ವಾಟ್ಸಾಪ್ ನಲ್ಲಿ ಬರುತ್ತಿವೆ ಹೊಸ ಫೀಚರ್ ಗಳು: ಇವು ನಿಮ್ಮ ಮನಸೆಳೆಯುವುದು ಖಂಡಿತಾ !

Team Udayavani, Aug 7, 2020, 3:31 PM IST

whatsapp

ನವದೆಹಲಿ: ಇತ್ತೀಚಿಗಿನ ಪ್ರತಿಯೊಂದು ವಾಟ್ಸಾಪ್ ಅಪ್ ಡೇಟ್ ಗಳು ಕೂಡ ಬಳಕೆದಾರರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಗತ್ತಿನಾದ್ಯಂತ ಸುಮಾರು 2 ಬಿಲಿಯನ್ ಸಕ್ರೀಯ ಬಳಕೆದಾರರಿರುವ ವಾಟ್ಸಾಪ್ ಮತ್ತಷ್ಟು  ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸಲು ಮುಂದಾಗಿದ್ದು ಆ ಕುರಿತ ಕಿರುನೊಟ ಇಲ್ಲಿದೆ.

ಕಳೆದ ಕೆಲವು ವಾರಗಳಲ್ಲಿ ವಾಟ್ಸಾಪ್ ಅನೇಕ ಹೊಸ ಫೀಚರ್ ಗಳನ್ನು ಪರೀಕ್ಷೆಗೊಳಪಡಿಸಿದೆ. ಇದರಲ್ಲಿ ಕೆಲವು ಫೀಚರ್ ಗಳು ಈಗಾಗಲೇ ಲಭ್ಯವಿದ್ದು, ಇನ್ನು ಕೆಲವೊಂದನ್ನು ಬೇಟಾ ವರ್ಷನ್ ಗಳಲ್ಲಿ ಕಾಣಬಹುದು.

ಎಕ್ಸ್ ಫೈಯರಿಂಗ್ ಮೆಸೇಜಸ್(Expiring messages):  ಹೆಸರೇ ಸೂಚಿಸುವಂತೆ ಚಾಟ್ ನ ಮೆಸೇಜ್ ಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಪೀಚರ್ ಇದು. ಇದನ್ನು ಬಳಕೆದಾರರು ಯಾವ ಸಮಯದಲ್ಲೂ ಸಕ್ರೀಯಗೊಳಿಸಬಹುದು  ಅಥವಾ ನಿಷ್ಕ್ರೀಯಗೊಳಿಸಬಹದು. ಆದರೇ ಗ್ರೂಪ್ ಗಳಲ್ಲಿ ಮಾತ್ರ ಈ ಫೀಚರ್ ಅನ್ನು ಆಡ್ಮಿನ್ ಗಳಿಗೆ ಮಾತ್ರ ಬಳಸುವ ಅವಕಾಶವಿದೆ. ಇಲ್ಲಿ ಚಾಟ್ ಗಳನ್ನು ಒಂದು ದಿನ, 1 ತಿಂಗಳು ಅಥವಾ ಒಂದು ವರ್ಷದ ನಂತರ ಈ ಮೂರು ರೀತಿಯಾಗಿ ಅಟೋಮ್ಯಾಟಿಕ್ ಅಗಿ ಡಿಲೀಟ್ ಆಡಲು ಸಾಧ್ಯವಿದೆ.

ಸರ್ಚ್ ಆನ್ ವೆಬ್ ( Search on web): ಈ ಫೀಚರ್ ಈಗಾಗಲೇ ಭಾರತವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಜಾರಿಗೆ ಬಂದಿದೆ. ಇದು ಅಪ್ಲಿಕೇಶನ್‌ ನಲ್ಲಿ ತಪ್ಪು ಮಾಹಿತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಅಂದರೇ  ಫಾರ್ವರ್ಡ್ ಮಾಡಲಾದ ಸಂದೇಶದ ಮೇಲೆ ಭೂತಗನ್ನಡಿಯ ಐಕಾನ್ ಒಂದು ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದಾಗ  ವೆಬ್‌ ಗೆ ಸಂಪಕರ್ಕ ಕಲ್ಪಿಸುತ್ತದೆ. ಆ ಮೂಲಕ ಈ ಸಂದೇಶದ ಸತ್ಯಾಸತ್ಯತೆಯನ್ನು  ಪರಿಶೀಲಿಸಬಹುದು. ಈ ವೈಶಿಷ್ಟ್ಯವು ಆಯ್ದ ದೇಶಗಳಾದ ಸ್ಪೇನ್, ಬ್ರೆಜಿಲ್, ಯುಕೆ ಇನ್ನು ಕೆಲವು ದೇಶಗಳಲ್ಲಿ ಲಭ್ಯವಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮ್ಯೂಟ್ ಆಲ್ವೇಸ್ (Mute always):  ವಾಟ್ಸಾಪ್ ನಲ್ಲಿ ಸದ್ಯ 8 ಗಂಟೆ, 1 ವಾರ, ಮತ್ತು ಒಂದು ವರ್ಷದ ಮಟ್ಟಿಗೆ ಮ್ಯೂಟ್ ಮಾಡುವ ಅವಕಾಶವಿದೆ. ಆದರೇ ಈಗ ಪರಿಶೀಲಿಸಲಾಗುತ್ತಿರುವ ಫೀಚರ್ ನಲ್ಲಿ ಆಲ್ವೇಸ್ ಮ್ಯೂಟ್ ಆಯ್ಕೆ ನೀಡಲಾಗಿದೆ. ಆದರೇ ಇದಿನ್ನು ಅಧಿಕೃತವಾಗಿ ಜಾರಿಗೆ ಬಂದಿಲ್ಲ.

ಪೇಮೆಂಟ್ಸ್( Payments): ಈಗಾಗಲೇ ವಾಟ್ಸಾಪ್ ಪೇಮೆಂಟ್ ಭಾರತದಲ್ಲಿ ಪರೀಕ್ಷಾರ್ಥ ಹಂತದಲ್ಲಿದೆ. ಬೇಟಾ ಆವೃತ್ತಿಗಳಲ್ಲಿ ಮಾತ್ರ ಈ ಆಯ್ಕೆ ಲಭ್ಯವಿದೆ. ಈ ಫೀಚರ್ ಸ್ಥಳೀಯ ಮಟ್ಟದಲ್ಲಿ  ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು,  ಅದಾಗ್ಯೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.  ಭಾರತದಲ್ಲಿ, ವಾಟ್ಸಾಪ್ ಪಾವತಿ ಸೇವೆಯು ಯುಪಿಐ ಅನ್ನು ಆಧರಿಸಿದೆ ಮತ್ತು ಇದು ಐಸಿಐಸಿಐ ಮತ್ತು ಎಚ್ ಡಿ ಎಫ್ ಸಿ  ಬ್ಯಾಂಕ್ ನೊಂದಿಗೆ  ಪಾಲುದಾರಿಕೆ ಹೊಂದಿದೆ.

ಇಮೋಜಿ( New emojis): ಕಳೆದ ತಿಂಗಳು ವಾಟ್ಸಾಪ್ 138 ಹೊಸ ಇಮೋಜಿಗಳನ್ನು ಬಿಡುಗಡೆಗೊಳಿಸಿತ್ತು. ಆದರೇ ಇದಿನ್ನು ಅಧಿಕೃತವಾಗಿ ಜಾರಿಗೆ ಬಂದಿಲ್ಲವಾಗಿದ್ದು ಅದಾಗ್ಯೂ ಬೇಟಾ ಆವೃತ್ತಿಗಲಲ್ಲಿ ಲಭ್ಯವಿದೆ.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.