ಶ್ಯ್… ಅವಳು ನಿದ್ದೆ ಮಾಡಲಿ

Team Udayavani, May 15, 2019, 6:00 AM IST

ಮನೆಯಲ್ಲಿ ಎಲ್ಲರಿಗಿಂತ ಲೇಟಾಗಿ ಮಲಗಿ, ಎಲ್ಲರಿಗಿಂತ ಬೇಗ ಏಳುವವಳು ಅಮ್ಮ. ನಿತ್ಯವೂ ಎಂಟು ಗಂಟೆ ನಿದ್ದೆ ಮಾಡಲೇಬೇಕು ಅಂತ ಯಾರೇ ಹೇಳಿದರೂ, ಕೆಲಸದೊತ್ತಡ ಅವಳ ಸಿಹಿನಿದ್ರೆಗೆ ಬ್ರೇಕ್‌ ಹಾಕಿ ಬಿಡುತ್ತದೆ. ಎಂಟು ಗಂಟೆ ಬಿಡಿ, ಐದಾರು ಗಂಟೆ ನಿದ್ದೆ ಮಾಡಿದರೆ ಅದೇ ಹೆಚ್ಚು ಅಂತಾರೆ ಹಲವು ಅಮ್ಮಂದಿರು.

ಆದರೆ, ಅವರಿಗೆ ಗೊತ್ತಿರಲಿಕ್ಕಿಲ್ಲ; ಮನೆಯಲ್ಲಿ ಇತರರಿಗಿಂತ ಅವರಿಗೇ ನಿದ್ದೆಯ ಅವಶ್ಯಕತೆ ಜಾಸ್ತಿ ಇದೆ ಅಂತ. ನ್ಯಾಷನಲ್‌ ಸ್ಲಿಪ್‌ ಫೌಂಡೇಶನ್‌ ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರೇ ಕನಿಷ್ಠ ಪಕ್ಷ 20 ನಿಮಿಷ ಜಾಸ್ತಿ ನಿದ್ದೆ ಮಾಡಬೇಕಂತೆ. ಯಾಕೆ ಗೊತ್ತಾ?

ಅವರು ಜಾಸ್ತಿ ಕೆಲಸ ಮಾಡ್ತಾರೆ
ಅಡುಗೆ, ಮನೆ, ಮಕ್ಕಳು, ಗಂಡ, ಆಫೀಸು ಕೆಲಸ ಹೀಗೆ ಮಹಿಳೆಯರು ಯಾವಾಗಲೂ ಬ್ಯುಸಿ ಇರ್ತಾರೆ. ಅವರಿಗೆ ಕೆಲಸವೂ ಜಾಸ್ತಿ, ಕೆಲಸದೊತ್ತಡವೂ ಜಾಸ್ತಿ. ಹಾಗಾಗಿ, ಸಹಜವಾಗಿಯೇ ಮಹಿಳೆಯರಿಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುತ್ತದೆ.

ನಿದ್ರಾಹೀನತೆಯ ಸಮಸ್ಯೆ
ನಿದ್ರಾಹೀನತೆಯ ಸಮಸ್ಯೆಯು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದಂತೆ. ದಿಂಬಿಗೆ ತಲೆಯಿಟ್ಟ ಕೂಡಲೇ ಮಹಿಳೆ­ಯರಿಗೆ ನಿದ್ದೆ ಬರುವುದಿಲ್ಲ. ನಾಳಿನ ಅಡುಗೆ, ಬಾಕಿ ಉಳಿದ ಕೆಲಸ ಅಂತೆಲ್ಲಾ ತಲೆಬಿಸಿ ಮಾಡಿಕೊಂಡು ಅವರು ನಿದ್ದೆಕೆಡಿಸಿಕೊಳ್ತಾರೆ. ಅದನ್ನು ಸರಿದೂಗಿಸಲು ಸ್ವಲ್ಪ ಜಾಸ್ತಿ ನಿದ್ದೆ ಮಾಡಬೇಕು ಅನ್ನುತ್ತದೆ ಸಂಶೋಧನೆ.

ಹಾರ್ಮೋನು ಬದಲಾವಣೆ
ತಿಂಗಳ ಮುಟ್ಟು, ಗರ್ಭಾವಸ್ಥೆ, ಮೆನೋಪಾಸ್‌… ಹೀಗೆ ಸ್ತ್ರೀಯರ ಹಾರ್ಮೋನುಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಆ ಬದಲಾವಣೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ನಿದ್ರಾಹೀನತೆಯ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾಗಿ ಅವರು ಸ್ವಲ್ಪ ಜಾಸ್ತಿ ವಿಶ್ರಾಂತಿ ಪಡೆಯಬೇಕು.

ತೂಕ ಹೆಚ್ಚಳ
ಪುರುಷರಷ್ಟು ಸುಲಭವಾಗಿ ಮಹಿಳೆಯರು ಮೈ ತೂಕ ಇಳಿಸಿಕೊಳ್ಳಲಾರರು. ಇದಕ್ಕೆ ನಿದ್ರಾಹೀನತೆಯೂ ಒಂದು ಕಾರಣ. ಸರಿಯಾಗಿ ನಿದ್ರೆ ಮಾಡದಿದ್ದರೆ, ದೇಹದಲ್ಲಿ “ಕಾರ್ಟಿಸೋಲ್‌’ ಎಂಬ ಸ್ಟ್ರೆಸ್‌ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಅದು ಹಸಿವೆಯನ್ನು ಹೆಚ್ಚಿಸಿ, ದೇಹದ ತೂಕ ಹೆಚ್ಚುವಂತೆ ಮಾಡುತ್ತದೆ.

 • ಗುಡ್‌ನೈಟ್‌ ಟಿಪ್ಸ್‌
  ನಿದ್ದೆಯ ಟೈಮ್‌ ಟೇಬಲ್‌ ಹಾಕಿಕೊಳ್ಳಿ. 10-6 ಅಂದರೆ, ಪ್ರತಿದಿನವೂ ಹತ್ತಕ್ಕೆ ಮಲಗಿ, ಆರಕ್ಕೆ ಏಳಿ. ಒಂದೊಂದು ದಿನ ಒಂದೊಂದು ಸಮಯ ಬೇಡ.
  ಮಲಗುವ ಮುನ್ನ ಐದು ನಿಮಿಷ ಧ್ಯಾನ ಮಾಡಿ. ಎಲ್ಲ ಚಿಂತೆಗಳಿಂದ ಮನಸ್ಸನ್ನು ಮುಕ್ತಗೊಳಿಸಿ.
  ಮಲಗುವುದಕ್ಕಿಂತ ಒಂದು ಗಂಟೆ ಮುಂಚೆಯೇ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ. ಆಫ್ ಮಾಡಿಬಿಡಿ. ಅವುಗಳು ಹೊರಸೂಸುವ ನೀಲಿ ಬೆಳಕು ನಿದ್ರೆಗೆ ಮಾರಕ.
  ಹಾಸಿಗೆ, ಬೆಡ್‌ಶೀಟ್‌ ಸ್ವಚ್ಛವಾಗಿಟ್ಟುಕೊಳ್ಳಿ.
  ಊಟದ ನಂತರ ಕಾಫಿ, ಟೀ ಸೇವಿಸಬೇಡಿ.

ಯಾರು, ಎಷ್ಟು ನಿದ್ದೆ ಮಾಡ್ಬೇಕು?
ವಯಸ್ಸು          ಗಂಟೆ
0-19            9-10
20-64          7-9
64 ಮೇಲ್ಪಟ್ಟು    7-8


ಈ ವಿಭಾಗದಿಂದ ಇನ್ನಷ್ಟು

 • ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್‌ ಮಾಡೋದು...

 • ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ...

 • ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ... ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ,...

 • "ಕಾಡು ಕುದುರೆ ಓಡಿ ಬಂದಿತ್ತಾ...' ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು....

 • ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ...

ಹೊಸ ಸೇರ್ಪಡೆ

 • ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ...

 • ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ...

 • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

 • ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು...

 • ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು...

 • ಶಿರಸಿ: ಸಿದ್ದಾಪುರ ಕಾನಸೂರು ಬಳಿ ವಿಧವಾ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ನಡೆ ವಿರೋಧಿಸಿ ಜಿಲ್ಲಾ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ...