಲ ಬಿಡುವುದೆಂದರೆ ಯಾರಿಗಾದರೂ ಕಷ್ಟವೇ. ನಾವಂತೂ ಜರಿ ಲಂಗ ಬ್ಲೌಸ್‌ ಹಾಕಿ, ಎರಡು ಬದನೆಕಾಯಿ ಜಡೆಗೆ ಹೂ ಮುಡಿದು, ಕೈ ತುಂಬ ಬಳೆ ಧರಿಸಿ ಹಬ್ಬಕ್ಕೆ ತಯಾರಾದವರಂತೆ ಸಿದ್ಧರಾಗಿ¨ªೆವು. ಕಾರ್ಯಕ್ರಮ ಆರಂಭವಾಯಿತು. ಸ್ವಾಗತ ಭಾಷಣಕ್ಕೆ ನಾನು ವೇದಿಕೆ ಏರಿದ್ದೇ ತಡ ಜೋರಾಗಿ ಚಪ್ಪಾಳೆ (ಮೊದಲೇ ಪ್ರತೀವಾಕ್ಯಕ್ಕೆ ಚಪ್ಪಾಳೆ ಹೊಡೆಯಬೇಕೆಂದು ಒಮ್ಮತದ ನಿರ್ಧಾರವಾಗಿತ್ತು). ಸರಿ, ಸ್ವಾಗತ ಭಾಷಣ ಅಭೂತಪೂರ್ವವಾಗಿತ್ತು. ನಾನಂತೂ ಸಾಧ್ಯವಾದಷ್ಟೂ ಭಾವನೆ ತುಂಬಿ ಪ್ರತಿಯೊಬ್ಬರನ್ನೂ ಸ್ವಾಗತಿಸಿದೆ.

ವೇದಿಕೆಯಲ್ಲಿದ್ದವರು ಕೇವಲ ಸ್ವಾಗತ ಭಾಷಣದÇÉೇ ಇಷ್ಟು ಶಬ್ದಸಾಮರ್ಥ್ಯ, ಅಭಿನಯ ಚಾತುರ್ಯ ತೋರಿದ ನನ್ನನ್ನು ಕಂಡು ಬೆರಗಾಗಿಬಿಟ್ಟಿದ್ದರು! ಕನ್ನಡ ಕಲಿಸಿದ್ದ ಮೇಷ್ಟ್ರೇ ಬೆರಗಾಗಿ ತೆರೆದ ಬಾಯಿ ಮುಚ್ಚಲಿಲ್ಲ. ಆಯಮ್ಮ ತನ್ನ ಹೆಸರು ಮೈಕಿನಲ್ಲಿ ಕೇಳಿ ಆನಂದಭಾಷ್ಪ ಸುರಿಸುತ್ತಿದ್ದರೆ, ಯಾವಾಗಲೂ ನಿದ್ರಿಸುತ್ತಿದ್ದ ವಾಚ್‌ಮನ್‌ ಕುರ್ಚಿಯಿಂದ ನಿಂತೇಬಿಟ್ಟಿದ್ದ. ಇನ್ನೇನು ಬೇಕು, ನಮ್ಮ ಜಯಕ್ಕೆ ಸಾಕ್ಷಿ? ಹುಡುಗರ ಗುಂಪಿನತ್ತ ಕಿರುನಗೆ ಬೀರುತ್ತ ಕೆಳಗೆ ಬಂದು ಕುಳಿತಿ¨ªಾಯ್ತು.

ಅದಾದ ಮೇಲೆ ಏನೇನೋ ಕಾರ್ಯಕ್ರಮ,  ಭಾಷಣ ಎಲ್ಲವೂ ನಡೆದರೂ ನಾವೆಲ್ಲರೂ ಕಾಯುತ್ತಿದ್ದದ್ದು ಮೇಷ್ಟ್ರ ಸನ್ಮಾನಕ್ಕಾಗಿ; ಅಥವಾ ಹರಿ ಮಾಡಬೇಕಾಗಿದ್ದ ಅಭಿನಂದನಾ ಭಾಷಣಕ್ಕಾಗಿ. ಮೊದಲು ಶಿಕ್ಷಕರು ಮೇಷ್ಟ್ರ ಬಗ್ಗೆ ಓದಿ ಅವರ ಸಾಧನೆ ಎÇÉಾ ತಿಳಿಸಿದರು. ವೇದಿಕೆಯಲ್ಲಿದ್ದವರ ಕಣ್ಣು ತುಂಬಿಬಂದಿತ್ತು, ನಾವೂ ಹನಿಗಣ್ಣಾಗಿ¨ªೆವು. ಕಡೆಯಲ್ಲಿ ಮೇಷ್ಟ್ರಿಗೆ ಪ್ರಿಯವಾದ ನಾಲ್ಕನೇ ತರಗತಿ ಮಕ್ಕಳಿಂದ ಒಂದೆರಡು ಮಾತು ಎಂದಿದ್ದೇ ಹರಿ ಎದ್ದು ನಿಂತ. ನಮಗೋ ಆತನಾಡುವ ಮಾತು ಕೇಳಲು ಎಲ್ಲಿಲ್ಲದ ಕುತೂಹಲ. ಈ ಹರಿ ಅದೆಲ್ಲಿಂದ ಸಂಗ್ರಹಿಸಿದ್ದನೋ ಗೊತ್ತಿಲ್ಲ, ಮೇಷ್ಟ್ರು ಹುಟ್ಟಿದ ಆಸ್ಪತ್ರೆಯಿಂದ ಶುರು ಮಾಡಿ ಎರಡು ಬಾರಿ ಪಿಯುಸಿ ಫೇಲಾಗಿದ್ದದ್ದನ್ನೂ ಹೆಮ್ಮೆಯಿಂದ ವಿವರಿಸಿದ. 

ಸೆಖೆ ಹೆಚ್ಚಾಗಿಯೋ ಏನೋ ಮೇಷ್ಟ್ರು ಬೆವರು ಒರೆಸಿಕೊಂಡರು. ನಮಗೆ ನಿಜವಾಗಿಯೂ ಇಷ್ಟೆÇÉಾ ವಿವರವಾಗಿ ಮಾಹಿತಿ ಕಲೆಹಾಕಿದ ಹುಡುಗರ ಬಗ್ಗೆ ಹೆಮ್ಮೆ ಮೂಡಿತು. ಏನಾದರಾಗಲಿ ನಮ್ಮ ಸಹಪಾಠಿಗಳೇ ತಾನೆ? ಅಲ್ಲದೇ ಹತ್ತಾರು ಬಾರಿ ಇಂಥ ಒಳ್ಳೆಯ ಮೇಷ್ಟ್ರು ಎÇÉಾ ಬಿಟ್ಟು ಹೋಗೇ ಬಿಡುತ್ತಾರೆ, ನಮಗೆ ಇನ್ನೆಂದೂ ನೋಡಲೂ ಸಿಗುವುದಿಲ್ಲ ಎಂಬುದನ್ನು ನೆನೆದರೇ ಬಹಳ ದುಃಖವಾಗುತ್ತದೆ ಎಂದು ಒತ್ತಿ ಒತ್ತಿ ಹೇಳಿದ ರೀತಿಗೆ ನಮಗೆ ಒಂಥರಾ ಬೇಸರವಾಗಿತ್ತು. ಹೆಡ್‌ ಮೇಡಂ ಕಣ್ಣÇÉೇ “ಸಾಕು’ ಎಂದು ಸನ್ನೆ ಮಾಡಿದರೂ ಭಾವಾವೇಶಕ್ಕೆ ಒಳಗಾಗಿದ್ದ ಹರಿ ಅದನ್ನೆಲ್ಲ ಲೆಕ್ಕಿಸುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಕಡೆಯ ಹಂತಕ್ಕೆ ಬಂದಾಗ ಬಿಕ್ಕಿದ ದನಿಯಲ್ಲಿ ,  “ಈ ಶತಮಾನ ಕಂಡ ಅತ್ಯುತ್ತಮ ಮೇಷ್ಟ್ರಾದ ಇವರಿಗೆ ದೊಡ್ಡ ದೊಡ್ಡ ಪ್ರಶಸ್ತಿ ಸಿಗಲಿ, ಬಹಳ ಬೇಗ ಅವರು ಕೀರ್ತಿಶೇಷರಾಗಲಿ ಎಂದು ದೇವರಲ್ಲಿ ಮನಸಾರೆ ಪ್ರಾರ್ಥಿಸುತ್ತೇವೆ’ ಎಂದಾಗ ಮಕ್ಕಳಾದ ನಾವೆÇÉಾ ಕಣ್ಣೊರೆಸಿಕೊಳ್ಳುತ್ತಲೇ ಎರಡು ನಿಮಿಷ ಜೋರಾಗಿ ಚಪ್ಪಾಳೆ ತಟ್ಟಿಬಿಟ್ಟೆವು. ಅದ್ಯಾಕೋ ವೇದಿಕೆಯಲ್ಲಿದ್ದವರು ಕಕ್ಕಾಬಿಕ್ಕಿಯಾದರೆ ಮೇಷ್ಟ್ರು ಮಾತ್ರ ಅಳುವವರಂತೆ ಕಂಡರು. ಅಂತೂ ಸನ್ಮಾನ ಸಮಾರಂಭ ಬಹಳ ಚೆನ್ನಾಗಿ ಮುಗಿಯಿತು. ನಾವೆÇÉಾ ವೈರತ್ವ ಮರೆತು, ಸೊಗಸಾದ ಭಾಷಣ ಮಾಡಿದ ಹರಿಯನ್ನು ಅಭಿನಂದಿಸುತ್ತ ನಿಂತಿ¨ªೆವು. ಹೆಡ್‌ ಮೇಡಂ ಯಾಕೋ ಮುಖ ಊದಿಸಿಕೊಂಡು ನಮ್ಮ ಟೀಚರ್‌ ಮೇಲೆ ರೇಗಾಡುತ್ತ ಸರಸರ ನಡೆದೇಬಿಟ್ಟರು.

ಕನ್ನಡ ಮೇಷ್ಟ್ರು ನಮ್ಮ ಹತ್ತಿರ ಬಂದು, “ಏನಪ್ಪಾ ಹರಿ, ನನ್ನ ಮೇಲೇಕೆ ಅಷ್ಟು ಸಿಟ್ಟು?’ ಅಂದರು. ನಮಗೋ ಎಲ್ಲಿಲ್ಲದ ಆಶ್ಚರ್ಯ. ಹರಿ ಏನೂ ಮಾತನಾಡದೇ ನಿಂತ. ಅವರೇ ಮಾತು ಮುಂದುವರಿಸಿ, “ಅಂದ ಹಾಗೆ ನನಗೆ ಏನೋ ಪ್ರಶಸ್ತಿ ಸಿಗಲಿ ಎಂದು ಹಾರೈಸಿದೆಯಲ್ಲ, ಯಾರು ಹಾಗೆ ಹೇಳಿಕೊಟ್ಟರು?’ ಎಂದರು. ಹರಿ ಕೂಡಲೇ, “ನಾನೇ ಬರೆದಿದ್ದು ಸರ್‌! ಲೈಬ್ರರಿಯಲ್ಲಿ ಇರುವ ಪುಸ್ತಕದಲ್ಲಿ ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ ಮುಂತಾದವರ ಹೆಸರಿನ ಮುಂದೆ ಕೀರ್ತಿಶೇಷ ಇದೆಯಲ್ಲ. ಅಂಥವರಿಗೆ ಸಂದ ಪ್ರಶಸ್ತಿ ನಿಮಗೂ ಸಿಗಲಿ’ ಎಂದು ನಾನೇ ಸೇರಿಸಿದೆ. “ನಿಮ್ಮ ಹೆಸರಿನ ಜತೆ ಚೆನ್ನಾಗಿ ಹೊಂದಿಕೊಳ್ಳುತ್ತೆ ಸರ್‌’ ಎಂದ. ಮೇಷ್ಟ್ರು  ಶಿಷ್ಯನಿಂದ ಇಂಥ ಮಾತು ಕೇಳಿ, “ನನ್ನ ಜೀವನ ಪಾವನವಾಯಿತು. ಕನ್ನಡ ಕಲಿಸಿದ್ದಕ್ಕೂ ಸಾರ್ಥಕ. ಅಂದ ಹಾಗೆ ಅದರ ಅರ್ಥ ಗೊತ್ತೇ?’ ಎಂದು ಕೇಳಿದರು. ಖುಷಿಯಿಂದ ಹಿಗ್ಗಿ ಹೀರೆಕಾಯಿಯಾಗಿದ್ದ ಹರಿ, “ಇಲ್ಲ’ ಎಂದು ತಲೆ ಆಡಿಸಿದ. ಮೇಷ್ಟ್ರು ನಿಧಾನವಾಗಿ, “ಕೀರ್ತಿಶೇಷ ಎಂದರೆ ಕೀರ್ತಿಯನ್ನು ಮಾತ್ರ ಉಳಿಸಿ ಹೋದವರು ಎಂದರ್ಥ. ಸತ್ತು ಹೋದವರಿಗೆ ಬಳಸುವ ಶಬ್ದ ಅದು. ಅಂತೂ ಸನ್ಮಾನ ಮಾಡಿ, ನಾನು ಬೇಗ ಸಾಯಲಿ ಎಂದು ವೇದಿಕೆಯÇÉೇ  ಹಾರೈಸಿದೆ, ಅದಕ್ಕೆ ನೀವೆಲ್ಲ ಚಪ್ಪಾಳೆ ಹೊಡೆದಿರಿ. ಸರಿಹೋಯ್ತು’ ಎಂದರು. ಪಾಪ ಹರಿ ಪೆಚ್ಚಾಗಿದ್ದ , ನಾವೂ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಾದೆವು. ಕಡೆಗೆ ಮೇಷ್ಟ್ರೇ, “ಹೋಗಲಿ ಬಿಡು, ಹಾಗೆ ಹಾರೈಸಿದರೆ ಆಯುಷ್ಯ ಹೆಚ್ಚಾಗುತ್ತೆ ಅಂದುಕೊಳ್ತೀನಿ. ಚೆನ್ನಾಗಿ ಓದಿ ಜಾಣರಾಗಿ. ಇನ್ನು ಮುಂದೆ ಮಾತನಾಡುವಾಗ ಎಲ್ಲಿಂದ ಆರಿಸಿದರೂ  ಪ್ರತೀ ಶಬ್ದದ ಅರ್ಥ ತಿಳಿದು ಮಾತನಾಡಿ’  ಎಂದು ಸಮಾಧಾನ ಮಾಡಿದರು. ಅಂತೂ ಕನ್ನಡ ಮೇಷ್ಟ್ರ ಸನ್ಮಾನ ಸಮಾರಂಭ ಈ ರೀತಿ ಮುಗಿದಿತ್ತು!

– ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.