ವೃತ್ತಿರಂಗದಲ್ಲಿ ಸಾಧ್ಯವಾದರೆ ಬದ ಲಾವಣೆಗೆ ಮನಸ್ಸು ಮಾಡಬಹುದು. ಇದು ಭವಿಷ್ಯದಲ್ಲಿ ಪೂರಕವಾದಾವು. ಮದುವೆ, ಮುಂಜಿಗಳಿಗೆ ಸಕಾಲ. ಸಾಂಸಾರಿಕ ಸಹಕಾರ ಹಿತೈಷಿಗಳ ಹಾರೈಕೆಗಳಿಂದ ಅಭಿವೃದ್ಧಿದಾಯಕ ವಾತಾವರಣ ನೆಮ್ಮದಿ ತಂದೀತು. ಆಗಾಗ ಹಿತಶತ್ರುಗಳ ಸಮಯ ಸಾಧಕ ಬುದ್ಧಿ ಬೇಸರ ತಂದರೂ ನಿಮಗೆ ಹೆಚ್ಚಿನ ರೀತಿಯಲ್ಲಿ ಸಮಸ್ಯೆ ಇರದು. ಆದರೂ ತಾಳ್ಮೆ ಸಮಾಧಾನ ತೋರಿಸಿರಿ. ಕೋರ್ಟು ಕಚೇರಿ ವಿಲೇವಾರಿ ಸುಖಾಂತ್ಯ ಪಡೆಯುವುವು. ವಿದ್ಯಾರ್ಥಿಗಳು ವಿದ್ಯಾಸಂಪನ್ನರಾದಾರು. ಯಾವುದೇ ರೀತಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಮಯ. ಸದುಪಯೋಗದಿಂದ ಕಾರ್ಯಸಾಧನೆಯಾಗುತ್ತದೆ.
ಶುಭವಾರ: ಗುರು, ಶುಕ್ರ, ಶನಿವಾರ.