ಕಚೇರಿಯಲ್ಲೇ ಅಡುಗೆ ಮಾಡ್ತಾಳೆ ಚೀನಿ ಮಹಿಳೆ! viral Video
Team Udayavani, Mar 15, 2017, 4:36 AM IST
ರಾತ್ರಿ ವೇಳೆ ಕಚೇರಿಯಲ್ಲಿ ದುಡಿಯುವವರೆಲ್ಲರೂ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಿಯೇ ಇರುತ್ತಾರೆ. ರಾತ್ರಿ ಬಹಳ ಹೊತ್ತು ಕೆಲಸ ಮಾಡುತ್ತಿರುತ್ತೀರಿ ಇನ್ನು ಹಸಿವು ತಾಳಲು ಸಾಧ್ಯವೇ ಇಲ್ಲ. ಆದರೆ ಅಷ್ಟರೊಳಗಾಗಲೇ ತುಂಬಾ ತಡವಾಗಿರುತ್ತದೆ. ಕಚೇರಿಯ ಕ್ಯಾಂಟೀನ್, ಆಚೆಯ ಹೋಟೆಲ್ ಎಲ್ಲಾ ಮುಚ್ಚಿರುತ್ತವೆ. ಇಂಥ ಸಮಯ ದಲ್ಲಿ ನಿಮ್ಮಿಂದ ಏನು ಮಾಡಲು ಸಾಧ್ಯ? ಚೀನಾದ ಮಹಿಳಾ ಸಿಬ್ಬಂದಿಯೊಬ್ಬಳು ಇಂಥ ಪರಿಸ್ಥಿತಿಯಲ್ಲಿ ತಾನು ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.
ಆಫೀಸ್ನಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಆಕೆ ಬೇಕಾದಂಥ ತಿನಿಸುಗಳನ್ನು ಮಾಡಿ ಕೊಂಡು ತಿನ್ನುತ್ತಾಳೆ. ಒಟ್ಟು 15 ವಿಡಿಯೋಗಳನ್ನು ಆಕೆ ಹರಿಬಿಟ್ಟಿದ್ದಾಳೆ. ಬಿಸಿಯಾದ ಸಿಪಿಯು ಮೇಲೆ ಆಕೆ ಎಗ್ ರೋಲ್ ಮಾಡುತ್ತಾಳೆ. ಆμàಸ್ನ ಹೀಟರ್ ಬಳಸಿ ನೂಡಲ್ಸ್ ತಯಾರಿಸುತ್ತಾಳೆ. ಅಲಂಕಾರಿಕ ಮೇಣದ ಬತ್ತಿ, ಕೋಕ್ ಟಿನ್ ಬಳಸಿ ಪಾಪ್ ಕಾರ್ನ್, ಟೇಬಲ್ನ ಡ್ರಾಯರ್ ಮತ್ತು ಹೀಟರ್ ಬಳಸಿ ಚಿಕನ್ ತಂದೂರಿಯನ್ನು ಆಕೆ ತಯಾರಿಸುತ್ತಾಳೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ