ಜಿಲ್ಲೆಯಲ್ಲಿ ಅಧಿಕಾರಿಗಳಿಂದ 16 ಬಾಲ್ಯವಿವಾಹ ತಡೆ


Team Udayavani, Jul 24, 2021, 5:33 PM IST

Child marriage

ದೇವನಹಳ್ಳಿ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ 17 ಬಾಲ್ಯವಿವಾಹ ಪ್ರಕರಣದಲ್ಲಿ 16 ಬಾಲ್ಯವಿವಾಹಪ್ರಕರಣಗಳನ್ನುಅಧಿಕಾರಿಗಳು ತಡೆಹಿಡಿದಿದ್ದು,ಈ ಸಂಬಂಧ ಠಾಣೆಯಲ್ಲಿ ಒಂದು ಪ್ರಕರಣದಾಖಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರಳವಿವಾಹ ಮಾರ್ಗಸೂಚಿ ದುರ್ಬಳಕೆ ಮಾಡಿಕೊಂಡುಕೆಲವರು ಮಕ್ಕಳಿಗೆ ಮದುವೆ ಮಾಡಿಸಲು ಮುಂದಾಗಿದ್ದದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಇಲಾಖೆಗೆ ದೂರು ನೀಡಿ: ಜಿಲ್ಲಾಡಳಿತದಿಂದ ಬಾಲ್ಯವಿವಾಹ ತಡೆಗಟ್ಟಲು ಸಾಕಷ್ಟು ಕಾನೂನು ಜಾರಿಗೆತಂದಿದೆ. ಪ್ರತಿ ತಿಂಗಳು ಬಾಲ್ಯ ವಿವಾಹದ ಹಾಗೂಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿಸಭೆಗಳನ್ನು ಮಾಡಲಾಗುತ್ತಿದೆ. ದೇವಸ್ಥಾನ, ಕಲ್ಯಾಣಮಂಟಪ ಇತರೆ ಕಡೆ ಬಾಲ್ಯವಿವಾಹದ ಪ್ರಕರಣಗಳುಕಂಡು ಬಂದರೆ, ಕೂಡಲೇ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆಗೆ ದೂರು ನೀಡಬೇಕು ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ಶೈಕ್ಷಣಿಕಸೌಲಭ್ಯದ ಕೊರತೆ, ಮೂಢನಂಬಿಕೆ, ಹೆತ್ತವರು ಹಾಗೂಪಾಲಕರು ಜವಾಬ್ದಾರಿ ಕಳೆದುಕೊಳ್ಳುವುದು. ವೃದ್ಧರು,ಅನಾರೋಗ್ಯದ ಹಿರಿಯರ ಆಸೆ ಈಡೇರಿಸುವ ಉದ್ದೇಶದಿಂದ ಈ ರೀತಿ ಬಾಲ್ಯ ವಿವಾಹಗಳಿಗೆ ಒಳಗಾಗುತ್ತಿದ್ದು,ಅಧಿಕಾರಿಗಳು ಈ ಕುರಿತು ಹದ್ದಿನ ಕಣ್ಣು ಇಟ್ಟಿದ್ದಾರೆ.

ಗಮನ ಸೆಳೆದ ಬಾಲ್ಯವಿವಾಹಗಳು: ಕೊರೊನಾ ಲಾಕ್‌ಡೌನ್‌ ಸಂದರ್ಭದ ಮೂರು ತಿಂಗಳಿನಲ್ಲಿ 17ಬಾಲ್ಯವಿವಾಹದ ಪ್ರಕರಣಗಳ ದೂರು ದಾಖಲಾಗಿದ್ದು,ಅದರಲ್ಲಿ 16 ಬಾಲ್ಯವಿವಾಹಗಳನ್ನು ತಡೆದಿದ್ದು, ವಿವಾಹನಡೆದ ದೊಡ್ಡಬಳ್ಳಾಪುರದ ಒಂದು ಪ್ರಕರಣಗಳ ಕುರಿತು ಪ್ರಕರಣದಾಖಲಿಸಲಾಗಿದೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ: ತಡೆ ಹಿಡಿದಿರುವಬಾಲ್ಯ ವಿವಾಹಗಳಲ್ಲಿ ಎಲ್ಲಾ ಹೆಣ್ಣುಮಕ್ಕಳು ಶಿಕ್ಷಣಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಪ್ರಾರಂಭಗೊಂಡ ನಂತರ ಇವರನ್ನು ಶಾಲೆಗೆ ದಾಖಲಿಸುವುದು. ಇವರ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಕಾರ್ಯಕ್ರಮರೂಪಿಸಲಾಗುವುದು. ಬಾಲ್ಯವಿವಾಹದಿಂದ ರಕ್ಷಿಸಿದಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ಬಾಲ್ಯವಿವಾಹದಿಂದ ಆಗುವದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಕಳೆದ ವರ್ಷ 2020 ಮತ್ತು21ನೇ ಸಾಲಿನಲ್ಲಿ62 ಬಾಲ್ಯವಿವಾಹದ ಪ್ರಕರಣಗಳಲ್ಲಿ 54 ಬಾಲ್ಯ ವಿವಾಹಗಳನ್ನುತಡೆಯಲಾಗಿದೆ.8 ಎಫ್ಐಆರ್‌ ದಾಖಲಾಗಿದೆ.

ಕರೆ ಕೂಡಲೇ ಸ್ಪಂದನೆ: ದೊಡ್ಡಬಳ್ಳಾಪುರ 8 ಪ್ರಕರಣಗಳಲ್ಲಿ7 ತಡೆ ಹಿಡಿದಿದ್ದು, ಅದರಲ್ಲಿ ಒಂದು ಎಫ್ಐಆರ್‌ದಾಖಲಿಸಲಾಗಿದೆ. ದೇವನಹಳ್ಳಿ 5 ಬಾಲ್ಯವಿವಾಹದಪ್ರಕರಣ, ಹೊಸಕೋಟೆಯಲ್ಲಿ 4 ಬಾಲ್ಯವಿವಾಹದಪ್ರಕರಣಗಳು ಕಂಡುಬಂದಿದೆ.

ನೆಲಮಂಗಲದಲ್ಲಿಯಾವುದೇ ಬಾಲ್ಯವಿವಾಹದ ಪ್ರಕರಣಗಳು ಕಂಡುಬಂದಿಲ್ಲ. ಬಾಲ್ಯವಿವಾಹದ ಪ್ರಕರಣ ಸ್ವೀಕೃತವಾದಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಗಳು ಮತ್ತುತಾಲೂಕು ಆಡಳಿತ ಸಹಯೋಗದೊಂದಿಗೆ ಎಲ್ಲಿಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ದೊರೆತಕೂಡಲೇ ಅಧಿಕಾರಿಗಳ ತಂಡ ಪ್ರಕರಣ ತಡೆಹಿಡಿದುಕ್ರಮಕೈಗೊಳ್ಳುತ್ತಿದ್ದಾರೆ. ಬಾಲ್ಯವಿವಾಹಕ್ಕೆ ಶ್ರಮಿಸುತ್ತಿರುವಸಂಘಟನೆಮಕ್ಕಳ ಸಹಾಯವಾಣಿ1098ಕ್ಕೆ ಕರೆ ಮಾಡಿದಕೂಡಲೇ ಸ್ಪಂದಿಸಲಾಗುತ್ತಿದೆ.

ಪೋಷಕರಿಗೆ ಅರಿವಿಲ್ಲ: ಜಿಲ್ಲೆಯಲ್ಲಿ 16ರಿಂದ 17ವರ್ಷದ ಮದುವೆ ಪ್ರಕರಣಗಳೇ ಹೆಚ್ಚು ಪñಯಾಗ ೆ¤ ‌ುತ್ತಿವೆ. ಬಹಳಷ್ಟು ಪಾಲಕರು 17 ವರ್ಷ ತುಂಬಿದ ಹೆಣ್ಣುಮಕ್ಕಳನ್ನು 18 ವರ್ಷ ತುಂಬಿದೆ ಎಂದು ಹೇಳಿಮದುವೆಗೆ ಮುಂದಾಗಿದ್ದಾರೆ. ಕಾನೂನಿನಡಿ 18 ವರ್ಷತುಂಬಿದ ಮೇಲಷ್ಟೇ ಮದುವೆಗೆ ಅರ್ಹರು ಎಂಬುದರ ಕುರಿತು ಪೋಷಕರಿಗೆ ಅರಿವಿಲ್ಲ.

ಜಿಲ್ಲೆಯಲ್ಲಿ ಪತ್ತೆಯಾದಪ್ರಕರಣಗಳಲ್ಲಿಕೆಲವು ಪ್ರೇಮ ವಿವಾಹಕ್ಕೆ ಸಂಬಂಧಿಸಿದ್ದೇಹೆಚ್ಚು.ಪ್ರೇಮಪಾಶಕ್ಕೆಬಿದ್ದು ಮಕ್ಕಳ ದಾರಿತಪ್ಪುವಆತಂಕದಿಂದ ಬೇಗನೇ ಮದುವೆ ಮುಗಿಸಲು ಪಾಲಕರುಮುಂದಾಗಿದ್ದರು. ಮತ್ತೂಂದೆಡೆ ಪ್ರೀತಿ ಪ್ರೇಮ ನೆಪದಲ್ಲಿಮನೆಯಲ್ಲಿ ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಬೇರೆಯವರೊಂದಿಗೆ ಮದುವೆಮಾಡಿ ಮುಗಿಸಲುಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.

ಎಸ್‌.ಮಹೇಶ್

ಟಾಪ್ ನ್ಯೂಸ್

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.