
ಉದ್ಯೋಗದಲ್ಲಿ ಲಿಂಗ ತಾರತಮ್ಯ ರಹಿತ ನೀತಿ ಅನುಸರಿಸುತ್ತಿರುವ ಅಮೆಜಾನ್ ಇಂಡಿಯಾ
Team Udayavani, Jun 28, 2022, 9:38 PM IST

ಮುಂಬಯಿ: ‘ಕೆಲಸ ಮಾಡಲು ಉತ್ತಮ ಸ್ಥಳ’’ ಎಂದು ಗುರುತಿಸಿಕೊಳ್ಳುವುದಕ್ಕಾಗಿ ಅಮೆಜಾನ್ ಇಂಡಿಯಾವು ಲಿಂಗ ತಟಸ್ಥ ನೀತಿಯನ್ನು (ಉದ್ಯೋಗದಲ್ಲಿ ಲಿಂಗ ತಾರತಮ್ಯವಿಲ್ಲದಿರುವುವಿಕೆ) ತನ್ನ ವ್ಯವಹಾರದಲ್ಲಿ ಅನುಸರಿಸುತ್ತಿದೆ.
ಮಹಿಳೆಯರು, ಎಲ್‌ಜಿಬಿಟಿಕ್ಯುಐಎ ಸಮೂಹ, ಮಾಜಿ ಯೋಧರು ಮತ್ತು ದಿವ್ಯಾಂಗರಿಗೆ ಸಮಾನ ಅವಕಾಶಗಳನ್ನು ನೀಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆಜಾನ್ ಇಂಡಿಯಾವು ವೈವಿಧ್ಯತೆ, ಸಮಾನತೆ ಮತ್ತು ಉದ್ಯೋಗಿಗಳ ಒಳಗೊಳ್ಳುವಿಕೆಯನ್ನು ತರಲು ಅನೇಕ ಉಪಕ್ರಮಗಳನ್ನು ಕಳೆದ ಕೆಲವು ವರ್ಷಗಳಿಂದ ಪ್ರಾರಂಭಿಸಿದೆ. ’ರೀಕಿಂಡಲ್’, ’ಪಿನಾಕಲ್ ಪ್ರೋಗ್ರಾಂ ’ಸನ್‌ಶೈನ್’ ಮತ್ತು ಅಮೆಜಾನ್ ವುವೇರ್‌ನಂತಹ ಕಾರ್ಯಕ್ರಮಗಳು ಮಹಿಳಾ ಉದ್ಯಮಿಗಳ ಬೆಳವಣಿಗೆಗೆ ಸಹಾಯಕವಾಗಿದೆ. ಜೊತೆಗೆ ಸಂಸ್ಥೆ ದೇಶಾದ್ಯಂತ ಮತ್ತು ಮಹಿಳೆಯರ ನೇತೃತ್ವದ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಯಶಸ್ಸನ್ನು ಬೆಂಬಲಿಸುತ್ತಿದೆ.
ಭಾರತದಲ್ಲಿ ಹೆಚ್ಚು ವೈವಿಧ್ಯಮಯ ಮತ್ತು ಎಲ್ಲರನ್ನು ಒಂದಾಗಿ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಸ್ಥಳ ಎಂಬ ಗುರಿ ಸಾಧಿಸುವುದಕ್ಕೆ ಅಮೆಜಾನ್ ಶ್ರಮಿಸುತ್ತಿದೆ. ಇದಕ್ಕೆ ಅನುಗುಣವಾಗಿ, ಕಾರ್ಯಾಚರಣೆ ತಂಡವು ತಮ್ಮ ಕಾರ್ಯಾಚರಣಾ ಜಾಲದಲ್ಲಿ ಮಂಗಳಮುಖಿಯರಿಗೆ ಅವಕಾಶ ನೀಡಿದೆ. ಅಗತ್ಯ ಪೂರೈಸುವಿಕೆ ಕೇಂದ್ರಗಳು, ವಿಂಗಡಣೆ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳಲ್ಲಿ ಮಂಗಳಮುಖಿಯರನ್ನು ನೇಮಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಚುನಾವಣೆ : ಆಣೆ ಪ್ರಮಾಣಕ್ಕಾಗಿ ಗೆಲುವಿನ ಸಂಭ್ರಮ ಮರೆತು ಬಸ್ ಹತ್ತಿದ ಗ್ರಾ.ಪಂ. ಸದಸ್ಯರು
ಅಮೆಜಾನ್ ಇಂಡಿಯಾವು ಚೆನ್ನೈನಲ್ಲಿ ವಿಂಗಡಣೆ ಕೇಂದ್ರವನ್ನು ಪ್ರಾರಂಭಿಸಿದ್ದು, ಇಲ್ಲಿ ಕಾರ್ಯನಿರ್ವಹಿಸುವವರೆಲ್ಲರೂ ಮಹಿಳೆಯರು, ಅಂಗವಿಕಲತೆ ಹೊಂದಿರುವ ಜನರು ಮತ್ತು ಮಂಗಳಮುಖಿಯರು ಸೇರಿದ್ದಾರೆ.
ಮಹಿಳೆಯರ ಹಕ್ಕುಗಳನ್ನು ಸಂಭ್ರಮಿಸುವುದರಿಂದ ಹಿಡಿದು ವಿಕಲಾಂಗ ವ್ಯಕ್ತಿಗಳಿಂದ ಮಿಲಿಟರಿ ಪರಿಣತರವರೆಗೆ ಎಲ್ಲರಿಗೂ ಅವಕಾಶ ನೀಡಿದೆ. ಉತ್ಪನ್ನ ನಿರ್ವಾಹಕರು, ಕಲಾ ನಿರ್ದೇಶಕರು, ಸಹಾಯಕರು, ಮಾನವ ಸಂಪನ್ಮೂಲ ಮ್ಯಾನೇಜರ್‌ಗಳು ಮತ್ತು ವಿತರಣಾ ಸಹವರ್ತಿಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಎಲ್‌ಜಿಬಿಟಿಕ್ಯುಐಎ ಸಮುದಾಯದ ಉದ್ಯೋಗಿಗಳಿದ್ದಾರೆ.
ಎಲ್‌ಜಿಬಿಟಿಕ್ಯುಐಎ ಸಮುದಾಯದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಿರುವ ಅಮೆಜಾನ್ ಇಂಡಿಯಾದ ಹಿರಿಯ ಕಲಾ ನಿರ್ದೇಶಕ ಮನೀಶ್ ಚೋಪ್ರಾ ತಮ್ಮ ಅನುಭವದ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಉದ್ಯೋಗಿಗಳ ಲಿಂಗ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಸಮಾನವಾಗಿ ಮತ್ತು ನ್ಯಾಯಯುತವಾಗಿ ಪರಿಗಣಿಸಲಾಗುತ್ತಿದೆ. ಎಲ್‌ಜಿಬಿಟಿಕ್ಯುಐಎ ಸಮುದಾಯದ ಬಗ್ಗೆ ಹೆಚ್ಚು ತಿಳಿದಿಲ್ಲದ ಆದರೆ ಅವರನ್ನು ಸ್ವಾಗತಿಸುವ ಮತ್ತು ಕಲಿಕೆಗೆ ಮುಕ್ತವಾಗಿರುವ ಜನರನ್ನು ನಾನು ಭೇಟಿ ಮಾಡಿದ್ದೇನೆ. ಇದು ನನಗೆ ಬಹಳಷ್ಟು ಸಹಯೋಗಿ ಮಿತ್ರರನ್ನು ಹೊಂದಲು ಮತ್ತು ನನ್ನ ತಂಡದ ಯಶಸ್ಸಿಗೆ ಕೊಡುಗೆ ನೀಡಲು ಸಹಾಯ ಮಾಡಿದೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ