12 ವರ್ಷ ಬಳಿಕ ಮಾಲೀಕರ ಸೇರಿದ ನಾಯಿ
Team Udayavani, Oct 14, 2019, 6:59 PM IST
ನಾಯಿಗಳ ಜೀವಿತಾವಧಿಯೇ ಹೆಚ್ಚೆಂದರೆ 12ರಿಂದ 14 ವರ್ಷ. ಅಂತಹದರಲ್ಲಿ ಕಳೆದು ಹೋಗಿದ್ದ ನಾಯಿ 12 ವರ್ಷಗಳ ಬಳಿಕ ಮಾಲೀಕರಿಗೆ ವಾಪಸ್ಸು ಸಿಗುವುದು ಎಂದರೆ ಸುಲಭದ ಮಾತಾ? ಕ್ಯಾಥರಿನ್ ಸ್ಟ್ರಾಂಗ್ ತಮ್ಮ ಫಾಕ್ಸ್ ಟೆರ್ರಿಯರ್ ನಾಯಿಯನ್ನು ಫ್ಲೋರಿಡಾದ ಬೊಕ ರೋಟನ್ನ
ತಮ್ಮ ಮನೆ ಬಳಿ 12 ವರ್ಷಗಳ ಕೆಳಗೆ ಕಳೆದುಕೊಂಡಿದ್ದರು. ಸಾಕಷ್ಟು ಹುಡುಕಾಟಗಳ ಬಳಿಕವೂ ಅವರಿಗೆ ನಾಯಿ ದೊರಕಿರಲಿಲ್ಲ. ಆದರೆ ಅದು ದೂರದ ಪಿಟ್ಸ್ಬರ್ಗ್ನ ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ನಾಯಿಯಲ್ಲಿ ಮೈಕ್ರೊಚಿಪ್ ಅಳವಡಿಸಿದ್ದ ಕಾರಣ ಮಾಲೀಕರ ಗುರುತು ಪತ್ತೆ ಮಾಡಿ
ಆಶ್ರಯ ಕೇಂದ್ರದವರು ಕ್ಯಾಥರಿನ್ಗೆ ಹಿಂದಿರುಗಿಸಿದ್ದಾರೆ.