ವಿಳಾಸ ಹುಡುಕಲು ದೇಸಿ ಮ್ಯಾಪ್‌: ಮ್ಯಾಪ್‌ ಮೈ ಇಂಡಿಯಾದಿಂದ ಹೊಸ ಸ್ಟ್ರೀಟ್‌ ವ್ಯೂ


Team Udayavani, Jul 29, 2022, 1:25 PM IST

ವಿಳಾಸ ಹುಡುಕಲು ದೇಸಿ ಮ್ಯಾಪ್‌: ಮ್ಯಾಪ್‌ ಮೈ ಇಂಡಿಯಾದಿಂದ ಹೊಸ ಸ್ಟ್ರೀಟ್‌ ವ್ಯೂ

ಸದ್ಯ ದೇಶದಲ್ಲಿ ನಿಗದಿತ ಸ್ಥಳಕ್ಕೆ ತಲುಪಲು ಗೂಗಲ್‌ ಮ್ಯಾಪ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಮ್ಯಾಪ್‌ ಮೈ ಇಂಡಿಯಾ ಹೊಸ ಸೇವೆ ಆರಂಭ ಮಾಡಿದೆ. ಮ್ಯಾಪಲ್ಸ್‌ ರಿಯಲ್‌ ವ್ಯೂ ಎಂಬ ಹೆಸರಿನ ಈ ವ್ಯವಸ್ಥೆ ನಿಗದಿತ ರಸ್ತೆಯ 360 ಡಿಗ್ರಿ ವೀಕ್ಷಣೆ ವ್ಯವಸ್ಥೆ ಒದಗಿಸುತ್ತದೆ. ಗೂಗಲ್‌ ಮ್ಯಾಪ್‌ನ ಸ್ಟ್ರೀಟ್‌ ವ್ಯೂ ಕೂಡ ಹೊಸ ರೀತಿಯಲ್ಲಿ ಲಭಿಸುತ್ತಿದೆ.

ಯಾವ ಸಂಸ್ಥೆ ಇದು?
ಮ್ಯಾಪ್‌ಮೈ ಇಂಡಿಯಾ ಎನ್ನುವುದು 1995ರಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಇದು. ರಾಕೇಶ್‌ ವರ್ಮಾ ಮತ್ತು ರಶ್ಮಿ ವರ್ಮಾ ಅದನ್ನು ಆರಂಭಿಸಿದ್ದರು. ಅದು ನಿಗದ ರಸ್ತೆ ಅಥವಾ ಸ್ಥಳದ 360 ಡಿಗ್ರಿ ವೀಕ್ಷಣೆ ಮಾಡಲು ಸಾಧ್ಯವಾಗುವಂಥ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಬುಧವಾರದಿಂದಲೇ ಅದು ಲಭ್ಯವಾಗಿದೆ. ಅದರ ಹೆಗ್ಗಳಿಕೆ ಏನೆಂದರೆ 3ಡಿ ಮೆಟಾವರ್ಸ್‌ ವ್ಯವಸ್ಥೆಯಲ್ಲಿಯೂ ಕೂಡ ಲಭ್ಯವಾಗಲಿದೆ.

ಜನಪ್ರಿಯ ಸ್ಥಳಗಳು
ಸ್ಥಳೀಯವಾಗಿ ಜನಪ್ರಿಯವಾಗಿರುವ ಸ್ಥಳಗಳು, ವಿಳಾಸಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ. ಕಂಪನಿಯ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್‌ ವರ್ಮಾ ಹೇಳಿಕೊಂಡ ಪ್ರಕಾರ ಸ್ಥಳೀಯ ನಗರಗಳು, ರಸ್ತೆಗಳು, ವಿಳಾಸ ಪತ್ತೆ ಹಚ್ಚಲು ವಿದೇಶಿ ಮ್ಯಾಪ್‌ ಸೇವಾದಾರರ ಬದಲು ದೇಶಿಯ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥೆ ಬಳಕೆ ಮಾಡಬೇಕು ಎಂದಿದ್ದಾರೆ.

ಇಸ್ರೋ ತಂತ್ರಜ್ಞಾನ
ಮ್ಯಾಪಲ್ಸ್‌ ರಿಯಲ್‌ ವ್ಯೂ ನೀಡಿದ ಹೇಳಿಕೆ ಪ್ರಕಾರ ಇಸ್ರೋದ ಉಪಗ್ರಹ ಚಿಕ್ರ ಮತ್ತು ಭೂಪರಿವೀಕ್ಷಣೆ ಮಾಹಿತಿ ಆಧಾರದಲ್ಲಿ 2ಡಿ ಮ್ಯಾಪ್‌ ಸೇವೆ ನೀಡಲಾಗುತ್ತದೆ. ಮ್ಯಾಪಲ್ಸ್‌ ಆ್ಯಪ್‌ ಅನ್ನು ಆ್ಯಂಡ್ರಾಯ್ಡ ಅಥವಾ ಐಒಎಸ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬೇಕು. 2017ರಲ್ಲೇ ಈ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.

ಮಾಹಿತಿ ವಿನಿಮಯಕ್ಕೆ ಅವಕಾಶ
ರಸ್ತೆಗಳು ಮತ್ತು ವಿಳಾಸಗಳ ಬಗ್ಗೆ ಮ್ಯಾಪ್‌ನಲ್ಲಿ ಮಾಹಿತಿ ವಿನಿಯಮಕ್ಕೆ ಅವಕಾಶ ಇದೆ. ಕಾಂಪ್ಲೆಕ್ಸ್‌ಗಳು, ಬೀಚ್‌ಗಳು, ಪ್ರಮುಖ ಕೇಂದ್ರಗಳು, ವಸತಿ ಪ್ರದೇಶಗಳನ್ನು ಅದರಲ್ಲಿ ಸೇರ್ಪಡೆಗೊಳಿಸಲಾಗಿದೆ.

ಎಲ್ಲಿ ಉಪಯೋಗ?
ಪ್ರವಾಸೋದ್ಯಮ, ರಿಯಲ್‌ ಎಸ್ಟೇಟ್‌, ಗೇಮಿಂಗ್‌, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಜಾರಿ ವ್ಯವಸ್ಥೆ, ವರ್ಚುವಲ್‌ ರಿಯಾಲಿಟಿ

ಬೆಂಗಳೂರಿಗೂ ಬರಲಿದೆ
ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ದೇಶದ 14 ನಗರಗಳಲ್ಲಿ ಇದು ಜಾರಿಯಾಗಲಿದೆ. ಅಹ್ಮದಾಬಾದ್‌, ಅಜ್ಮೀರ್, ಚಂಡೀಗಡ, ಚೆನ್ನೈ, ದೆಹಲಿ ಎನ್‌ಸಿಆರ್‌, ಗೋವಾ, ಗ್ರೇಟರ್‌ ಮುಂಬೈ, ಹೈದರಾಬಾದ್‌, ಜೈಪುರ್‌, ಜೋಧ್‌ಪುರ್‌, ನಾಶಿಕ್‌, ಪುಣೆಗಳಲ್ಲಿ ಈ ತಂತ್ರಜ್ಞಾನ ಜನಬಳಕೆಗೆ ಸಿಗಲಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.