ಮನೋರಥ

ಮನೋರಥ

Team Udayavani, May 1, 2019, 6:15 AM IST

Avalu-Manoratha

ನಮ್ಮ ಸಂಬಂಧಿಕರ ಏಳು ವರ್ಷದ ಮಗನಿಗೆ ಶಾಲೆಯಲ್ಲಿ ಹೊಂದಿಕೊಳ್ಳಲು ಬಹಳ ಕಷ್ಟವಾಗುತ್ತಿದೆ. ಶಿಕ್ಷಕರು ಪದೇ ಪದೆ ಹೆತ್ತವರನ್ನು ಶಾಲೆಗೆ ಕರೆಸಿ, ಆ ಹುಡುಗನ ಬಗ್ಗೆ ದೂರು ಹೇಳುತ್ತಾರೆ. ಮನೆಯಲ್ಲಿ ಇವರು ಎಷ್ಟು ಬುದ್ಧಿ ಹೇಳಿದರೂ, ಹುಡುಗನ ಸ್ವಭಾವದಲ್ಲಿ ಸುಧಾರಣೆ ಕಾಣುತ್ತಿಲ್ಲ. ಪಾಠದ ವಿಷಯದಲ್ಲೂ ಸಾಧಾರಣವಾಗಿ ಇದ್ದಾನೆ ಅಷ್ಟೇ. ಹೇಳಿ ಕೊಟ್ಟಾಗ ಎಲ್ಲಾ ಅರ್ಥವಾದಂತೆಯೇ ತೋರುತ್ತದೆ.

ಆದರೆ ಬರೆಯಲು, ಓದಲು ಕೂರಿಸಲು ಹರಸಾಹಸ ಪಡಬೇಕಾಗುತ್ತದೆ! ಶಾಲೆಯಲ್ಲಿರುವ ಓರ್ವ ಟೀಚರ್‌, “ಇವನ ಅತಿಯಾದ ತಂಟೆ, ಯಾರ ಮಾತನ್ನೂ ಕೇಳದೇ ಇರುವುದು ನೋಡಿದರೆ, ಇವನಿಗೆ ಅತಿ ಚಟುವಟಿಕೆಯ ಕಾಯಿಲೆ ಇದೆ ಅಂತ ತೋರುತ್ತದೆ. ಡಾಕ್ಟ್ರಿಗೆ ಒಮ್ಮೆ ತೋರಿಸಿ’ ಅಂತಲೂ ಸೂಚಿಸಿದ್ದಾರೆ! ಅದನ್ನು ಕೇಳಿ ಇವರಿಗೆ ಇನ್ನಷ್ಟು ಗಾಬರಿಯಾಗಿದೆ! ಈ ರೀತಿ ತಂಟೆ-ಪೋಕರಿತನವನ್ನು ಸಹಜ ಬೆಳವಣಿಗೆಯ ಭಾಗ ಎಂದು ಬಗೆದು ಸುಮ್ಮನೆ ತಾಳ್ಮೆ ವಹಿಸಬೇಕೇ? ಇಲ್ಲಾ ಕಾಯಿಲೆ ಅಂತ ಪರಿಗಣಿಸಿ ಚಿಕಿತ್ಸೆ ಕೊಡಿಸಬೇಕೇ? ದಯವಿಟ್ಟು ಸಲಹೆ ನೀಡಿ.
– ರಮೀಲಾ, ಬೆಳ್ತಂಗಡಿ

ರಮೀಲಾರವರೇ, ನಿಮಗೆ ಹಾಗೂ ಮಗುವಿನ ಪೋಷಕರಿಗೆ ಆಗಿರುವ ಗೊಂದಲ ಸಹಜವಾದುದೆ. ತಂಟೆ, ಮಾತು ಕೇಳದಿರುವುದು, ಹಟ, ಚಂಚಲತೆ ಬೆಳೆಯುವ ವಯಸ್ಸಿನಲ್ಲಿ ಎಲ್ಲ ಮಕ್ಕಳಲ್ಲೂ ಇದ್ದೇ ಇರುತ್ತದೆ. ಆದರೆ, ಅದು ಸದಾ ಕಾಲ ಇದ್ದರೆ, ಅವರ ಕಲಿಯು­ವಿಕೆಯಲ್ಲಿ, ದೈನಂದಿನ ಚಟುವಟಿಕೆಗಳನ್ನು ಮಾಡುವಲ್ಲಿ ತೊಡಕುಂಟು ಮಾಡುತ್ತಿದ್ದರೆ, ಅದರಿಂದ ಬೇರೆಯವರಿಗೆ ಬಹಳ ಉಪದ್ರ ಆಗುತ್ತಿದ್ದರೆ, ಶಾಲೆಯಲ್ಲಿ, ಮನೆಯಲ್ಲಿ ಅವರನ್ನು ಸಂಭಾಳಿಸುವುದೇ ಸಮಸ್ಯೆಯಾದರೆ, ಆಗ ಆ ಮಕ್ಕಳು ಗಮನ ಕೊರತೆ ಹಾಗೂ ಅತಿ ಚಟುವಟಿಕೆ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದಾದ ಸಾಧ್ಯತೆ ಜಾಸ್ತಿ.

ನೀವು ಕೊಟ್ಟ ಮಾಹಿತಿಯಿಂದ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೂ, ಈ ವಿಶಿಷ್ಟ ಕಾಯಿಲೆಯ ಬಗ್ಗೆ ಇಲ್ಲಿ ವಿವರಿಸುತ್ತೇನೆ. ಇದರ ಹೆಚ್ಚಿನ ಗುಣಲಕ್ಷಣಗಳು ಕನಿಷ್ಠ ಆರು ತಿಂಗಳುಗಳ ಕಾಲದವರೆಗೂ ನೀವು ಹೇಳಿರುವ ಮಗುವಿನಲ್ಲಿದ್ದು, ಶಾಲೆ, ಮನೆ, ಎರಡು ಜಾಗದಲ್ಲೂ ಇದ್ದರೆ, ಏಳು ವರ್ಷಕ್ಕಿಂತಲೂ ಮುಂಚಿತವಾಗೇ ಇದು ಶುರುವಾಗಿದ್ದರೆ ಆಗ ಕಾಯಿಲೆ ಇದೆ ಎಂದು ಪರಿಗಣಿಸಿ, ತಜ್ಞವೈದ್ಯರಿಗೆ ತೋರಿಸಿ, ಅವರು ಸೂಚಿಸಿದಂತೆ ಮುಂದುವರಿಯುವುದು ಒಳ್ಳೆಯದು.

ಈ ಕಾಯಿಲೆಯಲ್ಲಿ ಮೂರು ತರಹದ ಗುಣಲಕ್ಷಣಗಳು ಇರುತ್ತವೆ. ಮೊದಲನೆಯದು ಗಮನ ಕೇಂದ್ರೀಕರಿಸುವಲ್ಲಿನ ಕೊರತೆ. ಹೀಗಿದ್ದಾಗ ಆ ಮಗು ವಿವರಗಳನ್ನು ಗಮನಿಸುವುದಿಲ್ಲ; ಅಜಾಗರೂಕತೆಯಿಂದ ನಡೆದುಕೊಳ್ಳುತ್ತದೆ; ಹೇಳಿದ್ದನ್ನು ಗಮನವಿಟ್ಟು ಕೇಳಿದಂತೆ ತೋರದು. ಹೇಳಿದ ಕೆಲಸವನ್ನು ಅರ್ಥೈಸಿಕೊಂಡು ಪೂರ್ಣ ಮಾಡಲೂ ಆಗದು. ಶಿಸ್ತುಬದ್ಧವಾಗಿ ಹಾಗೂ ಗಮನ ಕೇಂದ್ರೀಕರಿಸಿ ಮಾಡುವ ಚಟುವಟಿಕೆ (ಉದಾಹರಣೆಗೆ: ಲೆಕ್ಕದ ಅಭ್ಯಾಸಗಳು) ಅವರಿಗೆ ಇಷ್ಟವಾಗದು. ಅದನ್ನು ತಪ್ಪಿಸಿಯೇ ತೆಗೆಯಲು ನೋಡುವರು. ತಮ್ಮ ವಸ್ತುಗಳನ್ನು ಪದೇ ಪದೆ ಕಳೆದುಕೊಳ್ಳುವುದು, ಮರೆತು ಹೋಗುವುದು ಪ್ರತೀ ಪ್ರಚೋದನೆಗೂ ಗಮನ ಎಲ್ಲೆಲ್ಲೋ ಹೋಗುವುದು… ಸಾಮಾನ್ಯವಾಗಿ ತೋರಿ ಬರುತ್ತದೆ.

ಎರಡನೆಯದು, ಅತಿಚಟುವಟಿಕೆಯ ಗುಣಲಕ್ಷಣಗಳು. ಇದರಲ್ಲಿ ಕೈ-ಕಾಲು-ಮೈಯನ್ನು ಸ್ಥಿರವಾಗಿ ಇಡಲಾಗದೆ, ಸದಾಕಾಲ ಅಲ್ಲಾಡುತ್ತ, ಕುಣಿಯುತ್ತ, ಜಿಗಿಯುತ್ತ ಇರುವುದು; ಕೂರಿಸಿದ ಜಾಗದಿಂದ ಪದೇ ಪದೆ ನೆಪ ಹೇಳಿಕೊಂಡು ಎದ್ದು ಓಡಾಡುವುದು, ಅತಿಯಾಗಿ ಅಲ್ಲಿಂದಲ್ಲಿಗೆ ಓಡಾಡುವುದು, ಹತ್ತಿ ಇಳಿದು ಮಾಡುವುದು; ಮೌನವಾಗಿ ಆಡಲು ಅಥವಾ ಓದಲು ಆಗದೇ ಇರುವುದು; ಸದಾ ಕಾಲ ಸ್ವಿಚ್‌ ಆನ್‌ ಆದವರಂತೆ ಚಲಿಸುತ್ತಲೇ ಇರುವುದು, ಅನಗತ್ಯವಾಗಿ ವಸ್ತುಗಳನ್ನು ಮುಟ್ಟುವುದು, ಬಳಸುವುದು; ಇತ್ಯಾದಿ-­ಅತಿಚಟುವಟಿಕೆಯ ಗುಣಲಕ್ಷಣಗಳು ತೋರುತ್ತವೆ.

ಇದರಿಂದ ಮನೆಯಲ್ಲಿ, ಕ್ಲಾಸಿನಲ್ಲಿ ಬೇರೆಯವರಿಗೆ ಬಹಳಷ್ಟು ಕಷ್ಟವೂ ಆಗುತ್ತದೆ.
ಮೂರನೆಯ ಮುಖ್ಯ ಗುಣಲಕ್ಷಣ ಪ್ರಚೋದಕತೆ ಅಥವಾ ಥಟ್ಟಂತ ಪ್ರತಿಕ್ರಿಯೆ ನೀಡುವ ಸ್ವಭಾವ. ಉದಾಹರಣೆಗೆ, ಯೋಚಿಸದೇ ಉತ್ತರಿಸುವುದು, ಮಾತಾಡುವುದು, ಮಾತಾಡುತ್ತಾ ಹೋಗುವುದು, ತನ್ನ ಸರದಿಗಾಗಿ ಕಾಯಲಿಕ್ಕೆ ಆಗದೇ ಇರುವುದು, ಬೇರೆಯವರ ಕೆಲಸ ಅಥವಾ ಮಾತಿನಲ್ಲಿ ನಡುವೆ ಬರುವುದು… ಇತ್ಯಾದಿ.

ಈ ರೀತಿಯ ತೊಂದರೆಯಾದಾಗ, ವೈದ್ಯರಲ್ಲಿ ಇದನ್ನು ನಿಯಂತ್ರಿಸಲು ಕೆಲವು ನಿರ್ದಿಷ್ಟ ಔಷಧಿಗಳು ಇರುತ್ತವೆ. ಅವರ ಸೂಚನೆಯಂತೆಯೇ ಇವುಗಳನ್ನು ತೆಗೆದುಕೊಳ್ಳಬೇಕು. ಔಷಧಿಯಲ್ಲದೆ ಬೇರೆ ರೀತಿ ಸ್ವಭಾವ ತಿದ್ದುವ ಕ್ರಮಗಳನ್ನೂ ಅಳವಡಿಸಿ ಪ್ರಯತ್ನಿಸಬೇಕಾಗುತ್ತದೆ. ವೈಯಕ್ತಿಕ ಹಾಗೂ ಕುಟುಂಬದವರಿಗೆ ಕಾಯಿಲೆ ಬಗ್ಗೆ ಕೂಲಂಕಷವಾಗಿ ತಿಳಿಸಿ ಹೇಳಿಕೊಡಲಾಗುತ್ತದೆ.

ಸ್ವಭಾವ ತಿದ್ದುವ ಸಮಾಲೋಚಕರ ಚಿಕಿತ್ಸೆಯಲ್ಲಿ ಸ್ಪಷ್ಪ ನಿರೀಕ್ಷಣೆಗಳನ್ನಿಟ್ಟು, ನಿಯಮಗಳನ್ನಿಡುವ ಪದ್ಧತಿ, ಕೆಲಸಗಳನ್ನು ಚಿಕ್ಕ ಸ್ಪಷ್ಟ ತುಂಡುಗಳಾಗಿ ವಿಭಜಿಸಿ ಮಾಡಿಸುವ ತಂತ್ರ, ಸ್ವಭಾವಕ್ಕೆ ತಕ್ಕಂತೆ ಒಳ್ಳೆಯ ಅಥವಾ ಹಿತಕರ ಸಂಭಾವನೆ ಸಿಗುವಂತೆ ಮಾಡುವ ವಿಧಾನ; ಯಾರೊಡನೆಯೂ ಸಂಪರ್ಕಿಸದಂತೆ, ಮೌನವಾಗಿ, ನಿರ್ದಿಷ್ಟ ಕಾಲಾವಧಿಗೆ ಮಗುವನ್ನು ಬಹಿಷ್ಕರಿಸುವ ಟೈಮ್‌ ಔಟ್‌ ಪ್ರಕ್ರಿಯೆ- ಮಗು ಚೇಷ್ಟೆ ಮಾಡಿದಾಗ; ತಮ್ಮ ಸಹಪಾಠಿಗಳೊಡನೆ, ಬೇರೆ ಮಕ್ಕಳೊಡನೆ, ಶಿಕ್ಷಕರು-­ಪೋಷಕರೊಡನೆ ಈ ರೀತಿಯ ಮಕ್ಕಳು ಹೇಗೆ ವ್ಯವಹರಿಸಬೇಕು ಎಂಬುದನ್ನು ದೃಶ್ಯ ನಾಟಕದ ಮೂಲಕ ಅವರಿಗೆ ಮಾಡಿ-ತೋರಿಸಿ, ಮನದಟ್ಟು ಮಾಡುವಿಕೆ; ಶಿಕ್ಷಕರಿಗೆ, ಪೋಷಕರಿಗೆ, ಹಾಗೂ ಶಾಲೆಯಲ್ಲಿ ಇದರ ಕುರಿತಾಗಿ ವಿಶೇಷ ಮಾಹಿತಿ ನೀಡಿ ತರಬೇತಿ ನೀಡುವಿಕೆ… ಮುಂತಾದವು.

ಹೀಗೆ ನಾನಾ ವಿಧಿ-ವಿಧಾನಗಳನ್ನು ಪ್ರಯತ್ನಿಸಿ ನೋಡಿದಾಗ ಮಕ್ಕಳಲ್ಲಿ ಕಂಡು ಬರುವ ಈ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ದೊರಕುತ್ತದೆ. ಇಲ್ಲಿ ಮಕ್ಕಳ- ಪೋಷಕರ ಇಬ್ಬರ ಪ್ರಯತ್ನವೂ ಅಗತ್ಯ.

— ಡಾ. ಅರುಣಾ ಯಡಿಯಾಳ್‌

ಟಾಪ್ ನ್ಯೂಸ್

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.