ಚಂದನವನಕ್ಕೆ ಕಣ್ಸನ್ನೆ ಸುಂದರಿ

Team Udayavani, Jun 2, 2019, 6:00 AM IST

ಸಾಮಾನ್ಯವಾಗಿ ಯಾವುದೇ ಚಿತ್ರ ಬಿಡುಗಡೆಯಾದ ನಂತರ ಅದರಲ್ಲಿ ಅಭಿನಯಿಸಿರುವ ನಾಯಕ, ನಾಯಕಿ, ನಿರ್ದೇಶಕರು ಜನಪ್ರಿಯವಾಗುವುದು, ಬಹುಬೇಡಿಕೆ ಪಡೆದುಕೊಳ್ಳುವುದು ಚಿತ್ರರಂಗದಲ್ಲಿ ಸರ್ವೇಸಾಮಾನ್ಯ. ಆದರೆ, ಚಿತ್ರದ ಕೇವಲ ಒಂದೇ ಒಂದು ದೃಶ್ಯ ತುಣುಕಿನ ಮೂಲಕವೇ ಸ್ಟಾರ್‌ ಆಗೋದು ಅಂದ್ರೆ ಅದು ಸಾಮಾನ್ಯದ ಮಾತಲ್ಲ. ಹೀಗಿರುವಾಗ, ಕೇವಲ ಕ್ಷಣಮಾತ್ರದ ತನ್ನ ಕಣ್ಸನ್ನೆ ಮೂಲಕವೇ ರಾತ್ರಿ-ಬೆಳಗಾಗುವುದರೊಳಗೆ ಜನಪ್ರಿಯವಾದ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌.

ತನ್ನ ಮೊದಲ ಚಿತ್ರ ಒರು ಆಡರ್‌ ಲವ್‌ ಬಿಡುಗಡೆಗೂ ಮೊದಲೇ ಸಾಕಷ್ಟು ಬೇಡಿಕೆ ಪಡೆದುಕೊಂಡ ಪ್ರಿಯಾ ವಾರಿಯರ್‌ ಕನ್ನಡ ಚಿತ್ರದಲ್ಲೂ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಒರು ಆಡರ್‌ ಲವ್‌ ಚಿತ್ರ ಹೇಳಿಕೊಳ್ಳುವ ಮಟ್ಟಿಗೆ ಯಶಸ್ವಿಯಾಗದಿದ್ದರೂ, ಪ್ರಿಯಾ ವಾರಿಯರ್‌ಗೆ ಇದ್ದ ಡಿಮ್ಯಾಂಡ್‌ ಅಂತೂ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಲೆಯಾಳದ ಜೊತೆಗೆ ಹಿಂದಿ, ತಮಿಳು, ತೆಲುಗು, ಕನ್ನಡಕ್ಕೂ ಪ್ರಿಯಾಳನ್ನು ಕರೆತರುವ ಪ್ರಯತ್ನ ನಡೆಯುತ್ತಲೇ ಇದೆ. ಸದ್ಯ ಬಾಲಿವುಡ್‌ನ‌ಲ್ಲಿ ಶ್ರೀದೇವಿ ಬಂಗ್ಲೋ ಚಿತ್ರದಲ್ಲಿ ಅಭಿನಯಿಸುವ ಮೂಲಕ ಅಕೌಂಟ್‌ ಓಪನ್‌ ಮಾಡಿರುವ ಪ್ರಿಯಾ, ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಇವೆಲ್ಲದರ ನಡುವೆ ಕಳೆದ ಒಂದೂವರೆ ವರ್ಷದಿಂದ ಪ್ರಿಯಾ ವಾರಿಯರ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈಗ ಇದಕ್ಕೆ ಪೂರಕ ಎನ್ನುವಂತೆ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹೊರಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಸಂಭಾಷಣೆಕಾರರಾಗಿ, ಸಹಸ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾ ಪ್ರಕಾಶ್‌ ಅವರನ್ನು ಕರೆತರುವ ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೆ ಪ್ರಿಯಾ ಪ್ರಕಾಶ್‌ ಜೊತೆ ಮಾತುಕತೆ ಕೂಡ ಮಾಡಿರುವ ರಘು ಆ್ಯಂಡ್‌ ಟೀಮ್‌ ಪ್ರಿಯಾಗೆ ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ವಿವರಿಸಿ¨ªಾರಂತೆ. ಇನ್ನು ಕಥೆ ಕೇಳಿ ಪ್ರಿಯಾ ತುಂಬಾ ಖುಷಿಯಾಗಿದ್ದು, ಶೀಘ್ರದಲ್ಲೆ ಪ್ರಿಯಾ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂದ ಹಾಗೆ, ಲವ್‌ ಸ್ಟೋರಿ ಆಧಾರಿತವಾಗಿರುವ ಈ ಚಿತ್ರದಲ್ಲಿ ಪ್ರಿಯಾ ವಾರಿಯರ್‌ಗೆ ಜೋಡಿಯಾಗಿ ಸ್ಯಾಂಡಲ್‌ವುಡ್‌ ನಟರೊಬ್ಬರ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ಲಾನ್‌ ನಡೆಯುತ್ತಿದೆಯಂತೆ. ಎಲ್ಲವು ಅಂದುಕೊಂಡಂತೆ ಆದರೆ ಸಿನಿಮಾ ಆಗಸ್ಟ್‌ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಈ ಹಿಂದೆ ಕಿಲ್ಲಿಂಗ್‌ ವೀರಪ್ಪನ್‌ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಬಿ. ಎಸ್‌. ಸುಧೀಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳದಲ್ಲಿ ಚಿತ್ರವನ್ನು ರಿಲೀಸ್‌ ಮಾಡುವ ಪ್ಲಾನ್‌ನಲ್ಲಿದೆ ಚಿತ್ರತಂಡ. ಒಟ್ಟಾರೆ ಪ್ರಿಯಾ ವಾರಿಯರ್‌ ನಿಜಕ್ಕೂ ಕನ್ನಡಕ್ಕೆ ಬರುತ್ತಾಳಾ ಅನ್ನೋದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್‌ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ...

  • ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. ""ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ...

  • (ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.) ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು....

  • ಹೊಸ ಅಂಕಣ... ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ...

  • ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ "ದೇಶ ಸುತ್ತು ಕೋಶ ಓದು' ಎಂಬ ಗಾದೆ ನಮಗೆ ಅರ್ಥ...

ಹೊಸ ಸೇರ್ಪಡೆ