ಶಿವಮೊಗ್ಗ :ಭಾರಿ ಮಳೆಗೆ ಭದ್ರಾ ಎಡದಂಡೆ ಕಾಲುವೆ ಒಡೆದು ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತ
Team Udayavani, Aug 30, 2022, 9:42 AM IST
ಶಿವಮೊಗ್ಗ : ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾ ಎಡದಂಡೆ ಕಾಲುವೆಯ ತಡೆಗೋಡೆ ಒಡೆದು ಭತ್ತ, ಅಡಿಕೆ ತೋಟ ಸೇರಿದಂತೆ ಸಾವಿರಾರು ಎಕರೆ ಕೃಷಿ ತೋಟಗಳಿಗೆ ಹಾನಿಯಾಗಿದೆ.
ಸೋಮವಾರ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಕೆರೆ ಕೋಡಿಗಳು ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ 1955ರಲ್ಲಿ ಕಟ್ಟಿದ್ದ ಕಾಲುವೆ ತಡೆಗೋಡೆ ಒಡೆದು ಪಕ್ಕದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ.
ಇದನ್ನೂ ಓದಿ : ನಿರಂತರ ಮಳೆ: ಗದಗ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ