ಚಳಿಗಾಲಕ್ಕೆ ಆರೋಗ್ಯಕರ ಖಾದ್ಯಗಳು


Team Udayavani, Nov 17, 2017, 7:10 PM IST

17-15.jpg

ನವಂಬರ್‌-ದಶಂಬರ್‌ ತಿಂಗಳ ಚಳಿಗಾಲದಲ್ಲಿ ನೆಲಗಡಲೆ, ನೆಲ್ಲಿಕಾಯಿ, ಗೆಣಸು, ಅಮಟೆಕಾಯಿ, ಬಾಳೆಕಾಯಿ, ಬಾಳೆದಿಂಡು, ಆಲೂಗಡ್ಡೆ, ಸುವರ್ಣಗಡ್ಡೆ, ಕಡಲೆ ಕಾಳು, ಬೂದುಗುಂಬಳ ಇತ್ಯಾದಿಗಳ ಖಾದ್ಯ ಸೇವನೆಯಿಂದ ಆರೋಗ್ಯ ಕಾಪಾಡಬಹುದು. ಇಲ್ಲಿವೆ ಕೆಲವು ಖಾದ್ಯಗಳನ್ನು ತಯಾರಿಸುವ ವಿಧಾನ.

ಬೂದುಗುಂಬಳಕಾಯಿ ಸಾಸಿವೆ 
ಬೇಕಾಗುವ ಸಾಮಗ್ರಿ: ಸಿಪ್ಪೆ  ತೆಗೆದ ಬೂದುಕುಂಬಳ ಹೋಳು- 3 ಕಪ್‌, ತೆಂಗಿನ ತುರಿ-2 ಕಪ್‌, ಸಾಸಿವೆ- 2 ಚಮಚ, ಹಸಿಮೆಣಸಿನ ಕಾಯಿ-3, ಎಣ್ಣೆ ಒಗ್ಗರಣೆಗೆ- 2 ಚಮಚ, ಕರಿಬೇವಿನ ಎಸಳು-2, ರುಚಿಗೆ ಉಪ್ಪು , ಜೀರಿಗೆ-1 ಚಮಚ, ಹುಣಸೆಹಣ್ಣು ಗೋಲಿಗಾತ್ರ.

ತಯಾರಿಸುವ ವಿಧಾನ: ಬೂದುಗುಂಬಳಕ್ಕೆ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ಬೇಯಿಸಿಡಿ. ಎಣ್ಣೆಯಲ್ಲಿ ಹಸಿಮೆಣಸಿನ ಕಾಯಿ ಹುರಿದು ತೆಗೆಯಿರಿ. ತೆಂಗಿನತುರಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು ಹಾಕಿ ರುಬ್ಬಿ ತೆಗೆಯುವ ಮೊದಲು ಒಂದು ಚಮಚ ಸಾಸಿಸೆ ಹಾಕಿ ತಿರುವಿ ಬೇಯಿಸಿದ ಬೂದುಗುಂಬಳಕ್ಕೆ ಹಾಕಿ ಕುದಿಸಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಸೊಪ್ಪು , ಜೀರಿಗೆ ಒಗ್ಗರಣೆ ಮಾಡಿ ಕುಂಬಳಕ್ಕೆ ಹಾಕಿ ಮುಚ್ಚಿರಿ. (ಬೇಕಾದರೆ ಅರಸಿನ ಹುಡಿ ಹಾಕಬಹುದು). ಊಟಕ್ಕೆ, ದೋಸೆಯೊಂದಿಗೆ ಸವಿಯಬಹುದು.

ಬೂದುಗುಂಬಳ ಸಿಪ್ಪೆಯ ತಾಳು (ಪಲ್ಯ)
ಬೇಕಾಗುವ ಸಾಮಗ್ರಿ: ಬೂದುಗುಂಬಳ ಸಿಪ್ಪೆ ಸ್ವಲ್ಪ , ಆಲೂಗಡ್ಡೆ- 2, ತೆಂಗಿನ ತುರಿ-1/4 ಕಪ್‌, ಉಪ್ಪು ರುಚಿಗೆ, ಎಣ್ಣೆ, ಸಾಸಿವೆ, ಒಗ್ಗರಣೆ ಸೊಪ್ಪು, ಒಣಮೆಣಸಿನ ಕಾಯಿ-2.

ತಯಾರಿಸುವ ವಿಧಾನ: ಬೂದುಗುಂಬಳ ಸಿಪ್ಪೆ , ಆಲೂಗಡ್ಡೆ ಸಪೂರ ತುಂಡರಿಸಿ ತೊಳೆದಿಡಿ. ಬಾಣಲೆಯಲ್ಲಿ ಇಲ್ಲವೆ ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಸಾಸಿವೆ, ಒಗ್ಗರಣೆ ಸೊಪ್ಪು ಹಾಕಿ ಒಣಮೆಣಸಿನ ಕಾಯಿ ಚೂರು ಹಾಕಿ ಒಗ್ಗರಣೆ ಮಾಡಿ ತುಂಡರಿಸಿಟ್ಟ ಕುಂಬಳ ಸಿಪ್ಪೆ, ಆಲೂಗಡ್ಡೆ , ಉಪ್ಪು, ತೆಂಗಿನತುರಿ ಹಾಕಿ ಸ್ವಲ್ಪ  ನೀರು ಹಾಕಿ ಬೇಯಿಸಿ. ಆರೋಗ್ಯಕರ ಪಲ್ಯ ತಯಾರು.

ಅಲಸಂಡೆ, ಶೇಂಗಾ ಬೀಜದ ತಾಳು (ಪಲ್ಯ)
ಬೇಕಾಗುವ ಸಾಮಗ್ರಿ: ಅಲಸಂಡೆ- 250 ಗ್ರಾಂ, ಶೇಂಗಾ ಬೀಜ-50 ಗ್ರಾಂ, ಎಣ್ಣೆ- 2 ಚಮಚ, ಸಾಸಿವೆ-1 ಚಮಚ, ಒಣಮೆಣಸಿನಕಾಯಿ- 3, ತೆಂಗಿನತುರಿ- 2 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಶೇಂಗಾ ಬೀಜ ನೀರಿನಲ್ಲಿ ಎರಡು ಗಂಟೆ ನೆನೆಸಿಡಿ. ಅಲಸಂಡೆಕಾಯಿ ಚಿಕ್ಕ ಚಿಕ್ಕದಾಗಿ ತುಂಡರಿಸಿಡಿ. ಕುಕ್ಕರ್‌ನಲ್ಲಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಅಲಸಂಡೆ, ಶೇಂಗಾ ಬೀಜ, ತೆಂಗಿನ ತುರಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಿ ಎರಡು ಸೀಟಿ ತೆಗೆಯಿರಿ. ಊಟಕ್ಕೆ, ದೋಸೆ, ಚಪಾತಿಯೊಂದಿಗೆ ರುಚಿಕರ ತಾಳು ಸಿದ್ಧ.

ಬಾಳೆದಿಂಡಿನ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿ: ತುಂಡರಿಸಿದ ಬಾಳೆದಿಂಡು- 2 ಕಪ್‌, ಹಸಿಮೆಣಸಿನ ಕಾಯಿ- 2, ದಪ್ಪ ಮೊಸರು- 1 ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಳೆದಿಂಡಿಗೆ ಉಪ್ಪು ಹಾಕಿ ಬೇಯಿಸಿಡಿ. ತಣಿದ ನಂತರ ಮೊಸರು, ಹಸಿಮೆಣಸಿನಕಾಯಿ ಚೂರು ಹಾಕಿ ಚೆನ್ನಾಗಿ ಬೆರೆಸಿ ಫ್ರಿಜ್‌ನಲ್ಲಿಡಿ. ಊಟದ ಹೊತ್ತಿಗೆ ತೆಗೆದು ಸವಿಯಿರಿ. ಮೂತ್ರಕೋಶದ ಕಲ್ಲು ನಿವಾರಣೆಗೆ ಉತ್ತಮ ಆಹಾರ.

ಕಡಲೆಕಾಳಿನ ಸುಕ್ಕ
ಬೇಕಾಗುವ ಸಾಮಗ್ರಿ: ಕಡಲೆಕಾಳು- 1 ಕಪ್‌, ನೀರುಳ್ಳಿ ಚೂರು- 1 ಕಪ್‌, ಒಣಮೆಣಸಿನಕಾಯಿ 5-6, ತೆಂಗಿನ ತುರಿ- 2 ಕಪ್‌, ಕೊತ್ತಂಬರಿ- 2 ಚಮಚ, ಜೀರಿಗೆ-1 ಚಮಚ, ಲವಂಗ- 1, ಚೆಕ್ಕೆ- 1 ಇಂಚು, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ.

ತಯಾರಿಸುವ ವಿಧಾನ: ಕಡಲೆಕಾಳನ್ನು ಹಿಂದಿನ ದಿನ ನೆನೆಸಿಡಿ. ಮರುದಿನ ತೆಂಗಿನತುರಿ ಪರಿಮಳ ಬರುವವರೆಗೆ ಹುರಿದಿಡಿ. ಕೊತ್ತಂಬರಿ, ಜೀರಿಗೆ, ಲವಂಗ, ಚಕ್ಕೆ ಸ್ವಲ್ಪ ಹುರಿಯಿರಿ. ಒಣಮೆಣಸಿನ ಕಾಯಿ ಹುರಿದು ತೆಗೆಯಿರಿ. ತೆಂಗಿನ ತುರಿ, ಹುಣಸೆಹಣ್ಣು, ಒಣಮೆಣಸಿನಕಾಯಿ, ಸಾಂಬಾರ ಜೀನಸು ಸ್ವಲ್ಪ ದರಗಾಗಿ ರುಬ್ಬಿರಿ. ಬೇಯಿಸಿಟ್ಟ ಕಡಲೆಕಾಳಿಗೆ ರುಬ್ಬಿದ ಮಸಾಲೆ, ಉಪ್ಪುಹಾಕಿ ಕುದಿಸಿರಿ. ಸ್ವಲ್ಪ ನೀರುಳ್ಳಿಯ ಒಗ್ಗರಣೆ ಮಾಡಿ ಕಡಲೆಕಾಳಿಗೆ ಹಾಕಿ ಮುಚ್ಚಿಡಿ. ಅನ್ನದೊಂದಿಗೆ, ಚಪಾತಿ, ಪೂರಿ, ದೋಸೆಯೊಂದಿಗೆ ಆರೋಗ್ಯದಾಯಕ, ಸ್ವಾದಿಷ್ಟ ಕಡಲೆಕಾಳು ಸವಿಯಿರಿ.

ಎಸ್‌. ಜಯಶ್ರೀ ಶೆಣೈ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.