ಹರಾಜಾಗುತ್ತಿದೆ ಚೀನಾದ ಮರ್ಯಾದೆ… ಶಾಂಘೈ ಹುಣ್ಣಿಗೆ ಕನ್ನಡಿ ಬೇಕೇ?

ಶಾಂಘೈ ಜನ ಹಗಲಿಡೀ ಕಾರ್ಖಾನೆ, ಕಂಪೆನಿಗಳಲ್ಲಿ ದುಡಿದು, ಚೀನದ ಜಿಡಿಪಿಗೆ ಹೆಗಲು ಕೊಟ್ಟಿದ್ದರು.

Team Udayavani, Apr 19, 2022, 12:45 PM IST

ಶಾಂಘೈ ಹುಣ್ಣಿಗೆ ಕನ್ನಡಿ ಬೇಕೇ? ವುಹಾನ್‌ ಮೀರಿಸಿದ ಚೀನದ ವಾಣಿಜ್ಯ ನಗರಿ

ಕಳೆದ ಬಾರಿ ವುಹಾನ್‌, ಈ ಬಾರಿ ಶಾಂಘೈ! ಕೊರೊನಾವನ್ನು ಜಗತ್ತಿಗೆಲ್ಲ ವಿಷಪ್ರಸಾದದಂತೆ ಹಂಚಿದ್ದ ಚೀನಕ್ಕೆ ಅದೇ ಸೋಂಕು ಈಗ ಯಮಪಾಶದಿಂದ ಕಟ್ಟಿಹಾಕುತ್ತಿದೆ. ಓಮಿಕ್ರಾನ್‌ನ ಆರ್ಭಟಕ್ಕೆ ದೇಶದ ಅತಿದೊಡ್ಡ ವಾಣಿಜ್ಯ ನಗರಿ ಶಾಂಘೈ ಅಕ್ಷರಶಃ ಉಸಿರುಗಟ್ಟುತ್ತಿದೆ. ಬರೋಬ್ಬರಿ 2.6 ಕೋಟಿ ಜನ ಮೂರು ವಾರಗಳಿಂದ ಮನೆಯೊಳಗೇ ಲಾಕ್‌ ಆಗಿ, ತುತ್ತು ಅನ್ನಕ್ಕಾಗಿ ಕಿಟಕಿಯಲ್ಲಿ ಅಂಗಲಾಚುತ್ತಿದ್ದು, ಚೀನದ ಮರ್ಯಾದೆ ಹರಾಜಾಗುತ್ತಿದೆ…

ಶಾಂಘೈಯಲ್ಲಿ ಆಗ್ತಿರೋದೇನು?
2021ರಲ್ಲಿ ಗರಿಷ್ಠ 1,800 ಕೊರೊನಾ ಕೇಸ್‌ ದಾಖಲಾದಾಗಲೂ, ಚೀನದ ಅತಿದೊಡ್ಡ ನಗರ ಶಾಂಘೈ ಪೂರ್ಣ ಲಾಕ್‌ಡೌನ್‌ ಕಂಡಿರಲಿಲ್ಲ. ಆ ವೇಳೆ ಇಡೀ ದೇಶ ಆರ್ಥಿಕ ಸಂಕಷ್ಟಕ್ಕೆ ಬಿದ್ದಾಗ, ಶಾಂಘೈ ಜನ ಹಗಲಿಡೀ ಕಾರ್ಖಾನೆ, ಕಂಪೆನಿಗಳಲ್ಲಿ ದುಡಿದು, ಚೀನದ ಜಿಡಿಪಿಗೆ ಹೆಗಲು ಕೊಟ್ಟಿದ್ದರು. ಆದರೆ, ಈಗ ಓಮಿಕ್ರಾನ್‌ ಅಲೆಗೆ ಶಾಂಘೈ ಸಂಪೂರ್ಣ ಕಂಪಿಸಿದ್ದು, ಕಳೆದ ರವಿವಾರದಿಂದ ನಿರಂತರವಾಗಿ 18 ಸಾವಿರ- 25 ಸಾವಿರದವರೆಗೆ ಪ್ರಕರಣಗಳು ದಾಖಲಾಗಿವೆ. ನಾಯಿ ಜತೆ ವಾಯುವಿಹಾರ, ದಂಪತಿ ಪರಸ್ಪರ ಚುಂಬಿಸಿಕೊಳ್ಳುವುದು, ಅಪ್ಪಿಕೊಳ್ಳುವುದಕ್ಕೂ ಇಲ್ಲಿ ಲಾಕ್‌ಡೌನ್‌ ನಿಯಮಗಳು ಬಿಡುತ್ತಿಲ್ಲ.

ಕಿಟಕಿಯಲ್ಲಿ ಹೊರಚಾಚಿದ ಹಸಿದ ಕೈಗಳು
ಚೀನ ಹೇರುತ್ತಿರುವ “ಶೂನ್ಯ ಕೋವಿಡ್‌ ನೀತಿ’ಯ ಕಠೊರ ನಿಯಮಗಳಿಗೆ ಇಡೀ ಶಾಂಘೈ ನಗರದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. 3 ವಾರಗಳಿಂದ ಮನೆಯೇ ಜೈಲಾಗಿದ್ದು, ಹಸಿವಿನಿಂದ ನಿವಾಸಿಗಳ ಆಕ್ರಂದನ ಮುಗಿಲುಮುಟ್ಟಿದೆ. 10ರಲ್ಲಿ 3 ಮಗು ಮಾನಸಿಕ ಖನ್ನತೆಗೆ ಗುರಿಯಾಗುತ್ತಿದೆ ಎಂಬ ವರದಿಗಳಿವೆ. ಅಳು ಧ್ವನಿಯಲ್ಲಿ ಕಿಟಕಿಯಲ್ಲಿ ಕೈಚಾಚುತ್ತಾ, ಆಹಾರಕ್ಕಾಗಿ ಬೇಡುತ್ತಿರುವ ವೀಡಿಯೋಗಳಂತೂ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇವೆ.

ಮೇವರೆಗೆ ನಾವು ಬದುಕ್ತೀವೋ, ಇಲ್ವೋ!
ಎರಡೂ¾ರು ದಿನಕ್ಕೊಮ್ಮೆ ಪುಟ್ಟ ಪ್ಲ್ರಾಸ್ಟಿಕ್‌ ಕವರ್‌ನಲ್ಲಿ ಕೊಡುವ ತರಕಾರಿ, ಬ್ರೆಡ್ಡು, ಅಕ್ಕಿಯು ಕುಟುಂಬದ ಒಬ್ಬ ಸದಸ್ಯನ ಹೊಟ್ಟೆಯನ್ನೂ ನೆಟ್ಟಗೆ ತುಂಬಿಸುತ್ತಿಲ್ಲ. “ಬ್ರೆಡ್‌ ತರಲು ನಮ್ಗೆ ಹೊರಗೆ ಹೋಗೋಕೂ ಬಿಡ್ತಿಲ್ಲ. ನಾವೀಗ ಒಂದೇ ಹೊತ್ತು ಊಟ ಮಾಡುತ್ತಿದ್ದೇವೆ. ಹೀಗೆಯೇ ಆದರೆ, ಮೇ ತಿಂಗಳವರೆಗೆ ಬದುಕೋದೂ ಅನುಮಾನವೇ’ ಎಂದು ಸ್ಥಳೀಯ ನಿವಾಸಿಯೊಬ್ಬ ಅನಿಸಿಕೆ ಹಂಚಿಕೊಂಡಿರುವ ವೀಡಿಯೊವನ್ನು “ದಿ ಎಚ್‌ಕೆ ಪೋಸ್ಟ್‌’ ವರದಿ ಮಾಡಿದೆ. ಒಟ್ಟಿನಲ್ಲಿ ಈ ಎಲ್ಲ ಸಂಗತಿಗಳೂ ಕಮ್ಯುನಿಸ್ಟ್‌ ದೇಶದ ಆಹಾರಭದ್ರತಾ ವೈಫ‌ಲ್ಯಕ್ಕೆ ಕನ್ನಡಿ ಹಿಡಿದಿದ್ದು, ಚೀನದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿವೆ.

ಮಾತ್ರೆ ಕೊಡಿ ಇಲ್ಲಾ ಸಾಯಲು ಬಿಡಿ…
ಸರಕಾರದ ಕೊರೊನಾ ಅಷ್ಟದಿಗ್ಬಂಧನದಿಂದಾಗಿ ಜನ ಬೇಸತ್ತಿತ್ತು, ಕನಿಷ್ಠ ಮಾತ್ರೆ- ಔಷಧಕ್ಕೂ ಪರದಾಡುತ್ತಿದ್ದಾರೆ. ಕಳೆದಬಾರಿಗೆ ಹೋಲಿಸಿದ್ದಲ್ಲಿ ಈ ಬಾರಿ ಹಲವರು ಚೀನೀ ಸೋಶಿಯಲ್‌ ಮೀಡಿಯಾದಲ್ಲಿ ವೀಡಿಯೊ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. “ನಮ್ಮ ಜ್ವರಕ್ಕೆ ಒಂದೇ ಮಾತ್ರೆ ಕೊಡಿ, ಇಲ್ಲಾ ಸಾಯಲು ಬಿಡಿ’ ಎಂದು ಒಬ್ಬ ಪ್ರಜೆ ವಾಗ್ಧಾಳಿ ನಡೆಸಿದ ವೀಡಿಯೊ ಒಂದೇ ತಾಸಿನಲ್ಲಿ ಡಿಲೀಟ್‌ ಆಗಿದೆ.

ಡ್ರೋನ್‌ಗಳೇ ಇಲ್ಲಿ ಪೊಲೀಸ್‌
ಹೊರಗಿನ ಚೆಕ್‌ಪೋಸ್ಟ್‌ಗಳ ಹೊರತಾಗಿ, ಜನವಸತಿ ಪ್ರದೇಶಗಳ ಒಳಭಾಗಗಳಲ್ಲಿ ಪೊಲೀಸರ ಬದಲಿಗೆ, ಡ್ರೋನ್‌ಗಳ ಮೂಲಕ ಕಣ್ಗಾವಲು ಹೆಚ್ಚಿಸಲಾಗಿದೆ. ಮನೆ ಬಾಗಿಲು ತೆರೆದು, ಹೊರಗೆ ಬರುವುದು; ಬಾಲ್ಕನಿಯಲ್ಲಿ ನಿಲ್ಲುವುದು- ಇತ್ಯಾದಿ ಮಾಡಿದರೂ, ಅಂಥ ಮನೆಗಳ ಮೇಲೆ ಡ್ರೋನ್‌ಗಳು ಫ್ಲ್ಯಾಷಿಂಗ್‌ ಲೈಟ್‌ಗಳನ್ನು ಬಿಟ್ಟು, ಮೆಗಾಫೋನ್‌ಗಳ ಮೂಲಕ ವಾರ್ನಿಂಗ್‌ ನೀಡುತ್ತಿವೆ. ಬಾಲ್ಕನಿಯಲ್ಲಿ ಬಂದು ಹಾಡಿದರೂ, ಪಕ್ಕದ ಫ್ಲ್ಯಾಟ್‌ನವರನ್ನು ಕೂಗಿ ಮಾತಾಡಿಸಿದರೂ, “ನಿಮ್ಮ ಈ ವರ್ತನೆ ಕೊರೊನಾವನ್ನು ಹೆಚ್ಚಿಸಬಹುದು’ ಎಂದು ಡ್ರೋನ್‌ ಎಚ್ಚರಿಸುತ್ತಿದೆ. ಅಲ್ಲದೆ, ಲಾಕ್‌ಡೌನ್‌ ನಿಯಮ ಉಲ್ಲಂ ಸಿ ಹೊರಬಂದವರ ಫೋಟೋಗಳನ್ನು ಡ್ರೋನ್‌ಗಳು ಕ್ಲಿಕ್ಕಿಸಿ, ತಕ್ಷಣವೇ ಆರೋಗ್ಯ ಸಿಬಂದಿಗೆ ರವಾನಿಸುತ್ತಿವೆ. ಡ್ರೋನ್‌ಗಳು ದೊಡ್ಡ ಧ್ವನಿಯಲ್ಲಿ ಕೊರೊನಾ ಟೆಸ್ಟ್‌ಗೆ ಕರೆದರಷ್ಟೇ ಜನ ಹೊರಗೆ ಬರುವಂಥ ಸಂಕಷ್ಟ ನಿರ್ಮಾಣವಾಗಿದೆ.

ಈವರೆಗೆ ಮೂರು ಸಾವು
ಮಾರ್ಚ್‌ 1ರಿಂದ ಕೊರೊನಾ ಸುನಾಮಿಗೆ ತತ್ತರಿಸುತ್ತಿರುವ ಶಾಂಘೈಯಲ್ಲಿ ಪ್ರಸ್ತುತ 1,70,000 ಸಕ್ರಿಯ ಸೋಂಕುಗಳಿವೆ. ಮಾರ್ಚ್‌ನಲ್ಲಿ ಅಲ್ಲಿ ಲಾಕ್‌ಡೌನ್‌ ಆದಾಗಿನಿಂದ ಇಲ್ಲಿಯವರೆಗೆ ಮೂರು ಜನರು ಕೊರೊನಾದಿಂದಾಗಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ ತೀವ್ರವಾಗಿ ಅಸ್ವಸ್ಥನಾಗಿದ್ದ ಹಲವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. “ಕಳೆದ ಸಲ ಕೊರೊನಾವನ್ನು ಜಗತ್ತಿಗೆ ಹಬ್ಬಿಸಿ, ಚೀನ ಪಾಠ ಕಲಿತಿದೆ. ಹಾಗಾಗಿ, ಶಾಂಘೈನಲ್ಲಿ ಕಠೊರ ನಿಯಮ ಕೈಗೊಂಡಿದೆ’ ಎಂದು ಬಿಬಿಸಿ ವಿಶ್ಲೇಷಿಸಿದೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.