ಸತತ ಆರು ವರ್ಷಗಳಿಂದ ನಷ್ಟ…ಮೊಬೈಲ್ ಉತ್ಪಾದನೆ ನಿಲ್ಲಿಸಿದ ಎಲ್‍ಜಿ
ಪ್ರಪಂಚದಾದ್ಯಂತ ಮೊಬೈಲ್ ಉತ್ಪಾದನಾ ಘಟಕಗಳ ಬಾಗಿಲು ಮುಚ್ಚಲಿವೆ ಎಂದು ಎಲ್‍ಜಿ ಹೇಳಿದೆ.
Team Udayavani, Apr 5, 2021, 1:49 PM IST
ನವದೆಹಲಿ : ಮೊಬೈಲ್ ಫೋನ್ ಉತ್ಪಾದನಾ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿ ಒಂದಾಗಿದ್ದ ಎಲ್‍ಜಿ, ಇದೀಗ ಮೊಬೈಲ್ ಉತ್ಪಾದನೆಯನ್ನು ಖಾಯಂ ಆಗಿ ಸ್ಥಗಿತಗೊಳಿಸಿದೆ. ಇಂದು ಮುಂಜಾನೆ ( ಏಪ್ರಿಲ್ 5 ) ಎಲ್‍ಜಿ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಕೆಲ ವರ್ಷಗಳ ಹಿಂದೆ ಮೊಬೈಲ್ ಉತ್ಪಾದನೆಯಲ್ಲಿ ಆ್ಯಪಲ್ ಹಾಗೂ ಸ್ಯಾಮ್‍ಸಂಗ್ ನಂತರದ ಸ್ಥಾನ ಎಲ್‍ಜಿ ಪಡೆದುಕೊಂಡಿತ್ತು. ಆದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿದ ಸ್ಪರ್ಧೆಯಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಯಿತು. ವರದಿಗಳ ಪ್ರಕಾರ 2015 ರಿಂದ ಸತತ ನಷ್ಟವನ್ನು ಎದುರಿಸುತ್ತಾ ಬಂದಿದೆ. ಇದುವರೆಗೆ ಬರೋಬ್ಬರಿ 33,010 ಕೋಟಿ ರೂಪಾಯಿಗಳಷ್ಟು ನಷ್ಟ ಮೊಬೈಲ್ ಉತ್ಪಾದನೆಯಿಂದ ಎಲ್‍ಜಿ ಅನುಭವಿಸಿದೆಯಂತೆ.
ಕೆಲ ದಿನಗಳ ಹಿಂದೆಯಷ್ಟೆ ಮೊಬೈಲ್ ಫೋನ್ ಉತ್ಪಾದನೆ ನಿಲ್ಲಿಸುವ ಸೂಚನೆ ನೀಡಿತ್ತು. ಇದೀಗ ಅಧಿಕೃತವಾಗಿ ಪ್ರಕಟಿಸಿದ್ದು, ಪ್ರಪಂಚದಾದ್ಯಂತ ಮೊಬೈಲ್ ಉತ್ಪಾದನಾ ಘಟಕಗಳ ಬಾಗಿಲು ಮುಚ್ಚಲಿವೆ ಎಂದು ಎಲ್‍ಜಿ ಹೇಳಿಕೊಂಡಿದೆ.
ಮೊಬೈಲ್ ಉತ್ಪಾದನೆ ಕೈ ಬಿಟ್ಟಿರುವ ಎಲ್‍ಜಿ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಘಟಕ, ಕನೆಕ್ಟೆಟ್ ಡಿವೈಸ್ ಹಾಗೂ ಸ್ಮಾರ್ಟ್ ಹೋಮ್ಸ್, ರೋಬೋಟಿಕ್ಸ್ ಹಾಗೂ ಆಟೋಮೊಟೀವ್ ಕೇಂದ್ರಿತ ಗ್ರಾಹಕ ಉಪಕರಣಗಳ ವ್ಯವಹಾರದತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದೆ.
ಇನ್ನು ಸ್ಮಾರ್ಟ್ ಫೋನ್ ಉತ್ಪಾದನೆಯ ಘಟಕಗಳನ್ನು ಮುಚ್ಚುತ್ತಿದ್ದರೂ ಕೂಡ ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಬೈಲ್‍ಗಳಿಗೆ ಸಾಫ್ಟ್ ವೇರ್ ಸಂಬಂಧಿಸಿದಂತೆ ಇನ್ನಿತರ ಸೇವೆಗಳು ಮುಂದುವರೆಯಲಿವೆ ಎಂದು ಎಲ್‍ಜಿ ಆಡಳಿತ ಮಂಡಳಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಪ್ರಿಲ್ 23ಕ್ಕೆ ಭಾರತಕ್ಕೆ ಲಗ್ಗೆ ಇಡಲಿವೆ ಎಂಐ 11 ಸೀರೀಸ್ ಸ್ಮಾರ್ಟ್ಫೋನ್
ಟ್ವಿಟರ್ ಲೋಡಿಂಗ್ ಸಮಸ್ಯೆ: 40 ಸಾವಿರ ಬಳಕೆದಾರರಿಂದ ಟ್ವೀಟರ್ ಗೆ ವರದಿ
ಇಂಧನ ಪಂಪ್ನಲ್ಲಿ ದೋಷ : 77,954 ಹೋಂಡಾ ಕಾರುಗಳು ವಾಪಸ್!
ಭಾರತದಲ್ಲಿ ಮತ್ತೆ ಶುರುವಾಗಿದೆ ಬಜಾಜ್ ಎಲೆಕ್ಟ್ರಿಕಲ್ ಸ್ಕೂಟರ್ ಆನ್ಲೈನ್ ಬುಕ್ಕಿಂಗ್
ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ
ಇಂದು ಮೊದಲ ಡೇ ಮ್ಯಾಚ್; ಹ್ಯಾಟ್ರಿಕ್ ಹಾದಿಯಲ್ಲಿ ಆರ್ಸಿಬಿ
ಮದುವೆಗೆ ಪಾಸ್ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು
ಆಲೂರು ರೇವ್ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್ ಕಾನ್ಸ್ಟೆಬಲ್ ಶ್ರೀಲತಾ ಅಮಾನತು
ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು