ವಿಭಿನ್ನ ಅವತಾರಗಳಲ್ಲಿ ‘ಬೈರಾಗಿ ಶಿವಣ್ಣ’
Team Udayavani, Jun 13, 2022, 11:30 AM IST
ಶಿವರಾಜ್ಕುಮಾರ್ ನಟನೆಯ “ಬೈರಾಗಿ’ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಶಿವಣ್ಣ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೆಟಪ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿರೋದು ಸುಳ್ಳಲ್ಲ. ಈ ವಿಭಿನ್ನ ಲುಕ್ಗಾಗಿಯೇ ಚಿತ್ರತಂಡ ಹಲವು ತಿಂಗಳು ಕಾರ್ಯ ನಿರ್ವಹಿಸಿದೆ.
ಖಡಕ್, ರಗಡ್, ಸಾಫ್ಟ್… ಹೀಗೆ ನಾನಾ ಅವತಾರಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಚಿತ್ರದ ದೃಶ್ಯವೊಂದಕ್ಕಾಗಿ ಶಿವಣ್ಣ ಅರ್ಧ ಮುಖಕ್ಕೆ ಹುಲಿ ವೇಷದ ಗೆಟಪ್ ಹಾಕಿಕೊಂಡಿದ್ದು, ಇದು ಚಿತ್ರದ ಆ್ಯಕ್ಷನ್ ಕುತೂಹಲ ಹೆಚ್ಚಿಸಿದೆ. ಚಿತ್ರ ಜುಲೈ 01ರಂದು ಬಿಡುಗಡೆಯಾಗುತ್ತಿದೆ.
ವಿಜಯ್ ಮಿಲ್ಟನ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಬೈರಾಗಿ ಸಿನಿಮಾ ನಿರ್ಮಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಜುಲೈ TO ಡಿಸೆಂಬರ್ ‘ಡಾಲಿ’ ರೈಡ್; ಧನಂಜಯ್ ಚಿತ್ರೋತ್ಸವ!
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕೃಷ್ಣ ಸಾರ್ಥಕ್, “ಶಿವಣ್ಣ ಈವರೆಗೂ ನಾನಾ ಪಾತ್ರ ನಿರ್ವಹಿಸಿದ್ದಾರೆ. ಆದರೆ ಬೈರಾಗಿ ಸಿನಿಮಾದಲ್ಲಿ ಅಭಿಮಾನಿಗಳು, ಫ್ಯಾಮಿಲಿ ಆಡಿಯನ್ಸ್ ಎಲ್ಲರಿಗೂ ಇಷ್ಟವಾಗುವ ಅಂಶಗಳಿವೆ’ ಎನ್ನುತ್ತಾರೆ.
ಚಿತ್ರದಲ್ಲಿ ಶಿವಣ್ಣ ಜೊತೆಗೆ ಧನಂಜಯ್, ಶಶಿಕುಮಾರ್, ಅಂಜಲಿ, ಅನು ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದಾರೆ
ಟಿವಿ ರೈಟ್ಸ್ಗೆ ಭರ್ಜರಿ ಬೆಲೆ: “ಬೈರಾಗಿ’ ಚಿತ್ರದ ಟಿವಿ ರೈಟ್ಸ್ ಈಗಾಗಲೇ ಖಾಸಗಿ ವಾಹಿನಿಗೆ ಭರ್ಜರಿ ಬೆಲೆಗೆ ಮಾರಾಟವಾಗಿದೆ. 10 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುವ ಮೂಲಕ ಚಿತ್ರದ ಕ್ರೇಜ್ ಕೂಡಾ ಹೆಚ್ಚಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Kaatera; ಬರಹಗಾರರಿಗೆ ರಾಕ್ಲೈನ್ ಕಾರು ಗಿಫ್ಟ್
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು
MUST WATCH
ಹೊಸ ಸೇರ್ಪಡೆ
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…
LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ
Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ