ದ್ರಾಕ್ಷಿ ಸೌಂದರ್ಯದ ಆಗರ


Team Udayavani, Feb 17, 2017, 3:45 AM IST

Grapes-past.jpg

ಎಲ್ಲಾ ಕಾಲದಲ್ಲೂ ಹಸಿ ಅಥವಾ ಒಣದ್ರಾಕ್ಷಿಗಳು ಲಭ್ಯವಾಗುತ್ತವೆ. ಆದ್ದರಿಂದಲೇ ಒಂದಲ್ಲ ಒಂದು ವಿಧದಿಂದ ವೈವಿಧ್ಯಮಯ ದ್ರಾಕ್ಷಿಯ “ಕಾಸೆಟಿಕ್‌’ಗಳನ್ನು ಅರ್ಥಾತ್‌ ಮನೆಯಲ್ಲಿಯೇ ಸುಲಭ ಸರಳ ರೀತಿಯಲ್ಲಿ ತಯಾರಿಸಬಹುದಾದ ಸೌಂದರ್ಯವರ್ಧಕಗಳನ್ನು ಯಾವುದೇ ಕಾಲದಲ್ಲೂ , ಬೇರೆ ಬೇರೆ ಮೊಗದ ಚರ್ಮವುಳ್ಳವರಿಗಾಗಿ ತಯಾರಿಸಿ ವೈವಿಧ್ಯಮಯವಾಗಿ ಬಳಸಬಹುದು.

ದ್ರಾಕ್ಷಿಯ ಕ್ಲೆನ್ಸರ್‌
15 ಹಸಿ ದ್ರಾಕ್ಷಿಗಳನ್ನು ಅರೆದು ಅದಕ್ಕೆ 1 ಚಮಚ ಹಾಲಿನ ಪುಡಿ ಬೆರೆಸಿ, 1/4 ಚಮಚ ಬೇಕಿಂಗ್‌ ಸೋಡಾ ಸೇರಿಸಬೇಕು. ಇದನ್ನು ಚೆನ್ನಾಗಿ ಬೆರೆಸಿ 15-20 ಆಲಿವ್‌ ಅಥವಾ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ತುದಿ ಬೆರಳುಗಳಿಂದ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ ಇದು ಉತ್ತಮ ನೈಸರ್ಗಿಕ ಫೇಶಿಯಲ್‌ ಕ್ಲೆನ್ಸರ್‌ ಆಗಿದೆ. ಮೊಗ ಶುಭ್ರ, ಮೃದು ಕಾಂತಿಯಿಂದ ನಳನಳಿಸುತ್ತದೆ.

ಗ್ರೇಪ್‌ ಟೋನರ್‌
ಮುಖದಲ್ಲಿ ನೆರಿಗೆಗಳು ಕಂಡುಬಂದಾಗ ಚರ್ಮ ಕಾಂತಿಹೀನವಾಗಿದ್ದು ಸಡಿಲವಾದಾಗ ಈ ವಿಧಾನದಿಂದ ತಯಾರಿಸಿದ ಗ್ರೇಪ್‌ ಟೋನರ್‌ ಬಳಸಿದರೆ ಚರ್ಮ ತಾಜಾ ಹಾಗೂ ಕಾಂತಿಯಿಂದ ಕೂಡಿದ್ದು ಬಿಗುತನ ಪಡೆಯುತ್ತದೆ. ನೆರಿಗೆಗಳು ನಿವಾರಣೆಯಾಗುತ್ತವೆ.

ವಿಧಾನ: 2 ಚಮಚ ಅರೆದ ದ್ರಾಕ್ಷಿಯ ತಿರುಳು, 1 ಚಮಚ ಹುಳಿ ಮೊಸರು, 1 ಚಮಚ ಅಕ್ಕಿಹಿಟ್ಟು ಹಾಗೂ 1 ಚಮಚ ಕ್ಯಾರೆಟ್‌ ಜ್ಯೂಸ್‌ ಇವೆಲ್ಲವನ್ನು ಚೆನ್ನಾಗಿ ಬೆರೆಸಿ, ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ ಮೃದುವಾಗಿ 10 ನಿಮಿಷ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಬಲು ಪರಿಣಾಮಕಾರಿ.

ಕಪ್ಪು ದ್ರಾಕ್ಷಿ ಮಾಸ್ಕ್
10 ಕಪ್ಪು ದ್ರಾಕ್ಷಿಗಳನ್ನು ಅರೆದು 2 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ 4 ಚಮಚ ರೋಸ್‌ವಾಟರ್‌, 2 ಚಮಚ ಜೇನು, 2 ಚಮಚ ನಿಂಬೆರಸ ಬೆರೆಸಿ ಮೊಡವೆ ಹೊಂದಿರುವ, ತೈಲಯುಕ್ತ ಚರ್ಮದವರಿಗೆ ಫೇಸ್‌ಮಾಸ್ಕ್ ಮಾಡಿದರೆ ಮೊಡವೆ ಹಾಗೂ ಕಲೆ ನಿವಾರಕ, ಜಿಡ್ಡು ನಿವಾರಕವೂ ಹೌದು.

ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ವಾರಕ್ಕೆ 2-3 ಸಾರಿ ಬಳಸಿದರೆ ಹಿತಕಾರಿ.

ಕಾಂತಿವರ್ಧಕ ಮಾಸ್ಕ್
ಕಪ್ಪು ದ್ರಾಕ್ಷಿಯ ಪೇಸ್ಟ್‌ ಮೂರು ಚಮಚ, ಚೆನ್ನಾಗಿ ಕಳಿತ ಪಪ್ಪಾಯದ ತಿರುಳಿನ ಪೇಸ್ಟ್‌ 2 ಚಮಚ, ಗುಲಾಬಿ ಜಲ 2 ಚಮಚ, ಶುದ್ಧ ಚಂದನದ ತೈಲ 20 ಹನಿ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಹೀಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ 1-2 ವಾರ ಬಳಸಿದರೆ ಮುಖ ಕಾಂತಿ, ಮೃದುತ್ವ ಹಾಗೂ ಬೆಳ್ಳಗಾಗಿ ಹೊಳೆಯುತ್ತದೆ.

ಒಣಚರ್ಮಕ್ಕೆ ಲೇಪ
5 ಚಮಚ ದ್ರಾಕ್ಷಿಯ ತಿರುಳಿನ ಪೇಸ್ಟ್‌ಗೆ 2 ಚಮಚ ಕಾಟೇಜ್‌ ಚೀಸ್‌ ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣಚರ್ಮ, ಕಾಂತಿಹೀನತೆ, ತುರಿಕೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ.

ಬಿಸಿಲುಗಂದು ನಿವಾರಕ ಮಾಸ್ಕ್
ಕಪ್ಪು ದ್ರಾಕ್ಷಿ ತಿರುಳಿನ‌ ಪೇಸ್ಟ್‌ 4 ಚಮಚ, ಕೀವಿ ಹಣ್ಣಿನ ಅರೆದ ತಿರುಳು 2 ಚಮಚ, ಜೇನು 2 ಚಮಚ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಸೂರ್ಯನ ಕಿರಣಗಳಿಂದ ಕಪ್ಪಾದ/ಕೆಂಪಾದ ಭಾಗ ಅಥವಾ ಬಿಸಿಲುಗಂದು ಇರುವ ಭಾಗಕ್ಕೆ ದಪ್ಪಕ್ಕೆ ಪದರದಂತೆ ಲೇಪಿಸಬೇಕು. 20 ನಿಮಿಷಗಳ ಬಳಿಕ ತೊಳೆದು ಸೌತೆಕಾಯಿ ರಸ ಹಾಗೂ ಜೇನಿನ ಮಿಶ್ರಣ ಲೇಪಿಸಿಬೇಕು.

ಇದರಿಂದ ಬಿಸಿಲುಗಂದು (ಸನ್‌ ಟ್ಯಾನ್‌) ಕ್ರಮೇಣ ನಿವಾರಣೆಯಾಗುತ್ತದೆ. ನಿತ್ಯ ಲೇಪನ ಹಿತಕರ. ಮೆಲಾಸ್ಮಾ ಎಂಬ ಅಧಿಕ ಪಿಗ್‌ಮೆಂಟ್‌ ಸ್ರಾವದಿಂದ ಉಂಟಾಗುವ ತೊಂದರೆಯಲ್ಲೂ ಈ ಲೇಪ ಹಿತಕಾರಕ. ಅಂತಹ ಸಂದರ್ಭದಲ್ಲಿ ಬಾದಾಮಿ ತೈಲ ಅಥವಾ ಬಾದಾಮಿ ಪೇಸ್ಟ್‌ , ಆಲೂಗಡ್ಡೆ ರಸ ಬೆರೆಸಿದರೆ ಶೀಘ್ರ ಪರಿಣಾಮ ಉಂಟಾಗುತ್ತದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.