ಏಕರೂಪ ವಿವಾಹ ವಯಸ್ಸು ನಿಗದಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
Team Udayavani, Dec 9, 2022, 10:45 PM IST
ನವದೆಹಲಿ: ಎಲ್ಲಾ ಧರ್ಮಗಳಿಗೆ ಅನ್ವಯವಾಗುವಂತೆ ಮಹಿಳೆಯರಿಗೆ ಏಕರೂಪದ ವಿವಾಹದ ವಯಸ್ಸು ನಿಗದಿಪಡಿಸುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ವ್ಯಾಪ್ತಿಯಲ್ಲಿ ವಿವಾಹ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ನೋಟಿಸ್ ನೀಡಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಈ ಕೋರಿಕೆ ಸಲ್ಲಿಸಿತ್ತು. ಎಲ್ಲಾ ಧರ್ಮಗಳಿಗೆ ಅನ್ವಯವಾಗುವಂತೆ 18ರ ವಯಸ್ಸನ್ನೇ ವಿವಾಹ ವಯೋಮಿತಿಯನ್ನಾಗಿ ಪರಿಗಣಿಸಬೇಕು ಎಂದು ಅದು ನ್ಯಾಯಪೀಠದ ಮುಂದೆ ಅರಿಕೆ ಮಾಡಿತ್ತು.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು 18 ವರ್ಷ ಪೂರೈಸುವುದಕ್ಕೆ ಮುನ್ನವೇ ವಿವಾಹವಾಗುವುದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಸುಪ್ರೀಂಕೋರ್ಟ್ಗೆ ಆಯೋಗ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್, ಎವರೆಸ್ಟ್ ಉತ್ಪನ್ನಗಳು ಪಾಸ್!
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ