ಧೂಮಪಾನ ಮಾಡದಿದ್ರೆ 6 ದಿನ ಹೆಚ್ಚುವರಿ ರಜೆ

ಹೌದಾ ಮಾರಾಯ್ರೇ!

Team Udayavani, Dec 3, 2019, 8:19 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಎಲ್ಲ ಕಂಪೆನಿಗಳಲ್ಲಿ ಸ್ಮೋಕಿಂಗ್‌ ಝೋನ್‌ (ಧೂಮಪಾನ ವಲಯ) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಧೂಮ ವ್ಯಸನಿಗಳು ದಿನದಲ್ಲಿ ಕನಿಷ್ಠ 2-3 ಬಾರಿ ಸ್ಮೋಕಿಂಗ್‌ ಝೋನ್‌ಗೆ ಹೋಗಿ ಸಿಗರೇಟ್‌ ಸೇದಿ ಬರುತ್ತಾರೆ. ಇದರಿಂದ ಕಂಪೆನಿಯ ಒಟ್ಟು ಕರ್ತವ್ಯ ಅವಧಿಯಲ್ಲಿ ಅರ್ಧದಿಂದ 1 ಗಂಟೆ ವ್ಯರ್ಥವಾಗುತ್ತದೆ.

ಜಪಾನ್‌ನ ಸಂಸ್ಥೆಯೊಂದರ ಸಿಬಂದಿಯು, ಧೂಮಪಾನಿಗಳಿಂದ ಸಂಸ್ಥೆಯ ಕಾರ್ಯಕ್ಷಮತೆ ಕುಗ್ಗುತ್ತಿದ್ದು, ಧೂಮಪಾನಿಗಳಲ್ಲದವರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಎಂದು ಸಿಇಒಗೆ ದೂರು ನೀಡಿದ್ದರು. ಈ ಕುರಿತು ಕ್ರಮ ಕೈಗೊಂಡಿರುವ ಸಿಇಒ, ಈಗ ಧೂಮಪಾನ ಮಾಡದವರಿಗೆ 6 ದಿನ ಸಂಬಳಸಹಿತ ರಜೆ ನೀಡುವುದಾಗಿ ಘೋಷಿಸಿ, ಅಚ್ಚರಿ ಮೂಡಿಸಿದ್ದಾರೆ.

ಟೋಕಿಯೋ ಮೂಲದ ಮಾರ್ಕೆಟಿಂಗ್‌ ಕಂಪೆನಿ ಪಿಯಾಲಾ ಐಎನ್‌ಸಿ ಈ ಕ್ರಮ ಕೈಗೊಂಡಿದೆ. ಧೂಮ ಪಾನ ಮಾಡುವವರಿಗಿಂತ ಧೂಮಪಾನ ಮಾಡದವರ ಕರ್ತವ್ಯದ ಅವಧಿ ಸ್ವಾಭಾವಿಕವಾಗಿ ಹೆಚ್ಚು ಇರುತ್ತದೆ. ಆದ್ದರಿಂದ ಅವರಿಗೆ ಹೆಚ್ಚಿನ ರಜೆ ನೀಡಲಾಗಿದೆ. ಧೂಮಪಾನಿಗಳು ಅವರ ವ್ಯಸನವನ್ನು ಬಿಡಲೂ ಉತ್ತೇಜಿಸಿದಂತಾಗುತ್ತದೆ ಎಂದಿದ್ದಾರೆ ಸಿಇಒ ಟಕಾವೊ ಅಸುಕ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ