ಲೇಯರ್ಡ್‌ ಕುರ್ತಿಗೊಂದು ಕಾಲ

Team Udayavani, May 15, 2019, 6:00 AM IST

ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು. ಅಲ್ಲದೆ ದಿನನಿತ್ಯ ಕಾಲೇಜು ಅಥವಾ ಆಫೀಸ್‌ಗೂ ತೊಡಬಹುದು.

ಕುರ್ತಿ ಎಂದಾಕ್ಷಣ ಹಬ್ಬ ಹರಿದಿನಗಳಿಗಷ್ಟೇ ಹಾಕೋ ಬಟ್ಟೆ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಕುರ್ತಿಯನ್ನು ಅಷ್ಟಕ್ಕೇ ಸೀಮಿತವಾಗಿಡದೆ ಎಲ್ಲಾ ಕಡೆಯೂ ತೊಟ್ಟು ನೋಡುವ ಪ್ರಯೋಗ ಈಗ ಟ್ರೆಂಡ್‌ ಆಗುತ್ತಿದೆ. ಪಿಕ್ನಿಕ್‌, ಶಾಪಿಂಗ್‌ ಅಥವಾ ಕ್ಯಾಶುಯಲ್‌ ಔಟಿಂಗ್‌ ಅಲ್ಲದೆ, ಸ್ಕರ್ಟ್‌ ಜೊತೆ, ಜೀನ್ಸ್ ಪ್ಯಾಂಟ್‌ ಜೊತೆ, ಲೆಗ್ಗಿಂಗ್ಸ್ ಜೊತೆ, ಹ್ಯಾರೆಮ…, ಪಲಾಝೊ, ಧೋತಿ ಪ್ಯಾಂಟ್‌, ಉದ್ದ ಲಂಗ, ಥ್ರಿ ಫೋರ್ಥ್ ಹಾಗೂ ಪ್ಯಾರಲಲ್‌ ಪ್ಯಾಂಟ್‌ಗಳ ಜೊತೆ ತೊಟ್ಟು, ಆಫೀಸ್‌ಗೂ ಹೋಗಬಹುದು.

ಬೆಚ್ಚಗಿರಿಸುತ್ತೆ, ತಂಪಾಗೂ ಇರಿಸುತ್ತೆ!
ಪಾಸ್ಟೆಲ್‌ ಬಣ್ಣಗಳು, ಅಂದರೆ ಬಳಪದ ಕಡ್ಡಿಯ ಬಣ್ಣಗಳು (ತಿಳಿ ಬಣ್ಣಗಳು) ಕಣ್ಣಿಗೂ ತಂಪು ದೇಹಕ್ಕೂ ತಂಪು. ಗಾಢವಾದ ಬಣ್ಣಗಳು ಹಬ್ಬಕ್ಕೆ ಮತ್ತು ಸಮಾರಂಭಗಳಿಗೆ ತೊಡುವುದು ಒಳ್ಳೆಯದು. ಎರಡೂ ಇಷ್ಟವಿದ್ದರೆ, ಎರಡನ್ನೂ ತೊಡಬಹುದು. ಅರೆ! ಅದು ಹೇಗಾಗುತ್ತದೆ? ಎಂದು ಅಚ್ಚರಿ ಪಡುವವರಿಗೆ ಇಲ್ಲಿದೆ ಉತ್ತರ. ಇದೀಗ ಟ್ರೆಂಡ್‌ ಆಗಲು ಡಬಲ್‌ ಲೇಯರ್ಡ್‌ ಕುರ್ತಿಗಳ ಸರದಿ. ಹಾಗಾಗಿ ಒಂದು ಲೇಯರ್‌ (ಪದರ) ನಲ್ಲಿ ತಿಳಿ ಬಣ್ಣ, ಇನ್ನೊಂದರಲ್ಲಿ ಗಾಢವಾದ ಬಣ್ಣ ಇರುವ ಕುರ್ತಿ ತೊಟ್ಟು ನೋಡಿ, ನೀವು ಟ್ರೆಂಡ್‌ ಸೆಟ್ಟರ್‌ ಆಗಿ! ಖಾದಿ, ಹತ್ತಿ, ರೇಷ್ಮೆ, ಉಣ್ಣೆ, ಶಿಫಾನ್‌, ಸ್ಯಾಟಿನ್‌, ಮುಂತಾದ ಬಟ್ಟೆಯ ಆಯ್ಕೆಗಳ ಕುರ್ತಿ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಖಾದಿ ಅಥವಾ ಖದ್ದರ್‌ ಬಟ್ಟೆ ಖಡಕ್‌ ಆಗಿ ಕಾಣಲು ಅದನ್ನು, ಗಂಜಿ ಹಿಟ್ಟಿನಲ್ಲಿ ಒಗೆಯಲಾಗುತ್ತದೆ. ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು. ಮತ್ತು ದಿನ ನಿತ್ಯದ ಕಾಲೇಜು ಅಥವಾ ಆಫೀಸ್‌ಗೂ ತೊಡಬಹುದಾಗಿದೆ.

ಟಾಪಾದ ಟಾಪ್‌
ಬೇಸಿಗೆಗಾಗಿಯೇ ಉಡಲೆಂದು ಸ್ಲಿàವ್‌ಲೆಸ್‌ ಆಯ್ಕೆಗಳೂ ಇವೆ. ಉದ್ದ ತೋಳಿನ ಕುರ್ತಿಗಳಲ್ಲಿ ಬೆಲ್‌ ಬಾಟಮ್‌ ತೋಳು, ಮುಕ್ಕಾಲು ತೋಳು, ಪುಶ್‌ ಪಫ್ ತೋಳು, ಕ್ಯಾಪ್‌ ಸ್ಲಿàವ್‌, ಫೋಲೆxಡ್‌ ತೋಳು, ಗುಂಡಿ (ಬಟನ್‌) ಇರುವ ತೋಳು ಮುಂತಾದ ಆಯ್ಕೆಗಳಿವೆ. ಇವುಗಳಲ್ಲಿ ಅಂಗಿಯಂತೆ ಕಾಲರ್‌ ಲಭ್ಯ. ಚೂಡಿದಾರದ ಟಾಪ್‌ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಕ್ಯಾಶುಯಲ್‌ ಉಡುಗೆ ಆಗಿರಲಿ, ಫಾರ್ಮಲ್‌ ದಿರಿಸೇ ಆಗಿರಲಿ ಅಥವಾ ಸಾಂಪ್ರದಾಯಿಕ ಉಡುಪಾಗಿರಲಿ, ಎಲ್ಲಾ ತರಹದ ಬಟ್ಟೆ ಜೊತೆಗೂ ಸೈ ಎನಿಸಿಕೊಳ್ಳುತ್ತದೆ ಈ ಡಬಲ್‌ ಲೇಯರ್ಡ್‌ ಕುರ್ತಿ.

ಬಟ್ಟೆಯೋ ಸುದ್ದಿ ಪತ್ರಿಕೆಯೋ?
ಇದಲ್ಲದೆ ಇವುಗಳಲ್ಲಿ ಬಣ್ಣ ಬಣ್ಣದ ಆಕಾರಗಳು, ಚಿನ್ಹೆಗಳು ಮತ್ತು ಚಿತ್ರಗಳನ್ನು ಬಿಡಿಸಲಾಗುತ್ತವೆ. ಫ್ಲೋರಲ್‌ ಪ್ರಿಂಟ್‌ (ಹೂವಿನ ಆಕೃತಿ), ರೇಖಾ ಗಣಿತದಲ್ಲಿ ಬರುವ ಆಕೃತಿಗಳು, ಅನಿಮಲ್‌ ಪ್ರಿಂಟ್‌, ಧ್ಯಾನದಲ್ಲಿರುವ ಬುದ್ಧನ ಚಿತ್ರ, ನಾಣ್ಯಗಳ ಚಿಹ್ನೆಗಳು, ಬೇರೆ- ಬೇರೆ ಭಾಷೆಯ ಲಿಪಿಗಳ ಅಕ್ಷರಗಳು, ದಿನಪತ್ರಿಕೆಯಂತೆ ಕಾಣುವ ವಿನ್ಯಾಸ, ಪೋಲ್ಕಾ ಡಾಟ್ಸ್‌, ಸ್ಟ್ರೈಪ್ಸ್ (ಗೀಟುಗಳು), ಹೀಗೆ ನಮ್ಮ ಊಹೆಗಿಂತಲೂ ಹೆಚ್ಚು ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕಸ್ಟಮೈಸ್ಡ್ (ನಮಗೆ ಬೇಕಾದ) ವಿನ್ಯಾಸ, ಬಣ್ಣ ಮತ್ತು ಆಕೃತಿಗಳಿರುವ ಕುರ್ತಿಗಳನ್ನು ಮಾರುವ ಅಂಗಡಿಗಳು
ಆನ್‌ಲೈನ್‌ ನಲ್ಲೂ ಲಭ್ಯವಿವೆ. ನಮಗೆ ಬೇಕಾದ ವಿನ್ಯಾಸ, ಅಥವಾ ಬಣ್ಣಗಳ ಚಿತ್ರವನ್ನು ಈ ಆನ್‌ಲೈನ್‌ ಅಂಗಡಿಯವರ ಜೊತೆ ಹಂಚಿಕೊಂಡಲ್ಲಿ, ಅವರು ನಿಗದಿತ ಸಮಯದಲ್ಲಿ ತಯಾರಿಸಿ ಕೊಡುತ್ತಾರೆ.

ಅದಿತಿಮಾನಸ. ಟಿ. ಎಸ್‌


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ