ಈ ನಾಯಿ ನುಂಗಿದ್ದು ಎಂಗೇಜ್‌ಮೆಂಟ್‌ ಉಂಗುರ

ಹೌದಾ ಮಾರಾಯ್ರೆ !

Team Udayavani, Feb 10, 2020, 6:00 PM IST

ಒಮ್ಮೊಮ್ಮೆ ನಿಮ್ಮ ಸಾಕುಪ್ರಾಣಿಗಳು ಮಾಡುವ ಎಡವಟ್ಟು ನಿಮ್ಮನ್ನು ಗಾಬರಿಗೀಡು ಮಾಡುತ್ತವೆ. ಅಂಥದ್ದೊಂದು ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ಇಲ್ಲಿನ ಪೆಪ್ಪರ್‌ ಎಂಬ ಹೆಸರಿನ ನಾಯಿ “ದುಬಾರಿ ವಸ್ತು’ವೊಂದನ್ನು ಗುಳುಂ ಮಾಡಿಬಿಟ್ಟಿದೆ. ಅಷ್ಟಕ್ಕೂ ಅದು ತಿಂದಿದ್ದೇನು ಗೊತ್ತಾ? ತನ್ನನ್ನು ಸಾಕಿರುವ ಮಹಿಳೆಯ ಎಂಗೇಜ್‌ಮೆಂಟ್‌ ರಿಂಗ್‌!

ಇತ್ತೀಚೆಗಷ್ಟೇ ಆಕೆಗೆ ವಿವಾಹ ನಿಶ್ಚಿತಾರ್ಥ ಆಗಿತ್ತು. ಇದರಿಂದ ಆ ನಾಯಿಗೆ “ಅಸೂಯೆ’ ಆಯಿತೋ ಏನೋ ಗೊತ್ತಿಲ್ಲ. ಆ ಮಹಿಳೆಯ ಪಕ್ಕದಲ್ಲೇ ಕುಳಿತಿದ್ದ ನಾಯಿ ದಿಢೀರೆಂದು ಆಕೆಯ ಕೈಯಲ್ಲಿದ್ದ ಉಂಗುರವನ್ನು ಕಚ್ಚಿ, ನುಂಗಿಯೇ ಬಿಟ್ಟಿತು. ಕೊನೆಗೆ ಆಸ್ಪತ್ರೆಗೆ ಕರೆದೊಯ್ದು, ಶಸ್ತ್ರಚಿಕಿತ್ಸೆ ನಡೆಸಿ ಪೆಪ್ಪರ್‌ನ ಹೊಟ್ಟೆಯಲ್ಲಿದ್ದ ಉಂಗುರವನ್ನು ಹೊರತೆಗೆಯಲಾಯಿತಂತೆ!

ಆಸ್ಪತ್ರೆಯ ವೈದ್ಯರೇ ನಾಯಿಯ ಮತ್ತು ಉಂಗುರದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಅದಕ್ಕೆ ಹಲವರು ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ