ಕಹಿಯಾಯಿತೇಕೆ ಸಿಹಿ ಬೆಲ್ಲ?


Team Udayavani, Mar 29, 2021, 6:41 PM IST

ಕಹಿಯಾಯಿತೇಕೆ ಸಿಹಿ ಬೆಲ್ಲ?

ಮಂಡ್ಯ ಎಂದಾಕ್ಷಣ ತಟ್ಟನೆ ನೆನಪಿಗೆ ಬರುವುದು ಕಾವೇರಿ,ಕಬ್ಬು, ಸಕ್ಕರೆ ಹಾಗೂ ಬೆಲ್ಲ. ಮಂಡ್ಯದ ಜನತೆಯ ಬದುಕಿನ ದಿಕ್ಕುಬದಲಾಗಲು ಇವೆಲ್ಲವೂ ವಹಿಸಿದ ಪಾತ್ರ ದೊಡ್ಡದು.ಹಾಗಾಗಿಯೇ ಮಂಡ್ಯದ ಜನ ಈ ವಸ್ತುಗಳನ್ನುಇಂದಿಗೂ ದೇವರೆಂದು ಪೂಜಿಸುತ್ತಾರೆ.

ಮಂಡ್ಯದ ನೆಲ,1932ರಲ್ಲಿ ಕಾವೇರಿ ನೀರಿನಿಂದ ಸಂಪೂರ್ಣ ಹಸಿರು ಮಯವಾಯಿತು. ಸರ್‌ ಎಂ.ವಿಶ್ವೇಶ್ವರಯ್ಯ ನವರು ಮಂಡ್ಯಕ್ಕೆ ಕಾವೇರಿ ನೀರು ಹರಿಸಿದರೆ, ಕೆನಡಾದ ಕೃಷಿತಜ್ಞ ಕೋಲ್ಮನ್‌ ಅವರು ಮಂಡ್ಯ ಸೀಮೆಯಲ್ಲಿ ಕಬ್ಬುಬೆಳೆಯಬಹುದೆಂದು ತೋರಿಸಿ ಕೊಟ್ಟರು. ಮಂಡ್ಯವುಸಕ್ಕರೆಯ ನಾಡು, ಬೆಲ್ಲದ ಬೀಡು ಎಂದು ಹೆಸರು ಮಾಡಿದ್ದು ಆ ನಂತರದಲ್ಲಿಯೇ. ದಿನಕಳೆದಂತೆ ಮಂಡ್ಯದಲ್ಲಿ ತಯಾರಿಸಲಾದ ಗುಣಮಟ್ಟದ ಬೆಲ್ಲವು

ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆಯಿತು. ಆಲೆಮನೆಗಳಲ್ಲಿ ಬೆಲ್ಲವನ್ನು ತಯಾರಿಸುತ್ತಿದ್ದಮಾಲೀಕರು ಲಾಭವನ್ನು ಲೆಕ್ಕಿಸದೇ ಗುಣಮಟ್ಟವನ್ನು ಕಾಪಾಡಿಕೊಂಡಿದ್ದರು. ಇಲ್ಲಿನ ಬಂಗಾರದ ಬಣ್ಣದ ಬೆಲ್ಲವು ರುಚಿ ಹಾಗೂಶುಚಿಯ ಕಾರಣದಿಂದ ಎಲ್ಲರ ಗಮನ ಸೆಳೆದಿದ್ದೇ ಆಗ. ಮುಂದೆಈ ಬೆಲ್ಲದ ಖ್ಯಾತಿ ಎಲ್ಲಿಗೆ ಬಂತೆಂದರೆ, ಬೇಡಿಕೆಗೆ ತಕ್ಕಂತೆ ಬೆಲ್ಲ ಪೂರೈಸುವುದೇ ಕಷ್ಟ ಆಗತೊಡಗಿತು.

ಪೂರೈಕೆ ಕಷ್ಟವಾಯಿತು :

ಮಂಡ್ಯದಲ್ಲಿ ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಲ್ಲವನ್ನು ತಯಾರಿಸಲಾಗುತ್ತಿತ್ತು ನಿಜ. ಆದರೆ, ಮಂಡ್ಯದ ಬೆಲ್ಲಕ್ಕೆ ಇರುತ್ತಿದ್ದ ಗುಣಮಟ್ಟವಾಗಲಿ, ಬೇಡಿಕೆಯಾಗಲಿ ಅವಕ್ಕೆಇರುತ್ತಿರಲಿಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇಹೋದಾಗ, ಹೆಚ್ಚು ಸಂಬಳ ಎಲ್ಲಿ ಸಿಗುತ್ತದೋ ಅಲ್ಲಿಗೆ ಹೋಗಲು ಕಾರ್ಮಿಕರು ಮುಂದಾದರು. ಪರಿಣಾಮ, ಅನುಭವೀಕಾರ್ಮಿಕರ ಕೊರತೆಯೂ ಆಲೆಮನೆಗಳನ್ನು ಕಾಡತೊಡಗಿತು.ಕಾರ್ಮಿಕರ ಕೊರತೆಯ ಕಾರಣದಿಂದ ಕೆಲವು ಆಲೆಮನೆಗಳುಮುಚ್ಚಿಹೋದವು. ಇಂಥ ಸಂದರ್ಭದಲ್ಲಿ ಕೆಲವು ಆಲೆಮನೆ ಮಾಲೀಕರು ಆಲೆಮನೆಗಳನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ, ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರರ ಮೂಲಕ ಉತ್ತರಭಾರತದ ಕಾರ್ಮಿಕರನ್ನು ಕರೆತಂದರು. ನಂತರದ ದಿನಗಳಲ್ಲಿ ಈ ಗುತ್ತಿಗೆದಾರರೇ ಆಲೆಮನೆಗಳನ್ನು ಲೀಸ್‌ಗೆ ಪಡೆದು ಬೆಲ್ಲದ ಉತ್ಪಾದನೆ ಪ್ರಾರಂಭಿಸಿದರು. ಮಂಡ್ಯದ ಆಲೆಮನೆಗಳಲ್ಲಿ ತಯಾರಾಗುತ್ತಿದ್ದ ಬೆಲ್ಲದ ಗುಣಮಟ್ಟ ದಲ್ಲಿ ”ಕ್ವಾಲಿಟಿ” ಕಡಿಮೆ ಆಗತೊಡಗಿದ್ದು ಇಲ್ಲಿಂದಲೇ ಅನ್ನಬಹುದು.

ಅತಿಯಾಸೆಯಿಂದ ಅವನತಿ :

ಕೇವಲ ಲಾಭವನ್ನೇ ಗುರಿಯಾಗಿಸಿ ಕೊಂಡ ಮೇಸ್ತ್ರಿಗಳು, ಬೆಲ್ಲದ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿಲ್ಲ. ಬೆಲ್ಲವನ್ನು ಬಂಗಾರದ ಬಣ್ಣದಂತೆ ಹೊಳೆಯುವಂತೆ ಮಾಡಲು ಕೆಲ ರಸಾಯನಿಕಗಳನ್ನುಕಲಬೆರಕೆ ಮಾಡಿದರು. ನಂತರದ ದಿನಗಳಲ್ಲಿ ಸಾವಯವ ಕೃಷಿಪದ್ಧತಿಯಲ್ಲಿ ಬೆಳೆದ ವಸ್ತುಗಳಿಗೆ ಡಿಮ್ಯಾಂಡ್‌ ಶುರುವಾಯಿತಲ್ಲ; ಆಗಲೇ ”ಸಾವಯವ ಬೆಲ್ಲ” ಕೂಡ ಮಾರುಕಟ್ಟೆಗೆ ಬಂತು!ಒಂದು ವಿಶೇಷವೆಂದರೆ, ಸಾವಯವ ಬೆಲ್ಲ ಕಪ್ಪಗೆ ಇರುತ್ತಿತ್ತು.ನಿಜ ಹೇಳಬೇಕೆಂದರೆ, ರಾಸಾಯನಿಕಗಳನ್ನು ಬಳಸಿ ಬೆಲ್ಲದಬಣ್ಣವನ್ನು ಕಪ್ಪು ಮಾಡಲಾಯಿತೇ ಹೊರತು, ಅದರಲ್ಲಿಸಾವಯವ ಉತ್ಪಾದನೆಯ ಅಂಶಗಳು ಇರಲೇ ಇಲ್ಲ. ಹೀಗೆಲ್ಲಾ ಆಗುತ್ತಿದ್ದ ಸಂದರ್ಭದಲ್ಲಿಯೇ ಮಂಡ್ಯ ಬ್ರ್ಯಾಂಡ್‌ ಅನ್ನಿಸಿಕೊಂಡಿದ್ದ ಬಂಗಾರದ ಬಣ್ಣದಂತಿರುವ ಬೆಲ್ಲವು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದುಬಂತು. ಪರಿಣಾಮ, ಆಬೆಲ್ಲದ ವಹಿವಾಟು ಕಡಿಮೆಯಾಯಿತು.

ಅದರ ಹಿಂದೆಯೇ ಸಾವಯವ ಬೆಲ್ಲದ ಗುಣಮಟ್ಟ ಕುರಿತೂ ಅನುಮಾನದಮಾತುಗಳು ಕೇಳಿಬಂದವು. ಪರಿಣಾಮ, ಮಂಡ್ಯ ಬ್ರ್ಯಾಂಡ್‌ನಲ್ಲಿ ಪೂರೈಕೆಯಾದ ಬೆಲ್ಲದ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಮೇಲಿಂದಮೇಲೆ ನಡೆಯತೊಡಗಿತು. ಮಂಡ್ಯ ಬ್ರ್ಯಾಂಡ್‌ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬೆಲ್ಲ ಪೂರೈಸ ಲಾಗುತ್ತಿದೆ ಎಂಬ ಸತ್ಯ ಹೊರಬಂದದ್ದೇ ಆಗ. ದಶಕಗಳ ಕಾಲದವರೆಗೂ ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿ ಕೊಂಡಿದ್ದ, ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿದ್ದಮಂಡ್ಯದ ಸಿಹಿಬೆಲ್ಲ, ಇದೀಗ ಗ್ರಾಹಕರು ಮತ್ತು ಉತ್ಪಾದಕರಪಾಲಿಗೆ ಕಹಿ ಆಗಿರುವುದು, ಮಾರುಕಟ್ಟೆಯಲ್ಲಿ ಬೇಡಿಕೆಕಳೆದುಕೊಂಡಿರುವುದು ದುರಾದೃಷ್ಟಕರ ಬೆಳವಣಿಗೆ ಎಂದೇ ಹೇಳಬೇಕು.

 

ಬಸವರಾಜ ಶಿವಪ್ಪ ಗಿರಗಾಂವಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.