Instagram Reels ನಿಂದ 3 ಹೊಸ ಫೀಚರ್: ವಿಡಿಯೋ ರೆಕಾರ್ಡ್ ಈಗ ಮತ್ತಷ್ಟು ಸುಲಭ !
Team Udayavani, Sep 24, 2020, 6:20 PM IST
ನ್ಯೂಯಾರ್ಕ್: ಇನ್ ಸ್ಟಾಗ್ರಾಂ ರೀಲ್ಸ್ ಹೊಸ ಅಪ್ ಡೆಟ್ ಒಂದನ್ನು ಹೊರತಂದಿದ್ದು, ಇನ್ನು ಮುಂದೆ ವಿಡಿಯೋ ಅವಧಿ 15 ಸೆಕೆಂಡ್ ನಿಂದ 30 ಸೆಕೆಂಡ್ ಗೆ ಏರಿಕೆಯಾಗಲಿದೆ, ಮಾತ್ರವಲ್ಲದೆ ವಿಡಿಯೋ ರೆಕಾರ್ಡ್ ಮಾಡುವ ಸಂದರ್ಭದಲ್ಲಿ 10 ಸೆಕೆಂಡ್ ವರೆಗೂ ಟೈಮರ್ ಸೆಟ್ ಮಾಡಬಹುದಾಗಿದೆ.
ಟೈಮರ್ ಫೀಚರ್ ಬಹಳ ಅನುಕೂಲಕರವಾಗಿದ್ದು ಸುಲಭವಾಗಿ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಮಾತ್ರವಲ್ಲದೆ ವಿಡಿಯೋ ಟ್ರಿಮ್ ಮತ್ತು ಡಿಲೀಟ್ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ.
ಬಳಕೆದಾರರ ಅಭಿಪ್ರಾಯಗಳಿಗೆ ಅನುಗುಣವಾಗಿ ಇನ್ ಸ್ಟಾಗ್ರಾಂ ರೀಲ್ಸ್ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಈ ಅಪ್ ಡೇಟ್ ನಿಂದ ವಿಡಿಯೋ ಕ್ರಿಯೇಟ್ ಮಾಡುವುದು ಮತ್ತು ಎಡಿಟ್ ಮಾಡುವುದು ಸುಲಭ ಸಾಧ್ಯವಾಗಲಿದೆ ಮತ್ತು ಮನರಂಜನೆ ಅಗಾಧವಾಗಿರಲಿದೆ ಎಂದು ಇನ್ ಸ್ಟಾಗ್ರಾಂ ರೀಲ್ಸ್ ಮುಖ್ಯಸ್ಥ ಟೆಸ್ಸಾ ಲಿಯಾನ್ಸ್ ಲೇಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್ ವೆಬ್ ಗಾಗಿ QR Code Scan ಮಾಡಿ ಬೇಸತ್ತಿದ್ದೀರಾ ? ಬರುತ್ತಿದೆ ಹೊಸ ಫೀಚರ್ !
ಸೆನ್ಸಾರ್ ಟವರ್ ವರದಿ ಪ್ರಕಾರ, ಆಗಸ್ಟ್ ನಲ್ಲಿ ರೀಲ್ಸ್ ಬಳಕೆಗೆ ಬಂದ ನಂತರದಲ್ಲಿ ಜನರ ಗಮನಸೆಳೆಯಲು ವಿಫಲವಾಗಿದೆ. ಅಮೆರಿಕಾವೊಂದರಲ್ಲೇ ಅಗಸ್ಟ್ 5ರಿಂದ ಸೆಪ್ಟೆಂಬರ್ 15ರವರೆಗೂ 4.7 ಮಿಲಿಯನ್ ಜನರು ಇನ್ ಸ್ಟಾಗ್ರಾಂ ಡೌನ್ ಲೋಡ್ ಮಾಡಿದ್ದಾರೆ. ರೀಲ್ಸ್ ಬರುವ ಮೊದಲು ಅಂದರೇ ಜೂನ್ 24 ರಿಂದ ಆಗಸ್ಟ್ 4ರವರೆಗೂ ಕೂಡ ಇಷ್ಟೇ ಪ್ರಮಾಣದ ಜನರು ಅಪ್ಲಿಕೇಶನ್ ನನ್ನು ಡೌನ್ ಲೋಡ್ ಮಾಡಿದ್ದರು ಎಂದು ತಿಳಿಸಿದೆ.