“ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’

Team Udayavani, Mar 30, 2021, 5:50 AM IST

“ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’

ಭೂಮಿಯಲ್ಲಿ ಜನ್ಮವೆತ್ತಿ ಬಂದ ವ್ಯಕ್ತಿ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಒಂದಲ್ಲ ಒಂದು ಕಾಯಕ ಮಾಡಲೇಬೇಕು. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸಲಾರ. ಆದರೆ ಹೋಳಿಗೆಯನ್ನು ತುಪ್ಪ ಸವರಿ ನಮ್ಮ ಬಾಯಿಗೆ ಇಡಲಾರ ಕೂಡ. ಹೊಟ್ಟೆ ಹೊರೆಯಲು ಮಾನಸಿಕ, ದೈಹಿಕ ಶ್ರಮ ಮಾಡಿಯೇ ಆಗಬೇಕು. ಅದಕ್ಕೆ ಅಂದದ್ದು “ಕೈ ಕೆಸರಾದರೆ ಬಾಯಿ ಮೊಸರು’ ಎಂದು.

ಕೆಲವರು ಪ್ರಾಮಾಣಿಕವಾಗಿ ದುಡಿದು ತಕ್ಕಷ್ಟು ಸಂಪಾದನೆ ಮಾಡಿ ತಮ್ಮ ಹಾಗೂ ಕುಟುಂಬದ ಹೊಟ್ಟೆ ಬಟ್ಟೆಯ ಆವಶ್ಯಕತೆ ನೀಗಲು ಹೆಣಗುತ್ತಾರೆ. ಇನ್ನೂ ಕೆಲವರು ಏನಕೇನ ಪ್ರಕಾರೇಣ ಹಣ ಸಂಪಾದನೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಕೂಡಿ ಹಾಕುತ್ತಾರೆ. ಆದರೆ ಪ್ರಾಮಾಣಿಕ ದುಡಿಮೆ ಮಾತ್ರ ನಮಗೆ ದಕ್ಕಿದರೆ ಉಳಿದದ್ದು ನಂದರಾಯನ ಬದುಕಿನಂತೆ ನರಿ ನಾಯಿ ತಿಂದು ಹೋಗುತ್ತದೆ. ಅದಕ್ಕೆಂದೇ ಹೇಳು ವುದು “ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’ ಅಂತ.

ನಮ್ಮ ದುಡಿಮೆಯ ಎಲ್ಲವನ್ನೂ ನಾವೊಬ್ಬರೆ ಅನುಭವಿಸಲು ಇತಿಮಿತಿಗಳು ಇರುತ್ತವೆ. ಎಷ್ಟೇ ಆಗರ್ಭ ಶ್ರೀಮಂತ ಇರಲಿ, ತಿನ್ನಬೇಕು ಅದೆ ಅನ್ನ, ರೋಟಿ, ಪಲ್ಯ ಹೆಚ್ಚೆಂದರೆ ಪಂಚತಾರಾ ಹೊಟೇಲಿನಲ್ಲಿ ಚಿನ್ನದ ತಟ್ಟೆಯಲ್ಲಿ ಹೊರತು ಚಿನ್ನ ಬೆಳ್ಳಿಯನ್ನು ತಿನ್ನಲಾದೀತೆ? ಒಂದೇ ಬಾರಿಗೆ ಮಣಗಟ್ಟಲೆ ಖಾದ್ಯ ತಿಂದು ಬಿಡಲು ಕೂಡಾ ಅಸಾಧ್ಯ.

ಕೆಲವರಿಗೆ ಕಾಯಿಲೆ ಕಸಾಲೆ ಕಾರಣ ಆರತಿ ತಗೊಂಡರೆ ಉಷ್ಣ, ತೀರ್ಥ ತಗೊಂಡರೆ ಶೀತ. ಸಕ್ಕರೆ ಕಾಯಿಲೆ ಇದ್ದರೆ ಮಿಠಾಯಿ ಅಂಗಡಿ ಮಾಲಕನಾದರೂ ಬರೀ ಕಣ್ಣಿಂದ ನೋಡಿ ನಾಲಗೆ ಚಪ್ಪರಿಸಿದರೆ ಮುಗಿಯಿತು. ರಕ್ತದ ಒತ್ತಡ ಇದ್ದವನಿಗೆ, ಹೃದಯದ ಕಾಯಿಲೆ ಇದ್ದರೆ ಉಪ್ಪಿನ ಖಾದ್ಯದ ಹೆದರಿಕೆ, ಎಣ್ಣೆಯಲ್ಲಿ ಕರಿದ ತಿಂಡಿ ನಿಷಿದ್ಧ!

ಅಂತೂ ಈ ನಿಷೇಧ ನಿಮಿತ್ತ ನಾವು ದುಡಿದು ತಂದರೂ ಅನುಭವಿಸುವ ಭಾಗ್ಯದಿಂದ ವಂಚಿತರು. ಇಷ್ಟೆಲ್ಲ ಇತಿಮಿತಿಗಳ ನಡುವೆ ಅನಿಯಮಿತ ಸಂಪತ್ತು ಅನ್ಯಾಯ ಮಾರ್ಗದಲ್ಲಿ ಕೂಡಿ ಹಾಕುವ ಗೀಳು ಕೆಲವರಿಗೆ. ಏನು ಕಡಿದು ಕಟ್ಟೆ ಹಾಕಿದರೂ ಪ್ರಯೋಜನ ಶೂನ್ಯ.ಆದರೂ ದುರಾಸೆಗೆ ಮಿತಿ, ಕಡಿವಾಣ ಇಲ್ಲ ಅನ್ನುವುದೇ ವಿಚಿತ್ರ. ಪ್ರಕೃತಿಯ ಈ ವಿಕೃತ ಮನೋಭಾವ ಬರೀ ಮಾನವ ರಾಶಿಗೆ ಸೀಮಿತ ಅನ್ನುವುದು ಇನ್ನೊಂದು ಸತ್ಯ.

ಸಮಾಜಜೀವಿ ಆದ ಈ ಮಾನವ ತನ್ನ ಗಳಿಕೆ ಸಂಪತ್ತು ಪಡೆಯುವುದು ಸಮಾಜದಿಂದ. ಕೆಲವೊಮ್ಮೆ ಪ್ರಾಮಾಣಿಕ ದುಡಿಮೆಯಿಂದ ಕೂಡ ನಮಗೆ ಜಗಿದು ತಿನ್ನಲಾಗದಷ್ಟು ಸಂಪತ್ತು ಗಳಿಕೆ ಆಗುವುದೂ ಇದೆ. ಅದೇಕೊ ದೇವರ ದಯೆ ಒಂಚೂರು ಜಾಸ್ತಿಯೇ ಸಿಗುತ್ತದೆ. ಇಂತಿಪ್ಪ ಸಂದರ್ಭ ನಾವು ದೇವರ ಈ ಔದಾರ್ಯಕ್ಕೆ ಕೃತಾರ್ಥರಾಗಿ ಮನುಷ್ಯ ಸಹಜವಾಗಿ ಸಮಾಜಕ್ಕೆ ಪ್ರತಿಫ‌ಲ ನೀಡಬೇಕು. ಸಮಾಜದಿಂದ ದೊರೆತ ಸಂಪತ್ತನ್ನು “ಕೆರೆಯ ನೀರನು ಕೆರೆಗೆ ಚೆಲ್ಲಿ’ ಸಮಾಜದ ಋಣ ತೀರಿಸಿ ಕೃತಾರ್ಥರಾಗಬೇಕು. ಜೀವನದ ಸಾಫ‌ಲ್ಯ ಇರುವುದೇ ಇಂತಹ ಔದಾರ್ಯದ ಕಾಯಕದಲ್ಲಿ. ಗಳಿಸಿದ್ದನ್ನು ಆವಶ್ಯಕತೆಗೆ ಬೇಕಷ್ಟು ಉಳಿಸಿಕೊಂಡು, ಸಮಾಜದ ಋಣ ತೀರಿಸಲೂ ಮಿಗತೆಯನ್ನು ಕೊಡುವುದು ಜನುಮ ಸಾರ್ಥಕ್ಯ ಆದಂತೆಯೇ. ಅದು ಪ್ರಕೃತಿ ಸಹಜ ಕೂಡಾ.

ನನ್ನ ಗಳಿಕೆ, ನನ್ನಿಷ್ಟದಂತೆ ನಾನು ಮೋಜು. ಮಸ್ತಿ ಮಾಡಿದರೆ ನಿನ್ನ ಗಂಟೇನು ಹೋಯಿತು? ಅನ್ನುವವರಿಗೆ ಕೊರತೆ ಇಲ್ಲ. ಕೊಟ್ಟು ಕೆಟ್ಟವರಿಲ್ಲ. ತಾನು ಕೊಡುವುದು ತಾನು ಪಡೆದದ್ದು ಮಾತ್ರ. ಹಸಿದವನಿಗೆ ಒಂದು ಹಿಡಿ ಅನ್ನ, ಚಳಿಗೆ ನಡುಗುವ ದೇಹಕ್ಕೆ ಒಂದು ಹೊದಿಕೆ ಅಷ್ಟೆ. ನಮ್ಮ ಪರಿಮಿತಿಗೆ ಅನುಸರಿಸಿ ಸಮಾಜಕ್ಕೆ ನಮ್ಮ ಕೊಡುಗೆ ಎಂಬ ಕರ್ತವ್ಯ ನಿರ್ವಹಣೆ.

– ಬಿ. ನರಸಿಂಗ ರಾವ್‌, ಕಾಸರಗೋಡು

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.