ವಾಟ್ಸ್ ಆ್ಯಪ್‌ಗೆ ಪರ್ಯಾಯ ಹೇಗಿದೆ ಇವುಗಳ ವ್ಯವಸಾಯ?
Team Udayavani, Jan 11, 2021, 6:40 AM IST
ತನ್ನ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್‌ನ ಇತರ ಆ್ಯಪ್‌ಗ್ಳ ಜತೆಗೆ ಹಂಚಿಕೊಳ್ಳವುದನ್ನು ಒಪ್ಪಿಕೊಳ್ಳಬೇಕು ಎಂಬ ವಾಟ್ಸ್‌ಆ್ಯಪ್ ನ ನವ ನಿಯಮವು ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈ ಕಾರಣಕ್ಕಾಗಿಯೇ, ಫೋನ್ ಬಳಕೆದಾರರು ಪರ್ಯಾಯ ಮೆಸೆಂಜರ್ ಆ್ಯಪ್‌ಗ್ಳತ್ತ ನೋಡಲಾರಂಭಿಸಿದ್ದಾರೆ. ಈ ವಿದ್ಯಮಾನದ ಅನಂತರ ಈಗಾಗಲೇ ವೇಗವಾಗಿ ಪ್ರಖ್ಯಾತಿ ಗಳಿಸುತ್ತಿರುವ ಟೆಲಿಗ್ರಾಂ ಹಾಗೂ ಸಿಗ್ನಲ್ ಆ್ಯಪ್‌ಗ್ಳಲ್ಲಿ ಹಠಾತ್ತನೆ ಬಳಕೆದಾರರ ಸಂಖ್ಯೆ ಹೆಚ್ಚಾಗಲಾರಂಭಿಸಿದೆ.
ವಾಟ್ಸ್‌ಆ್ಯಪ್: ಒಮ್ಮೆಗೆ ಒಂದು ಗ್ರೂಪ್ ಚಾಟ್‌ನಲ್ಲಿ 256 ಸದಸ್ಯರು ಭಾಗವಹಿಸಬಹುದು. ಇನ್ನು ಆಡಿಯೋ, ವೀಡಿಯೋ ಕರೆ ಆಯ್ಕೆಯಿದೆ. 100 ಎಂಬಿ ಡಾಕ್ಯುಮೆಂಟ್ ಕಳುಹಿಸಬಹುದು. ಆದರೆ, ಆಡಿಯೋ, ಫೋಟೋ, ವೀಡಿಯೋ ಸೈಜ್‌ಗೆ 16 ಎಂಬಿ ಮಿತಿ ಇದೆ. ತನ್ನ ಮಾಹಿತಿಯನ್ನು ಫೇಸ್‌ಬುಕ್,ಇತರ ಅಂಗಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಾಗಿ ವಾಟ್ಸ್‌ಆ್ಯಪ್ ಹೇಳುತ್ತದೆ. ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಡಿವೈಸ್-ಯೂಸರ್ ಐಡಿ, ಫೋನ್ ನಂಬರ್, ಇಮೇಲ್ ವಿಳಾಸ, ಕಾಂಟ್ಯಾಕ್ಟ್ಸ್, ಪಾವತಿ ಹಾಗೂ ಗ್ರಾಹಕರ ಇತರ ಮಾಹಿತಿ.
ಟೆಲಿಗ್ರಾಂ: ವೀಡಿಯೋ ಹಾಗೂ ಆಡಿಯೋ ಕಾಲ್‌ಗೆ ಅವಕಾಶವಿದೆ. ಒಂದು ಗ್ರೂಪ್‌ನಲ್ಲಿ 2 ಲಕ್ಷ ಸದಸ್ಯರು ಭಾಗವಹಿಸಲು ಸಾಧ್ಯವಿದೆ. ಯಾರಿಗಾದರೂ ಮೆಸೇಜ್ ಕಳುಹಿಸಿದರೆ ಅದು ಕೆಲವು ಸಮಯದ ಅನಂತರ ಡಿಲೀಟ್ ಆಗುವಂಥ ಆಯ್ಕೆ ಬಳಸಿಕೊಳ್ಳಬಹುದು. ಏಕಕಾಲಕ್ಕೆ 1.5 ಜಿಬಿ ಗಾತ್ರದ ಫೈಲ್‌ಗಳನ್ನು ಕಳುಹಿಸಬಹುದು. ಇದುವರೆಗೂ ಯಾವುದೇ 3ನೇ ಪಾರ್ಟಿ/ ಸರಕಾರದೊಂದಿಗೆ ಬಳಕೆದಾರರ ಮಾಹಿತಿ ಹಂಚಿಕೊಂಡಿಲ್ಲ ಎನ್ನುತ್ತದೆ ಸಂಸ್ಥೆ. ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಕಾಂಟ್ಯಾಕ್ಟ್ಸ್ ಮಾಹಿತಿ, ಕಾಂಟ್ಯಾಕ್ಟ್ಸ್, ಯೂಸರ್ ಐಡಿ.
ಸಿಗ್ನಲ್: ಟೆಲಿಗ್ರಾಂನಂತೆಯೇ ಸಿಗ್ನಲ್ ಸಹ, ಸ್ವಯಂ ಡಿಲೀಟ್ ಆಗುವಂಥ ಸಂದೇಶ ಕಳುಹಿಸುವ ಆಯ್ಕೆ ನೀಡುತ್ತದೆ. ಆದರೆ ಏಕಕಾಲದಲ್ಲಿ ಹಲವರಿಗೆ ಸಂದೇಶ ಕಳುಹಿಸುವ ಆಯ್ಕೆಯಿಲ್ಲ. ಇತ್ತೀಚೆಗಷ್ಟೇ ಸಿಗ್ನಲ್ ಗ್ರೂಪ್ ಕಾಲ್ ಮಾಡುವ ಆಯ್ಕೆ ನೀಡಿದೆ. ಗಮನಾರ್ಹ ಸಂಗತಿಯೆಂದರೆ, ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಬಳಕೆದಾರರ ಕಾಂಟ್ಯಾಕ್ಟ್ಗಳ ಮಾಹಿತಿಯನ್ನು ಸಂಗ್ರಹಿಸಿದರೆ, ಸಿಗ್ನಲ್ ಮಾತ್ರ ಕೇವಲ ನಿಮ್ಮ ಫೋನ್ ಸಂಖ್ಯೆಯನ್ನು ಮಾತ್ರ ಶೇಖರಿಸುತ್ತದೆ.
ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಕೇವಲ ನಿಮ್ಮ ಫೋನ್ ನಂಬರ್.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444