ಎರಡು ಬಾಳೆಹಣ್ಣಿಗೆ ಇವರು ಕೊಟ್ಟ ದರ ಎಷ್ಟು ಗೊತ್ತಾ?

Team Udayavani, Jul 25, 2019, 3:16 PM IST

ಫಿಟ್ ಆಗಿ ಇರಬೇಕು ಎಂದರೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದು ನಟ ರಾಹುಲ್‌ ಬೋಸ್‌ ಟ್ವೀಟ್‌ ಮಾಡಿರುವ ವೀಡಿಯೋ ನೋಡಿದರೆ ತಿಳಿಯುತ್ತದೆ.

ರಾಹುಲ್‌ ಬೋಸ್‌ ಪಂಚತಾರಾ ಹೊಟೇಲ್‌ ಒಂದರಲ್ಲಿ ಉಳಿದು ಕೊಂಡಿದ್ದರಂತೆ. ಅವರು ಜಿಮ್‌ನಲ್ಲಿ ಕಸರತ್ತು ಮಾಡುವಾಗ 2 ಬಾಳೆ ಹಣ್ಣುಗಳನ್ನು ಆರ್ಡರ್‌ ಮಾಡಿದರು. ಬಾಳೆಹಣ್ಣಿಗೆ ಹೊಟೇಲ್‌ನಲ್ಲಿ ವಿಧಿಸಿದ ದರ ನೋಡಿ ಅವರು ಬೆಚ್ಚಿ ಬಿದ್ದಿದ್ದಾರೆ. ಕೇವಲ 2 ಬಾಳೆಹಣ್ಣಿಗೆ ಬರೋಬ್ಬರಿ 442 ರೂ. ದರ ಹಾಕಿದ್ದಾರೆ. ಈ ಕುರಿತು ರಾಹುಲ್‌ ಬೋಸ್‌ 38 ನಿಮಿಷಗಳ ವೀಡಿಯೋ ಮಾಡಿ ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.

ಅದಕ್ಕೆ “ಹಣ್ಣುಗಳು ನಿಮಗೆ ಉತ್ತಮ ಎಂದು ಯಾರು ಹೇಳಿದ್ದು? ಜೆಡಬ್ಲ್ಯು ಮ್ಯಾರಿಯೇಟ್‌ ಹೊಟೇಲ್‌ನವರನ್ನು ಕೇಳಿ ನೋಡಿ’ ಎಂದು ಬರೆದಿದ್ದಾರೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಒಬ್ಬರು “ಬಾಳೆಹಣ್ಣಿನ ಸಿಪ್ಪೆ
ಚಿನ್ನದ್ದಾಗಿತ್ತೋ ಏನೋ’ ಎಂದು ಹೇಳಿದರೆ. ಮತ್ತೂಬ್ಬರು “ನೀವು ರಸ್ತೆಬದಿ ಕೊಂಡಿದ್ದರೆ 10 ರೂ.ಗೆ ಸಿಗುತ್ತಿತ್ತು. ಪಂಚತಾರಾ ಹೊಟೇಲ್‌ನಲ್ಲಿ ಕೊಂಡು ಶೋಕಿ ಮಾಡುತ್ತಿದ್ದೀರಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಗು, ನಾಚಿಕೆ, ಸಿಟ್ಟು ಎಲ್ಲವನ್ನೂ ಹೇಳಲು ಸಾಮಾಜಿಕ ಜಾಲತಾಣಿಗರು ಮೀಮ್‌ಗಳನ್ನು, ಜಿಫ್ ಇಮೇಜ್‌ಗಳನ್ನು ಬಳಸುವುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ,...

  • ತಾಳಲಾರೆ ತಿಗಣೆಯಾ ಕಾಟವಾ... ಹಾಡನ್ನು ನೀವು ಕೇಳಿರಬಹುದು. ಈಗ ಆ ಹಾಡು ಹಾಡುವ ಸರದಿ ಫ್ರಾನ್ಸ್‌ ನಾಗರಿಕರದ್ದು! ತಿಗಣೆ ಕಾಟ, ಅವುಗಳ ಆರ್ಭಟಕ್ಕೆ ಫ್ರಾನ್ಸ್‌ ಅಕ್ಷರಶಃ...

ಹೊಸ ಸೇರ್ಪಡೆ