ಮಗಳು ಹುಟ್ಟಿದ್ದಕ್ಕೆ ಉಚಿತ ಪಾನಿಪುರಿ ಹಂಚಿದ ತಂದೆ
Team Udayavani, Sep 13, 2021, 10:00 PM IST
ಭೋಪಾಲ್: ಮಗಳು ಹುಟ್ಟಿದಳೆಂಬ ಸಂತಸಕ್ಕೆ ಬೀದಿ ಬದಿ ವ್ಯಾಪಾರಿ ಅಂಚಲ್ ಗುಪ್ತಾ ಸಾರ್ವಜನಿಕರಿಗೆ ಉಚಿತವಾಗಿ ಪಾನಿ ಪುರಿ ನೀಡಿ ಸಂತಸ ಹಂಚಿಕೊಂಡಿದ್ದಾರೆ.
ಭೋಪಾಲ್ನ ಕೋಲಾರ ಎಂಬಲ್ಲಿ 20 ವರ್ಷಗಳಿಂದ ಪಾನಿಪುರಿ ಅಂಗಡಿ ನಡೆಸುತ್ತಿರುವ ಅಂಚಲ್ ಗುಪ್ತಾ(30) ಕುಟುಂಬದಲ್ಲಿ ಆ.17ರಂದು ಮಗಳು ಜನಿಸಿದ್ದಾಳೆ. ಮದುವೆಯಾದಾಗಿನಿಂದಲೂ ಆತ ಹೆಣ್ಣು ಮಗುವೇ ಆಗಬೇಕೆಂದು ಕನಸು ಕಂಡಿದ್ದನಾದರೂ ಎರಡು ವರ್ಷ ಹಿಂದೆ ಆತನ ಪತ್ನಿಗೆ ಮೊದಲು ಮಗ ಜನಿಸಿದ್ದ.
ಮಗಳು ಹುಟ್ಟಿದ ಸಂತಸದಲ್ಲಿ ಅಂಚಲ್ ಮಗನ 2ನೇ ವರ್ಷದ ಜನ್ಮದಿನವಾದ ಸೆ.12ರಂದು ಎಲ್ಲರಿಗೂ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ. ಮಗಳಿದ್ದರೆ ಭವಿಷ್ಯವಿದೆ ಎಂದು ಎಲ್ಲರಿಗೂ ಹೇಳುತ್ತಾ, ಪಾನಿಪುರಿ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.