ಪಶ್ಚಿಮ ಬಂಗಾಳ : ನಮಗೆ ದುರ್ಯೋಧನ, ದುಶ್ಯಾಸನರು ಬೇಕಾಗಿಲ್ಲ : ಮೋದಿ, ಶಾ ವಿರುದ್ಧ ಮಮತಾ ಕಿಡಿ

ಬಿಜೆಪಿ ಬೌಲ್ಡ್ ಔಟ್ ಆಗಲಿದೆ : ಬಿಜೆಪಿ ವಿರುದ್ಧ ಬ್ಯಾನರ್ಜಿ ಆಕ್ರೋಶ

Team Udayavani, Mar 19, 2021, 5:43 PM IST

“Don’t Want Duryodhan, Dushasana”: Mamata Banerjee’s Latest Against BJP

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮತ್ತೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ದುರ್ಯೋಧನ ಹಾಗೂ ದುಷ್ಯಾಸನ ಎಂದು ಕರೆದಿದ್ದಲ್ಲದೇ, ತೃಣಮೂಲ ಕಾಂಗ್ರೆಸ್ ನ ಮಾಜಿ ಸಂಸದ, ಈಗಿನ ಪಶ್ಚಿಮ ಬಂಗಾಳದ ಬಿಜೆಪಿಯ ಪ್ರಭಾವಿ ನಾಯಕ ಸುವೇಂದು ಅಧಿಕಾರಿಯವರನ್ನು ಮಿರ್ ಜಾಫರ್ ಎಂದು ಕರೆದಿದ್ದಾರೆ.

ಓದಿ : ನೀರಿನಲ್ಲಿ ಎಂಜಾಯ್ ಮಾಡುತ್ತಾ, ಆಟವಾಡುತ್ತಿದೆ ನೋಡಿ ಸ್ಲಾತ್ ಪ್ರಾಣಿ

ಬಿಜೆಪಿಗೆ ವಿದಾಯ ಹೇಳಿ, ನಮಗೆ ಬಿಜೆಪಿ ಬೇಕಾಗಿಲ್ಲ, ನಾವು ಮೋದಿ ಮುಖ ನೋಡಲು ಬಯಸುವುದಿಲ್ಲ, ನಾವು ಗಲಭೆಗಳನ್ನು ಬಯಸುವುದಿಲ್ಲ, ಲೂಟಿಕೋರರು ನಮಗೆ ಬೇಕಾಗಿಲ್ಲ, ದುರ್ಯೋಧನ, ದುಶ್ಯಾಸನರು, ಮಿರ್ ಜಾಫರ್ ನಮಗೆ ಬೇಕಾಗಿಲ್ಲ ಎಂದು ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಮಾರ್ಚ್ 27 ರಂದು ಆಟ ಆರಂಭವಾಗಲಿದ್ದು, ಬಿಜೆಪಿ ಬೌಲ್ಡ್ ಔಟ್ ಆಗಲಿದೆ ಎಂದು ಕೂಡ ಹೇಳಿದ್ದಾರೆ.

ಇನ್ನು, ಮಮತಾ ಬ್ಯಾನರ್ಜಿ ತಮ್ಮ ಮಾಜಿ ಆಪ್ತ ಸುವೇಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಆತನನ್ನು ಕುರುಡಾಗಿ ನಂಬಿದ್ದೆ, ನಂಬಿಕೆಗೆ ದ್ರೊಹ ಬಗೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಾನು ಅವರನ್ನು ಕುರುಡಾಗಿ ನಂಬಿದ್ದೆ, ಕುರುಡಾಗಿ ಅವರ ಮೇಲೆ ವಿಶ್ವಾಸ ಇಟ್ಟಿದ್ದೆ. ನನಗೆ ದ್ರೋಹ ಬಗೆದಿದ್ದಾರೆ. 2014 ರಿಂದ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಿದ್ದರು. ನನ್ನನ್ನು ಕ್ಷಮಿಸಿ ನಾನು ಅವರನ್ನು ನಂಬಿದ್ದೆ ಎಂದರು.

ನಿನ್ನೆ(ಮಾ.18) ಪುರುಲಿಯಾದ ಚುನಾವಣಾ ಪ್ರಚಾರ ಸಭೆಯಲ್ಲಿ ತನ್ನ ವಿರುದ್ಧ ಮಾತನಾಡಿದ್ದ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಮಮತಾ, ಮೋದಿ ಟೆಲಿ ಪ್ರಾಮ್ಟರ್ ಬಳಸಿಕೊಂಡು ‘ಕೆಮನ್ ಆಚೊ ಬೆಂಗಾಲ್’(ಹೇಗಿದ್ದೀರಿ ಬೆಂಗಾಲ್) ಅಂತ ಕೇಳುತ್ತಾರೆ. ಭಾಲೊ ಅಚೆ( ತುಂಬಾ ಚೆನ್ನಾಗಿದ್ದೇವೆ) ಎಂದು ನಾವು ಹೆಳುತ್ತೇವೆ. ಪರಿವರ್ತನೆ ನನ್ನ ಘೋಷಣೆ. ನೀವು ಯಾಕೆ ನನ್ನ ಘೋಷಣೆಯನ್ನು ಕದಿಯುತ್ತೀರಿ..? ನೀವು ಕೂಡ ನನ್ನನ್ನೇ ಅನುಸರಿಸುತ್ತಿದ್ದೀರಾ ..? ಎಂದು ಪ್ರಶ್ನಿಸಿದ್ದಾರೆ.

ಓದಿ :   ಬಿಡುಗಡೆಗೊಂಡಿದೆ ದೇಸಿ ಆ್ಯಪ್ ಸ್ಟೋರ್ ‘ಮೊಬೈಲ್ ಸೇವಾ’..!

ಟಾಪ್ ನ್ಯೂಸ್

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.