Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Team Udayavani, Apr 30, 2024, 8:31 PM IST

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

ಕೊಪ್ಪಳ: ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಘಟನೆ ಮಂಗಳವಾರ ನಡೆದಿದೆ. ಗಂಗಾವತಿಯಲ್ಲಿ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಇಕ್ಬಾಲ್ ಅನ್ಸಾರಿ-ಹೆಚ್ ಆರ್ ಶ್ರೀನಾಥ್ ನಡುವಿನ ಬಣ ಬಡಿದಾಟ ಜಗಜ್ಜಾಹೀರಾಗಿದೆ.

ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರುತಮ್ಮ ಭಾಷಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋಸವಾಗಿದೆ. ನನಗೆ ಮೋಸ‌ ಮಾಡಿ ಜನಾರ್ದನ ರೆಡ್ಡಿ ಪರ ಡೀಲ್ ಆಗಿ ರೆಡ್ಡಿಗೆ ಮತ ಹಾಕಿಸಿದರು. ಕೆಲವರು ನನಗೆ ಮೋಸ ಮಾಡಿದರು. ಆದರೆ ನನಗೆ ರಾಜಕೀಯ ಮುಖ್ಯವಲ್ಲ ಎಂದರು.  ಜ‌ನರು ಆಶೀರ್ವಾದ ಮಾಡಿದರೆ ನಿಮ್ಮ ಸೇವೆ ಮಾಡುವೆ. ಇಲ್ಲದಿದ್ದರೆ ಮನೆಯಲ್ಲಿ ಕುಟುಂಬದ ಜೊತೆ ಇರುವೆ. ನನಗೆ ಮೋಸ ಮಾಡಿದರು ಎಂದು ಶ್ರೀನಾಥ್, ಶಾಮಿದ್ ಸೇರಿ ಹಲವು ನಾಯಕರಿಗೆ ಅನ್ಸಾರಿ ಟಾಂಗ್ ನೀಡಿದರು.

ಅನ್ಸಾರಿ ಭಾಷಣದಿಂದ ಸಿಡಿಮಿಡಿಗೊಂಡಿದ್ದ ಹೆಚ್ ಆರ್ ಶ್ರೀನಾಥ್, ಅನ್ಸಾರಿ ಭಾಷಣ ಮುಗಿದ ಬೆನ್ನಲ್ಲೇ ವೇದಿಕೆ ಮೇಲೆ ಮಾತನಾಡಲು ಎದ್ದು ಬಂದರು. ಈ ವೇಳೆ ಸಚಿವ ಶಿವರಾಜ ತಂಗಡಗಿ ನಂತರ ಮಾತನಾಡುವಂತೆ ಶ್ರೀನಾಥ್ ರನ್ನು ತಡೆದರು. ಅದನ್ನೂ ಮೀರಿ ನಾನು ಮಾತನಾಡಲೇ ಬೇಕು ಎಂದು ಹಠಕ್ಕೆ ಬಿದ್ದು ಸಿಎಂ‌ ಎದುರೇ ಮೈಕ್ ನತ್ತ ಶ್ರೀನಾಥ್ ಆಗಮಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಯಾವುದೇ ಗೊಂದಲ ಮಾತನಾಡದಂತೆ ಸೂಕ್ಷ್ಮ ಸೂಚನೆ ಕೊಟ್ಟರು, ಇದರಿಂದ ಶ್ರೀನಾಥ್ ತಣ್ಣಗಾದರು.

ಸಮಾವೇಶದ ವೇದಿಕೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಬಳಿಕ ಮಾತನಾಡಿದ ಶ್ರೀನಾಥ್, ನಮ್ಮ ಕುಟುಂಬದ ಬಗ್ಗೆ ಒಬ್ಬ ವ್ಯಕ್ತಿ ಅಪ ಪ್ರಚಾರ ಮಾಡುತ್ತಿದ್ದಾರೆ. ನಾವು ಯಾವಾಗಲೂ ಕಾಂಗ್ರೆಸ್ ಪರ ಇದ್ದೇವೆ. ನಾವು ಕಾಂಗ್ರೆಸ್ ಪರವಾದ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದರು.

ಹೆಚ್ ಆರ್ ಶ್ರೀನಾಥ್ ಅವರು ಭಾಷಣ ಮಾಡುವ ವೇಳೆ ವೇದಿಕೆ ಮುಂದೆ ಇದ್ದ ಜನಸ್ತೋಮ ಗೋಬ್ಯಾಕ್ ಘೋಷಣೆ ಕೂಗಿ, ಚೇರ್ ತೂರಾಟ ಮಾಡಿದರು. ಶ್ರೀನಾಥ್ ಭಾಷಣಕ್ಕೆ ಜನತೆ ಆಕ್ಷೇಪ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಗಂಗಾವತಿಯಲ್ಲಿ ಮತ್ತೆ ಸಿಎಂ ಎದುರೇ ಕಾಂಗ್ರೆಸ್ ಬಣ ಬಡಿದಾಟ ಬಹಿರಂಗಗೊಂಡಿದೆ.

ಟಾಪ್ ನ್ಯೂಸ್

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.