ಫ್ಲಿಪ್‍ಕಾರ್ಟ್‍ ಕ್ವಿಕ್‍ ವಿಸ್ತರಣೆ: ಗಣೇಶ ಹಬ್ಬಕ್ಕೆ 90 ನಿಮಿಷದ ಡೆಲಿವರಿ!


Team Udayavani, Sep 10, 2021, 8:00 AM IST

Flipkart Quick

ಬೆಂಗಳೂರು: ಭಾರತದ ಇ-ಕಾಮರ್ಸ್ ಮಾರುಕಟ್ಟೆ ಆಗಿರುವ ಫ್ಲಿಪ್ ಕಾರ್ಟ್ ತನ್ನ ಹೈಪರ್ ಲೋಕಲ್ ಸೇವೆಯಾದ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಇನ್ನೂ ಮೂರು ಮೆಟ್ರೋ ನಗರಗಳಾದ ಕೊಲ್ಕತ್ತ, ಚೆನ್ನೈ ಮತ್ತು ಮುಂಬೈಗೆ ವಿಸ್ತರಣೆ ಮಾಡಿದೆ. ಈ ವಿಸ್ತರಣೆಯಿಂದ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಸುರಕ್ಷಿತ ಮತ್ತು ತಡೆರಹಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ.

ಕರ್ನಾಟಕದ ಗ್ರಾಹಕರು ಇನ್ನು ಮುಂದೆ ಪೂಜಾ ಸಾಮಗ್ರಿಗಳು, ಮೋದಕ ತಯಾರಿಸುವ ಪದಾರ್ಥಗಳು, ಸಿಹಿತಿಂಡಿಗಳು & ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬಹುದಾಗಿದೆ. ಈ ವರ್ಷ 75+ ಗಣೇಶ ಚತುರ್ಥಿ ಆಯ್ಕೆಗಳಿದ್ದು, ಫ್ಲಿಪ್ ಕಾರ್ಟ್ ಕ್ವಿಕ್ ಗ್ರಾಹಕರಿಗೆ ಅನನ್ಯ ಕೊಡುಗೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಗ್ರಾಹಕರಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಲು ಮತ್ತು ಮುಂದಿನ 90 ನಿಮಿಷಗಳಲ್ಲಿ ಡೆಲಿವರಿ ಪಡೆಯಲು ಅಥವಾ ಅವರ ಅನುಕೂಲಕ್ಕೆ ಅನುಗುಣವಾಗಿ ಎರಡು ಗಂಟೆ ಸ್ಲಾಟ್ ಬುಕ್ ಮಾಡಲು ಅವಕಾಶ ನೀಡುತ್ತದೆ. ಗ್ರಾಹಕರು ತಮ್ಮ ಮೊದಲ ಆರ್ಡರ್ ನಲ್ಲಿ ಉಚಿತ ವಿತರಣೆಯನ್ನು ಪಡೆಯಲಿದ್ದಾರೆ. ಅಲ್ಲದೇ ಅವರ ನಂತರದ ಆರ್ಡರ್ ಗಾತ್ರವು 199 ರೂಪಾಯಿಗಳಿಗಿಂತ ಹೆಚ್ಚಿದ್ದರೆ ಈ ಅವಕಾಶವನ್ನು ಹೊಂದಲಿದ್ದಾರೆ. ಗ್ರಾಹಕರು ದಿನದ ಯಾವುದೇ ಸಮಯದಲ್ಲಿ ಆರ್ಡರ್ ಗಳನ್ನು ಮಾಡಬಹುದು ಮತ್ತು ಅಂತಹ ಉತ್ಪನ್ನಗಳನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಪಡೆದುಕೊಳ್ಳುವ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ:‘ನಿಮ್ಮ ಮಗುವಿಗೆ ಅಪ್ಪ ಯಾರು’ ? ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ ನುಸ್ರತ್ ಜಹಾನ್  

ಫ್ಲಿಪ್ ಕಾರ್ಟ್ ಕ್ವಿಕ್ ನ ಉಪಾಧ್ಯಕ್ಷ ಸಂದೀಪ್ ಕಾರ್ವ ಮಾತನಾಡಿ, “ಫ್ಲಿಪ್ ಕಾರ್ಟ್ ಕ್ವಿಕ್ ನೊಂದಿಗೆ ನಮ್ಮ ಗ್ರಾಹಕರಿಗೆ ವೈಯಕ್ತಿಕ ಅನುಭವ ಮತ್ತು ಆಯ್ಕೆಯನ್ನು ಒದಗಿಸಲು ತಂತ್ರಜ್ಞಾನ ಮತ್ತು ಪೂರೈಕೆ ಜಾಲ ಸಾಮರ್ಥ್ಯದ ಅನ್ಲಾಕ್ ಮಾಡುವುದು ನಮ್ಮ ಗುರಿಯಾಗಿದೆ. ನಾವು ವೇಗದ ವಿತರಣೆಗಳನ್ನು ಪರಿಹರಿಸಲು ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಹಾಗೂ ಹಬ್ಬದ ಋತುವಿನಲ್ಲಿಯೂ ಈ ಪ್ರಾಮುಖ್ಯತೆ ಇರುತ್ತದೆ. ಈ ಅವಧಿಯಲ್ಲಿ ನಾವು ನಮ್ಮ ಗ್ರಾಹಕರಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಗೃಹೋಪಯೋಗಿ ಉತ್ಪನ್ನಗಳು ಮತ್ತು ಮಗುವಿನ ಆರೈಕೆಯ ಉತ್ಪನ್ನಗಳನ್ನು ಆರ್ಡರ್ ಮಾಡಿದ 90 ನಿಮಿಷಗಳೊಳಗೆ ವಿತರಣೆ ಮಾಡುವ ಗುರಿಯನ್ನು ಹೊಂದಿದ್ದೇವೆ’’ ಎಂದರು.

ಬೆಂಗಳೂರಿನಲ್ಲಿ 2020 ರಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಆರಂಭಿಸಲಾಗಿದ್ದು, ಉತ್ಪನ್ನಗಳ ಲಭ್ಯತೆಯನ್ನು ವಿಸ್ತರಣೆ ಮಾಡಲು ಮತ್ತು ಫ್ಲಿಪ್ ಕಾರ್ಟ್ ಹಬ್ ಗಳಿಂದ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ತ್ವರಿತವಾದ ವಿತರಣೆಯನ್ನು ಸಕ್ರಿಯಗೊಳಿಸಲು ಆರಂಭ ಮಾಡಲಾಗಿತ್ತು. ಹೈಪರ್ ಲೋಕಲ್ ವಿತರಣಾ ಸೇವೆಯು ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಉತ್ಪನ್ನಗಳು, ದಿನಸಿ, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಗುವಿನ ಆರೈಕೆಯಂತಹ ವಿಭಾಗಗಳಲ್ಲಿ 2500 ಕ್ಕೂ ಹೆಚ್ಚು ಉತ್ಪನ್ನಗಳ ಸಂಗ್ರಹವನ್ನು ಒದಗಿಸುತ್ತದೆ. ಬೆಂಗಳೂರು, ದೆಹಲಿ, ಗುರುಗಾಂವ್, ಘಾಜಿಯಾಬಾದ್, ನೋಯ್ಡಾ, ಹೈದ್ರಾಬಾದ್, ಪುಣೆ, ಮುಂಬೈ, ಕೊಲ್ಕತ್ತ ಮತ್ತು ಚೆನ್ನೈ ಸೇರಿದಂತೆ 10 ನಗರಗಳಲ್ಲಿ ಈಗ ಫ್ಲಿಪ್ ಕಾರ್ಟ್ ಕ್ವಿಕ್ ಸೇವೆ ಲಭ್ಯವಿದೆ.

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

thumb-2

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Amazon.in ನಲ್ಲಿ ಜೂನ್ 1 ರಿಂದ ಜೂನ್ 4 ರವರೆಗೆ ಹೋಮ್ ಶಾಪಿಂಗ್ ಮೇಳ

Amazon.in ನಲ್ಲಿ ಜೂನ್ 1 ರಿಂದ ಜೂನ್ 4 ರವರೆಗೆ ಹೋಮ್ ಶಾಪಿಂಗ್ ಮೇಳ

3-samsung

ಬಜೆಟ್ ದರದಲ್ಲಿ 5G ಫೋನ್: Samsung Galaxy M14 5G

OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ ಇಲ್ಲಿದೆ!

OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ಸ್ ಇಲ್ಲಿದೆ!

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ