ಪ್ರಕೃತಿಯ ಸಿಟ್ಟಿಗೆ ತರಗೆಲೆಯಾದ ಜಗತ್ತು


Team Udayavani, Aug 23, 2022, 6:55 AM IST

ಪ್ರಕೃತಿಯ ಸಿಟ್ಟಿಗೆ ತರಗೆಲೆಯಾದ ಜಗತ್ತು

ಜಗತ್ತಿನ ಒಂದು ಪ್ರದೇಶದಲ್ಲಿ ವಿಪರೀತ ಚಳಿ, ಮತ್ತೂಂದೆಡೆ ಮೈಸುಡುವ ಬಿಸಿಲು, ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲ… ಇದೆಂಥಾ ವಿಪರ್ಯಾಸ ಎಂದು ಯೋಚಿಸುತ್ತಿದ್ದೀರಾ? ವಿಪರ್ಯಾಸವಲ್ಲ, ಇದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯದ ಸ್ಯಾಂಪಲ್‌ಗ‌ಳು. ಬಾಂಗ್ಲಾದಿಂದ ಹಿಡಿದು ಅಮೆರಿಕದವರೆಗೂ, ಚೀನದಿಂದ ಯುರೋಪ್‌ವರೆಗೂ ಜನರು ಪ್ರತಿಕೂಲ ಹವಾಮಾನದ “ಕರಾಳತೆ’ಯನ್ನು ಅನುಭವಿಸತೊಡಗಿದ್ದಾರೆ. ಪ್ರಾಕೃತಿಕ ವಿಕೋಪದ ಎದೆ ನಡುಗಿಸುವ ದೃಶ್ಯಾವಳಿಗಳು ಇಲ್ಲಿವೆ.

ಬ್ರಿಟನ್‌, ಅಮೆರಿಕಕ್ಕೆ ಬರದ ಬರೆ
ಬ್ರಿಟನ್‌ನಾದ್ಯಂತ ತಾಪಮಾನ ದಾಖಲೆ ಬರೆಯುತ್ತಿದ್ದು, ಸುಳಿವು ನೀಡದೇ ಬರ ಆವರಿಸಿದೆ. ಅನೇಕ ದಿನಗಳಿಂದ ಅಗಾಧ ಉಷ್ಣ ಹಾಗೂ ಶುಷ್ಕ ವಾತಾವರಣ ಆವರಿಸಿರುವ ಲಂಡನ್‌ನ ಕೇಂದ್ರ ಭಾಗ, ದಕ್ಷಿಣ ಹಾಗೂ ಪೂರ್ವ ಭಾಗಗಳನ್ನು ಬರಪೀಡಿತ ಪ್ರದೇಶಗಳೆಂದು ಬ್ರಿಟನ್‌ ಸರ್ಕಾರ ಘೋಷಿಸಿದೆ. ಜುಲೈನಲ್ಲಿ ಈ ಪ್ರಾಂತ್ಯಗಳಲ್ಲಿ ಉತ್ತಮ ಮಳೆಯಾಗುತ್ತಿತ್ತು. ಆದರೆ, ಈ ಬಾರಿಯ ಜುಲೈನಲ್ಲಿ ಅಲ್ಲಿ ಶೇ. 35ರಷ್ಟು ಮಳೆ ಮಾತ್ರ ಬಿದ್ದಿದೆ. 1935ರ ನಂತರ ಹೀಗಾಗುತ್ತಿರುವುದು ಇದೇ ಮೊದಲು. ಜಲಾಶಯಗಳೆಲ್ಲ ಬತ್ತಿ ಹೋಗಿರುವ ಕಾರಣ ಪಾರ್ಕ್‌ಗಳು, ಹುಲ್ಲುಗಾವಲು ಪ್ರದೇಶಗಳು ಒಣಗಿ ಹೋಗಿ, ಕಾಡ್ಗಿಚ್ಚಿಗೆ ಆಹ್ವಾನ ನೀಡಿವೆ.

ಮೆಕ್ಸಿಕೋದಲ್ಲಿ ನೀರಿಗೆ ಬರ
ಫ್ರಾನ್ಸ್‌ನಲ್ಲಿ 96 ಮೈನ್‌ಲ್ಯಾಂಡ್ ಪ್ರದೇಶಗಳ ಪೈಕಿ 93ರಲ್ಲಿ ನೀರಿನ ಬಳಕೆಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ಮಳೆ ಕೊರತೆ ಜನರನ್ನು ಸಂಕಷ್ಟಕ್ಕೆ ನೂಕಿದೆ. ಹಿಂದೆಂದೂ ಕಂಡರಿಯದ ಬರಗಾಲವನ್ನು ಫ್ರಾನ್ಸ್‌ ಎದುರಿಸುತ್ತಿದೆ. ಇನ್ನು, ಇರಾಕ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.60ರಷ್ಟು ಇಳಿಮುಖವಾಗಿದೆ.

ಸ್ಪೇನ್‌, ಫ್ರಾನ್ಸ್‌, ಮೊರೊಕ್ಕೋ ಕಾಡ್ಗಿಚ್ಚು
ಬಿಸಿಗಾಳಿಯ ತಾಪವು ಎಲ್ಲೆಡೆ ಕಾಡ್ಗಿಚ್ಚುಗಳನ್ನು ಸೃಷ್ಟಿಸುತ್ತಿದ್ದು, ಫ್ರಾನ್ಸ್‌, ಸ್ಪೇನ್‌, ಮೊರೊಕ್ಕೋ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅರಣ್ಯಪ್ರದೇಶಗಳು ಹೊತ್ತಿ ಉರಿಯಲಾರಂಭಿಸಿವೆ. ಸಾವಿರಾರು ಪ್ರಾಣಿಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಉತ್ತರ ಧ್ರುವದಲ್ಲಿ ತೊಂದರೆ
ಭೂಮಿಯ ಉತ್ತರ ಭಾಗದಲ್ಲಿರುವ ಆರ್ಕ್‌ಟಿಕ್‌ ಪ್ರದೇಶದಲ್ಲಿ ಶಾಖ, ಭೂಮಿಯ ಮಿಕ್ಕೆಲ್ಲಾ ಭಾಗಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 43 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರದೇಶದಲ್ಲಿ 2.7 ಡಿಗ್ರಿ ಸೆಲಿÏಯಸ್‌ ತಾಪಮಾನ ಹೆಚ್ಚಾಗಿದೆ. ಹೀಗಾಗಿ, ಈ ಭಾಗದಲ್ಲಿರುವ ಮಂಜು ತ್ವರಿತವಾಗಿ ಕರಗಿ ಸಮುದ್ರ ಸೇರುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಜಲಪ್ರಯಳದಂಥ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಚೀನ ಆರ್ಥಿಕತೆ ಬುಡಮೇಲು
– ತಾಪಮಾನ ಹೆಚ್ಚಳವು ಚೀನಾದ ಹಲವು ಭಾಗಗಳಲ್ಲಿ ಬರಗಾಲದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಅಲ್ಲಿ ಅತಿ ಉದ್ದದ ನದಿಯೆಂದು ಕರೆಯಲ್ಪಡುವ ಯಾಂಗ್‌ಝೆ ನದಿಯು ಶೇ.20ರಷ್ಟು ಬತ್ತಿ ಹೋಗಿದೆ. ಈ ನದಿ ಮುಖಜಭೂಮಿಯಲ್ಲಿ ಈ ಬಾರಿ 6 ದಶಕಗಳಲ್ಲೇ ಅತಿ ಕಡಿಮೆ ಮಳೆಯಾಗಿದೆ.
– ಇದರಿಂದ ಕುಡಿಯುವ ನೀರಿನ ಪೂರೈಕೆ, ವಿದ್ಯುತ್ಛಕ್ತಿ ಸರಬರಾದು ಮತ್ತು ನೀರಾವರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಚೀನಾದ ಪ್ರಮುಖ ದ್ವಿದಳ ಧಾನ್ಯ ಬೆಳೆಯುವ ಪ್ರದೇಶಗಳು ಈ ನದಿಯ ಆಸುಪಾಸಿನಲ್ಲೇ ಬರುತ್ತವೆ. ಈ ಬಾರಿ ಬಿಸಿಲಿನ ಝಳದಿಂದ ಇಳುವರಿಯೆಲ್ಲ ಒಣಗಿ ಹೋಗಿವೆ.
– ಇನ್ನು ಈಶಾನ್ಯ ಚೀನಾದಲ್ಲಿ ಪ್ರವಾಹದಿಂದಾಗಿ ಬೆಳೆಗಳೆಲ್ಲ ನೀರುಪಾಲಾಗಿವೆ. ಇಳುವರಿ ಕಡಿಮೆಯಾಗಿರುವ ಕಾರಣ ಆಹಾರ ವಸ್ತುಗಳ ದರ ಗಗನಕ್ಕೇರಲಾರಂಭಿಸಿವೆ.
–  ಬಿಸಿಲಿನ ತಾಪ ಹೆಚ್ಚಿರುವ ಕಾರಣ ಕೋಳಿಗಳಿಗೆ ಕಡಿಮೆ ಪ್ರಮಾಣದ ಆಹಾರ ನೀಡಲಾಗುತ್ತಿದೆ. ಪರಿಣಾಮ ಅವುಗಳು ಇಡುವ ಮೊಟ್ಟೆಯ ಪ್ರಮಾಣ ತಗ್ಗಿದೆ. ಪೂರೈಕೆ ತಗ್ಗಿರುವುದರಿಂದ ಮೊಟ್ಟೆಯ ದರವೂ ಗಣನೀಯವಾಗಿ ಏರಿಕೆಯಾಗಿದೆ.
– ಸಿಚುವಾನ್‌ನಲ್ಲಿ ಮೆಟ್ರೋ ಸ್ಟೇಷನ್‌ಗಳ ಸುರಂಗಗಳಲ್ಲಿ ವಿದ್ಯುತ್‌ದೀಪಗಳನ್ನು ಡಿಮ್‌ ಮಾಡುವ ಮೂಲಕ ವಿದ್ಯುತ್ಛಕ್ತಿ ಉಳಿಸಲು ಯತ್ನಿಸಲಾಗಿದೆ. ಜನರು ಅರೆ ಕತ್ತಲಲ್ಲೇ ಪರದಾಡುವ ಸ್ಥಿತಿ ಬಂದಿದೆ.
– ವಿದ್ಯುತ್‌ ಸಂರಕ್ಷಣೆ ಹಿನ್ನೆಲೆಯಲ್ಲಿ 7 ದಿನಗಳ ಕಾಲ ಫ್ಯಾಕ್ಟರಿಗಳನ್ನು ಮುಚ್ಚಲಾಗಿದೆ.
– ನೀರಿನ ಸಮಸ್ಯೆ ಪರಿಹರಿಸಲು ಚೀನ ಮೋಡ ಬಿತ್ತನೆ ಮಾಡುವತ್ತ ಗಮನ ನೆಟ್ಟಿದೆ. ಒಟ್ಟಿನಲ್ಲಿ ಹವಾಮಾನ ವೈಪರೀತ್ಯವು ಚೀನಾದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ.

ಕುದುರೆ ಕುಸಿದುಬಿತ್ತು!
ನ್ಯೂಯಾರ್ಕ್‌ ನಗರದಲ್ಲಿ ಕುದುರೆ ಗಾಡಿಯಲ್ಲಿ ಬಳಸಲಾಗುವ ಕುದುರೆಯೊಂದು ಇತ್ತೀಚೆಗೆ ಬಿಸಿಲ ಝಳ ತಾಳಲಾರದೇ ರಸ್ತೆ ಮಧ್ಯೆಯೇ ಕುಸಿದು ಬಿದ್ದಿದೆ. ಇದನ್ನು ಕಂಡು ಅಲ್ಲಿದ್ದವರೆಲ್ಲರೂ ಭಯಭೀತರಾಗಿದ್ದಾರೆ. ನಂತರ ಅಲ್ಲಿಗೆ ಬಂದ ರಕ್ಷಣಾ ಸಿಬ್ಬಂದಿ, ಬಿದ್ದಿದ್ದ ಕುದುರೆಯ ಮೇಲೆ ಪೈಪ್‌ ಮೂಲಕ ನೀರು ಹಾರಿಸಿ, ಅದನ್ನು ತಂಪಾಗಿಸಿದ್ದಾರೆ.

ಒಬ್ಬರಿಗೆ ಮೂರೇ ಬಾಕ್ಸ್‌
ಬ್ರಿಟನ್‌ನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಸೂಪರ್‌ ಮಾರ್ಕೆಟ್‌ಗಳಲ್ಲಿ ನೀರಿನ ಬಾಟಲಿಗಳ ಮಾರಾಟ ಬಿರುಸಾಗಿದೆ. ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಪ್ರತಿ ಗ್ರಾಹಕರಿಗೆ ಮೂರು ನೀರಿನ ಬಾಕ್ಸ್‌ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ನೋಟಿಸ್‌ ಅಂಟಿಸಲಾಗಿದೆ.

ಬತ್ತಿ ಹೋದ ಥೇಮ್ಸ್‌ ಉಗಮಸ್ಥಾನ
ಲಂಡನ್‌ನ ಜೀವನದಿ ಥೇಮ್ಸ್‌ನ ಉಗಮಸ್ಥಾನವೇ ಬತ್ತಿ ಹೋಗಿದೆ. ನದಿಯ ಉಗಮ ಸ್ಥಾನ ಗ್ಲೌಸಿಸ್ಟೆರ್‌ಶೈನ್‌ ಪರ್ವತ ಶ್ರೇಣಿಗಳಲ್ಲಿ ಪ್ರತಿ ವರ್ಷದ ಚೈತ್ರಕಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ನದಿ ಮೈದುಂಬಿ ಹರಿಯುತ್ತದೆ. ಆದರೆ, ಈ ಬಾರಿ ಜುಲೈನಲ್ಲಿ ಅತಿಯಾದ ಉಷ್ಣ ಆವರಿಸಿದ ಹಿನ್ನೆಲೆಯಲ್ಲಿ ಚೈತ್ರವೇ ಮಾಯವಾಗಿ, ಆ ಪ್ರದೇಶ ಸಂಪೂರ್ಣ ಬತ್ತಿಹೋಗಿದೆ.

ಪೈಪುಗಳಿಗೂ ಬ್ಯಾನ್‌ ಬಿಸಿ
ಬ್ರಿಟನ್‌ನಲ್ಲಿ ನೀರಿನ ಅಭಾವ ಎಷ್ಟಿದೆಯೆಂದರೆ, ಅಲ್ಲಿನ ಜನರಿಗೆ ಹೋಸ್‌ಪೈಪುಗಳು, ಸ್ಪ್ರಿಂಕ್ಲರ್‌ಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ. ಮನೆಗಳಲ್ಲಿ ಪೈಪುಗಳನ್ನು ಬಳಸಲು ಅವಕಾಶ ಕೊಟ್ಟರೆ ಜನರು ಅದರ ಮೂಲಕ ಉದ್ಯಾನಗಳಿಗೆ, ಸಸ್ಯಗಳಿಗೆ ನೀರುಣಿಸುವುದು, ಕಾರು-ಬೈಕು ತೊಳೆಯುವುದು, ಈಜುಕೊಳಗಳನ್ನು ತುಂಬಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಆಗ ನೀರು ಸುಖಾಸುಮ್ಮನೆ ವ್ಯರ್ಥವಾಗುತ್ತದೆ. ಇದನ್ನು ತಡೆಯಲೆಂದೇ ಪೈಪುಗಳ ಬಳಕೆಗೇ ನಿಷೇಧ ಹೇರಲಾಗಿದೆ.

ಟೈ ಧರಿಸಬೇಡಿ!
ದಯವಿಟ್ಟು, ಯಾರೂ ಸೂಟು-ಬೂಟು, ಟೈ ಧರಿಸಬೇಡಿ ಎಂದು ಸಚಿವರು, ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸ್ಪೇನ್‌ ಪ್ರಧಾನಿ ಪೆಡ್ರೋ ಸ್ಯಾಂಚೆಝ್ ಸಲಹೆ ನೀಡಿದ್ದಾರೆ. ಶರ್ಟ್‌ಗಳಲ್ಲಿ ಟೈ ಧರಿಸಿಕೊಂಡು ಬಂದರೆ ಸೆಖೆಯಾಗುತ್ತದೆ. ಸೆಖೆ ಜಾಸ್ತಿಯಾದೊಡನೆ ಜನರು ಫ್ಯಾನ್‌, ಎಸಿಗಳನ್ನು ಆನ್‌ ಮಾಡುತ್ತಾರೆ. ಟೈ ಧರಿಸದಿದ್ದರೆ ಸ್ವಲ್ಪ ತಂಪಾಗಿರಬಹುದು. ಎಸಿ ಹಾಕಬೇಕಾದ ಅವಶ್ಯಕತೆಯಿರುವುದಿಲ್ಲ. ಇದರಿಂದ ವಿದ್ಯುತ್‌ ಉಳಿತಾಯ ಮಾಡಬಹುದು ಎನ್ನುವುದು ಸ್ಯಾಂಚೆಝ್ ಅವರ ವಾದ.

ಪೋರ್ಚುಗಲ್‌ನಲ್ಲಿ ಸಾವಿರ ಸಾವು
ಬರಪೀಡಿತ ಪೋರ್ಚುಗಲ್‌ನಲ್ಲಿ ತಾಪಮಾನ 40 ಡಿ.ಸೆ. ದಾಟಿದ್ದು, ಬಿಸಿಗಾಳಿಗೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.

ಅಂಗಡಿಗಳ ಬಾಗಿಲು ಹಾಕಿ
ಇಂಧನ ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಫ್ರಾನ್ಸ್‌ನಾದ್ಯಂತ ಹವಾನಿಯಂತ್ರಣ ವ್ಯವಸ್ಥೆಯಿರುವ ಎಲ್ಲ ಅಂಗಡಿಗಳಿಗೂ ಬಾಗಿಲು ಹಾಕುವಂತೆ ಸೂಚಿಸಲಾಗಿದೆ. ಬಾಗಿಲನ್ನು ತೆರೆದಿಟ್ಟರೆ ಎಸಿ ಗಾಳಿಯು ಹೊರ ಹೋಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಬಾಗಿಲು ಹಾಕಿಯೇ ಇರುವಂತೆ ಆದೇಶಿಸಲಾಗಿದೆ. ಯಾರಾದರೂ ಬಾಗಿಲು ತೆರೆದಿಟ್ಟಿರುವುದು ಕಂಡುಬಂದರೆ 640 ಪೌಂಡ್‌ ದಂಡ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ಇದಲ್ಲದೇ, ದೀಪಗಳಿಂದ ಕೂಡಿದ ಮಿನುಗುವು ಜಾಹೀರಾತುಗಳಿಗೂ ನಿಷೇಧ ಹೇರಲಾಗಿದೆ.

ಪತ್ತೆಯಾದವು 2ನೇ ವಿಶ್ವಯುದ್ಧದ ಅವಶೇಷಗಳು!
ಬರಗಾಲದಿಂದಾಗಿ ಯುರೋಪ್‌ನ ಪ್ರಮುಖ ನದಿಗಳಲ್ಲಿ ಒಂದಾದ ಡಾನುಬೆ ನೀರಿನ ಮಟ್ಟ ಶತಮಾನದಲ್ಲೇ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕಿಳಿದಿದೆ. ಪರಿಣಾಮವೆಂಬಂತೆ, 2ನೇ ವಿಶ್ವಯುದ್ಧದ ವೇಳೆ ಮುಳುಗಿಹೋಗಿದ್ದ ಜರ್ಮನಿಯ 20 ಯುದ್ಧನೌಕೆಗಳ ಅವಶೇಷಗಳು ಗೋಚರಿಸತೊಡಗಿವೆ! ಅದೇ ರೀತಿ ಸ್ಪೇನ್‌ನಲ್ಲಿ ಅಣೆಕಟ್ಟಿನ ನೀರಿನಡಿ ಹೂತುಹೋಗಿದ್ದ “ಸ್ಪ್ಯಾನಿಶ್‌ ಸ್ಟೋನ್‌ಹೆಂಜ್‌'(ಪ್ರಾಚೀನ ಕಾಲದ ಶಿಲೆಗಳು) ಪ್ರತ್ಯಕ್ಷವಾಗತೊಡಗಿವೆ. ಇವುಗಳನ್ನು “ಹಂಗರ್‌ ಸ್ಟೋನ್ಸ್‌’ ಎಂದೂ ಕರೆಯುತ್ತಾರೆ. 1963ರ ಬಳಿಕ ಕೇವಲ 4 ಬಾರಿ ಇವುಗಳು ಗೋಚರಿಸಿದ್ದವು. ಆ ಶಿಲೆಗಳಲ್ಲಿ ಕೆಲವು ಇಸವಿಗಳನ್ನೂ ಕೆತ್ತಲಾಗಿದೆ.

ನದಿಯಲ್ಲಿತ್ತು ಬಾಂಬ್‌
ಇಟಲಿಯ ಅತಿ ಉದ್ದದ ನದಿ “ರಿವರ್‌ ಪೋ’ದಲ್ಲೂ ನೀರಿನ ಮಟ್ಟ ಎಷ್ಟು ಇಳಿಕೆಯಾಗಿದೆಯೆಂದರೆ, ಇತ್ತೀಚೆಗೆ ಅದರಲ್ಲಿ 2ನೇ ಮಹಾಯುದ್ಧದ ಸಮಯದ 450 ಕೆ.ಜಿ.ತೂಕದ ಬಾಂಬ್‌ವೊಂದು ಸಿಕ್ಕಿದೆ. ನೀರಿನಲ್ಲಿದ್ದ ಸಕ್ರಿಯ ಬಾಂಬ್‌ ಪತ್ತೆಯಾಗುತ್ತಿದ್ದಂತೆ, ನದಿಯ ಸುತ್ತಮುತ್ತದ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಅಲ್ಲಿ ವಾಸಿಸುತ್ತಿದ್ದ ಸುಮಾರು 3 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ನಂತರ ಸೇನಾ ಪರಿಣತರು ಬಂದು ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಬಿಸಿಗಾಳಿ ಹೆಚ್ಚಲು ಕಾರಣವೇನು?
– ಇಡೀ ಜಗತ್ತಿಗಿಂತ 4 ಪಟ್ಟು ವೇಗವಾಗಿ ಆಕ್ಟಿಕ್‌ ತಾಪ ಹೆಚ್ಚುತ್ತಿರುವುದು
– ಪಳೆಯುಳಿಕೆ ಇಂಧನಗಳ ಸುಡುವಿಕೆ
– ಸಮುದ್ರದ ತಾಪಮಾನದಲ್ಲಾದ ಬದಲಾವಣೆಯಿಂದ ಹೀಟ್‌ ಡೋಮ್‌ಗಳ ಸೃಷ್ಟಿ
– ಎಲ್‌ ನಿನೋ ಮತ್ತು ಲಾ ನಿನಾದ ಎಫೆಕ್ಟ್

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.