ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !
Team Udayavani, Nov 29, 2020, 11:00 PM IST
ನವದೆಹಲಿ: ಜನಪ್ರಿಯ ವಾಟ್ಸಾಪ್ ಹೊಸ ಹೊಸ ಫೀಚರ್ ಗಳ ಮೂಲಕ ಬಳಕೆದಾರರ ಮನಗೆದ್ದಿದ್ದು, ಇದೀಗ ಅನಾವಶ್ಯಕ ಚಾಟ್ ಗಳು 7 ದಿನದ ನಂತರ ತಾನಾಗಿಯೇ ಡಿಲೀಟ್ ಆಗುವಂತೆ ‘ಡಿಸಪಿಯರಿಂಗ್ ಮೆಸೇಜಸ್ ’(disappearing-messages) ಎಂಬ ಹೊಸ ಆಯ್ಕೆಯನ್ನು ನೀಡಿದೆ.
ಈ ಸೌಲಭ್ಯವನ್ನು ಆ್ಯಂಡ್ರಾಯ್ಡ್, ಐಪೋನ್ ಮತ್ತು ಡೆಸ್ಕ್ ಟಾಪ್ ಆವೃತ್ತಿಗಳಿಗೆ ನೀಡಲಾಗಿದ್ದು, ಗ್ರೂಪ್ ಮತ್ತು ವ್ಯೆಯಕ್ತಿಕ ಚಾಟ್ ಗಳಲ್ಲಿ ಈ ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ.
ವಾಟ್ಸಾಪ್ ನಲ್ಲಿ ಈ ಫೀಚರ್ ಅನ್ನು ಆನ್ ಮಾಡಿದ ತಕ್ಷಣ, 7 ದಿನಗಳ ನಂತರ ನಿಮ್ಮ ಚಾಟ್ ಗಳು ಡಿಲೀಟ್ ಆಗುತ್ತದೆ. ಗ್ರೂಪ್ ಚಾಟ್ ನಲ್ಲಿ ಈ ಆಯ್ಕೆಯ ಸೌಲಭ್ಯವನ್ನು ಕೇವಲ ಅಡ್ಮಿನ್ ಗಳು ಮಾತ್ರ ಬಳಸಬಹುದಾಗಿದೆ.
ಇದನ್ನೂ ಓದಿ:ಸುಗ್ರೀವಾಜ್ಞೆಯ ಮರುದಿನವೇ ‘ಲವ್ ಜಿಹಾದ್ ತಡೆ ಕಾಯ್ದೆಯಡಿ’ ಮೊದಲ ಪ್ರಕರಣ ದಾಖಲು
ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಾಟ್ಸಾಪ್ ಸಂಸ್ಥೆ, ಈ ಸೌಲಭ್ಯ ಗ್ರಾಹಕರ ವ್ಯೆಯಕ್ತಿಕ ಮಾತುಕತೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಗ್ರಾಹಕರು ಈ ಸೌಲಭ್ಯವನ್ನು ಅವಶ್ಯಕತೆಗೆ ತಕ್ಕಂತೆ ಆನ್ ಮತ್ತು ಆಫ್ ಮಾಡಿಕೊಳ್ಳಬಹುದಾಗಿದ್ದು. ಈ ಫೀಚರ್ ಅನ್ನು ಆಫ್ ಮಾಡಿದರೆ ಯಾವುದೇ ಮಾಹಿತಿಗಳು ಅಳಿಸಿಹೋಗುವುದಿಲ್ಲ ಎಂದಿದೆ, ಗ್ರೂಪ್ ಚಾಟ್ ಗಳಲ್ಲಿ ಮಾತ್ರ ಈ ಫೀಚರ್ ಅನ್ನು ನಿಯಂತ್ರಿಸಲು ಕೇವಲ ಅಡ್ಮಿನ್ ಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದೆ.
ಈ ಫೀಚರ್ ನಿಂದ ಚಾಟ್ ಗಳು ಮಾತ್ರ 7 ದಿನಗಳಲ್ಲಿ ಸಂಪೂರ್ಣ ಡಿಲೀಟ್ ಆಗುತ್ತವೆ. ಆದರೇ ಆಟೋ ಡೌನ್ ಲೋಡ್ ಆಗುವಂತಹ ಪೋಟೋ ಮತ್ತು ವಿಡಿಯೋಗಳು ಸ್ಟೋರೇಜ್ ನಲ್ಲಿಯೇ ಉಳಿಯಲಿದೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್‌ಐ
ಹೊಸ ಸೇರ್ಪಡೆ
ಬೇಬಿಬೆಟ್ಟದಲ್ಲಿ ಅಕ್ರಮ, ಸಕ್ರಮ ಕಲ್ಲುಗಣಿಗಾರಿಕೆ ಶಾಶ್ವತ ನಿಷೇಧ
ವಿದೇಶಿ ನೆಲದ ಮುಗಿಲೆತ್ತರದಲ್ಲಿ ಹಾರಿದ ರಾಷ್ಟ್ರ ಧ್ವಜ
ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!
ಹೇಮಗಿರಿಯಲ್ಲಿ ಫೆ.10ರಂದು ದನಗಳ ಜಾತ್ರೆ : ಗ್ರಾಮಸ್ಥರು, ಕಂದಾಯ ಇಲಾಖೆ ನೌಕರರಿಂದ ಶ್ರಮದಾನ
ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ