ತಲೆದಂಡ: ಮನಮುಟ್ಟುವ ವೃಕ್ಷರಕ್ಷಕನ ಹೋರಾಟ

Team Udayavani, Apr 4, 2022, 4:16 PM IST

taledanda

ಜಗತ್ತಿನ ಸಕಲ ಜೀವರಾಶಿಗಳೂ ಪರಿಸರವನ್ನೇ ಆಶ್ರಯಿಸಿಕೊಂಡಿವೆ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಬೇಕು. ಕಾಡು ಉಳಿಸದಿದ್ದರೆ ಮುಂದೊಂದು ದಿನ ಇಡೀ ಜಗತ್ತಿನ “ತಲೆದಂಡ’ವಾಗಬೇಕಾದೀತು. ಕಳೆದ ಹಲವು ದಶಕಗಳಿಂದ ಪರಿಸರ ಸಂರಕ್ಷಣೆಯ ಇಂಥ ಮಾತುಗಳನ್ನು, ನೂರಾರು ಸ್ಲೋಗನ್‌ಗಳನ್ನು ಬಹುತೇಕ ಎಲ್ಲರೂ ಲೆಕ್ಕವಿಲ್ಲದಷ್ಟು ಬಾರಿ ಕೇಳಿರುತ್ತೇವೆ. ಆದರೂ ಪರಿಸರದ ಮೇಲಿನ ಮನುಷ್ಯನ ಆಕ್ರಮಣ ನಿರಾತಂಕಕವಾಗಿ ಸಾಗುತ್ತಲೇ ಇದೆ. ಹಾಗಂತ ಪರಿಸರ ಸಂರಕ್ಷಣೆ ಜಾಗೃತಿ ಕೂಡ ನಿಂತಿಲ್ಲ. ಅದು ಕೂಡ ಬೇರೆ ಬೇರೆ ಸ್ವರೂಪಗಳಲ್ಲಿ, ಮಾಧ್ಯಮಗಳಲ್ಲಿ ನಡೆಯುತ್ತಲೇ ಇದೆ. ಇಂಥದ್ದೇ ಪರಿಸರ ಸಂರಕ್ಷಣೆಯಂತಹ ಗಂಭೀರ ವಿಷಯವನ್ನು ತೆರೆಮೇಲೆ ಹೇಳಿರುವ ಚಿತ್ರ “ತಲೆತಂಡ’.

ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದ ಸೋಲಿಗ ಹಾಡಿಯ ಅರೆ ಮಾನಸಿಕ ಅಸ್ವಸ್ಥ ಹುಡುಗನೊಬ್ಬ ತನ್ನ ಜೀವವನ್ನೆ ಬಲಿಕೊಟ್ಟು ಹೇಗೆ ಮರಗಳನ್ನು ಸಂರಕ್ಷಿಸುತ್ತಾನೆ ಎನ್ನುವುದು “ತಲೆದಂಡ’ ಚಿತ್ರದ ಕಥೆಯ ಒಂದು ಎಳೆ.

ಪರಿಸರ ಮತ್ತು ಮಾನವನ ಸಂಘರ್ಷ, ಸಾಂಸ್ಕೃತಿಕ ವೈವಿಧ್ಯತೆ, ಬದುಕಿನ ಹೋರಾಟ, ಎದುರಾಗುವ ಸವಾಲುಗಳು, ವೈಯಕ್ತಿಕ ಹಿತಾಸಕ್ತಿ, ರಾಜಕೀಯ ಇಚ್ಛಾಶಕ್ತಿ ಹೀಗೆ ಅನೇಕ ಸಂಗತಿಗಳನ್ನು ಚಿತ್ರದ ಕಥೆಯಲ್ಲಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರವೀಣ್‌ ಕೃಪಾಕರ್‌. ಪ್ರಸ್ತುತ ಸನ್ನಿವೇಶದಲ್ಲಿ ಆದ್ಯತೆಯ ಮೇಲೆ ಗಂಭೀರವಾಗಿ ಚರ್ಚೆಯಾಗಬೇಕಾಗುವ ವಿಷಯವೊಂದನ್ನು ಸಿನಿಮಾದ ಮೂಲಕ ಹೇಳಿರುವ ಚಿತ್ರತಂಡದ ಪ್ರಯತ್ನ ಪ್ರಶಂಸನೀಯ.

ಇದನ್ನೂ ಓದಿ:ಗಣೇಶ್‌ ಹೊಸ ಚಿತ್ರ ‘ಬಾನದಾರಿಯಲ್ಲಿ…’

ಇನ್ನು ಇಡೀ “ತಲೆತಂಡ’ ಸಿನಿಮಾದಲ್ಲಿ ತೆರೆಮೇಲೆ ಸಂಪೂರ್ಣವಾಗಿ ಆವರಿಸಿಕೊಳ್ಳುವುದು ನಟ ಸಂಚಾರಿ ವಿಜಯ್‌ ಅಭಿನಯ. ಅರೆ ಮಾನಸಿಕ ಅಸ್ವಸ್ಥನಾಗಿ ಜೊತೆಗೆ ವೃಕ್ಷ ರಕ್ಷಕನಾಗಿ ಸಂಚಾರಿ ವಿಜಯ್‌ ಅಭಿನಯ ನೋಡುಗರ ಮನಸ್ಸಿನಲ್ಲಿ ಉಳಿಯುತ್ತದೆ. ಉಳಿದಂತೆ ಮಂಗಳಾ, ಚೈತ್ರಾ ಆಚಾರ್‌, ಭವಾನಿ, ರಮೇಶ್‌ ಪಂಡಿತ್‌ ಮೊದಲಾದ ಕಲಾವಿದರು ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಅಶೋಕ್‌ ಕಶ್ಯಪ್‌ ಛಾಯಾಗ್ರಹಣ, ಬಿ. ಎಸ್‌ ಕೆಂಪರಾಜು ಸಂಕಲನ ಕಾರ್ಯ ಮತ್ತು ಸೋಲಿಗ ಜನಾಂಗದ ಹಾಡುಗಳನ್ನು ಹೊಂದಿದ ಹಿನ್ನೆಲೆ ಸಂಗೀತತ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ಗಳು. ಮಾಮೂಲಿ ಸಿದ್ಧಸೂತ್ರದ ಕಮರ್ಶಿಯಲ್‌ ಸಿನಿಮಾಗಳ ಬಿಟ್ಟು ಹೊಸಥರದ ಸಿನಿಮಾಗಳು ನೋಡಬೇಕೆನ್ನುವ ಪ್ರೇಕ್ಷಕರಿಗೆ “ತಲೆದಂಡ’, ತಲೆಗೆ ಸ್ವಲ್ಪ ಕೆಲಸ ಕೊಡುತ್ತಲೇ ಮನಸ್ಸಿಗೂ ಮುಟ್ಟುತ್ತದೆ ಎನ್ನಬಹುದು.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.