ಭಾರತದಲ್ಲಿ 5ಜಿ ಸೌಲಭ್ಯ ಯಾವಾಗ?

ಮಾರ್ಚ್‌ 1 ರಂದು ಮತ್ತೆ 4ಜಿ ತರಂಗಾಂತರದ ಹರಾಜು ನಡೆಯಲಿದೆ.

Team Udayavani, Feb 2, 2021, 5:00 PM IST

ಭಾರತದಲ್ಲಿ 5ಜಿ ಸೌಲಭ್ಯ ಯಾವಾಗ?

ಭಾರತದಲ್ಲಿ ಈಗ ಬಿಡುಗಡೆಯಾಗುತ್ತಿರುವ ಅನೇಕ ಮೊಬೈಲ್‌ ಫೋನ್‌ ಗಳು 5ಜಿ ನೆಟ್‌ ವರ್ಕ್‌ ಅನ್ನು ಬೆಂಬಲಿಸುವ ಸೌಲಭ್ಯ ನೀಡುತ್ತಿವೆ. ಹೊಸದಾಗಿ ಫೋನ್‌ ಕೊಳ್ಳುವ ಕೆಲವರು, ಮುಂದೆ 5 ಜಿ ಬರುವುದರಿಂದ 5ಜಿ ಸೌಲಭ್ಯ ಇರುವ ಫೋನ್‌ಗಳನ್ನೇ ಕೊಳ್ಳೋಣ, ಹೆಚ್ಚಿನ ದರವಾದರೂ ಸರಿ ಎಂದು 5ಜಿ ಇರುವ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. ಆದರೆ ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ, ಭಾರತದಲ್ಲಿ 5ಜಿ ನೆಟ್‌ವರ್ಕ್‌ ದೊರಕುವುದು ಯಾವಾಗ?! ಈ ಪ್ರಶ್ನೆಗೆ ಉತ್ತರ ಭಾರತ ಸರ್ಕಾರದ ಮೇಲಿದೆ. ಅದು 5ಜಿ ತರಂಗಾಂತರಗಳನ್ನು ಮೊಬೈಲ್‌ ನೆಟ್‌ವರ್ಕ್‌ ಕಂಪೆನಿಗಳಿಗೆ ಹರಾಜಿನ ಮೂಲಕ ನೀಡಬೇಕಿದೆ.

ಅನೇಕ ದೇಶಗಳಲ್ಲಿ ಈಗಾಗಲೇ 5ಜಿ ನೆಟ್‌ವರ್ಕ್‌ ಲಭ್ಯವಾಗುತ್ತಿದೆ. ಭಾರತದಲ್ಲೂ 5ಜಿ ಸೌಲಭ್ಯ ನೀಡಲು ರಿಲಯನ್ಸ್ ಜಿಯೋ ಹಾಗೂ ಭಾರತೀಯ ಏರ್‌ಟೆಲ್‌ ತುದಿಗಾಲಿನಲ್ಲಿ ನಿಂತಿವೆ. 2021ರ ದ್ವಿತೀಯಾರ್ಧದಲ್ಲಿ ಅಂದರೆ, ಇನ್ನು ಆರು ತಿಂಗಳ ನಂತರ 5ಜಿ ನೆಟ್‌ವರ್ಕ್‌ ಕಳೆದ ಡಿಸೆಂಬರ್‌ ನಲ್ಲಿಯೇ ಜಿಯೋ ಪ್ರಕಟಿಸಿದೆ. ಇನ್ನು ಭಾರತೀಯ ಏರ್‌ಟೆಲ್‌, ಜ. 28ರಂದು ಹೈದರಾಬಾದ್‌ ಪ್ರದೇಶದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಭಾರತದಲ್ಲಿ 5ಜಿ ನೆಟ್‌ ವರ್ಕ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಿದ ಮೊದಲ ಆಪರೇಟರ್‌ ತಾನು ಎಂದು ಏರ್‌ಟೆಲ್‌ ಹೇಳಿಕೊಂಡಿದೆ. 5ಜಿ ನೆಟ್‌ ವರ್ಕ್‌ಗಾಗಿ ಎರಿಕ್‌ಸನ್‌ ಕಂಪೆನಿಯ ಸಹಯೋಗ ಹೊಂದಿದ್ದು ತಾನೀಗ 5ಜಿ ಸೌಲಭ್ಯ ನೀಡಲು ಸಿದ್ಧ. ನಮ್ಮದು ಈಗ 5ಜಿ ರೆಡಿ ನೆಟ್‌ವರ್ಕ್‌ ಎಂದು ಏರ್‌ ಟೆಲ್‌ ತಿಳಿಸಿದೆ.

ಸಿಮ್‌ ಬದಲಿಸುವ ಅಗತ್ಯವಿಲ್ಲ 5ಜಿ ತರಂಗಾಂತರ ಲಭ್ಯವಾದ ಬಳಿಕ ಏರ್‌ ಟೆಲ್‌ ಈಗ ಇರುವುದಕ್ಕಿಂತ 10 ಪಟ್ಟು ವೇಗದ ಡೌನ್‌ಲೋಡ್‌, ಅಪ್‌ ಲೋಡ್‌ ನೀಡುತ್ತದೆ. ಅಲ್ಲದೇ ಹೊಸ 5ಜಿ ನೆಟ್‌ವರ್ಕ್‌ ಗಾಗಿ, ಗ್ರಾಹಕರು ಈಗಿನ 4ಜಿ ಸಿಮ್‌ಗಳನ್ನು ಬದಲಿಸುವ ಅಗತ್ಯವಿಲ್ಲ ಎಂದು ಸಹ ಏರ್‌ಟೆಲ್‌ ತಿಳಿಸಿದೆ. 5ಜಿ ತರಂಗಾಂತರಗಳನ್ನು ಕೇಂದ್ರ ಸರ್ಕಾರ, ಕಳೆದ ವರ್ಷವೇ ಹರಾಜು ಹಾಕಬೇಕಿತ್ತು. ಆದರೆ ಟೆಲಿಕಾಂ ರಂಗದ ಆರ್ಥಿಕ ಕಷ್ಟಗಳಿಂದಾಗಿ ಹರಾಜು ನಡೆಯಲಿಲ್ಲ.

ಮಾರ್ಚ್‌ 1 ರಂದು ಮತ್ತೆ 4ಜಿ ತರಂಗಾಂತರದ ಹರಾಜು ನಡೆಯಲಿದೆ. ಇದಾದ ಬಳಿಕ ಅಂದರೆ ವರ್ಷದ ದ್ವಿತೀಯಾರ್ಧದಲ್ಲಿ 5ಜಿ ಹರಾಜು ನಡೆಯುವ ಸಾಧ್ಯತೆ ಇದೆ. 10 ಲಕ್ಷ 5ಜಿ ಫೋನ್‌ಗಳು ಏರ್‌ಟೆಲ್‌ ತಿಳಿಸಿರುವ ಮಾಹಿತಿಯ ಪ್ರಕಾರ, ಈಗಾಗಲೇ ಅವರ ನೆಟ್‌ ವರ್ಕ್‌ ನಲ್ಲಿ 10 ಲಕ್ಷ ಜನರು 5ಜಿ ಸವಲತ್ತು ಹೊಂದಿರುವ ಫೋನ್‌ ಗಳನ್ನು ಹೊಂದಿದ್ದಾರಂತೆ! ಏರ್‌ ಟೆಲ್‌ ಇರಲಿ, ಜಿಯೋ ಇರಲಿ, ಹೆಚ್ಚು ಜನ ಗ್ರಾಹಕರು 5ಜಿ ಸಾಮರ್ಥ್ಯದ ಫೋನ್‌ಗಳನ್ನು ಹೊಂದಿದ್ದಾಗಲಷ್ಟೇ ಅವರು ತಮ್ಮ ಹೊಸ ಸವಲತ್ತನ್ನು ಗ್ರಾಹಕರಿಗೆ ನೀಡಿ ಅದರಿಂದ ಲಾಭ ಪಡೆಯಲು ಸಾಧ್ಯ!

ಹೀಗಾಗಿ ನೆಟ್‌ವರ್ಕ್‌ದಾತ ಕಂಪೆನಿಗಳು (ಜಿಯೋ, ಏರ್‌ ಟೆಲ್‌, ವಿಐ) ಸರ್ಕಾರ ನೀಡುವ 5 ಜಿ ತರಂಗಾಂತರದ ಜೊತೆಗೆ, ಹೆಚ್ಚು ಗ್ರಾಹಕರು 5ಜಿ ಫೋನ್‌ಗಳನ್ನು ಬಳಸಲಿ ಎಂಬುದನ್ನೂ ಕಾಯುತ್ತಿವೆ! ಹೀಗಾಗಿ, 10 ಸಾವಿರದಿಂದ 15 ಸಾವಿರದವರೆಗಿನ ಮೊಬೈಲ್‌ ಫೋನ್‌ ಗಳಲ್ಲಿ 5ಜಿ ಸೌಲಭ್ಯ ಬಂದಾಗ ಹೆಚ್ಚು ಗ್ರಾಹಕರು 5ಜಿ ಫೋನ್‌ ಹೊಂದುತ್ತಾರೆ ಎಂಬುದು ಏರ್‌ಟೆಲ್‌ ಅಧಿಕಾರಿಯೊಬ್ಬರ ಅಭಿಪ್ರಾಯ.

ಈ ಎಲ್ಲ ಬೆಳವಣಿಗೆಗಳನ್ನೂ ನೋಡಿದಾಗ ಕೇಂದ್ರ ಸರ್ಕಾರ ಜುಲೈ-ಆಗಸ್ಟ್ ನಲ್ಲಿ ಹರಾಜು ನಡೆಸಿ 5ಜಿ ತರಂಗಾಂತರ ನೀಡಿದರೆ, ಅಕ್ಟೋಬರ್‌ ನವೆಂಬರ್‌ನಲ್ಲಿ ಕಂಪೆನಿಗಳು 5ಜಿ ನೆಟ್‌ ವರ್ಕ್‌ ಅನ್ನು ಗ್ರಾಹಕರಿಗೆ ಆರಂಭಿಕವಾಗಿ ಆಯ್ದ ಸರ್ಕಲ್‌ಗ‌ಳಲ್ಲಿ ನೀಡಬಹುದು. ತದನಂತರ ಅದನ್ನು ಎಲ್ಲೆಡೆ ವಿಸ್ತರಿಸಿ ಎಲ್ಲೆಡೆ 5ಜಿ ಸೌಲಭ್ಯ ದೊರಕಬೇಕೆಂದರೆ 2022ರ ಮಧ್ಯಭಾಗ ಆಗಬಹುದು.

5ಜಿಯಿಂದ ಲಾಭವೇನು?
5ಜಿ ಸಂಪೂರ್ಣ ಅನುಷ್ಠಾನಗೊಂಡರೆ, ಅದು ಈಗಿನ 4ಜಿ ಗಿಂತ 100 ಪಟ್ಟು ವೇಗವಾಗಿ ಡಾಟಾ ವರ್ಗಾಯಿಸುತ್ತದೆ. ಅಂದರೆ ಒಂದು ಎಚ್‌ಡಿ ಸಿನಿಮಾ ಸಂಪೂರ್ಣವಾಗಿ ಡೌನ್‌ಲೋಡ್‌ ಆಗಲು ಈಗಿನ 4ಜಿಯಲ್ಲಿ 50 ನಿಮಿಷ ತೆಗೆದುಕೊಂಡರೆ, 5ಜಿಯಲ್ಲಿ ಅದು ಕೇವಲ 9 ನಿಮಿಷದಲ್ಲಿ ಡೌನ್‌ಲೋಡ್‌ ಆಗುತ್ತದೆ! ಹೀಗಾಗಿ ನಿಮ್ಮ ಮೇಲ್‌ನಲ್ಲಿರುವ ಫೋಟೋಗಳು, ವಾಟ್ಸ್‌ಆ್ಯಪ್‌ ವಿಡಿಯೋಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಡೌನ್‌ ಲೋಡ್‌ ಆಗುತ್ತವೆ!

ಕೆ.ಎಸ್.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.